ಈ ಬಾರಿಯ ಕೇಂದ್ರದ ಬಜೆಟ್‍ನ್ನು ದಿ.1 ಫೆಬ್ರ, 2017, ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಮಂಡಿಸಲಾಗಿದೆ. ಇದು ಅರುಣಜೇಟ್ಲಿಯವರ ನಾಲ್ಕನೇ ಬಜೆಟ್.
ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿರುವುದು ಈ ಬಾರಿಯ ಬಜೆಟ್‌ನ ವಿಶೇಷ. ಎರಡನೆಯದು ಫೆಬ್ರುವರಿ 1ರಂದು ಬಜೆಟ್ ಮಂಡಿಸಿರುವುದು. ಸಾಮಾನ್ಯವಾಗಿ ಕೇಂದ್ರದ ಮುಂಗಡಪತ್ರವನ್ನು (ಬಜೆಟ್‍ನ್ನು) ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚಿ ಮೊದಲವಾರ ಮಂಡಿಸುವುದು ರೂಢಿ. ರೈಲ್ವೆ ಆದಾಯ ವೆಚ್ಚದ ಮತ್ತು ಯೋಜನೆಗಳ ಬಜೆಟ್‍ನ್ನು ಪ್ರಥಮದಲ್ಲಿಯೇ ಲೋಕಸಬೆಯಲ್ಲಿ ಮಂಡಿಸಲಾಗುತ್ತಿದ್ದಿತು. ಈಗ ೨೦೧೭ ರಲ್ಲಿ ೨೦೧೭-೧೮ ರ ಸಾಮಾನ್ಯ ಬಜೆಟ್‍ನಲ್ಲಿ ರೈಲ್ವೇ ಬಜೆಟ್‍ನ್ನು ವಿಲೀನಗೊಳಿಸಲಾಗಿದೆ. ವಿಶೇಷವೆಂದರೆ ಒಂದು ತಿಂಗಳ ಮುಂಚೆ ಬಜೆಟ್ ಮಂಡಿಸಲಾಗಿದೆ. ಇದರಿಂದ ಆರ್ಥಿಕ ವರ್ಷದ ಪ್ರಾರಂಭದಿಂದಲೇ ಸಚಿವಾಲಯಗಳ ಕಾರ್ಯಾರಂಭಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.[೧]
ಈ ಬಾರಿಯ ಬಜೆಟ್ ಮಂಡನೆಯ ಮುಂಚೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ೩೧-೧-೨೦೧೭ ಮಂಗಳವಾರ ಸಂಸತ್‌ನಲ್ಲಿ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ, ಮಧ್ಯಾಹ್ನ 2.15ರ ಸುಮಾರಿಗೆ ಕೇರಳದ ಇಂಡಿಯನ್ ಮುಸ್ಲಿಂ ಲೀಗ್‌ನ ಸಂಸದ ಅಹಮದ್ ಅವರು ಹೃದಯ ಸ್ತಂಭನಕ್ಕೆ ತುತ್ತಾಗಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು. ಅದರಿಂದ ನಮ್ಮನ್ನಗಲಿದ ಹಿರಿಯ ಮುತ್ಸದಿ ಇ.ಅಹಮದ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದಿನ ಕಲಾಪ ಮುಂದೂಡ ಬೇಕಿತ್ತು. ಈ ಸಂದರ್ಭದಲ್ಲಿ ಬಜೆಟ್ ಮಂಡನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಖರ್ಗೆ ಅವರ ಮಾತುಗಳನ್ನು ನಿಲ್ಲಿಸುವಂತೆ ಸ್ಪೀಕರ್ ಸೂಚಿಸಿದ್ದು, ಈಗಾಗಲೇ ಬಜೆಟ್ ಮಂಡನೆ ನಡೆಸುವಂತೆ ಅನುಮತಿ ನೀಡ ಲಾಗಿದೆ. ನಿಗಧಿಯಂತೆ ಇಂದು ಬಜೆಟ್ ಮಂಡನೆ ನಡೆಯಲಿದ್ದು, ಬಜೆಟ್ ಮಂಡನೆ ಮಾಡುವಂತೆ ಜೇಟ್ಲಿ ಅವರಿಗೆ ಸೂಚಿಸಿದ್ದಾರೆ.
ಲೋಕಸಭಾ ಸದಸ್ಯ ಇ.ಅಹಮದ್ ಅವರಿಗೆ ಸಂತಾಪ ಸೂಚಿಸಿದ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ.[೨]
ಡಿ.31ರಂದು ಪ್ರಕಟಿಸಿದಂತೆ ರೈತರ ಸಾಲದ ಮೇಲಿನ 60 ದಿನಗಳ ಬಡ್ಡಿ ಮನ್ನ
ದೇಶದ 63 ಸಾವಿರ ಕೃಷಿ ಕ್ರೆಡಿಟ್ ಸೊಸೈಟಿಗಳ ಗಣಕೀಕರಣ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ರೂ.1,900 ಕೋಟಿ ಅಂದಾಜು. 3 ವರ್ಷಗಳಲ್ಲಿ ಕಾರ್ಯ ಪೂರ್ಣ.
ಫಸಲ್ ವಿಮಾ ಯೋಜನೆ ವಿಸ್ತರಿಸಲು ₹9000 ಕೋಟಿ ಮೀಸಲು. 2017–18 ಸಾಲಿನಲ್ಲಿ ವಿಮಾ ವ್ಯಾಪ್ತಿ ಶೇ.30ರಿಂದ ಶೇ.40ಕ್ಕೆ ಏರಿಕೆಯಾಗಲಿದೆ.
ಮಣ್ಣಿನ ಪರೀಕ್ಷೆಗೆ ಸಹಕಾರಿಯಾಗಲು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಿರು ಪ್ರಯೋಗಾಲಯ ಸ್ಥಾಪನೆ
ರಾಷ್ಟ್ರೀಯ ಕೃಷಿ ಮಾರುಕಟ್ಟೆ(e-NAM), 250 ರಿಂದ 585 ಎಪಿಎಂಸಿಗೆ ವಿಸ್ತರಣೆ. ಪ್ರತಿ ಮಾರುಕಟ್ಟೆ e-NAM ಗೆ ರೂ.75 ಲಕ್ಷ ಸಹಕಾರ
13.14 ಲಕ್ಷ ನೋಂದಾಯಿತ ಕಂಪೆನಿಗಳ ಪೈಕಿ 5.97 ಲಕ್ಷ ಕಂಪೆನಿಗಳು ಮಾತ್ರ 2016–17ರ ಸಾಲಿನಲ್ಲಿ ರಿಟರ್ನ್ ಸಲ್ಲಿಸಿವೆ.
ವಾರ್ಷಿಕ ಆದಾಯ ರೂ.2.5 ಲಕ್ಷದಿಂದ ರೂ.5 ಲಕ್ಷದೊಳಗಿರುವವರ ಸಂಖ್ಯೆ 1.95 ಕೋಟಿ.
ವಾರ್ಷಿಕ ರೂ.5 ಲಕ್ಷದಿಂದ ರೂ.56 ಲಕ್ಷದೊಳಗಿನ ಸಂಬಳದಾರರ ಸಂಖ್ಯೆ 76 ಲಕ್ಷ.
1.72 ಲಕ್ಷ ಮಂದಿ ತಮ್ಮ ವಾರ್ಷಿಕ ಆದಾಯ ರೂ.50 ಲಕ್ಷಕ್ಕಿಂತ ಮೇಲಿದೆ ಎಂದು ಘೋಷಿಸಿಕೊಂಡಿದ್ದಾರೆ.
ನಿರ್ಬಂಧ:ರೂ.3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರದ ಮೇಲೆ ನಿರ್ಬಂಧ.
.
ರೂ.2.5–ರೂ.5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
ವೈಯಕ್ತಿಕ ಆದಾಯ ತೆರಿಗೆಯಲ್ಲಿ ಇಳಿಕೆ ಮಾಡಿರುವ ಕಾರಣದಿಂದ ರೂ.15 ಸಾವಿರ ಕೋಟಿ ನಷ್ಟವಾಗಲಿದ್ದು, ಅದನ್ನು ಭರಿಸಲು ಹೆಚ್ಚುವರಿ ತೆರಿಗೆ ಪ್ರಕಟಿಸಲಾಗಿದೆ. ರೂ.50 ಲಕ್ಷ–ರೂ.1 ಕೋಟಿ ಆದಾಯ ಹೊಂದಿರುವವರು ಶೇ.10ರಷ್ಟು ಅಧಿಕ ಕರ ತೆರಬೇಕಾಗುತ್ತದೆ.
ರೂ.1 ಕೋಟಿಗೂ ಅಧಿಕ ಆದಾಯ ಹೊಂದಿರುವವರು ಶೇ.15ರಷ್ಟು ಅಧಿಕ ಕರ ಪಾವತಿಸಬೇಕು.
2015–16ನೇ ಸಾಲಿನಲ್ಲಿ 3.7 ಕೋಟಿ ಜನ ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದ್ದು, 99 ಲಕ್ಷ ಜನ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು 2017ರ ಏಪ್ರಿಲ್ 1ರಿಂದ ಅರಿವು ಮೂಡಿಸುವ ಕಾರ್ಯಕ್ರಮ[೧]
ಮುಂಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ರೂ.10 ಲಕ್ಷ ಕೋಟಿ ಸಾಲ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಈ ವರ್ಷ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇಕಡ 4.1ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
ಕೃಷಿ ವಿಮೆಗೆ ಆದ್ಯತೆ: ರೈತರಿಗೆ ನೆರವಾಗುವ ಉದ್ದೇಶದಿಂದ ಫಸಲು ವಿಮಾ ಯೋಜನೆಯ ವ್ಯಾಪ್ತಿಯನ್ನು 2018–19ರ ವೇಳೆಗೆ ಬಿತ್ತನೆ ಪ್ರದೇಶದ ಶೇಕಡ 50 ರಷ್ಟಕ್ಕೆ ವಿಸ್ತರಿಸಲಾಗುವುದು. ಈ ಯೋಜನೆಗೆ ರೂ.9 ಸಾವಿರ ಕೋಟಿ ಮೀಸಲಿಡ ಲಾಗುತ್ತದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ರೂ.8 ಸಾವಿರ ಕೋಟಿ ಮೊತ್ತದ ‘ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ’ ಯನ್ನು ನಬಾರ್ಡ್ ಮೂಲಕ ಆರಂಭಿಸಲಾಗುವುದು. ಆರಂಭದಲ್ಲಿ ಇದಕ್ಕೆ ರೂ.2 ಸಾವಿರ ಕೋಟಿ ನೀಡಲಾಗುತ್ತದೆ.
ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಮತ್ತು ಅದಕ್ಕೆ ಪೂರಕವಾದ ಯೋಜನೆಗೆ ಒತ್ತು
ರೂ.5 ಸಾವಿರ ಕೋಟಿ ಆರಂಭಿಕ ಮೊತ್ತ ಬಳಸಿ, ಸಣ್ಣ ನೀರಾವರಿ ನಿಧಿ ಸ್ಥಾಪನೆ;
ಮಣ್ಣಿನ ಆರೋಗ್ಯ ಪರೀಕ್ಷೆಗೆ ದೇಶದ 648 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಿರು ಪ್ರಯೋಗಾಲಯ ಸ್ಥಾಪನೆ. ಇದರ ಜೊತೆ, ಉದ್ಯಮಿಗಳ ಮೂಲಕ ಹೆಚ್ಚುವರಿಯಾಗಿ ಒಂದು ಸಾವಿರ ಪ್ರಯೋಗಾಲಯಗಳ ಆರಂಭ.
63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಹಿವಾಟುಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಕಂಪ್ಯೂಟರೀಕರಿಸಲು ನಬಾರ್ಡ್‌ಗೆ ನೆರವು. ಇದಕ್ಕೆ ಅಂದಾಜು ರೂ.1,900 ಕೋಟಿ ವೆಚ್ಚ.
ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಜೊತೆ ಸಂಪರ್ಕ ಕಲ್ಪಿಸಿ, ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಕ್ರಮ. ಗುತ್ತಿಗೆ ಕೃಷಿಗೆ ಹೊಸ ಕಾನೂನು ರೂಪಿಸಿ, ರಾಜ್ಯಗಳ ಪರಿಶೀಲನೆಗೆ ರವಾನಿಸುವ ಪ್ರಸ್ತಾಪ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ (ಎಂ–ನರೇಗಾ) 2017–18ನೇ ಸಾಲಿನಲ್ಲಿ ರೂ.48 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ನರೇಗಾಗೆ ರೂ.38,500 ಕೋಟಿ ನಿಗದಿ ಮಾಡಲಾಗಿತ್ತು.
ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಗಳ ಅಡಿ ಹಂಚಿಕೆಯನ್ನು ರೂ.4,500 ಕೋಟಿಯಷ್ಟು ಹೆಚ್ಚಿಸಲಾಗಿದೆ.
ವಸತಿರಹಿತರು ಮತ್ತು ಗುಡಿಸಲು ವಾಸಿಗಳಿಗೆ 2019ರ ವೇಳೆಗೆ ಒಂದು ಕೋಟಿ ಮನೆಗಳ ನಿರ್ಮಾಣ ಗುರಿ. ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ 2016–17ರಲ್ಲಿ ರೂ.15 ಸಾವಿರ ಕೋಟಿ ನೀಡಲಾಗಿತ್ತು. ಇದನ್ನು 2017–18ನೇ ಸಾಲಿಗೆ ರೂ.23 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ.
2018ರ ಮೇ 1 ವೇಳೆಗೆ ಎಲ್ಲ ಗ್ರಾಮಗಳಿಗೆ ಶೇಕಡ 100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ.
ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ 2017–18ನೇ ಸಾಲಿನಲ್ಲಿ ರೂ.4,814 ಕೋಟಿ ಅನುದಾನ[೫]
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಬುಧವಾರ ಮಂಡಿಸಿದ 2017–18ನೇ ಸಾಲಿನ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹3,174 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಕಳೆದ ವರ್ಷದ ಅನುದಾನಕ್ಕಿಂತ ಶೇ 19.17ರಷ್ಟು ಜಾಸ್ತಿ ಇದೆ. 2016–17ನೇ ಸಾಲಿನಲ್ಲಿ ₹2,663.42 ಕೋಟಿ ಹಂಚಿಕೆ ಮಾಡಲಾಗಿತ್ತು.
ರೈಲು ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆಯ ಸುಧಾರಣೆ ಸೇರಿದಂತೆ ರೈಲ್ವೆ ಸುರಕ್ಷತೆಗಾಗಿ ರೂ.1 ಲಕ್ಷ ಕೋಟಿ ವಿಶೇಷ ನಿಧಿ ಮೀಸಲಿರಿಸಲಾಗಿದೆ. 92 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಹಣಕಾಸು ಮತ್ತು ರೈಲ್ವೆ ಬಜೆಟ್‌ಅನ್ನು ವಿಲೀನಗೊಳಿಸಿ ಮಂಡಿಸಲಾಗಿದ್ದು, ಯಾವುದೇ ಹೊಸ ರೈಲು ಸಂಪರ್ಕ ಯೋಜನೆಗಳನ್ನು ಪ್ರಕಟಿಸಿಲ್ಲ. ಸುರಕ್ಷತೆ, ಸೌಲಭ್ಯ ಅಭಿವೃದ್ಧಿಗಳಿಗೆ ಆದ್ಯತೆ ನೀಡಲಾಗಿದೆ.
ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು–ಅಭಿವೃದ್ಧಿಪಡಿಸುತ್ತಿದ್ದು, ಅವುಗಳಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಕಂಟೊನ್ಮೆಂಟ್ ರೈಲ್ವೆ ನಿಲ್ದಾಣಗಳು ಸೇರಿವೆ. ಖಾಸಗಿ ಸಹಭಾಗಿತ್ವದಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿನ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವುದರ ಮೂಲಕ ಆದಾಯ ಗಳಿಸುವ ಉದ್ದೇಶವೂ ಇದೆ.
ಒಟ್ಟು 3500 (2,800-2016- 17?) ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ದೇಶದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಲ್ಲಿ ನೈರುತ್ಯ ರೈಲ್ವೆಯ 165 ಕಿ.ಮೀ ಸೇರಿದೆ. ಕಳೆದ ವರ್ಷ 231 ಕಿ.ಮೀ ಹೊಸ ಮಾರ್ಗ ನಿರ್ಮಾಣಕ್ಕೆ ಅನುದಾನ ಹಂಚಿಕೆ ಮಾಡಲಾಗಿತ್ತು.
ಕರ್ನಾಟಕ ರಾಜ್ಯದಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳು 350 ಇದ್ದು, ಮೂರು ವರ್ಷಗಳಲ್ಲಿ ಅವುಗಳನ್ನು ನಿರ್ಮೂಲನೆ ಮಾಡಲಾಗುವುದು. ದೇಶದಲ್ಲಿನ 2,000 ರೈಲ್ವೆ ನಿಲ್ದಾಣಗಳಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಅವಕಾಶ ಕಲ್ಪಿಸುತ್ತಿದ್ದು, ಈ ಯೋಜನೆ ವ್ಯಾಪ್ತಿಗೆ ರಾಜ್ಯದ 34 ನಿಲ್ದಾಣಗಳು ಸೇರಿವೆ. ಇದುವರೆಗೂ 900 ರೈಲ್ವೆ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೋಗಿಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು.
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಂಬಂಧ ಕೇಂದ್ರ ನಿಯಮ ರೂಪಿಸಿದ್ದು, 2 ಸಾವಿರ ರೂಪಾಯಿ ಮಾತ್ರ ನಗದಿನಲ್ಲಿ ಪಾವತಿಸಬಹುದಾಗಿದೆ. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಂಬಂಧ ಕೇಂದ್ರ ನಿಯಮ ರೂಪಿಸಿದ್ದು, 2 ಸಾವಿರ ರೂಪಾಯಿ ಮಾತ್ರ ನಗದಿನಲ್ಲಿ ಪಾವತಿಸಬಹುದಾಗಿದೆ. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.[೭]
ಹಣಕಾಸು ಸಚಿವ ಅರುಣ್ ಜೇಟ್ಲಿ 2017-18ಕ್ಕೆ ರಕ್ಷಣಾ ಖರ್ಚು ರೂ 2.74 ಲಕ್ಷ ಕೋಟಿ ಮಂಜೂರುಮಾಡಿದ್ದಾರೆ. - ಕಳೆದ ವರ್ಷದ ರೂ 2.58 ಲಕ್ಷ ಕೋಟಿ ಮಂಜೂರಾಗಿತ್ತು. ಅದರಲ್ಲಿ ಆಧುನೀಕರಣಕ್ಕೆ 86.488 ಕೋಟಿ ಸೇರಿದೆ.[೮]
ಈ ಬಜೆಟ್‌ನಲ್ಲಿ ಅಂದಾಜು ರೂ. 86 ಸಾವಿರ ಕೋಟಿಯನ್ನು ರಕ್ಷಣಾ ಉಪಕರಣಗಳ (ಯುದ್ಧನೌಕೆ, ವಿಮಾನಗಳು, ಬಂದೂಕು ಇತ್ಯಾದಿ) ಖರೀದಿಗೆ ಮೀಸಲಿಡಲಾಗಿದೆ. ಆದರೆ ಈ ಸಂಖ್ಯೆ ಕೂಡ ಪೂರ್ಣ ಕಥೆಯನ್ನು ಹೇಳುವುದಿಲ್ಲ. ರೂ.86 ಸಾವಿರ ಕೋಟಿ ಪೈಕಿ ಶೇಕಡ 85ರಷ್ಟಕ್ಕಿಂತ ಹೆಚ್ಚು ಮೊತ್ತ ಹಿಂದೆ ಮಾಡಿಕೊಂಡಿದ್ದ ಖರೀದಿ ಒಪ್ಪಂದಗಳಿಗೇ ವೆಚ್ಚವಾಗಲಿದೆ. ಐಎನ್‌ಎಸ್ ವಿಕ್ರಮಾದಿತ್ಯ, ಭೂಸೇನೆಯ ಕೆಲವು ವಿಮಾನಗಳು, ವಾಯು ಪಡೆಯ ಸುಖೋಯ್ ಮತ್ತಿತರ ವಿಮಾನಗಳನ್ನು ಖರೀದಿಸಿದ್ದಕ್ಕೆ ನಾವು ಇಂದಿಗೂ ಕಂತು ಕಟ್ಟುತ್ತಿದ್ದೇವೆ.
ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ರೂ.3.6 ಲಕ್ಷ ಕೋಟಿ(??) ನಿಗದಿ ಮಾಡಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 2.1ರಷ್ಟು.
ಹಾಗಾಗಿ, ಹೊಸ ಖರೀದಿಗಳಿಗೆ ಉಳಿದಿರುವ ಮೊತ್ತ ₹ 10 ಸಾವಿರ ಕೋಟಿಯಿಂದ ₹ 15 ಸಾವಿರ ಕೋಟಿ ಮಾತ್ರ. ದೇಶದ ರಕ್ಷಣಾ ಪಡೆಗಳನ್ನು ಚೀನಾ ಅಥವಾ ಬೇರೆ ದೇಶಗಳ ಜೊತೆ ಸ್ಪರ್ಧಾತ್ಮವಾಗಿ ಇಡಲು ಈ ಮೊತ್ತ ತೀರಾ ಕಡಿಮೆ. 2017ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟುಗಳು ತೀವ್ರವಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಉಪಕರಣಗಳ ಖರೀದಿಗೆ ಮೀಸಲಾದ ಚಿಕ್ಕ ಮೊತ್ತ ಕೂಡ ಪ್ರತಿ ವರ್ಷ ಹಣಕಾಸು ಇಲಾಖೆಗೆ ಮರಳುತ್ತಿದೆ. ತನಗೆ ನೀಡಿದ ಹಣವನ್ನು ರಕ್ಷಣಾ ಇಲಾಖೆ ವಿನಿಯೋಗಿಸಲಿ, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡಲಿ ಎಂಬುದೇ ನಾವು ಹೊಂದಬಹುದಾದ ಕನಿಷ್ಠ ಆಸೆ. ರಕ್ಷಣಾ ಪಡೆಗಳಿಗೆ ನೀಡಲಾದ ಚಿಕ್ಕ ಮೊತ್ತದಿಂದ ಏನನ್ನು ನಿಭಾಯಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಸಚಿವ ಮನೋಹರ ಪರಿಕ್ಕರ್ ಅವರಲ್ಲಿ ನಾವು ಹೆಚ್ಚೆಚ್ಚು ಕೇಳಬೇಕು.[೯]
ಬಜೆಟ್ಟನ ಒಟ್ಟು ಗಾತ್ರ ರೂ.2147000 ಕೋಟಿ ಎಂದು ಪ್ರಜಾವಾಣಿಯಲ್ಲಿ ಹೇಳಿದೆ. ಆದರೆ 9% ರಕ್ಷಣಾವೆಚ್ಚ = ರೂ. 2.74,114 ಕೋಟಿ ಎಂದರೆ ಒಟ್ಟು ಬಜೆಟ್ ಗಾತ್ರ ರೂ.3045711.111 ಲಕ್ಷಕೋಟಿ ಆಗುವುದು.
ಕಳೆದ ಹಣಕಾಸು ವರ್ಷದಲ್ಲಿ (2015–16) ಕೇಂದ್ರ ಸರ್ಕಾರವು ದೇಶದ ಉದ್ಯಮ ವಲಯಕ್ಕೆ ನೀಡಿದ ಪ್ರತ್ಯಕ್ಷ, ಪರೋಕ್ಷ ತೆರಿಗೆ ರಿಯಾಯ್ತಿಗಳ ಒಟ್ಟು ಮೊತ್ತವು ಹೆಚ್ಚು ಕಡಿಮೆ ಐದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ವ್ಯಕ್ತಿಗತ ಆದಾಯ ತೆರಿಗೆ ರಿಯಾಯ್ತಿ ಮೊತ್ತ ರೂ.55,366 ಕೋಟಿ ಮತ್ತು ಇತರೆ ರಿಯಾಯ್ತಿಗಳ ಲೆಕ್ಕ ಹಿಡಿದರೆ ಈ ಮೊತ್ತ ರೂ.6 ಲಕ್ಷ ಕೋಟಿ ದಾಟುತ್ತದೆ. 2017–-18ರ ಬಜೆಟ್‌ನಲ್ಲಿ ಈ ಮಾಹಿತಿ ಇದೆ. ಪರೋಕ್ಷ ತೆರಿಗೆಗಳ ಪೈಕಿ ಅಬಕಾರಿ ಸುಂಕದ ಸಂಬಂಧದಲ್ಲಿ ನೀಡಲಾದ ರಿಯಾಯ್ತಿ ಮೊತ್ತ ₹2,24,940 ಕೋಟಿ. ಕಸ್ಟಮ್ಸ್ ಸುಂಕಗಳ ರಿಯಾಯ್ತಿ ರೂ.2,57, 549 ಕೋಟಿ. 2.25 ಕೋಟಿ ವ್ಯಕ್ತಿಗತ ತೆರಿಗೆದಾರರಿಗೆ ನೀಡಿದ ರಿಯಾಯ್ತಿ ರೂ.55,366 ಕೋಟಿ.
ಶಾಸನಾತ್ಮಕ ಕಾರ್ಪೊರೇಟ್ ತೆರಿಗೆ ದರಗಳನ್ನು ಶೇ 24.67ಕ್ಕೆ ಕಡಿತಗೊಳಿಸಿ, ಈ ಕಂಪೆನಿಗಳಿಗೆ ಒಟ್ಟು ರೂ.68,711 ಕೋಟಿಗಳಷ್ಟು ರಿಯಾಯ್ತಿ ನೀಡಲಾಗಿದೆ. ಇಂತಹ ಕಂಪೆನಿಗಳ ಸಂಖ್ಯೆ 5.82 ಲಕ್ಷ. ಕಾರ್ಪೊರೇಟ್ ವ್ಯಾಖ್ಯಾನದಡಿ ಬಾರದ ಪಾಲುದಾರ ಉದ್ಯಮ ಸಂಸ್ಥೆಗಳು, ವ್ಯಕ್ತಿಗಳೇ ಸೇರಿ ನಡೆಸುವ ಒಟ್ಟು 7.59 ಲಕ್ಷ ಉದ್ಯಮಗಳಿಗೆ ನೀಡಿರುವ ತೆರಿಗೆ ರಿಯಾಯ್ತಿ ರೂ.4,561 ಕೋಟಿ.[೧೨]