ಭುವನೇಶ್ವರಿ ಕುಮಾರಿ ಅವರು ಭಾರತದ ಮಾಜಿ ಮಹಿಳಾ ಸ್ಕ್ವ್ಯಾಷ್ ಚಾಂಪಿಯನ್ . [೧]
ಪ್ರಿನಸ್ಸಸ್ ಕ್ಯಾಂಡಿ ಎಂದೂ ಕರೆಯಲ್ಪಡುವ ಭುವನೇಶ್ವರಿ ಕುಮಾರಿ ರಾಜಸ್ಥಾನದ ಅಲ್ವಾರ್ ೧ ಸೆಪ್ಟೆಂಬರ್ರಾ ೧೯೮೦ ರಲ್ಲಿ ರಾಜಮನೆತನದಲ್ಲಿ ಜನಿಸಿದವರು. ತೇಜ್ ಸಿಂಗ್ ಪ್ರಭಾಕರ್ ಬಹದ್ದೂರ್ ಅವರ ಮೊಮ್ಮಗಳು. ಯಶ್ವಂತ್ ಸಿಂಗ್ ಮತ್ತು ಬೃಂದಾ ಕುಮಾರಿಯ ಮಗಳು. ಮಾಜಿ ಕ್ರಿಕೇಟ್ ಆಟಗಾರ ಎಸ್ ಶ್ರೀನಾಥ್ ರ ಪತ್ನಿ.[೨] [೩] ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.
ಭುವನೇಶ್ವರಿ ಕುಮಾರಿ 1977 ರಿಂದ 1992 ರವರೆಗೆ ಸತತವಾಗಿ 16 ವರ್ಷಗಳ ಕಾಲ ಮಹಿಳಾ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ ಆಗಿದ್ದರು. [೪]
ಅವರಿಗೆ 41 ರಾಜ್ಯ ಪ್ರಶಸ್ತಿಗಳು ಲಭಿಸಿವೆ. 1988 ಮತ್ತು 1989ರಲ್ಲಿ ನಡೆದ ಕೀನ್ಯಾ ಓಪನ್ ಟೂರ್ನಿಯಲ್ಲಿ ಎರಡು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರ ಸಾಧನೆಗಳಿಗಾಗಿ 1982 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2001 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಸೈರಸ್ ಪೊಂಚಾ ಅವರೊಂದಿಗೆ ಭಾರತೀಯ ಮಹಿಳಾ ಸ್ಕ್ವಾಷ್ ತಂಡದ ಕೋಚ್ ಕೂಡ ಆಗಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ 2018 ಗಾಗಿ ಅವರು ತಂಡಕ್ಕೆ ತರಬೇತಿ ನೀಡಿದ್ದರು. [೫]
{{cite web}}
: CS1 maint: bot: original URL status unknown (link)