ಈ ಲೇಖನವು ಓದುಗರಿಗೆ ಗೊಂದಲ ಅಥವಾ ಅಸ್ಪಷ್ಟವಾಗಿರಬಹುದು. ಲೇಖನವನ್ನು ಸ್ಪಷ್ಟಪಡಿಸಲು ನಮಗೆ ಸಹಾಯ ಮಾಡಿ; ಸಲಹೆಗಳನ್ನು ಕಾಣಬಹುದು(November 2010) |
ಭಾರತ ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ತೆರಿಗೆಯ ವ್ಯಾಪ್ತಿಗೆ ಒಳಪಡುವ ಆದಾಯದ ಮೇಲೆ, ಹಿಂದು ಅವಿಭಕ್ತ ಕುಟುಂಬಗಳು (ಎಚ್‌ಯುಎಫ್), ಕಂಪೆನಿಗಳು, ವ್ಯಾಪಾರಿ ಸಂಸ್ಥೆಗಳು, ಸಹಕಾರ ಸಂಘಗಳು ಮತ್ತು ಟ್ರಸ್ಟ್(ಸ್ವತಂತ್ರ ವ್ಯಕ್ತಿಗಳ ಮತ್ತು ಹಲವಾರು ವ್ಯಕ್ತಿಗಳ ಗುಂಪು) ಮತ್ತು ಇತರೇ ಯಾವುದೇ ರೀತಿಯ ವ್ಯಕ್ತಿಗಳಿಗೂ ಆದಾಯ ತೆರಿಗೆಯನ್ನು ವಿಧಿಸುತ್ತದೆ. ಮೇಲೆ ಹೇಳಿದ ಪ್ರತಿಯೊಬ್ಬ ವ್ಯಕ್ತಿಗೆ ತೆರಿಗೆ ಕರ ವಿಭಿನ್ನವಾಗಿರುತ್ತದೆ. ಈ ಕರವು ಭಾರತೀಯ ಆದಾಯ ತೆರಿಗೆ, 1961ರ ಪ್ರಕಾರ ಇದು ನಿಯಂತ್ರಣಕ್ಕೊಳಪಟ್ಟಿರುತ್ತದೆ. ಭಾರತೀಯ ಆದಾಯ ತೆರಿಗೆ ಇಲಾಖೆಯು ಕೇಂದ್ರೀಯ ನೇರ ತೆರಿಗೆ ಸಮಿತಿಯ (CBDT) ನಿಯಂತ್ರಣಕ್ಕೊಳಪಟ್ಟಿರುತ್ತದೆ. ಅಲ್ಲದೆ ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ಇಲಾಖೆಯ ಅಧೀನದಲ್ಲಿ ಬರುತ್ತದೆ.
ಆದಾಯ ತೆರಿಗೆಗೆ ಒಳಪಡದ ಒಂದು ಹಂತಕ್ಕಿಂತ ಹೆಚ್ಚಿನ ಹಣ ವನ್ನು ಹೊಂದಿದ ಪ್ರತಿಯೊಬ್ಬ ವ್ಯಕ್ತಿಯ ಒಟ್ಟು ಆದಾಯವು ತೆರಿಗೆಗೆ ಒಳಪಡುತ್ತದೆ. ಅಲ್ಲದೆ ಇದು ಆದಾಯ ತೆರಿಗೆಗೆ ಒಳಪಡುವ ಹಣವಾಗುತ್ತದೆ. ಇಲ್ಲಿ ಬೆಲೆಯನ್ನು ಹಣಕಾಸು ಕಾಯಿದೆಯ ಪ್ರಕಾರ ಆಯಾ ವರ್ಷಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ಆದಾಯ ಕರವನ್ನು ವ್ಯಕ್ತಿಯ ಜೀವನ ಮಟ್ಟವನ್ನು ನೋಡಿ ನಿರ್ಧರಿಸಲಾಗುತ್ತದೆ.
ಆದಾಯ ತೆರಿಗೆ ಇದು, ಕೇಂದ್ರ ಆಯವ್ಯಯದಲ್ಲಿ ಪ್ರತಿವರ್ಷ ನಿಗದಿಪಡಿಸುವಷ್ಟು ಮೊತ್ತದ ತೆರಿಗೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಕಳೆದ ವರ್ಷದಲ್ಲಿ ತನ್ನ ಗಳಿಕೆಗೆ ತಕ್ಕಂತೆ ಕಟ್ಟಬೇಕಾದಂತಹ ತೆರಿಗೆಯಾಗಿದೆ.
ಆದಾಯಕ್ಕೆ ತಕ್ಕಂತೆ ಅಂದರೆ ಅದು ಗಳಿಕೆಯಾಗಿರಲಿ ಅಥವಾ ಬಂಡವಾಳವಾಗಿರಲಿ ಅದಕ್ಕೆ ತಕ್ಕುದಾಗಿ ಬದಲಾವಣೆಯಾಗುವಂತದ್ದು ಇದಾಗಿರುತ್ತದೆ. ಆದಾಯಕ್ಕೆ ತಕ್ಕುದಾದ ತೆರಿಗೆಯ ನಿಯಮಗಳು-: ಆದಾಯ ತೆರಿಗೆಯ ಬೆಲೆ/ಶ್ರೇಣಿ ಬೆಲೆ(%)
೨,೦೦,೦೦೦ ದ ವರೆಗೆ=೦%
೨,೦0,00೧- – ೫,00,000 = 10%
೫,00,00೧ – ೧೦,00,000 = 20%
೧೦,00,00೧ಕ್ಕಿಂತ ಹೆಚ್ಚು = 30%
೬೦ ವರ್ಷ ಮೆಲ್ಪಟ್ಟವರಿಗೆ ೨,೫೦,೦೦೦ ದ ವರೆಗೆ ತೆರಿಗೆ ಇಲ್ಲ. ೮೦ ವರ್ಷ ಮೆಲ್ಪಟ್ಟವರಿಗೆ ೫,೦೦,೦೦೦ ದ ವರೆಗೆ ತೆರಿಗೆ ಇಲ್ಲ.
ಶಿಕ್ಷಣ ಕರವನ್ನು ಆದಾಯ ತೆರಿಗೆಯಲ್ಲು 3% ನೀಡಲಾಗುತ್ತದೆ, ಮೇಲ್ತೆರಿಗೆ = NA
;ಆದಾಯ ಕರ ದರ -2014-15
|
ಎಲ್ಲ ರಹವಾಸಿಗಳೂ ತಮ್ಮ ಆದಾಯಕ್ಕೆ ತಕ್ಕುದಾದ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಅವರು ಭಾರತದಲ್ಲಿದ್ದರೂ ಅಥವಾ ಭಾರತದಲ್ಲಿಲ್ಲದಿದ್ದರೂ ಕೂಡ.[೨] ರಹವಾಸಿಗಳಲ್ಲದವರು ಕೇವಲ ಭಾರತದಲ್ಲಿ ಪಡೆದ ಆದಾಯ ಹಾಗೂ ಭಾರತದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಸಾಮಾನ್ಯ ರಹವಾಸಿಗಳಾದರೆ ಅವರು ಭಾರತದಲ್ಲಿ ಪಡೆದ ಆದಾಯಕ್ಕೆ ತಕ್ಕುದಾಗಿ ಅಥವಾ ಭಾರತದಿಂದ ನಿರ್ವಹಿಸಲ್ಪಡುವ ವ್ಯವಹಾರಕ್ಕೆ ತಕ್ಕುದಾಗಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ.
ವ್ಯಕ್ತಿಯೊಬ್ಬನ ಆದಾಯವನ್ನು ಐದು ಮುಖ್ಯ ಅಂಶಗಳಾಗಿ ವಿಂಗಡಿಸಲಾಗುತ್ತದೆ [೩]:
ಈ ಅಂಶದಲ್ಲಿ ಉದ್ಯೋಗದಾತರಿಂದ, ಉದ್ಯೋಗಿ ಪಡೆದ ಎಲ್ಲ ಹಣವೂ ಕೂಡಾ ಆದಾಯ ತೆರಿಗೆಯ ಅಡಿಯಲ್ಲಿ ಬರುತ್ತದೆ. ಉದ್ಯೋಗದಾತರೂ ಖಡ್ಡಾಯವಾಗಿ ತೆರಿಗೆಯನ್ನು ನೀಡುವ ಸಂಬಳದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೇವಲ ಆದಾಯ ತೆರಿಗೆಯ ವ್ಯಾಪ್ತಿಗೆ ಬರುವಷ್ಟು ಇದ್ದರೆ ಮಾತ್ರ. ಇದನ್ನು ಎಂದು ಕರೆಯಲಾಗುತ್ತದೆ. ಮತ್ತು ತಮ್ಮ ಉದ್ಯೋಗಿಗಳಿಗೆ ಅರ್ಜಿ 16 ರನ್ನು ಕೊಡುವ ಮೂಲಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್)ಕ ತಾವು ತೆರಿಗೆ ಮುರಿದುಕೊಂಡಿರುವುದಕ್ಕೆ ಆಧಾರ ನೀಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ, ಅರ್ಜಿ 16, ಸಂಬಳದಲ್ಲಿ ತೆಗೆದುಕೊಂಡ ಇನ್ನುಳಿದ ಈ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತದೆ.
ಸಂಬಳದಿಂದ ಪಡೆದ ಆದಾಯವೂ ಈ ಮೇಲಿನ ಎಲ್ಲವನ್ನೂ ಒಳಗೊಂಡಿರುತ್ತದೆ.
ಗೃಹ ಮೂಲದಿಂದ ಬರಬಹುದಾದ ಆದಾಯವನ್ನು ವಾರ್ಷಿಕ ಮೌಲ್ಯದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ವಾರ್ಷಿಕ ಮೌಲ್ಯ ಎಂದರೆ (ಬಾಡಿಗೆಗೆ ನೀಡಿದಲ್ಲಿ) ಈ ಕೆಳಗಿನವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ
ಒಂದುವೇಳೆ ಮನೆಯನ್ನು ಬಾಡಿಗೆಗೂ ನೀಡದೇ ತಾನೂ ವಾಸಮಾಡದೇ ಇದ್ದರೂ ಸಹ ಮಾಲೀಕನಿಗೇ ಸೇರಿದ್ದೆಂದು ಪರಿಗಣಿಸಲಾಗುತ್ತದೆ. ಒಂದುವೇಳೆ ತಾನು ಸ್ವಂತ ಉಪಯೋಗಿಸುತ್ತಿದ್ದರೆ ವಾರ್ಷಿಕ ಮೌಲ್ಯವನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ.(ಒಂದು ವೇಳೆ ಒಂದಕ್ಕಿಂತ ಹೆಚ್ಚು ಮನೆಗಳನ್ನು ಮಾಲೀಕನು ಬಳಸುತ್ತಿದ್ದಲ್ಲಿ ಇತರ ಮನೆಯ/ಗಳ ವಾರ್ಷಿಕ ಮೌಲ್ಯಗಳನ್ನು ತೆರಿಗೆಗೆ ಸೇರಿಸಿಕೊಳ್ಳಲಾಗುತ್ತದೆ.) ಇದರಲ್ಲಿ ಪಾವತಿಸಲಾದ ಪೌರಸಭೆಯ ತೆರಿಗೆಯನ್ನು ಕಳೆದರೆ ನಿಕ್ಕಿ ವಾರ್ಷಿಕ ಮೌಲ್ಯವು ದೊರೆಯುತ್ತದೆ. ಈ ನಿಕ್ಕಿ ವಾರ್ಷಿಕ ಮೌಲ್ಯದಲ್ಲಿ ಈ ಕೆಳಗಿನವುಗಳನ್ನು ಕಳೆಯಬೇಕು:
ಒಂದು ವೇಳೆ ಮನೆಯನ್ನು ಸ್ವತಃ ಉಪಯೋಗಿಸುತ್ತಿದ್ದಲ್ಲಿ ಗೃಹ ಸಾಲಕ್ಕೆ ನೀಡಲಾದ ಬಡ್ಡಿ ರಖಂ ರೂ.1,50,000(ಒಂದು ವೇಳೆ ಸಾಲವನ್ನು 01,ಏಪ್ರಿಲ್, 1999ರ ನಂತರ ತೆಗೆದುಕೊಂಡಿದ್ದು ಸಾಲ ತೆಗೆದುಕೊಂಡ 3 ವರ್ಷದಲ್ಲಿ ಮನೆಕಟ್ಟಿ ಮುಗಿದಲ್ಲಿ) ಮತ್ತು ರೂ.30,000(ಒಂದು ವೇಳೆ ಸಾಲವನ್ನು 1 ಏಪ್ರಿಲ್ 1999ರ ಒಳಗಾಗಿ ತೆಗೆದುಕೊಂಡಿದ್ದಲ್ಲಿ)ಗಳ ಮಿತಿಗೆ ಒಳಪಟ್ಟು ಆದಾಯದಲ್ಲಿ ರಿಯಾಯಿತಿ ಎಂದು ನೀಡಬಹುದು. ಮತ್ತು ಇತರ ಸ್ವತಃ ಬಳಸದ ಆಸ್ತಿಗಳಿಂದ ಬಂದ ಆದಾಯದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ.
ರಿಯಾಯಿತಿ ಮಟ್ಟಕ್ಕೆ ಮೀರಿದ ಬಡ್ಡಿ ನೀಡಿದ ಮೊತ್ತವನ್ನು ರಿಯಾಯಿತಿ ನೀಡದೇ ತೆರಿಗೆಗೊಳಪಡುವ ಆದಾಯದಲ್ಲಿ ಸೇರಿಸಬೇಕು.
ಇದಕ್ಕೆ ಒಂದು ಉದಾಹರಣೆ: ಉದಾಹರಣೆಗೆ ಒಬ್ಬ ವಾಸ್ತು ವಿನ್ಯಾಸಕನು ಆತನ ಗ್ರಾಹಕರು ಮನೆಕಟ್ಟಿಸುವಲ್ಲಿ ಹೋಗಿ ಅವರಿಗೆ ಸಲಹೆ ಸೂಚನೆಗಳನ್ನು ನೀಡುತ್ತ ಸಹಕರಿಸುತ್ತಿದ್ದರೆ ಈ ಕೆಳಗಿನ ಎಲ್ಲ ಖರ್ಚುಗಳನ್ನು ವೃತ್ತಿ ತೆರಿಗೆಯಿಂದ ಕಳೆಯಲಾಗುವುದು.
ಈ ಆದಾಯವು ಪರಿಚ್ಛೇದ 28ರಲ್ಲಿ ವಿವರಿಸಲ್ಪಟ್ಟಿದೆ. ಇದನ್ನು 'ವ್ಯಾಪಾರ ಮತ್ತು ವೃತ್ತಿಯಿಂದ ಬರುವ ಆದಾಯ' ಎಂಬ ತಲೆಬರಹದಲ್ಲಿ ತೋರಿಸಬೇಕು. ಇವುಗಳನ್ನು ಪರಿಚ್ಛೇದ 30 ಮತ್ತು 43ಡ ಯಲ್ಲಿ ನೀಡಿದ ನಿಭಂದನೆಗಳ ಪ್ರಕಾರ ಲೆಕ್ಕಹಾಕಬೇಕು. ಮತ್ತು ಈ ಪರಿಚ್ಛೇಧದ ಪ್ರಕಾರ ಇನ್ನು ಹಲವು ಪರಿಚ್ಛೇದಗಳಿವೆ. ಅವು ಯಾವುವೆಂದರೆ, ಪರಿಚ್ಛೇದ 44ರಿಂದ (44ಅಅ , 44ಅಬ, ಮತ್ತು 44ಕ ಹೊರತುಪಡಿಸಿ) 44ಡಅ ವರೆಗೆ ಇವು ಸಂಪೂರ್ಣ ಎಣಿಕೆಯನ್ನು ಇದರೊಳಗೆ ಹೊಂದಿವೆ. ಪರಿಚ್ಛೇದ 44ಕ ದಲ್ಲಿ ವಿದೇಶದಲ್ಲಿ ವಾಸಿಸುತ್ತಿರುವವರಿಗೆ ನೀಡಲಾಗದ ನಿಬಂಧನೆಗಳನ್ನು ಒಳಗೊಂಡಿದೆ. ಛೇದನ 44ಅಅ ದಾಖಲೆ ಪುಸ್ತಕಗಳ ನಿರ್ವಹಣೆಯ ಬಗ್ಗೆ ವಿವರಿಸುತ್ತದೆ ಮತ್ತು 44ಅಬ ದಾಖಲೆಗಳ ಲೆಕ್ಕಪರಿಶೋಧನೆಯ ಬಗ್ಗೆ ವಿವರಿಸುತ್ತದೆ.
ಸಂಕ್ಷಿಪ್ತವಾಗಿ ಹೆಳಬೇಕೆಂದರೆ ಉದ್ದಿಮೆಯ ಆದಾಯದ ಲೆಕ್ಕಾಚಾರದ ಬಗೆಗೆ ಮಾಹಿತಿ ನೀಡುವ ಛೇದನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.
ಉದ್ದಿಮೆ ಅಥವಾ ವೃತ್ತಿಯ ಲಾಭ ಅಥವಾ ಹಾನಿ ಲೆಕ್ಕಾಚಾರವು ನಮಗೆ ಸಿಕ್ಕಿದ ಮಾಹಿತಿಗಳನ್ನು ಆದರಿಸಿರುತ್ತದೆ.[೪]
ಒಂದು ವೇಳೆ ಕಾಯಂ ಲೆಕ್ಕ ಪುಸ್ತಕಗಳನ್ನು ಇಡದೇ ಹೋಗಿದ್ದಲ್ಲಿ ಈ ಕೆಳಗಿನಂತೆ ಆದಾಯವನ್ನು ಲೆಕ್ಕಾಚಾರವನ್ನು ಮಾಡಬೇಕು:
ಆದಾಯ(ಮುಂದೆ ಆಗಬಹುದೆಂದು ಊಹಿಸಬದುದಾದ್ದೂ ಸೇರಿ)ವನ್ನು ಈ ತಲೆಬರಹದ ಕೆಳಗೆ ಆದಾಯವೆಂದು ಪರಿಗಣಿಸಬೇಕು xxx ಕಳೆ-ಈ ತಲೆಬರಹದ ಕೆಳಗೆ ಕಳೆಯಬಹುದಾದ ಖರ್ಚುಗಳು xxx ಉದ್ದಿಮೆ ಅಥವಾ ವೃತ್ತಿಕ ಲಾಭ ಅಥವಾ ಗಳಿಸುವಿಕೆ xxx
ಹಾಗಿದ್ದರೂ, ಒಂದು ವೇಳೆ ನಿಯಮಿತವಾಗಿ ಖಾತಾ ಪುಸ್ತಕಗಳನ್ನು ನಿರ್ವಹಿಸಿದ್ದರೆ ಮತ್ತು ಲಾಭ ಮತ್ತು ನಷ್ಟಗಳ ಖಾತೆಯನ್ನು ಸಿದ್ಧಪಡಿಸಿದ್ದರೆ, ಆಗ ಲೆಕ್ಕವು ಈ ರೀತಿಯಾಗಿರುತ್ತದೆ:
ಲಾಭ ಮತ್ತು ನಷ್ಠದ ಖಾತೆ xxx ಯ ಪ್ರಕಾರ ನಿವ್ವಳ ಲಾಭ. ಕೂಡಿಸು- ಲಾಭ ಹಾನಿಖಾತೆಗೆ ಖರ್ಚು ಹಾಕಿದ ಆಡಳಿತಾತ್ಮಕವಲ್ಲದ ಖರ್ಚುಗಳು xxx ಲಾಭ ಹಾನಿ ಖಾತೆಗೆ ಸೇರಿಸದ ಮುಂದೆ ಆಗಬಹುದೆಂದು ಊಹಿಸಬಹುದಾದ ಆದಾಯ xxx xxx ಕಳೆ- ಲಾಭಹಾನಿ ಖಾತೆಗೆ ಖರ್ಚು ಹಾಕದೇ ಇರುವ ತೆರಿಗೆ ವಿನಾಯಿತಿ ಇರುವ ಯಾವುದಾರೂ ಖರ್ಚುಗಳು xxx ತೆರಿಗೆ ವಿಧಿಸಬಹುದಾದ ಇತರ ತಲೆಬರಹದಲ್ಲಿ ಹಾಕಬಹುದಾದ ಆದಾಯವನ್ನು ಲಾಭ ಹಾನಿ ಖಾತೆಗೆ ಜಮಾ ನೀಡಿದ್ದಲ್ಲಿ ಅಂತಹ ರಖಂ xxx xxx ವ್ಯಾಪಾರ ಅಥವಾ ವೃತ್ತಿಯ ಲಾಭ ಅಥವಾ ಗಳಿಸುವಿಕೆ xxx
ಬಂಡವಾಳೀಕರಣಗೊಂಡ ಆಸ್ತಿಯನ್ನು ಮಾರಿದ್ದರಿಂದ ಬಂದ ಲಾಭವನ್ನು 'ಬಂಡವಾಳ ತೊಡಗಿಸಿದ್ದರಿಂದ ಬಂದ ಲಾಭ’ ಖಾತೆಗೆ ತೆಗೆದುಕೊಳ್ಳಬೇಕು. ಲೆಕ್ಕ ಪರಿಶೋಧನೆಗೊಳಪಡುತ್ತಿರುವವನ ಬಳಿ ಇರುವ ಬಂಡವಾಳೀಕರಣಗೊಳ್ಳುವ ಆಸ್ತಿಯ ವಿವರಗಳನ್ನು ತೆರಿಗೆ ಕಾಯ್ದೆ 1961ರ ಪರಿಚ್ಛೇದ 2(14)ರ ಅಡಿಯಲ್ಲಿ ವಿವರಿಸಲಾಗಿದೆ. ಅವುಗಳು ಯಾವುವೆಂದರೆ ಮನೆಕಟ್ಟಬಹುದಾದ ಜಾಗಗಳು, ಇಕ್ವಿಟಿ ಷೇರುಗಳು, ಸಾಲಪತ್ರಗಳು, ಚಿನ್ನಾಭರಣ, ಚಿತ್ರಕಲೆಗಳು, ಕಲಾಕ್ರತಿಗಳು ಇತ್ಯಾದಿ. ಆದರೆ ಅವು ಕೆಲವು ವಸ್ತುಗಳನ್ನು ಸೇರಿಸಿಕೊಳ್ಳುವುದಿಲ್ಲ. ಅವೆಂದರೆ ವ್ಯಾಪಾರದಲ್ಲಿ ತೊಡಗಿಸಿದ ಮತ್ತು ವೈಯಕ್ತಿಕವಾಗಿ ಉಪಯೋಗಿಸಲ್ಪಡುತ್ತಿರುವ ಶಿಲ್ಕು. ಮಾರಾಟ, ವರ್ಗಾವಣೆ, ಆಸ್ತಿಗಳ ಹಕ್ಕುಗಳನ್ನು ವಜಾ ಮಾಡುವುದು ಮುಂತಾದವುಗಳನ್ನು ಒಳಗೊಂಡಂತೆ ವರ್ಗಾವಣೆಯು ಪರಿಚ್ಛೇದ 2(47)ರಲ್ಲಿ ವಿವರಿಸಲಾಗಿದೆ. ಆದರೆ ಇವುಗಳು ಪರಿಚ್ಛೇದ 47ರ ಅಡಿಯಲ್ಲಿ 'ವರ್ಗಾವಣೆ'ಗೆ ಸೇರಿಸಲ್ಪಡುವುದಿಲ್ಲ.
ತೆರಿಗೆಯ ಉದ್ದೇಶಕ್ಕಾಗಿ ಬಂಡವಾಳವನ್ನು ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಧೀರ್ಘಾವಧಿಯ ಮತ್ತು ಅಲ್ಪಾವಧಿಯ ಬಂಡವಾಳಗಳು. ಧೀರ್ಘಾವಧಿಯ ಬಂಡವಾಳ ಎಂದರೆ ಬಂಡವಾಳ ಅಥವಾ ಆಸ್ತಿಯನ್ನು ಒಬ್ಬ ಮನುಷ್ಯನು ಮೂರು ವರ್ಷಗಳಿಗಿಂತ ಹೆಚ್ಚಿಗೆ ದಿನ ತನ್ನ ಸ್ವಾಮ್ಯದಲ್ಲಿರಿಸಿಕೊಂಡರೆ ಅದನ್ನು ಧೀರ್ಘಾವಧಿಯ ಬಂಡವಾಳ ಎನ್ನುತ್ತಾರೆ. ಆದರೆ ಮ್ಯೂಚುವಲ್ ಫಂಡ್ (ಹಲವಾರು ಜನರ ಹೂಡಿಕೆಯನ್ನು ಬೇರೆ ಕಡೆಗಳಲ್ಲಿ ಹೂಡಿ ಬಂದ ಲಾಭವನ್ನು ಷೇರುದಾರರಿಗೆ ಹಂಚುವ ಸಂಸ್ಥೆ) ಅಥವಾ ಶೇರುಗಳನ್ನು ಒಂದು ವರ್ಷಕ್ಕಿಂತ ಹೆಚ್ಚಿಗೆ ತನ್ನ ಬಳಿ ಇರಿಸಿಕೊಂಡರೆ ಅಂತಹ ಬಂಡವಾಳವನ್ನು ಧೀರ್ಘಾವಧಿ ಬಂಡವಾಳ ಎಂದು ಕರೆಯುತ್ತಾರೆ. ಇಂತಹ ಧೀರ್ಘಾವಧಿಯ ಆಸ್ತಿಗಳನ್ನು ಮಾರಿ ಬಂದ ಲಾಭವನ್ನು ಧೀರ್ಘಾವಧಿ ಬಂಡವಾಳದಿಂದ ಬಂದ ಲಾಭಾಂಶ ಎಂದು ಪರಿಗಣಿಸಬೇಕು. ಧೀರ್ಘಾವಧಿ ಬಂಳವಾಳಕ್ಕೆ ಸಂಬಂಧಿಸಿದಂತೆ ವಿವಿಧ ಯೋಜನೆಗಳಿದ್ದು ಅವು ಈ ಕೆಳಗಿನಂತಿವೆ. ಅವುಗಳೆಂದರೆ:
ಧೀರ್ಘಾವಧಿಯ ಬಂಡವಾಳ ಆದಾಯದ ಹೊರತಾಗಿರುವ ಎಲ್ಲ ಬಂಡವಾಳ ಆದಾಯಗಳನ್ನು ಅಲ್ಪಾವಧಿ ಬಂಡವಾಳ ಆದಾಯ ಎಂದು ಕರೆಯುವರು. ಇವುಗಳನ್ನು ಈ ಕೆಳಗಿನಂತೆ ತೆರಿಗೆಗೆ ಒಳಪಡಿಸುತ್ತಾರೆ.
ಹೊರದೇಶದ ಕಂಪನಿಗಳು ಯಾವಾಗಿನಿಂದ ಎಸ್.ಟಿ.ಟಿ. ಪಾವತಿಸಿರುವುದಿಲ್ಲವೋ ಅಲ್ಲಿಂದ ಶೇ.20ರಷ್ಟನ್ನು ತೆರಿಗೆ ರೂಪದಲ್ಲಿ ಪಾವತಿಸಲು ಬಾಧ್ಯಸ್ಥರಾಗಿರುತ್ತಾರೆ.
ಇದು ಮಿಕ್ಕುಳಿದ ತಲೆಬರಹವಾದೆ. ಈ ತಲೆಬರಹದ ಕೆಳಗೆ ಬೇರಾವುದೇ ತಲೆಬರಹದಲ್ಲಿ ತೆರಿಗೆಗೆ ಅನ್ವಯವಾಗದೇ ಇರುವ ಆದಾಯವನ್ನು ಈ ತಲೆಬರಹದಲ್ಲಿ ತೆರಿಗೆಗೊಳಪಡಿಸಬೇಕು. ಕೆಲವು ನಿಶ್ಚಿತ ಆದಾಯಗಳು ಈ ತಲೆಬರಹದಲ್ಲಿ ತೆರಿಗೆಗೊಳಪಡುತ್ತವೆ ಅವು ಯಾವುವೆಂದರೆ:
ಆದಾಯದ ಮೇಲೆ ವಿನಾಯಿತಿ ಇದ್ದಾಗ್ಯೂ ತೆರಿಗೆಗೊಳಪಡುವ ಆದಾಯದ ಲೆಕ್ಕಾಚಾರದಲ್ಲಿ ಸ್ವಲ್ಪ ಕಡಿತಾಯವನ್ನು ಬಟವಡೆಗಳಲ್ಲಿ ಮಾಡಬಹುದಾಗಿದೆ
ಆದಾಯ ತೆರಿಗೆ ಕಾಯ್ದೆ [https://web.archive.org/web/20110721161742/http://law.incometaxindia.gov.in/DitTaxmann/IncomeTaxActs/2007ITAct/section80c.htm Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. ] Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. ರ ಪರಿಚ್ಛೇದ 80ಕ ರ ಪ್ರಕಾರ ಕೆಲವು ಖರ್ಚು ವೆಚ್ಚಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ಆ ಖರ್ಚುಗಳು ರೂ.1,00,000(ಒಂದು ಲಕ್ಷ ರೂಪಾಯಿ)ಗಳ ಮಿತಿಗೊಳಪಡುವಂತಿರಬೇಕು. ಅವು ಈ ಕೆಳಗೆ ವಿವರಿಸಿದ ಯಾವುದಾದರೂ ಒಂದು ಸಂಯ್ಯೋಜನೆಯಲ್ಲಿರಬೇಕು:
ಹೂಡಿಕೆಯೂ ಯಾವುದೇ ಮೂಲದ್ದಾಗಿರಬಹುದು ಮತ್ತು ಇದು ತೆರಿಗೆಗೊಳಪಡುವ ಆದಾಯದ ಮೂಲವೇ ಆಗಬೇಕೆಂದೇನಿಲ್ಲ.
ನಿರ್ಮಾಣ ಕಾರ್ಯದ ಕರಾರು ಪತ್ರಗಳಲ್ಲಿ ಹೂಡಿಕೆ ರೂ.20,000ಗಳ ವರೆಗೆ ಏಪ್ರಿಲ್,1,2010ರಿಂದ ಛೇದನ 80ಸಿಸಿಎಫ್‌ನಡಿಯಲ್ಲಿ ವಿನಾಯತಿ ನೀಡಬಹುದೆಂದು ಆದೇಶಿಸಲಾಗಿದೆ. ಈ ಮೊತ್ತವು ಛೇದನ 80(ಕ)ದಲ್ಲಿ ವಿನಾಯಿತಿ ನೀಡಲಾಗಿರುವ ರೂ.1,00,000ಮಿತಿಯ ಹೆಚ್ಚುವರಿಯಾಗಿದೆ.
ಆರೋಗ್ಯ ವಿಮೆ. ಇದು ಮೆಡಿಕ್ಲೇಮ್ ಪಾಲಿಸಿ ಎಂದೇ ಪ್ರಖ್ಯಾತವಾಗಿದೆ. ಇದು ರೂ. 35,000(ರೂ. 15,000 ಸ್ವಂತ, ಹೆಂಡತಿಯ ಅಥವಾ ಗಂಡನ ಮತ್ತು ಮಕ್ಕಳ, ರೂ.15,000 ವಿಮಾ ಕಂತುಗಳನ್ನು ತುಂಬುವುದಕ್ಕಾಗಿ ಮತ್ತು (ಅಥವಾ) ರೂ. 15,000ವನ್ನು ಹಿರಿಯ ನಾಗರಿಕರಲ್ಲದವರಿಗೂ ಮತ್ತು ರೂ. 20,000ವನ್ನು ಹಿರಿಯ ನಾಗರಿಕರ ಇಲಾಖೆಗೂ)ಗಳ ಮೊತ್ತವನ್ನು ಛೇದನ 80ಕ ಅಡಿಯಲ್ಲಿ ರೂ.1,00,000ಮಿತಿಗೆ ಹೆಚ್ಚುವರಿಯಾಗಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಹಿರಿಯ ನಾಗರೀಕರ ಸೇವೆಯನ್ನು ಪಡೆಯುವವರು ನಡೆಯುತ್ತಿರುವ ವರ್ಷದಲ್ಲಿ 65ವರ್ಷವನ್ನು ದಾಟಿರಬೇಕು ಉ.ದಾ: 2010-11ರ ಆರ್ಥಿಕ ವರ್ಷದಲ್ಲಿದ್ದರೆ ಲಾಭ ಪಡೆಯುವ ವ್ಯಕ್ತಿಯು 31/03/2011ರೊಳಗಾಗಿ 65ವರ್ಷವನ್ನು ಮೀರಿರಬೇಕು. ಈ ಕಳೆಯುವಿಕೆಯು ಮಾಲಿಕತ್ವದ ಸಂಸ್ಥೆಯಿಂದ ಪಡೆದ ಚೆಕ್‌ನ ಮೇಲೂ ಪಡೆಯಬಹುದು.
ಸ್ವಂತ ಬಳಕೆಗೆ ಬಳಸಿಕೊಳ್ಳುತ್ತಿರುವ ಆಸ್ತಿಗಳ ಮೇಲೆ ತೆಗೆದುಕೊಂಡ ಸಾಲಕ್ಕೆ ಒಂದು ವರ್ಷಕ್ಕೆ ಗರಿಷ್ಠ ರೂ. 1,50,000ರ ವರೆಗೆ ತುಂಬಿದ ಬಡ್ಡಿಯನ್ನು ವಿನಾಯಿತಿ ನೀಡಲಾಗುತ್ತದೆ.(ಪರಿಚ್ಛೇದ 80ಕ ರ ಅಡಿಯಲ್ಲಿ ಪ್ರತಿ ವರ್ಷಕ್ಕೆ ರೂ.1,00,000 ವಿನಾಯಿತಿ ಮಿತಿಯನ್ನು ಹೊರತುಪಡಿಸಿ). ವ್ಯಕ್ತಿಯು ಸ್ವದೇಶದಲ್ಲಿ ವಾಸವಾಗಿದ್ದು ಸಾಲ ತೆಗೆದುಕೊಂಡ ಮೂರು ವರ್ಷಗಳ ಒಳಗೆ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿರಬೇಕು ಮತ್ತು ಮತ್ತು ಅಂತಹ ಸಾಲವನ್ನು ಏಪ್ರಿಲ್ 1,1999ರ ನಂತರ ತೆಗೆದುಕೊಂಡಿರಬೇಕು ಅಂತಹವರು ಮಾತ್ರ ಈ ಮೇಲಿನ ಪ್ರಯೋಜನ ಪಡೆದುಕೊಳ್ಳಬಹುದು.
ಒಂದು ವೇಳೆ ನೌಕರಿಯ ಕಾರಣದಿಂದಾಗಿ ಮನೆಯಲ್ಲಿ ವಾಸವಾಗಿಲ್ಲದೇ ಇದ್ದಲ್ಲಿ ಅಂತಹ ಮನೆಯನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದು ಎಂದು ತಿರ್ಮಾನಿಸಲಾಗುವುದು.
ಒಂದು ವೇಳೆ ಮನೆಯನ್ನು ಬಾಡಿಗೆ ನೀಡಿದ್ದಲ್ಲಿ ಅಂತಹ ಮನೆಯ ಸಾಲದ ಮೇಲೆ ನೀಡಲಾಗುವ ಸಂಪೂರ್ಣ ಬಡ್ಡಿಯನ್ನು ಪರಿಚ್ಛೇದ 24ರಡಿಯಲ್ಲಿ ವಿನಾಯಿತಿ ನೀಡಲಾಗುವುದು. ಆದರೆ ಬಾಡಿಗೆ ಮೊತ್ತವನ್ನು ಆದಾಯ ಎಂದು ಪರಿಗಣಿಸಲಾಗುವುದು. ಅದರಲ್ಲಿ ಶೇ.30ರಷ್ಟು ಮತ್ತು ಪೌರಸಭೆಗೆ ತುಂಬಿದ ಸುಂಕವನ್ನು ವಿನಾಯಿತಿ ನೀಡಲಾಗುವುದು.
ಒಂದು ವೇಳೆ ಯಾವುದೇ ಆಸ್ತಿಯಲ್ಲಿ ಹಾನಿ ಸಂಭವಿಸಿದರೆ ಅಂತಹ ಮೊತ್ತವನ್ನು ಬರುವ ವೇತನದಲ್ಲಿ ಸ್ಥಳದಲ್ಲೇ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಟಿ.ಡಿ.ಎಸ್. ಹೆಚ್ಚುವರಿ ತುಂಬಿದ್ದನ್ನು ಮರುಪಾವತಿಗಾಗಿ ಅರ್ಜಿ ಸಲ್ಲಿಸುವಾಗ ಆಸ್ತಿಯಿಂದಾದ ಹಾನಿಯನ್ನು ವಿನಾಯಿಯಿತಿ ಮಾಡುವ ಅವಶ್ಯಕತೆ ಇರುವುದಿಲ್ಲ.[೫]
ಈ ಪರಿಚ್ಛೇದದ ಉಪಯೋಗವೆಂದರೆ ವ್ಯಕ್ತಿಯು ಆದಾಯ ತೆರಿಗೆಯ ರೂಪದಲ್ಲಿ ಹಣವನ್ನು ತುಂಬುವುದನ್ನು ಉಳಿಸುತ್ತದೆ. ಒಂದು ವೇಳೆ ವ್ಯಕ್ತಿಯು ತೆರಿಗೆ ವ್ಯಾಪ್ತಿಯ ಒಳಗೆ ಬರದೇ ಹೋಗುವವನಾಗಿದ್ದರೂ ತೆರಿಗೆ ಕಾಗದ ಪತ್ರಗಳನ್ನು ಒದಗಿಸಬೇಕಾಗುತ್ತದೆ ಮತ್ತು ತೆರಿಗೆಯನ್ನು ತುಂಬಿ ಪುನಃ ಪರತ್ ತೆಗೆದುಕೊಳ್ಳಬೇಕಾಗುತ್ತದೆ. ELSS (ಇಕ್ವಿಟಿ ಷೇರಿಗೆ ಹೊಂದಿಕೊಂಡಿರುವ ಉಳಿತಾಯ ಯೋಜನೆ) NPS( ರಾಷ್ಟ್ರೀಯ ನಿವೃತ್ತಿ ಯೊಜನೆ) ಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳು ಪರಿಚ್ಛೇದ 80ಕ ರಡಿಯಲ್ಲಿ ಯಾವುದೇ ಅಪಯರಹಿತ ಹೂಡುವಿಕೆ ಮತ್ತು ಪ್ರತಿಫಲದ ಖಾತರಿಯನ್ನು ಹೊಂದಿವೆ.
ಭಾರತ ದೇಶದಲ್ಲಿ ವೈಯಕ್ತಿಕ ತೆರಿಗೆಯು ಮೂರು ಮಜಲುಗಳನ್ನು ಹೊಂದಿರುವ ಒಂದು ಪ್ರಗತಿಶೀಲ ತೆರಿಗೆಯಾಗಿದೆ. ಸುಮಾರು ಶೇ.10ರಷ್ಟು ಜನಸಂಖ್ಯೆಯು ಕನಿಷ್ಠ ತೆರಿಗೆಯ ಮಿತಿಯನ್ನು ತಲುಪುತ್ತದೆ.[೬][೭]
ಏಪ್ರಿಲ್ 1,2010ರಿಂದ ಹೊಸ ತೆರಿಗೆ ನೀತಿಯು ಜಾರಿಗೆ ಬಂದಿದ್ದು ಅದರ ಮಜಲುಗಳು ಈ ಕೆಳಗಿನಂತಿವೆ.
2009-10ನೇ ಆರ್ಥಿಕ ವರ್ಷದಲ್ಲಿ ಅಧಿಕ ಕರವನ್ನು ರದ್ದುಪಡಿಸಲಾಗಿದೆ.
ಒಂದು ವೇಳೆ (ಎಲ್ಲ ವಿನಾಯಿತಿಗೊಳಪಟ್ಟ ಆದಾಯವನ್ನು ಸೇರಿಸಿ) ಆದಾಯವು ರೂ.10,00,000 ಮೀರಿದ್ದರೆ ಶೇ.7.5 ರಷ್ಟು ಅಧಿಕ ಕರ(ತೆರಿಗೆಯ ಮೇಲೆ ತೆರಿಗೆ)ವನ್ನು ವಿಧಿಸಲಾಗುತ್ತದೆ. 1,ಜೂನ್ 2007ರಿಂದ ಈ ಮಿತಿಯನ್ನು ರೂ. 10,00,000ದಿಂದ ಒಂದು ಕೋಟಿಗೆ ಏರಿಸಲಾಗಿದೆ.
ಎಲ್ಲ ಭಾರತದಲ್ಲಿನ ತೆರಿಗೆದಾರರೂ ಒಟ್ಟೂ ನೀಡುವ ತೆರಿಗೆಯ ಮೇಲೆ ಶೇ.3ರಷ್ಟು ಶಿಕ್ಷಣ ತೆರಿಗೆ ನೀಡುವುದು ಕಡ್ಡಾಯವಾಗಿದೆ. ಲೆಕ್ಕ ಪರಿಶೋಧನಾ ವರ್ಷ 2009-10ನೇ ಸಾಲಿನಿಂದ ಜಾರಿಗೆ ಬರುವಂತೆ ದ್ವಿತಿಯ ಮತ್ತು ಉಚ್ಚ ದ್ವಿತೀಯ ಶಿಕ್ಷಣ ತೆರಿಗೆಯನ್ನು ಪಾವತಿಸಬೇಕಾದ ಆದಾಯತೆರಿಗೆಯ ಉಪಮೊತ್ತದ ಮೇಲೆ ಶೇ.1ರಷ್ಟನ್ನು ವಿಧಿಸಲಾಗುತ್ತದೆ. ಮುಖ್ಯವಾಗಿ ಶಿಕ್ಷಣದ ಮೇಲಿನ ತೆರಿಗೆಯು ತೆರಿಗೆ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿ ಅನ್ವಯಿಸುತ್ತದೆ.
ಆದಾಯ ತೆರಿಗೆ ವರ್ಷ 2010-11ರಿಂದ ಶಿಕ್ಷಣ ತೆರಿಗೆಯನ್ನು ಶೇ.3ರಷ್ಟು ಆಕರಿಸಲಾಗುತ್ತದೆ ಮತ್ತು ಯಾವುದೇ ಅಧಿಕ ಕರವನ್ನು ಆಕರಿಸುವುದಿಲ್ಲ.
ವ್ಯಾಪಾರ ಸಂಸ್ಥೆಗಳಿಗೆ, ಸಂಘಗಳಿಗೆ, ಸ್ಥಳೀಯ ಪ್ರಾಧಿಕಾರಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ವಿಶೇಷ ದರಗಳನ್ನು ವಿಧಿಸಿದೆ.[೮]
ಆದಾಯ ತೆರಿಗೆ ಇಲಖೆಯು ತನ್ನ ಅಂತರಜಾಲ ತಾಣದಲ್ಲಿ ಎಲ್ಲ ತೆರಿಗೆ ಹಿಂಪಡೆಯಲು ಅರ್ಹರಾಗಿರುವ ನೌಕರರ ಯಾದಿಯನ್ನು ಪ್ರಕಟಿಸುತ್ತದೆ. ಎಲ್ಲ ವ್ಯಕ್ತಿಗಳ ವಿಳಾಸಗಳನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿದ್ದರಿಂದ ಎಲ್ಲರಿಗೂ ವೈಯಕ್ತಿಕವಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ. ([https://web.archive.org/web/20110310094626/http://www.incometaxindia.gov.in/ccit/refundsearch.asp Archived 2011-03-10 ವೇಬ್ಯಾಕ್ ಮೆಷಿನ್ ನಲ್ಲಿ. ಮರುಪಾವತಿ ಪರೀಕ್ಷಿಸಲು ಕೊಂಡಿ])
ವೇತನದಲ್ಲಿ ತೆರಿಗೆ ಪಾವತಿಸುತ್ತಿರುವ ಯಾರಾದರೂ ಲೆಕ್ಕ ಪರಿಶೋಧನಾ ವರ್ಷ 2003-04ರಿಂದ 2006-07ರ ಅವಧಿಯಲ್ಲಿ ಮರುಪಾವತಿಯಾಗಬೇಕಾದ ತೆರಿಗೆಯನ್ನು ಪಡೆಯದೇ ಇದ್ದಲ್ಲಿ ಮೇಲ್ಕಾಣಿಸಿದ ಸಂಪರ್ಕ ಗುರುತನ್ನು ಒತ್ತಿ ಪಾನ್ ಸಂಖ್ಯೆ ಮತ್ತು ಲೆಕ್ಕಪರಿಶೋಧನಾ ವರ್ಷವನ್ನು ನೀಡಿ ಮರುಪಾವತಿಯಾಗಬೇಕಾದ ಹಣವು ಉಳಿದುಕೊಂಡಿದೆಯೋ ಎಂದು ಪರಿಶೀಲಿಸಬಹುದು. [10]
ಭಾರತೀಯ ಎಲ್ಲಾ ಕಂಪನಿಗಳಿಗೆ ಸಮನಾಗಿ ಶೇ.30ರಷ್ಟು ತೆರಿಗೆಯನ್ನು ಆಕರಿಸಲಾಗುವುದು. ಮತ್ತು ಒಂದು ಕೋಟಿಗೂ ಮೇಲ್ಪಟ್ಟ ವಹಿವಾಟು ನಡೆಸುವ ಕಂಪನಿಗಳಿಗೆ ಅದಕ್ಕೆ ಪಾವತಿಸಿದ ತೆರಿಗೆಯ ಮೇಲೆ ಶೇ.7.5ರಷ್ಟು ಹೆಚ್ಚುವರಿ ತೆರಿಗೆಯನ್ನು ಆಕರಿಸಲಾಗುವುದು. ವಿದೇಶಿ ಕಂಪನಿಗಳಿಗೆ ಶೇ.40ರಷ್ಟನ್ನು ತೆರಿಗೆ ವಿಧಿಸಲಾಗುವುದು[೯] ಮತ್ತು ಶೇ.3ರಷ್ಟನ್ನು (ತೆರಿಗೆ ಮತ್ತು ಅಧಿಕ ಕರದ ಮೇಲೆ)ಶಿಕ್ಷಣ ತೆರಿಗೆಯನ್ನು ಆಕರಿಸಲಾಗುತ್ತದೆ. ದೇಶಿಯ ಕಂಪನಿಗಳಿಗೆ ಯಿಂಲ್ಡಿಂಗ್ ಇಫೆಕ್ಟಿವ್ ತೆರಿಗೆ ದರವು ಶೇ.33.2175ರಷ್ಟಿದ್ದು ವಿದೇಶಿ ಕಂಪನಿಗಳಿಗೆ ಶೇ.41.2ರಷ್ಟಿದೆ. [೧೦] 2006-06ನೇ ಸಾಲಿನಿಂದ ಕಂಪನಿಗಳು ಇಲೆಕ್ಟ್ರಾನಿಕ್ ತೆರಿಗೆ ಪಾವತಿ ವಿಧಾನವು ಕಡ್ಡಾಯವಾಗಿದೆ.[೧೧]
ಕರ ನಿರ್ಧರಿಸುವ ಅಧಿಕಾರಿಯು ಅಥವಾ ಮಂಡಳಿಯಿಂದ ನಿಯೋಜಿತ ಸದಸ್ಯನು ಈ ಕಾನೂನಿನಂತೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಯು ಈ ಕೆಳಗಿನ ವಿಷಯಗಳಲ್ಲಿ ಖಾತ್ರಿಗೊಳ್ಳಬೇಕು. ಅವೆಂದರೆ ಒಬ್ಬ ವ್ಯಕ್ತಿಯು:
ಬ) ಪರಿಚ್ಛೇದ 142ರ ಉಪ ಪರಿಚ್ಛೇದ (1) ಅಥವಾ ಪರಿಚ್ಛೇದ 143ರ ಉಪ ಪರಿಚ್ಛೇದ (2)ಗಳ ಪ್ರಕಾರ ನೋಟಿಸನ್ನು ಅನುಸರಿಸದಿದ್ದರೆ ಅಥವಾ ಪರಿಚ್ಛೇದ 142ರ ಉಪ ಪರಿಚ್ಛೇದ (2ಅ)ರ ಸೂಚನೆಯನ್ನು ಪಾಲಿಸದಿದ್ದರೆ ಅಥವಾ
ಕ) ನಿಜವಾದ ಆದಾಯವನ್ನು ಮುಚ್ಚಿಟ್ಟು ಸುಳ್ಳು ಆದಾಯವನ್ನು ಲೆಕ್ಕ ಪತ್ರದಲ್ಲಿ ತೋರಿಸಿದ್ದು ಕಂಡು ಬಂದಲ್ಲಿ
ಅಧಿಕಾರಿಯು ಅಂತಹ ವ್ಯಕ್ತಿಗೆ ಈ ಕೆಳಗಿನಂತೆ ದಂಡವನ್ನು ವಿಧಿಸಬಹುದಾಗಿದೆ
(ii) ಕಲಂ(ಬ)ರ ಪ್ರಕಾರ ಅಂತಹ ವ್ಯಕ್ತಿಯು ತುಂಬಬೇಕಾದ ಉಳಿದ ತೆರಿಗೆ ರಖಂನ್ನು ಭರಿಸಬೇಕು ಮತ್ತು ಪ್ರತಿಯೊಂದು ಸುಳ್ಳು ವರದಿಗೂ ರೂ.10,000ದಂತೆ ಹೆಚ್ಚುವರಿಯಾಗಿ ತುಂಬಬೇಕು
(iii) ಕಲಂ (ಕ)ದಲ್ಲಿ ವಿವರಿಸಿದಂತೆ ತುಂಬಬೆಕಾದ ತೆರಿಗೆಯನ್ನು ಹೊರತುಪಡಿಸಿ ಕನಿಷ್ಟ ಎಂದರೆ ಸದರಿ ಮೊತ್ತದಷ್ಟು ಮತ್ತು ಮೂರು ಪಟ್ಟಿಗಿಂತಲೂ ಹೆಚ್ಚಾಗದಂತೆ ದಂಡವನ್ನು ನಿಜವಾದ ಆದಾಯವನ್ನು ಗೋಪ್ಯವಾಗಿಟ್ಟದ್ದಕ್ಕಗಿಯೂ ಮತ್ತು ಅಂತಹ ಆದಾಯದ ಕುರಿತಾಗಿ ತಪ್ಪು ಮಾಹಿತಿಯನ್ನು ಸಲ್ಲಿಸಿದ್ದಕ್ಕಾಗಿ ದಂಡ ವಿಧಿಸಬಹುದು.