ಭಾನೂ ಜಹಾಂಗೀರ್ ಕೊಯಾಜಿ | |
---|---|
Born | ಭಾನೂ ೧೯೧೭ ೦೯ ೦೭ |
Occupation | ವೈದ್ಯೆ |
Years active | ೧೯೪೩-೨೦೦೪ |
Spouse | ಜಹಾಂಗೀರ್ ಕೊಯಾಜಿ |
ಭಾನೂ ಜಹಾ೦ಗೀರ್ ಕೊಯಾಜಿರವರು ಭಾರತೀಯ ವೈದ್ಯೆ ಮತ್ತು ಜನಸಂಖ್ಯಾ ನಿಯಂತ್ರಣ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕ್ರೀಯಾಶೀಲರಾಗಿದ್ದರು. ಅವರು ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆ ಪುಣೆಯ ನಿರ್ದೇಶಕರಾಗಿದ್ದರು. ಭಾರತದ ೦೩ನೇ ದೊಡ್ಡ ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ ಕಾರ್ಯಕ್ರಮವನ್ನು ಆರಂಭಿಸಿದರು. ಅಂತರಾಷ್ಟ್ರೀಯ ಮತ್ತು ಕೇಂದ್ರ ಸರಕಾರಗಳಿಗೆ ಉತ್ತಮ ಸಲಹೆಗಾರರಾಗಿದ್ದರು.[೧]
ಭಾನೂ ಜಹಾ೦ಗೀರ್ ಕೊಯಾಜಿರವರು ೦೭ ಸೆಪ್ಟೆ೦ಬರ್ ೧೯೧೭ರ೦ದು ಜನಿಸಿದರು.
ಇವರು ೧೫ ಜುಲೈ ೨೦೦೪ ರ೦ದು ಮರಣ ಹೊಂದಿದರು.
ಕೊಯಾಜಿರವರಿಗೆ ಪದ್ಮಭೂಷಣ ಮತ್ತು ಮಾಗ್ಸೆಸ್ ಪ್ರಶಸ್ತಿಗಳು ದೊರೆತಿವೆ.
ಭಾನೂರವರು ಸೆಪ್ಟೆಂಬರ್ ೦೭, ೧೯೧೭ ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪ್ರಸಿಧ್ದ ಸಿವಿಲ್ ಇಂಜಿನಿಯರ್ ಆಗಿದ್ದರು. ಅವರ ಹೆಸರು ಪೆಸ್ಟೋನ್ ಜಿ ಕಪಾಡಿಯಾ.ಭಾನೂ ಅವರನ್ನು ಪ್ರೌಢ ವಯಸ್ಸಿನಲ್ಲಿ ಅಜ್ಜ ಮತ್ತು ಅಜ್ಜಿಯರರ ಜೊತೆ ಇದ್ದರು. ಅವರ ಹೆತ್ತವರ ಅಪರೂಪದ ಭೇಟಿ ಮತ್ತು ಅಜ್ಜ ಅಜ್ಜಿಯರ ಜೊತೆಗಿನ ಗಾಢವಾದ ಸಂಬಂಧ, ಅವರನ್ನು ಸ್ವಾವಲಂಬಿಯಾಗಿ ಬದುಕುವಂತೆ ಪ್ರೇರೇಪಿಸಿತು.
ಭಾನೂ ಅವರು ಅಜ್ಜಿಮನೆಯಲ್ಲಿರುವಾಗ ಸೈಂಟ್ ವಿನ್ಸೆಂಟ್ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆ ಹೊಂದಿದ ಪ್ರಥಮ ಹೆಣ್ಣುಮಗಳು. ಅನಂತರ ಅವರು ಜೀಸಸ್ ಮತ್ತು ಮೇರಿ ಕಾನ್ವೆಂಟನ್ನು ಸೇರಿ ಅತ್ಯುನ್ನತ ಶ್ರೇಣಿ ಪಡೆದರು.ಪ್ರೌಢ ವಿದ್ಯಾಭ್ಯಾಸದ ನಂತರ ಅವರು ಸೀನಿಯರ್ ಕೇಬ್ರಿಡ್ಜ್ ಸೇರಿ ಐದೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪೂರ್ವ ಮೆಡಿಕಲ್ ವ್ಯಾಸಂಗ ಮಾಡಿ ಮತ್ತು ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ೧೯೪೦ ರಲ್ಲಿ ಎಂ.ಡಿ. ಪದವಿಯನ್ನು ಪಡೆದರು. ಡಾ.ವಿ.ಎನ್.ಶಿರೋಡ್ಕರ್ ಜೊತೆ ಸ್ತ್ರೀರೋಗ ತಜ್ಞೆ ಯಾಗಲು ತರಬೇತಿ ಪಡೆದರು.ಅನಂತರ ಡಾ.ಎಡುಜಿ ಕೊಯಾಜಿ ಅವರನ್ನು ಆರಿಸಿಕೊಂಡು ತನ್ನ ವೈದ್ಯಕೀಯ ವೃತ್ತಿಗಾಗಿ ೧೯೪೩ರಲ್ಲಿ ಪುಣೆಗೆ ಹಿಂತಿರುಗಿದರು.
೧೯೩೭ರಲ್ಲಿ ಭಾನು ಅವರು ಮಹಬಲೇಶ್ವರಕ್ಕೆ ಭೇಟಿ ನೀಡಿದಾಗ ತನ್ನ ಭಾವಿ ಪತಿ ಜಹಾಂಗೀರ್ ಕೊಯಾಜಿ ಅವರನ್ನು ತನ್ನ ಸಲಹೆಗಾರ ಹಾಗೂ ಸಹೋದರನಿಗೆ ಪರಿಚಯಿಸುತ್ತಾಳೆ.ಜಹಾಂಗೀರ್ ಕೊಯಾಜಿ ಅವರು ವ್ಯಾಪಾರದ ಬಗ್ಗೆ ಇಂಜಿನಿಯರ್ ಪದವಿಯನ್ನು ಪಡುವೆ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡಿದ್ದರಷ್ಟೆ. ಭಾನೂ ಮತ್ತು ಜಹಾಂಗೀರ್ ೧೯೪೧ ಫ಼ೆಬ್ರವರಿ ೨೪ ರಂದು ವಿವಾಹವಾದರು.ಐದು ವರುಷಗಳ ನಂತರ ತನ್ನ ಕಾರ್ಯದಲ್ಲಿ ತೊಡಗಿದರು.೧೯೪೨ ಆಗಸ್ಟ್ ೭ರಂದು ಈ ದಂಪತಿಗಳು ಅವರ ಮೊದಲ ಗಂಡು ಮಗುವನ್ನು ಪಡೆದರು.೧೯೪೩ ರಲ್ಲಿ ಪುಣೆಯಲ್ಲಿ ನಿವಾಸ ನಿರ್ಮಿಸಿ ಅಲ್ಲೇ ವಾಸ್ತವ್ಯ ಹೊಂದಿದರು.[೨]
ಭಾನೂ ಅವರು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದರು.ಅದು ಅವರ ತಂದೆಯಿಂದ ಬಳುವಳಿಯಾಗಿ ಬಂದಿತ್ತು.ಭಾನೂ ಅವರು ಸಕಲ ಗ್ರೂಫ್ ಆಫ್ ನ್ಯೂಸ್ ಪೇಪರ್ ನಲ್ಲಿ ಮೂವತ್ತು ವರ್ಷಗಳವರೆಗೆ ನಿರ್ದೇಶಕರಾಗಿದ್ದರು.೧೯೯೪ ರಲ್ಲಿ ಪುಣೆ ವಿಶ್ವವಿದ್ಯಾನಿಲಯ ಮತ್ತು ಎಸ್.ಎನ್.ಡಿ.ಟಿ. ವಿಶ್ವವಿದ್ಯಾನಿಲಯದಿಂದ ಗೌರವ ಸಾಹಿತ್ಯ ಪದವಿಯನ್ನು ಪಡೆದರು.