ಮಂಜು ಶರ್ಮಾ | |
---|---|
ಜನನ | ೧೩ ಡಿಸೆಂಬರ್ ೧೯೪೦ |
ವಾಸಸ್ಥಳ | ಭಾರತ |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಬಯೋಟೆಕ್ನಾಲಜಿ, ಪ್ಲ್ಯಾಂಟ್ ಸೈನ್ಸ್. |
ಸಂಸ್ಥೆಗಳು |
|
ಆಶ್ರಯದಾತರು | Government of India, The Puri Foundation for Education in India |
ವಿದ್ಯಾಭ್ಯಾಸ | ಎಂ.ಎಸ್ಸಿ., ಪಿ.ಎಚ್.ಡಿ. |
ಅಭ್ಯಸಿಸಿದ ವಿದ್ಯಾಪೀಠ | ಲಕ್ನೋ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | Research and Administration in Biotechnology |
ಸಂಗಾತಿ | ವಿನೋದ್ ಪ್ರಕಾಶ್ ಶರ್ಮಾ |
ಮಕ್ಕಳು | ಅಮಿತ್ ಶರ್ಮಾ |
ಮಂಜು ಶರ್ಮಾ (ಡಿಸೆಂಬರ್ ೧೩,೧೯೪೦) ಅವರು ಭಾರತೀಯ ಜೈವಿಕ ತಂತ್ರಜ್ಞಾನಜ್ಞರಾಗಿದ್ದಾರೆ. ಇವರು ಭಾರತದ ಅನೇಕ ವೈಜ್ಞಾನಿಕ ಸಂಶೋಧನೆ ಮತ್ತು ನೀತಿ-ತಯಾರಿಕೆ ಸಂಸ್ಥೆಗಳ ನಿರ್ವಾಹಕರು. ಇವರು ಗುಜರಾತಿನ ಗಾಂಧಿನಗರದಲ್ಲಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ರಿಸರ್ಚ್ನಲ್ಲಿ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಇವರು ಹಿಂದೆ ಬಯೋಟೆಕ್ನಾಲಜಿ ಇಲಾಖೆಯಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ೨೦೦೭ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ಲ್ಯಾಂಟ್ ಜಿನೊಮ್ ರಿಸರ್ಚ್, ಲಕ್ನೌ ಮತ್ತು ಮಧುರೈನ ಜೈವಿಕ ಸಂಶೋಧನಾ ಕೇಂದ್ರಗಳು, ದೆಹಲಿ ವಿಶ್ವವಿದ್ಯಾಲಯದ ಸಸ್ಯ ಮಾಲಿಕ್ಯುಲಾರ್ ಬಯಾಲಜಿ ಯುನಿಟ್,ದೆಹಲಿ ವಿಶ್ವವಿದ್ಯಾಲಯದ ಸಸ್ಯ ಆಣ್ವಿಕ ಜೀವಶಾಸ್ತ್ರ ಘಟಕ ಮತ್ತು ಸೆಂಟರ್ ಫಾರ್ ಡಿ.ಎನ್.ಎ ಫಿಂಗರ್ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಎಂಬ ಹಲವಾರು ವಿಷಯಗಳಿಗೆ ಸಂಬಂಧಿಸಿ ದೇಶದಲ್ಲಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಇವರು ತನ್ನ ಪಾತ್ರವನ್ನು ವಹಿಸಿದ್ದಾರೆ.[೧]
ಮಂಜು ಶರ್ಮ ಅವರು ಡಿಸಂಬರ್ ೧೩, ೧೯೪೦ ರಂದು ಜನಿಸಿದರು. ಇವರು ಶಿಕ್ಷಣತಜ್ಞ ಹಾಗೂ ರಾಜಕಾರಣಿಯಾದ ಮದನ ಮೋಹನ ಮಾಳವೀಯರವರ ಮೊಮ್ಮಗಳು. ಇವರು ಕೀಟಶಾಸ್ತ್ರಜ್ಞ ಹಾಗೂ ಮಲೇರಿಯಾಜಿಸ್ಟ್ ಆಗಿರುವ ವಿನೋದ್ ಪ್ರಕಾಶ್ ಶರ್ಮಾರನ್ನು ವಿವಾಹವಾದರು. ಇವರ ಮಗ ಅಮಿತ್ ಶರ್ಮಾರವರು ಪ್ರೋಟೀನ್ ಸ್ಫಟಿಕಶಾಸ್ತ್ರಜ್ಞರಾಗಿದ್ದಾರೆ.[೨]
ಮಂಜು ಶರ್ಮಾ ಅವರು ಲಕ್ನೋ ವಿಶ್ವವಿದ್ಯಾಲಯದಲ್ಲಿ ಮೊದಲ ಶ್ರೇಣಿಯ ಪದವಿ ಪಡೆದು ಬಿರ್ಬಾಲ್ ಸಾಹ್ನಿ ಮೆಮೊರಿಯಲ್ ಚಿನ್ನದ ಪದಕವನ್ನು ಪಡೆದರು. ೧೯೬೧ರಲ್ಲಿ ಅವರು ತನ್ನ ಪಿ.ಎಚ್.ಡಿ ಯನ್ನು ಲಕ್ನೋ ವಿಶ್ವವಿದ್ಯಾಲಯದಲ್ಲಿ ಪಡೆದರು. ನಂತರ ಪೋಸ್ಟ್ ಡಾಕ್ಟರಲ್ ಸಂಶೋಧಕನರಾಗಿ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದರು.[೩]
ಎ. ಕಾರ್ಲ್ ಲಿಯೋಪೋಲ್ಡ್ ಮತ್ತು ರಿಚರ್ಡ್ ಹಾಲ್ ಅವರ ಸಹಾಯದಿಂದ ಲ್ಯಾಟೆಕ್ಸ್ ಉತ್ಪಾದನೆಯನ್ನು ಹೆಚ್ಚಿಸುವುದರ ಕುರಿತಾದ ಇವರ ಸಂಶೋಧನೆಯು ಮಲೇಷಿಯಾದ ರಬ್ಬರ್ ತೋಟಗಳಿಗೆ ಬೇಕಾದ ಹಲವಾರು ಉಪಯೋಗಗಳನ್ನು ಕಂಡುಹಿಡಿದಿದ್ದಾರೆ. ನಂತರ ಡೆಹ್ರಾಡೂನ್ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಗೆ ಸೇರಿದರು. ಅಲ್ಲಿ ಮರಗಳ ಬಗ್ಗೆ ಸಂಶೋಧನೆ ನಡೆಸಿ, ಸಿಲಿಕಾ ಹಾಗೂ ಮರದ ಕಠಿಣತೆಯ ನಡುವಿನ ಸಂಬಂಧವನ್ನು ಕಂಡುಹಿಡಿದರು. ಇವರು ದೆಹಲಿಗೆ ತೆರಳಿದ ನಂತರ,ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಸಂಶೋಧನಾ ಅಧಿಕಾರಿಯಾದರು ಮತ್ತು ಭಾರತೀಯ ಔಷಧೀಯ ಸಸ್ಯಗಳ ಮೇಲೆ ಏಕರೂಪತೆಯನ್ನು ರಚಿಸಿದರು. ೧೯೭೪ ರಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ಸೇರಿದರು. ೧೯೯೦ ರಲ್ಲಿ ಹಿರಿಯ ಸಲಹೆಗಾರರಾದರು ಮತ್ತು ೧೯೯೬ ರಲ್ಲಿ ಸರ್ಕಾರಿ ಸಂಸ್ಥೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಬಯೋಟೆಕ್ನಾಲಜಿ ಸಂಶೋಧನೆಯ ವಾಣಿಜ್ಯೀಕರಣವನ್ನು ಉತ್ತೇಜಿಸುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವವಾದ ಬಯೋಟೆಕ್ ಕನ್ಸೋರ್ಟಿಯಮ್ ಇಂಡಿಯಾ ಲಿಮಿಟೆಡ್ ಸೃಷ್ಟಿಗೆ ಇವರು ಪ್ರಮುಖ ಪಾತ್ರವನ್ನು ವಹಿಸಿದರು. ತನ್ನ ಅಧಿಕಾರ ಪೂರ್ಣಗೊಂಡ ನಂತರ, ೨೦೦೪ ರಲ್ಲಿ ಇವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಲಹೆಗಾರರಾಗಿ ನೇಮಕಗೊಂಡರು. ೨೦೦೬ ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ರಿಸರ್ಚ್ ಅನ್ನು ಸ್ಥಾಪಿಸಿದರು. ಸಸ್ಯ ವಿಜ್ಞಾನ, ಮಾನವ ಆರೋಗ್ಯ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ಗಳಲ್ಲಿ ಉನ್ನತ ಶಿಕ್ಷಣವನ್ನು ಒದಗಿಸಲು ಭಾರತದಲ್ಲಿರುವ ಪುರಿ ಫೌಂಡೇಷನ್ ಫಾರ್ ಎಜುಕೇಶನ್ನ ದತ್ತಿ ಸಹಾಯದಿಂದ ಸಂಶೋಧನೆ ನಡೆಸಲು ಸಹಾಯ ಮಾಡಿದರು. ಇವರು ೨೦೧೨ ರವರೆಗೆ ಅಧ್ಯಕ್ಷರಾಗಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಆರನೇ ಪಂಚವಾರ್ಷಿಕ ಯೋಜನೆಯನ್ನು ೧೯೮೦-೧೯೮೫ ರಲ್ಲಿ ಮಹಿಳಾ ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಾಯವೊಂದನ್ನು ಎಂ.ಎಸ್. ಸ್ವಾಮಿನಾಥನ್ ಪ್ರಾರಂಭಿಸಿದಾಗ,ಮಂಜು ಶರ್ಮಾ ನೇತೃತ್ವದ ತಂಡವು ಮಹಿಳಾ ಮತ್ತು ಅಭಿವೃದ್ಧಿಯ ಕುರಿತಾದ ಯೋಜನೆಯನ್ನು, ದಾಖಲೆಯಲ್ಲಿ ಸಂಘಟಿತವಾದ ವರದಿಯನ್ನು ಸಿದ್ಧಪಡಿಸಿತು. ಇದು ಮೊದಲ ಕೇಂದ್ರೀಕೃತ ಯೋಜನೆಯಾಗಿದ್ದು, ಇದನ್ನು ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮುಂದುವರೆಸಿ ಕಾರ್ಯನಿರ್ವಹಿಸುತ್ತಿದೆ.[೪]