ಬ್ರೆಡ್ ಪಕೋಡಾ ಭಾರತದ ಒಂದು ಕರಿದ ಲಘು ಆಹಾರವಾಗಿದೆ (ಪಕೋಡಾ ಅಥವಾ ಪನಿಯಾಣ). ಇದನ್ನು ಬ್ರೆಡ್ ಬಜ್ಜಿ ಎಂದೂ ಕೂಡ ಕರೆಯಲಾಗುತ್ತದೆ. ಒಂದು ಸಾಮಾನ್ಯ ಬೀದಿ ಆಹಾರವಾದ ಇದನ್ನು ಬ್ರೆಡ್‍ನ ಚೂರುಗಳು, ಕಡಲೆ ಹಿಟ್ಟು, ಮತ್ತು ಸಂಬಾರ ಪದಾರ್ಥಗಳು ಸೇರಿದಂತೆ ಇತರ ಘಟಕಾಂಶಗಳಿಂದ ತಯಾರಿಸಲಾಗುತ್ತದೆ.[೧]
ತ್ರಿಕೋನಾಕಾರದ ಬ್ರೆಡ್ ಚೂರುಗಳನ್ನು ಉಪ್ಪುಖಾರ ಸೇರಿದ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಈ ಲಘು ಆಹಾರವನ್ನು ತಯಾರಿಸಲಾಗುತ್ತದೆ.[೨] ಹಿಸುಕಿದ ಆಲೂಗಡ್ಡೆಗಳಂತಹ ಹೂರಣವು ಸಾಮಾನ್ಯವಾಗಿದೆ.[೩][೪] ಇದನ್ನು ಎಣ್ಣೆಯಲ್ಲಿ ಮುಳುಗಿಸಿ ಕರಿಯಬಹುದು ಅಥವಾ ಬಾಣಲೆಯಲ್ಲಿ ಸ್ವಲ್ಪವೇ ಎಣ್ಣೆಯಲ್ಲಿ ಕರಿಯಬಹುದು. ಇದನ್ನು ಚಟ್ನಿಗಳು ಅಥವಾ ಕೆಚಪ್‍ನೊಂದಿಗೆ ಬಡಿಸಲಾಗುತ್ತದೆ.[೫]