Comptroller and Auditor General (C&AG)
ಭಾರತದ ನಿಯಂತ್ರಕರು ಮತ್ತು ಮಹಾ ಲೇಖಪಾಲರು | |
---|---|
ಅಧಿಕಾರಸ್ಥ ಜಿ ಸಿ ಮುರ್ಮು ಎಂದಿನಿಂದ-8 ಆಗಸ್ಟ್ 2020 | |
ಅನುಮೋದಕ | ಭಾರತದ ಪ್ರಧಾನ ಮಂತ್ರಿಗಳು |
ನೇಮಕಾಧಿಕಾರಿ | ಭಾರತದ ರಾಷ್ಟ್ರಪತಿಗಳು |
ವೇತನ | 250000 |
ಅಧೀಕೃತ ಜಾಲತಾಣ | saiindia |
ಭಾರತದ ನಿಯಂತ್ರಕರು ಮತ್ತು ಮಹಾ ಲೇಖಪಾಲರು ಸಂವಿಧಾನದ ಒಂದು ಪ್ರಾಧಿಕಾರವಾಗಿದ್ದು ಭಾರತದ ಸಂವಿಧಾನದ 5ನೇ ವಿಭಾಗದ 5ನೇ ಅಧ್ಯಾಯದ 7b ಉಪ ಅಧ್ಯಾಯದ 148ನೇ ಕಾಲಮ್ಮಿನಲ್ಲಿ ಇವರ ಸಂಪೂರ್ಣ ಪ್ರಸ್ತಾವನೆ ಇದೆ. ಭಾರತ ಸರ್ಕಾರ, ರಾಜ್ಯ ಸರ್ಕಾರ ಹಾಗು ಉಭಯ ಸರ್ಕಾರಗಳಿಂದ ಅಥವಾ ಯಾವುದೇ ಸರ್ಕಾರದಿಂದ ಆರ್ಥಿಕವಾಗಿ ಅನುದಾನ ಪಡೆದ ಅಂಗ ಸಂಸ್ಥೆಗಳ, ಪ್ರಾಧಿಕಾರಗಳ ಖರ್ಚು ವೆಚ್ಚದ ಸಂಪೂರ್ಣ ಲೆಕ್ಕಾಚಾರ ಮಹಾ ಲೇಖಪಾಲರ ಕರ್ತವ್ಯವಾಗಿರುತ್ತದೆ. ಮಹಾಲೇಖಪಾಲರು ಸರಕಾರೀ ಮಾಲೀಕತ್ವ ಹೊಂದಿರುವ ಸಂಸ್ಥೆಗಳು ಹಾಗು ನಿಗಮಗಳ ಅಯವ್ಯಯಕ್ಕೂ ಬಾಹ್ಯ ಲೇಖಪಾಲರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಸರಕಾರೀ ಮಾಲೀಕತ್ವದ ಸಂಸ್ಥೆಗಳು ಎನ್ನಲು ಕೆಲವು ಮಾನದಂಡ ಗಳಿದ್ದು ಅವುಗಳಿಗೆ ಮಾತ್ರ ಮಹಲೇಖಪಾಲರ ಕಾರ್ಯ ವ್ಯಾಪ್ತಿ ಅನ್ವಹಿಸುತ್ತದೆ. ಬ್ಯಾಂಕಿಂಗ್ ಕ್ಷೆತ್ರವಲ್ಲದ , ವಿಮಾ ಕ್ಷೇತ್ರವೂ ಅಲ್ಲದ ಯಾವ ಸಂಸ್ಥೆಗಳಲ್ಲಿ ಅಥವಾ ಅಂಗ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ಶೇ.೫೧ ರಷ್ಟು ಈಕ್ವಿಟಿ ಶೇರುಗಳನ್ನು ಹೊಂದಿದೆಯೋ ಅಂತಹ ಕಂಪನಿಗಳನ್ನು ಸರ್ಕಾರಿ ಒಡೆತನದ ಕಂಪನಿಗಳು ಎಂದು ಪರಿಗಣಿಸಲಾಗುತ್ತದೆ.ಭಾರತದ ಮಹಾ ಲೇಖಪಾಲರು ಸಿದ್ಧ ಪಡಿಸಿ ಕೊಡುವ ವರದಿಗಳನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಮತ್ತು ಸಾರ್ವಜನಿಕ ರಂಗದ ಎಲ್ಲಾ ಸಮಿತಿಗಳು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಸಾರ್ವಜನಿಕ ರಂಗದ ಸಮಿತಿಗಳು ಎಂದರೆ ಭಾರತ ಸಂಸತ್ತು ಹಾಗು ರಾಜ್ಯಗಳ ವಿಧಾನ ಸಭೆಗಳ ಸಮಿತಿಗಳು ಸೇರುತ್ತವೆ. ಮಹಾಲೇಖ ಪಾಲರು ಭಾರತದ ಲೆಕ್ಕ ಪತ್ರ ಇಲಾಖೆಯ ಮುಖ್ಯಸ್ಥರೂ ಆಗಿ ಕಾರ್ಯ ನಿರ್ವಹಿಸುತ್ತಾರೆ. ಲೆಕ್ಕ ಪತ್ರ ಇಲಾಖೆಯ ದಿನ ನಿತ್ಯ ವ್ಯವಹಾರಗಳನ್ನು ಭಾರತೀಯ ಲೆಕ್ಕ ಪತ್ರ ಸೇವೆಗಳ ಅಧಿಕಾರಿಗಳು ನಿಭಾಯಿಸುತ್ತಾರೆ ಹಾಗು ಇಲಾಖೆಗೆ ಸಂಬಂಧ ಪಟ್ಟ ೫೮೦೦೦ ಜನ ದೇಶದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ಮಹಲೇಖಪಾಲರು ಭಾರತದಲ್ಲಿ ೯ನೇ ಮುಖ್ಯಸ್ಥರಾಗಿ ಪರಿಗಣಿಸಲ್ಪಡುತ್ತಾರೆ. ಭಾರತದ ಸುಪ್ರೀಂ ಕೋರ್ಟ್ ನ್ಯಾಯಾದೀಶರ ಸಮಾನ ಸ್ಥಾನ ಮಾನಗಳು ಮಹಾ ಲೇಖಪಾಲರಿಗೆ ಸಲ್ಲುತ್ತವೆ. ಸದ್ಯ ಭಾರತದ ಮಹಾಲೇಖಪಾಲರಾಗಿ ಶಶಿಕಾಂತ್ ಶರ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಭಾರತದ ಹನ್ನೆರಡನೆ ಮಹಾ ಲೇಖಪಾಲರು.
ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರನ್ನು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಆಧಾರದ ಮೇಲೆ ನೇಮಿಸುತ್ತಾರೆ. ನೇಮಕ ಸಂಧರ್ಬದಲ್ಲಿ ವಿಧಿವತ್ತಾದ ಪ್ರಮಾಣ ವಚನ ಸ್ವೀಕಾರ ಸಮಾರಂಭವಿರುತ್ತದೆ.
ದಿನಾಂಕ | ವೇತನ |
---|---|
1 ಜನವರಿ 2006 | ₹೯೦,೦೦೦ (ಯುಎಸ್$೧,೯೯೮) |
ಅನುಕ್ರಮ | ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು | ಆರಂಭ | ಅಂತ್ಯ | ||||||
---|---|---|---|---|---|---|---|---|---|
1 | ವಿ. ನರಹರಿ ರಾವ್ | 1949 | 1954 | ||||||
2 | ಎ. ಕೆ. ಚಂಡ | 1954 | 1960 | ||||||
3 | ಎ. ಕೆ. ರಾಯ್ | 1960 | 1966 | ||||||
4 | ಎಸ್. ರಂಗನಾಥನ್ | 1966 | 1972 | ||||||
5 | ಎ. ಭಕ್ಷಿ | 1972 | 1978 | ||||||
6 | ಜಿಯಾನ್ ಪ್ರಕಾಶ್ | 1978 | 1984 | ||||||
7 | ಟಿ.ಎನ್. ಚತುರ್ವೇದಿ | 1984 | 1990 | ||||||
8 | ಸಿ.ಜಿ. ಸೋಮಯ್ಯ | 1990 | 1996 | ||||||
9 | ವಿ.ಕೆ. ಶುಂಗ್ಲೂ | 1996 | 2002 | ||||||
10 | ವಿ.ಎನ್. ಕೌಲ್ | 2002 | 2008 | ||||||
11 | ವಿನೋದ್ ರಾಯ್ | 2008 | 2013 | ||||||
12 | ಶಶಿ ಕಾಂತ್ ಶರ್ಮಾ | 2013 | - | 13 | Rajiv maharshi
2017 |
- | 14 | Girish Chandra Murmu | 2020 |