ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್ ) (ಬಿಎಸ್‌ಇ: 500547|ಎನ್‌ಎಸ್‌ಇ: BPCL) ಕಂಪನಿಯು ಭಾರತದ ಅತಿ ದೊಡ್ಡ ರಾಜ್ಯ-ಸ್ವಾಮ್ಯದ ತೈಲ ಹಾಗೂ ಅನಿಲ ಕಂಪನಿ, ಫಾರ್ಚೂನ್ ಗ್ಲೋಬಲ್ 500ರಲ್ಲಿ 287 (2008)ನೇ ಶ್ರೇಯಾಂಕವನ್ನು ಪಡೆದಿದೆ.[೩][೪] ಇದರ ಕಾರ್ಪೊರೇಟ್ ಆಫೀಸ್ ಮುಂಬಯಿನ ಬೆಲ್ಲಾರ್ಡ್ ಎಸ್ಟೇಟ್‌ನಲ್ಲಿದೆ.[೫] ಹೆಸರೇ ಹೇಳುವಂತೆ ಈ ಕಂಪನಿಯ ಪ್ರಮುಖ ಆಸಕ್ತಿ ಡೌನ್‌ಸ್ಟ್ರೀಮ್ ಪೆಟ್ರೋಲಿಯಂ ಕ್ಷೇತ್ರ. ಇದು ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಹಾಗೂ ಚಿಲ್ಲರೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದೆ.
- ಪ್ಯೂರ್ ಫಾರ್ ಶ್ಯೂರ್ ಕ್ಯಾಂಪೇನ್, ಪೆಟ್ರೋಕಾರ್ಡ್, ಫ್ಲೀಟ್ ಕಾರ್ಡ್ ಮುಂತಾದವುಗಳಂತಹ ಹೊಸ ಮಾರ್ಗಗಳನ್ನು ಪ್ರಾರಂಭಿಸಿ ಹೊಸ ಅಧ್ಯಾಯ ಪ್ರಾರಂಭಿಸಿದಕ್ಕಾಗಿ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿಯಲ್ಲಿ ಭಾರತ್ ಪೆಟ್ರೋಲಿಯಂ ಅನ್ನು ಆದ್ಯಪ್ರವರ್ತಕ ಎನ್ನಲಾಗುತ್ತದೆ. ತನ್ನ ವ್ಯಾಪಾರ ಸ್ವಾಮ್ಯದಲ್ಲಿ ಯಶಸ್ವಿಯಾಗಿ ಎಸ್‌ಎಪಿಯನ್ನು ಅಳವಡಿಸಿಕೊಂಡ ಮೊದಲ ಸಂಸ್ಥೆಗಳಲ್ಲಿ ಬಿಪಿಸಿಎಲ್ ಕೂಡಾ ಒಂದು. ಇದು ಡಾಟಾವನ್ನು ಕೇಂದ್ರೀಕರಿಸಲು ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಮಟ್ಟವನ್ನು ತಲುಪುವಂತೆ ನಂತರದ ವಿಶ್ಲೇಷಣೆಗೆ ಸಹಾಯಕವಾಯಿತು ಅಲ್ಲದೆ ಇದು ಈ ಕ್ಷೇತ್ರದಲ್ಲಿ ಇಂದಿಗೂ ಮೈಲಿಗಲ್ಲಾಗಿದೆ.
- ಬಿಪಿಸಿಎಲ್ ಎಲೈಟ್ ಗ್ರೂಪ್‌ನ ಸದಸ್ಯತ್ವ ಹೊಂದಿದೆ, ಇದು ತೈಲ & ಅನಿಲ ಸಂಬಂಧಿಸಿದ ಉತ್ಪನ್ನಗಳ ಮುಂದಿನ ಅಭಿವೃದ್ಧಿಗೆ ಎಸ್‌ಎಪಿ ಸಲಹೆ ನೀಡುತ್ತದೆ. ರಾಷ್ಟ್ರೀಕರಣವಾದ (1976ರಲ್ಲಿ) ನಂತರ ಬಿಪಿಸಿಎಲ್ ಅತ್ಯಂತ ವೇಗವಾಗಿ ಬೆಳೆಯಿತು. ಫಾರ್ಚೂನ್ 500 & ಫೋರ್ಬ್ಸ್ 2000 ಪಟ್ಟಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದಕಿಯ ಸ್ಥಾನಗಳಿಸಿದ್ದ ಕಂಪನಿಯಾಗಿತ್ತು, ಬಿಪಿಸಿಎಲ್ ಅನ್ನು ಸಾಮಾನ್ಯವಾಗಿ “ಎಮ್‌ಎನ್‌ಸಿ ಇನ್ ಪಿಎಸ್‌ಯು ಗಾರ್ಬ್” ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಕಂಪನಿಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ.
- 1860ರ ದಶಕದಲ್ಲಿ ಹೆಚ್ಚಿನ ಕೈಗಾರಿಕಾ ಅಭಿವೃದ್ಧಿಯಾಯಿತು. ಹಲವಾರು ಪೆಟ್ರೋಲಿಯಂ ಸಂಸ್ಕರಣಾಗರಗಳು ಆರಂಭ್ಹವಾದವು. ಆಗ ದಕ್ಷಿಣ ಏಷಿಯಾದ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದ ಕಂಪನಿ ಬರ್ಮಾ ಆಯಿಲ್ ಕಂಪನಿ ಲಿಮಿಟೆಡ್ 1886ರಲ್ಲಿ ಕಂಪನಿಯು ಸ್ಕಾಟ್‌ಲ್ಯಾಂಡ್ ನಲ್ಲಿ ಸಂಘಟಿತವಾಗಿದ್ದರೂ, ರಂಗೂನ್ ಆಯಿಲ್ ಕಂಪನಿಯ ಸ್ವಾಮ್ಯದ ಹೊರತಾಗಿಯೂ ಬೆಳೆಯಿತು, ಇದು 1871ರಲ್ಲಿ ಬರ್ಮಾದಲ್ಲಿ ಬಾವಿಗಳಿಂದ ತೆಗೆದ ತೈಲ ಸಂಸ್ಕರಣೆ ಮಾಡುವುದಕ್ಕಾಗಿ ಪ್ರಾರಂಭವಾಯಿತು.
- 1886ರಲ್ಲಿ ಭಾರತದಲ್ಲಿ ತೈಲ ಅನ್ವೇಷಣೆ ಪ್ರಾರಂಭವಾಯಿತು, ಮೆಕ್‌ಕಿಲ್ಲೊಪ್ ಸ್ಟೀವರ್ಟ್ ಕಂಪನಿಯ ಮಿ.ಗೂಡೆನಫ್ [೬] ಅಸ್ಸಾಂನ ಜಾಯ್ಪೊರ್ ಬಳಿ ಬಾವಿ ಅಗೆದಾಗ ತೈಲ ಇರುವುದು ಪತ್ತೆಯಾಯಿತು. 1889ರಲ್ಲಿ, ಅಸ್ಸಾಂ ರೈಲ್ವೇ ಅಂಡ್ ಟ್ರೇಡಿಂಗ್ ಕಂಪನಿ (ಎಆರ್‌ಟಿಸಿ)[೭] ಯು ಡಿಗ್ಬೊಯ್ ಬಳಿ ತೈಲವನ್ನು ಪತ್ತೆ ಹಚ್ಚಿದರು, ಇದು ಭಾರತದ ಮೊದಲ ತೈಲ ಉತ್ಪಾದನೆ ಎನಿಸಿದೆ.
- ಹಲವಾರು ಸಂಶೋಧನೆಗಳು ನಡೆದವು ಹಾಗೂ ಕೈಗಾರಿಕೆಯ ಅಭಿವೃದ್ಧಿಯಾಯಿತು, ಜಾನ್ ಡಿ ರಾಕ್‌ಫೆಲ್ಲರ್ ಅವರ ಜೊತೆಯಲ್ಲಿನ ವ್ಯಾಪಾರಿಗಳು ಹಲವಾರು ಸಂಸ್ಕರಣಾಗಾರಗಳು ಹಾಗೂ ಪೈಪ್‌ಲೈನ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದು ಕೊಂಡರು ಅದರಿಂದ ಜಯಂಟ್ ಸ್ಟ್ಯಾಂಡ ರ್ಡ್ ಆಯಿಲ್ ಟ್ರಸ್ಟ್ ನಿರ್ಮಾಣವಾಯಿತು. ಸ್ಟ್ಯಾಂಡರ್ಡ್ ಆಯಿಲ್‌ನ ಅತಿದೊಡ್ಡ ಸ್ಪರ್ದಿಗಳಾದ - ರಾಯಲ್ ಡಚ್, ಶೆಲ್, ರೊತ್‌ಶಿಲ್ಡ್ಸ್ - ಜೊತೆಗೂಡಿ ಒಂದೇ ಸಂಸ್ಥೆ..: ಏಷಿಯಾಟಿಕ್ ಪೆಟ್ರೋಲಿಯಂ ಕಂಪನಿಯನ್ನು ದಕ್ಷಿಣ ಏಷಿಯಾದ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನ ಗಳನ್ನು ಮಾರಾಟ ಮಾಡುವುದಕ್ಕಾಗಿ ಸ್ಥಾಪಿಸಿದರು.
- 1928ರಲ್ಲಿ ಏಷಿಯಾಟಿಕ್ ಪೆಟ್ರೋಲಿಯಂ (ಭಾರತ) ಕಂಪನಿಯು ಭಾರತ ಹಾಗೂ ಬರ್ಮೀಯರ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದನೆ, ಸಂಸ್ಕರಣೆ ಹಾಗೂ ವಿತರಣೆ ಮಾಡುತ್ತಿದ್ದ ಬರ್ಮಾ ಆಯಿಲ್ ಕಂಪನಿಯ ಜೊತೆ ಕೈಗೂಡಿಸಿತು. ಈ ಒಪ್ಪಂದವು ಬರ್ಮಾ-ಶೆಲ್ ತೈಲ ಸ್ಟೋರೇಜ್ ಅಂಡ್ ಡಿಸ್ಟ್ರಿಬ್ಯೂಟಿಂಗ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಆಗಿ ನಿರ್ಮಾಣಕ್ಕೆ ಕಾರಣವಾಯಿತು.
- ಬರ್ಮಾ ಶೆಲ್ ಮೊದಲಿಗೆ ಸೀಮೆಎಣ್ಣೆಯನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿತ್ತು. ಇದನ್ನು ಆಮದು ಮಾಡಿಕೊಂಡು 4 ಗ್ಯಾಲನ್ ಹಾಗೂ 1 ಗ್ಯಾಲನ್ ಟಿನ್‌ಗಳಲ್ಲಿ ರೈಲ್ವೆ, ರಸ್ತೆ ಸಾರಿಗೆ ಹಾಗೂ ದೇಶೀಯ ವಿಮಾನಗಳಲ್ಲಿ ಭಾರತದಲ್ಲೆಡೆ ಸಾಗಿಸಲಾಗುತ್ತಿತ್ತು.
ಮೋಟಾರು ಕಾರುಗಳೊಂದಿಗೆ ಕ್ಯಾನ್‌ನಲ್ಲಿ ತುಂಬಿದ ಪೆಟ್ರೋಲ್ ಸಾಗಿಸಲಾಗುತ್ತಿದ್ದು, ನಂತರ ಸರ್ವೀಸ್ ಸ್ಟೇಷನ್‌ಗಳು ಪ್ರಾರಂಭವಾದವು.
- 1930ರ ದಶಕದಲ್ಲಿ, ರಸ್ತೆ ಬದಿಗಳಲ್ಲಿ ಚಿಲ್ಲರೆ ವ್ಯಾಪರಕ್ಕಾಗಿ ಮಾರಾಟ ಸ್ಥಳಗಳನ್ನು ಸ್ಥಾಪಿಸಲಾಯಿತು; ಸರ್ವಿಸ್ ಸ್ಟೇಷನ್‌ಗಳು ಕಾಣಿಸಿಕೊಂಡವು ಹಾಗೂ ಇದನ್ನು ರಸ್ತೆ ಅಭಿವೃದ್ಧಿಯ ಒಂದು ಭಾಗವೆಂದು ಪರಿಗಣಿಸಲಾಯಿತು. ಯುದ್ಧಾನಂತರ ಬರ್ಮಾ ಶೆಲ್ ಸುವ್ಯವಸ್ಥಿತ ಸರ್ವಿಸ್ ಹಾಗೂ ಇಂಧನ ತುಂಬುವ ಸ್ಟೇಷನ್‌ಗಳನ್ನು ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿತು.
ಬರ್ಮಾ ಶೆಲ್‌ನಿಂದ ಭಾರತ್ ಪೆಟ್ರೋಲಿಯಂ
[ಬದಲಾಯಿಸಿ]
- 24 ಜನವರಿ 1976ರಲ್ಲಿ ಬರ್ಮಾ ಶೆಲ್ ಕಂಪನಿಗಳ ಸಮೂಹವನ್ನು ಭಾರತ ಸರ್ಕಾರವು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಭಾರತ್ ರೀಫೈನರೀಸ್ ಲಿಮಿಟೆಡ್ ಪ್ರಾರಂಭಿಸಿತು. 1 ಆಗಸ್ಟ್ 1977ರಲ್ಲಿ ಇದನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು. ದೇಶದಲ್ಲಿ ದೊರೆತ ಬಾಂಬೇ ಹೈ ದೇಶೀಯ ಕಚ್ಚಾ ತೈಲದ ಮೊದಲ ಸಂಸ್ಕರಣಾಗಾರವು ಇದಾಗಿತ್ತು.
- ಇಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಮುಂಬಯಿ, ಕೊಚ್ಚಿ ಹಾಗೂ ನುಮಾಲಿಗರ್‌ನಲ್ಲಿ ಮೂರು ಸಂಸ್ಕರಣಾಗಾರಗಳನ್ನು ಹೊಂದಿದೆ. 2010ರಲ್ಲಿ ಮಧ್ಯಪ್ರದೇಶದ ಬೀನಾದಲ್ಲಿ ಇನ್ನೊಂದು ಸಂಸ್ಕರಣಾಗಾರವನ್ನು ಸ್ಥಾಪಿಸುವ ಯೋಜನೆ ಹೊಂದಿದೆ.
ಭಾರತ್ ಪೆಟ್ರೋಲಿಯಂ ಅನೇಕ ನೀಡಿದರು ಜಾಬ್ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತ್ ಪೆಟ್ರೋಲಿಯಂ ಪೆಟ್ರೋಕೆಮಿಕಲ್ಸ್ ಹಾಗೂ ದ್ರಾವಕಗಳಿಂದ ಏರ್‌ಕ್ರಾಫ್ಟ್ ಇಂದನಗಳವರೆಗೆ ಹಾಗೂ ವಿಶೇಷ ಲ್ಯುಬ್ರಿಕೆಂಟ್ಸ್‌ಗಳು ಸೇರಿದಂತೆ ಬಹು ವಿಧದ ರೀತಿಯ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಈ ಉತ್ಪನ್ನಗಳನ್ನು ತನ್ನದೇ ಆದ ಪೆಟ್ರೋಲ್ ಕೇಂದ್ರಗಳು, ಸೀಮೆಎಣ್ಣೆ ವ್ಯಾಪಾರಿಗಳು, ಎಲ್‌ಪಿಜಿ ವಿತರಕರು, ಲ್ಯೂಬ್ ಶಾಪ್‌ಗಳು {ಮ್ಯಾಕ್ ಲ್ಯುಬ್ರಿಕೆಂಟ್ಸ್}ಗಳ ಮುಖಾಂತರ ಮಾರಾಟ ಮಾಡುತ್ತದೆ. ಜೊತೆಗೆ ನೂರಾರು ಕೈಗಾರಿಕೆಗಳು ಹಾಗೂ ಹಲವಾರು ಅಂತರರಾಷ್ಟ್ರೀಯ ಮತ್ತು ದೇಶೀಯ ಏರ್‌ಲೈನ್ ಕಂಪನಿಗಳಿಗೆ ಇಂಧನ ಸರಬರಾಜು ಮಾಡುತ್ತದೆ.
ಕ್ರಮವಾಗಿ 12 ಮಿಲಿಯನ್ ಮೆಟ್ರಿಕ್ ಟನ್ (ಎಮ್‌ಎಮ್‌ಟಿ) 9.5 ಎಮ್‌ಎಮ್‌ಟಿಪಿಎಗಳಷ್ಟು ಸಾಮರ್ಥ್ಯವುಳ್ಳ ಬಿಪಿಸಿಎಲ್‌ನ ಎರಡು ಕಚ್ಚಾತೈಲ ಸಂಸ್ಕರಣಾಗಾರಗಳು ಮುಂಬಯಿ ಹಾಗೂ ಕೊಚ್ಚಿ (ಕೊಚ್ಚಿ ರೀಫೈನರೀಸ್)ಗಳಲ್ಲಿವೆ. ಬಿಪಿಸಿಎಲ್‌ನ ಸಹಾಯಕ ಕಂಪನಿ ನುಮಾಲಿಗರ್ 3 ಎಮ್‌ಎಮ್‌ಟಿ ಸಾಮರ್ಥ್ಯ ಹೊಂದಿತ್ತು. ಇನ್ನೊಂದು ಸಂಸ್ಕರಣಾಗಾರ ಬೀನಾ ರೀಫೈನರಿಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಮೊದಲ ವರ್ಷದಲ್ಲಿ 6 ಎಮ್‌ಎಮ್‌ಟಿಪಿಎ ನಡೆಸುವ ಯೋಜನೆ ಇದೆ.
2006ರಲ್ಲಿ ಮಹೇಂದ್ರ ಸಿಂಗ್ ಧೋನಿಯು ಬಿಪಿಸಿಎಲ್‌ನ ರಾಯಭಾರಿಯಾಗಿ ಸಹಿ ಹಾಕಿದರು. ಇಂದಿನ ದೂರದರ್ಶನ ಜಾಹೀರಾತುಗಳಾದ ಸ್ಪೀಡ್(ಬ್ರ್ಯಾಂಡ್ ಹೊಂದಿರುವ ಇಂಧನ) & ಮ್ಯಾಕ್ ಲ್ಯುಬ್ರಿಕೆಂಟ್ಸ್‌ಗಳಲ್ಲಿ ಧೋನಿಯವರು ಮುಖ್ಯ ಪಾತ್ರ ವಹಿಸಿದ್ದಾರೆ. ನರೇನ್ ಕಾರ್ತಿಕೇಯನ್ ಕೂಡಾ ಈಗ ಬಿಪಿಸಿಎಲ್‌ನ ಮುಖ್ಯ ರಾಯಭಾರಿಯಾಗಿದ್ದಾರೆ.
- 2008ರಲ್ಲಿ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಬಿಪಿಸಿಎಲ್ ಸೇರಿತ್ತು.[೪] 287 ನೇ ಶ್ರೇಯಾಂಕದಲ್ಲಿತ್ತು. 2007ರಲ್ಲಿ 325 ನೇ ಶ್ರೇಯಾಂಕ ಪಡೆದು ಕೊಂಡಿತು.
- 2008ರಲ್ಲಿ ಬಿಪಿಸಿಎಲ್ ಕಂಪನಿಯು ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ 967 ಶ್ರೇಯಾಂಕ ಪಡೆದು ಕೊಂಡಿತು
- 2010ರಲ್ಲಿ ಬ್ರ್ಯಾಂಡ್ ಫೈನಾನ್ಸ್ ಹಾಗೂ ದಿ ಎಕನಾಮಿಕ್ ಟೈಮ್ಸ್ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಬಿಪಿಸಿಎಲ್ ಕಂಪನಿಯು ಭಾರತದ ಏಳನೆಯ ಸ್ಥಾನಗಳಿಸಿದೆ.[೮]
ಭಾರತ್ ಪೆಟ್ರೋಲಿಯಂ Archived 2011-10-22 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತದ ಬಿಗ್ಗೆಸ್ಟ್ ಪೆಟ್ರೋಲಿಯಂ ಸಂಸ್ಥೆ. ಇದು ಮಾರಾಟ ದೊಡ್ಡ ಕಂಪನಿಗಳು ಹೊಂದಿದೆ
- www.bharatpetroleum.com Archived 2012-03-10 ವೇಬ್ಯಾಕ್ ಮೆಷಿನ್ ನಲ್ಲಿ.
- BPCL in Fortune 500
- BPCL on Forbes 2000 List
- www.petrobonus.com Archived 2011-02-08 ವೇಬ್ಯಾಕ್ ಮೆಷಿನ್ ನಲ್ಲಿ.