![]() | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ ವಲಯದ ಸರ್ಕಾರಿ ಉದ್ಯಮ |
---|---|
ಸ್ಥಾಪನೆ | 1954 |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಭಾನುಪ್ರಕಾಶ್ ಶ್ರೀವಾಸ್ತವ (ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕ) ) |
ಉದ್ಯಮ | ವೈಮಾನಿಕ ತಂತ್ರಜ್ಞಾನ
ಎವಿಯಾನಿಕ್ಸ್ ಉಪಗ್ರಹ ಸಂವಹನ ಮಿಲಿಟರಿ ಮತ್ತು ರಕ್ಷಣಾ ಕ್ಷೇತ್ರ |
ಉತ್ಪನ್ನ |
|
ಆದಾಯ | ![]() |
ಆದಾಯ(ಕರ/ತೆರಿಗೆಗೆ ಮುನ್ನ) | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಒಟ್ಟು ಪಾಲು ಬಂಡವಾಳ | ![]() |
ಮಾಲೀಕ(ರು) | ಭಾರತ ಸರ್ಕಾರ (೫೧.೧೪%) ಮ್ಯೂಚುವಲ್ ಫಂಡ್‌ಗಳು (೨೪.೪೩%) ವಿದೇಶೀ ಸಾಂಸ್ಥಿಕ ಹೂಡಿಕೆದಾರರು (೧೫.೭೩%) ಭಾರತೀಯ ಜೀವವಿಮಾ ನಿಗಮ (೭.೫%) ಬ್ಯಾಂಕ್ ಆಫ್ ಬರೋಡಾ (೪%) |
ಉದ್ಯೋಗಿಗಳು | ೯,೬೧೨ (ಮಾರ್ಚ್ ೨೦೧೯) |
ಜಾಲತಾಣ | bel-india.in |
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ, ಸಾರ್ವಜನಿಕ ರಂಗದ ಕಂಪೆನಿಯಾಗಿದೆ.
ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ ೧೯೫೪ರಲ್ಲಿ ಸ್ಥಾಪಿತಗೊಂಡ ಭಾರತ್ ಎಲೆಕ್ಟ್ರಾನಿಕ್ಸ್ ಇಂದು ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೊದಮೊದಲಿಗೆ ಬರೀ ಭಾರತೀಯ ಸೇನೆಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ, ಉದ್ದೇಶ ಮೀರಿ ಬೆಳೆದಿದ್ದಲ್ಲದೇ ಸಾಫ್ಟ್ ವೇರ್, ದೂರದರ್ಶನ, ಟೆಲಿಕಾಂ, ವಿದ್ಯುತ್ ಚಾಲಿತ ಮತಯಂತ್ರದ ತಯಾರಿಕೆವರೆಗೂ ತನ್ನ ತಂತ್ರಜ್ಞಾನವನ್ನು ವಿಸ್ತರಿಸಿಕೊಂಡಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ.ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಸುಮಾರು ಎಂಟು ಕಡೆ ಇದರ ಘಟಕಗಳಿವೆ. ಭಾರತ ಸರ್ಕಾರ ನೀಡುವ ನವರತ್ನ ಪ್ರಶಸ್ತಿಯನ್ನು ಭಾರತ ಎಲೆಕ್ಟ್ರಾನಿಕ್ಸ್ ತನ್ನ ಮಡಿಲಿಗೇರಿಸಿಕೊಂಡಿದೆ. ಅಶ್ವನಿ ಕುಮಾರ ದತ್ತ ಸದ್ಯದ ಸಿ ಎಮ್ ಡಿ ಆಗಿದ್ದಾರೆ.
1956 ರಲ್ಲಿ ಕೆಲವು ಸಂವಹನ ಸಲಕರಣೆಗಳನ್ನು ತಯಾರಿಸುವುದರೊಂದಿಗೆ, 1961 ರಲ್ಲಿ BEL ಸ್ವೀಕರಿಸುವ ಕವಾಟಗಳನ್ನು ಉತ್ಪಾದಿಸಲು ಪ್ರಾರಂಭಿಸಿತು, 1962 ರಲ್ಲಿ ಜರ್ಮೇನಿಯಮ್ ಅರೆವಾಹಕಗಳು ಮತ್ತು 1964 ರಲ್ಲಿ AIR ಗೆ ರೇಡಿಯೋ ಟ್ರಾನ್ಸ್ಮಿಟರ್ಗಳು ತಯಾರಿಸಲಾಗುತ್ತದೆ.
ಸೆಂಟ್ರಲ್ ಸರ್ಕಾರದ (66%), ಮ್ಯೂಚುವಲ್ ಫಂಡ್ಗಳು ಮತ್ತು ಯುಟಿಐ (14%), ವಿದೇಶಿ ಸಾಂಸ್ಥಿಕ ಹೂಡಿಕೆದಾರರು (6%), ವೈಯಕ್ತಿಕ ಹೂಡಿಕೆದಾರರು (5%) ಮತ್ತು ವಿಮಾ ಕಂಪನಿಗಳು (4%) ರವರಿಂದ ಸೆಪ್ಟೆಂಬರ್ 2018 ರ ಹೊತ್ತಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಖ್ಯವಾಗಿ ಒಡೆತನದಲ್ಲಿದೆ.