ಮಂಜುಳ | |
---|---|
Born | ಹೊನ್ನೇನಹಳ್ಳಿ ಶಿವಣ್ಣ, ಮಂಜುಳಾ ೮ ನವೆಂಬರ್ ೧೯೫೪ |
Died | 12 September 1986 ಬೆಂಗಳೂರು, ಭಾರತ. | (aged 31)
Occupation | ಕನ್ನಡ ಚಲನಚಿತ್ರ ನಟಿ |
Years active | ೧೯೭೨–೧೯೮೬ |
Spouse | ಅಮೃತಂ |
Children | ೧ |
ಹೊನ್ನೇನಹಳ್ಳಿ ಶಿವಣ್ಣ ಮಂಜುಳ (೮ ನವೆಂಬರ್ ೧೯೫೪ - ೧೨ ಸೆಪ್ಟೆಂಬರ್ ೧೯೮೬) ಇವರು ತಮಿಳು ಭಾಷೆಯಲ್ಲಿ, ಕುಮಾರಿ ಮಂಜುಳಾ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ, ಕನ್ನಡ ಮಂಜುಳ ಎಂದು ಮನ್ನಣೆ ಪಡೆದಿದ್ದಾರೆ. ಇವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ನಟಿ. ಅವರು ೧೯೭೦ ಮತ್ತು ೧೯೮೦ ರ ದಶಕದಲ್ಲಿ ಕನ್ನಡ ಚಲನಚಿತ್ರಗಳ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. [೧]
ಮಂಜುಳ ಅವರು ತುಮಕೂರು ಜಿಲ್ಲೆಯ, ಹೊನ್ನೇನಹಳ್ಳಿ ಎಂಬಲ್ಲಿ ಎಂ.ಎಚ್.ಶಿವಣ್ಣ ಮತ್ತು ದೇವಮ್ಮ ದಂಪತಿಗೆ ಮಗಳಾಗಿ ಜನಿಸಿದರು. ಅವರ ತಂದೆ ಶಿವಣ್ಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಅವರು ಚಲನಚಿತ್ರ ನಿರ್ದೇಶಕರಾದ ಅಮೃತಮ್ ಅವರನ್ನು ವಿವಾಹವಾದರು. ಅವರು ಅವರೊಂದಿಗೆ ಹುಡುಗಾಟದ ಹುಡುಗಿ ಮತ್ತು ಕನಸು ನನಸು ಹೀಗೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಈ ದಂಪತಿಗೆ ಅಭಿಷೇಕ್ ಎಂಬ ಮಗನಿದ್ದಾನೆ. [೨]
ಮಂಜುಳರವರು ೧೯೬೫ ರಲ್ಲಿ ಪ್ರಭಾತ್ ಕಲಾವಿದರು ಎಂಬ ನಾಟಕ ತಂಡದೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೬೬ ರಲ್ಲಿ ಮನೆಕಟ್ಟಿ ನೋಡು ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು. ೧೯೭೨ ರಲ್ಲಿ ತೆರೆಕಂಡ ಹಿರಿಯ ನಿರ್ದೇಶಕ ಎಂ.ಆರ್.ವಿಠಲ್ ನಿರ್ದೇಶನದ ಯಾರ ಸಾಕ್ಷಿ? ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. [೩]ರಾಜ್ ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಅಶೋಕ್ ಮತ್ತು ಶಂಕರ್ ನಾಗ್ ಸೇರಿದಂತೆ ಹೀಗೆ ಹಲವಾರು ಕನ್ನಡ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರ ಅತ್ಯಂತ ಯಶಸ್ವಿ ಜೋಡಿಯಾದ ಶ್ರೀನಾಥ್ ಅವರೊಂದಿಗೆ ಮತ್ತು ಅವರು ಸುಮಾರು ೩೫ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. [೪]
ಮಂಜುಳರವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. [೫] ಅವರು ಬಾಸ್ ಟಾಂಬೋಯಿಶ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪರಿಣತಿ ಪಡೆದರು. ಇದು ೧೯೭೦ ರ ದಶಕದ ಉತ್ತರಾರ್ಧದಲ್ಲಿ ಕನ್ನಡದ ಅಗ್ರ ನಾಯಕಿಯಾಗಿ ಭಾರಿ ಯಶಸ್ಸನ್ನು ತಂದುಕೊಟ್ಟಿತು. ಸಂಪತ್ತಿಗೆ ಸವಾಲ್, ಎರಡು ಕನಸು, ಸೊಸೆ ತಂದ ಸೌಭಾಗ್ಯ, ಬೆಸುಗೆ ಮತ್ತು ಸೀತಾರಾಮು ಇವೆಲ್ಲ ಚಲನಚಿತ್ರಗಳು ಅವರ ಗಮನಾರ್ಹ ಚಲನಚಿತ್ರಗಳಾಗಿವೆ. ಅವರು ರಾಮಕೃಷ್ಣ (ತೆಲುಗು), ಕಮಲ್ ಹಾಸನ್ ಮತ್ತು ರಜನಿಕಾಂತ್ (ತಮಿಳು) ನಂತಹ ಇತರ ಭಾಷೆಗಳಲ್ಲಿ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ. [೬]
ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೬೬ | ಮನೆಕಟ್ಟಿ ನೋಡು | ಮಂಜು | ಬಾಲ ನಟಿ |
೧೯೬೭ | ಪದವಿಧರ | ಬಾಲ ನಟಿ | |
೧೯೬೯ | ಎರಡು ಮುಖ | ಬಾಲ ನಟಿ (ಕೀರ್ತಿ ಕುಮಾರಿ ಮಂಜುಳಾ) | |
೧೯೭೨ | ಯಾರ ಸಾಕ್ಷಿ? | ನಾಯಕಿಯಾಗಿ ಪಾದಾರ್ಪಣೆ | |
೧೯೭೩ | ಮೂರೂವರೆ ವಜ್ರಗಳು | ಸತ್ಯಭಾಮಾ | |
೧೯೭೪ | ಎರಡು ಕನಸು | ಲಲಿತಾ | |
೧೯೭೪ | ಸಂಪತ್ತಿಗೆ ಸವಾಲ್ | ದುರ್ಗಾ | |
೧೯೭೪ | ಭಕ್ತ ಕುಂಬಾರ | ಗೋರಾ ಅವರ ಅತ್ತಿಗೆ | |
೧೯೭೪ | ಪ್ರೊಫೆಸರ್ ಹುಚ್ಚುರಾಯ | ಎಂ.ಎನ್.ಗೀತಾ | |
೧೯೭೪ | ಶ್ರೀ ಶ್ರೀನಿವಾಸ ಕಲ್ಯಾಣ | ಪದ್ಮಾವತಿ | |
೧೯೭೫ | ದೇವರಗುಡಿ | ವಸಂತಿ | |
೧೯೭೫ | ದಾರಿ ತಪ್ಪಿದ ಮಗ | ಪುಷ್ಪಾ | |
೧೯೭೫ | ನಿನಗಾಗಿ ನಾನು | ||
೧೯೭೫ | ಮಯೂರ | ಪ್ರೇಮಾವತಿ | |
೧೯೭೫ | ನಿರೀಕ್ಷೆ | ವಸುಮತಿ | |
೧೯೭೫ | ಹೆಣ್ಣು ಸಂಸಾರದ ಕಣ್ಣು | ||
೧೯೭೬ | ಹುಡುಗಾಟದ ಹುಡುಗಿ | ||
೧೯೭೬ | ಬದುಕು ಬಂಗಾರವಾಯಿತು | ಮಹಾದೇವಿ | |
೧೯೭೬ | ಬೆಸುಗೆ | ಸುಮಾ | |
೧೯೭೬ | ಚಿರಂಜೀವಿ | ||
೧೯೭೬ | ಬಂಗಾರದ ಗುಡಿ | ರಾಧಾ | |
೧೯೭೬ | ತುಳಸಿ | ||
೧೯೭೬ | ಕನಸು ನನಸು | ||
೧೯೭೭ | ದೀಪಾ | ದೀಪಾ | ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿ - ಕನ್ನಡ |
೧೯೭೭ | ಶ್ರೀ ರೇಣುಕಾದೇವಿ ಮಹಾತ್ಮೆ | ||
೧೯೭೭ | ಧನಲಕ್ಷ್ಮಿ | ||
೧೯೭೭ | ಬಯಸದೇ ಬಂದ ಭಾಗ್ಯ | ||
೧೯೭೭ | ಸೊಸೆ ತಂದ ಸೌಭಾಗ್ಯ | ಗೀತಾ | |
೧೯೭೭ | ತಾಯಿಗಿಂತ ದೇವರಿಲ್ಲ | ||
೧೯೭೭ | ವೀರಸಿಂಧೂರ ಲಕ್ಷ್ಮಣ | ವಿಶೇಷ ನೋಟ | |
೧೯೭೭ | "ಚಂಡಮಾರುತ" | ವಿಶೇಷ ನೋಟ | |
೧೯೭೭ | ಕಿಟ್ಟು ಪುಟ್ಟು | ರೂಪಾ | |
೧೯೭೭ | ಗಂಡ ಹೆಂಡ್ತಿ | ||
೧೯೭೭ | ಕುಂಕುಮ ರಕ್ಷೆ | ||
೧೯೭೭ | ಗಲಾಟೆ ಸಂಸಾರ | ಜಾನಕಿ | |
೧೯೭೮ | ಹಳ್ಳಿ ಹೈದ | ||
೧೯೭೮ | ಮುಯ್ಯಿಗೆ ಮುಯ್ಯಿ | ||
೧೯೭೮ | ಅನುರಾಗ ಬಂಧನ | ವಿಶೇಷ ನೋಟ | |
೧೯೭೮ | ಅಪರಾಧಿ ನಾನಲ್ಲ | ||
೧೯೭೮ | ನನ್ನ ಪ್ರಾಯಶ್ಚಿತ್ತ | ||
೧೯೭೮ | ಸ್ನೇಹ ಸೇಡು | ||
೧೯೭೮ | ವಸಂತ ಲಕ್ಷ್ಮಿ | ಲಕ್ಷ್ಮಿ | |
೧೯೭೮ | ಚಿತೆಗೂ ಚಿಂತೆ | ||
೧೯೭೮ | ಭಲೇ ಹುಡುಗ | ||
೧೯೭೮ | ಮಧುರ ಸಂಗಮ | ಶಾರದಾ | |
೧೯೭೮ | ಸಿಂಗಪೂರಿನಲ್ಲಿ ರಾಜಾ ಕುಳ್ಳ | ತಾರ | |
೧೯೭೯ | ಅದಲು ಬದಲು | ವಿಶೇಷ ನೋಟ | |
೧೯೭೯ | ಅಳಿಯ ದೇವರು | ||
೧೯೭೯ | ಸೀತಾರಾಮು | ಸೀತಾ | |
೧೯೭೯ | ಪಕ್ಕಾ ಕಳ್ಳ | ||
೧೯೭೯ | ಪುಟಾಣಿ ಏಜೆಂಟ್ ೧೨೩ | ||
೧೯೭೯ | ಸವತಿಯ ನೆರಳು | ಪದ್ಮಿನಿ | |
೧೯೭೯ | ಪ್ರೀತಿ ಮಾಡು ತಮಾಷೆ ನೋಡು | ಮಾಧವಿ | |
೧೯೭೯ | ಮಲ್ಲಿಗೆ ಸಂಪಿಗೆ | ||
೧೯೭೯ | ಏನೇ ಬರಲಿ ಪ್ರೀತಿ ಇರಲಿ | ||
೧೯೮೦ | ಪಾಯಿಂಟ್ ಪರಿಮಳ | ಪರಿಮಳಾ | |
೧೯೮೦ | ರಾಮ ಪರಶುರಾಮ | ||
೧೯೮೦ | ರಾಮ ಲಕ್ಷ್ಮಣ | ||
೧೯೮೦ | ಮೂಗನ ಸೇಡು | ಮಂಗಳಾ | |
೧೯೮೦ | ಹದ್ದಿನ ಕಣ್ಣು | "ಬೆಣ್ಣೆ" ಭಾಗ್ಯ | |
೧೯೮೦ | ಮಂಜಿನ ತೆರೆ | ||
೧೯೮೦ | ಉಷಾ ಸ್ವಯಂವರ | ಉಷಾ | |
೧೯೮೦ | ಸಿಂಹಜೋಡಿ | ||
೧೯೮೦ | ಮಂಕುತಿಮ್ಮ | ||
೧೯೮೦ | ರುಸ್ತುಂ ಜೋಡಿ | ಪದ್ಮಾ | ವಿಶೇಷ ನೋಟ |
೧೯೮೦ | ಜನ್ಮ ಜನ್ಮದ ಅನುಬಂಧ | ||
೧೯೮೦ | ಮಿಥುನಾ | ||
೧೯೮೦ | ಪಟ್ಟಣಕ್ಕೆ ಬಂದ ಪತ್ನಿಯರು | ||
೧೯೮೧ | ನೀ ನನ್ನ ಗೆಲ್ಲಲಾರೆ | ನಳಿನಿ | |
೧೯೮೧ | ಪ್ರೇಮಾನುಬಂಧ | ||
೧೯೮೧ | ಅವಳಿ ಜವಳಿ | ||
೧೯೮೧ | ಸಿಂಹದಮರಿ ಸೈನ್ಯ | ವಿಶೇಷ ನೋಟ | |
೧೯೮೧ | ಗುರು ಶಿಷ್ಯರು | ಚಿತ್ರಲೇಖಾ | |
೧೯೮೧ | ಮರೆಯದ ಹಾಡು | ||
೧೯೮೧ | ಸ್ನೇಹಿತರ ಸವಾಲ್ | ||
೧೯೮೧ | ಶಿಕಾರಿ | ||
೧೯೮೨ | ರುದ್ರಿ | ||
೧೯೮೨ | ಕೆಂಪು ಹೋರಿ | ||
೧೯೮೨ | ಚೆಲ್ಲಿದ ರಕ್ತ | ||
೧೯೮೨ | ಮರೆಯಲಾಗದ ಕಥೆ | ||
೧೯೮೨ | ಅರ್ಚನಾ | ರಾಣಿ | ವಿಶೇಷ ನೋಟ |
೧೯೮೨ | ಸ್ವರ್ಣಮಹಲ್ ರಹಸ್ಯ | ||
೧೯೮೨ | ಗುಣ ನೋಡಿ ಹೆಣ್ಣು ಕೊಡು | ||
೧೯೮೨ | ಬೆಂಕಿಚೆಂಡು | ||
೧೯೮೨ | ಮಾವ ಸೊಸೆ ಸವಾಲ್ | ||
೧೯೮೨ | ಸ್ನೇಹದ ಸಂಕೋಲೆ | ||
೧೯೮೨ | ಹಾಸ್ಯರತ್ನ ರಾಮಕೃಷ್ಣ | ವಿಶೇಷ ನೋಟ | |
೧೯೮೨ | ಬೆತ್ತಲೆ ಸೇವೆ | ||
೧೯೮೩ | ಹೊಸ ತೀರ್ಪು | ನೃತ್ಯಗಾರ್ತಿ | ವಿಶೇಷ ನೋಟ |
೧೯೮೩ | ಕೆರಳಿದ ಹೆಣ್ಣು | ಜಯಲಕ್ಷ್ಮಿ | ವಿಶೇಷ ನೋಟ |
೧೯೮೩ | ಕ್ರಾಂತಿಯೋಗಿ ಬಸವಣ್ಣ | ನೀಲಾಂಬಿಕೆ | |
೧೯೮೩ | ಆನಂದಸಾಗರ | ವಿಶೇಷ ನೋಟ | |
೧೯೮೩ | ಒಂಟಿಧ್ವನಿ | ವಿಶೇಷ ನೋಟ | |
೧೯೮೩ | ಕಾಳಿಂಗ ಸರ್ಪ | ಮುತ್ತು | |
೧೯೮೩ | ಎಂಕ ಮಂಕ | ||
೧೯೮೫ | ಸಾವಿರ ಸುಳ್ಳು | ||
೧೯೮೫ | ಭಯಂಕರ ಭಸ್ಮಾಸುರ |
ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೭೫ | ಪುತ್ತು ವೆಲ್ಲಂ | ||
೧೯೭೫ | ಮಾಲೈ ಸೂಡಾ ವಾ | ||
೧೯೭೫ | ಎಡುಪ್ಪರ್ಕೈ ಪಿಳ್ಳೈ | ||
೧೯೮೦ | ಕಾಲಂ ಬಾಧಿಲ್ ಸೊಲ್ಲಮ್ | ||
೧೯೮೧ | ಬಾಲನಾಗಮ್ಮ | ಮೋಹನ |
ವರ್ಷ | ಚಲನಚಿತ್ರ | ಪಾತ್ರ | ಟಿಪ್ಪಣಿಗಳು |
---|---|---|---|
೧೯೭೪ | ತೋಟ ರಾಮುಡು | ದುರ್ಗಾ | |
೧೯೭೫ | ಪೂಜಾ | ಲಲಿತಾ | (ಎರಡು ಕನಸು ಚಿತ್ರದ ರಿಮೇಕ್) |
೧೯೮೨ | ಬಾಲನಾಗಮ್ಮ |
೧೯೮೬ ರ ಸೆಪ್ಟೆಂಬರ್ ೯ ರಂದು ಅಡುಗೆಮನೆಯಲ್ಲಿ ಬೆಂಕಿಯ ಅಪಘಾತದಿಂದ ಮಂಜುಳರವರು ಮೃತಪಟ್ಟಿದ್ದರು. ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಲಾಗಿದ್ದರೂ, ಟೈಮ್ಸ್ ಆಫ್ ಇಂಡಿಯ ಈ ಸಾವನ್ನು ಆತ್ಮಹತ್ಯೆ ಎಂದು ವರದಿ ಮಾಡಿದೆ. [೭]
{{cite news}}
: CS1 maint: unfit URL (link)