![]() ೨೦೧೯-೨೦೨೦ ವಿಜಯ್ ಹಜಾರೆ ಟ್ರೋಫಿ ಸಮಯದಲ್ಲಿ ಮಂದೀಪ್ | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮಂದೀಪ್ ಸಿಂಗ್ | |||||||||||||||||||||||||||||||||||||||||||||||||||||||||||||||||
ಹುಟ್ಟು | [೧] ಜಲಂಧರ್, ಪಂಜಾಬ್, ಭಾರತ | ೧೮ ಡಿಸೆಂಬರ್ ೧೯೯೧|||||||||||||||||||||||||||||||||||||||||||||||||||||||||||||||||
ಎತ್ತರ | [convert: invalid number] | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಪಾತ್ರ | ಬ್ಯಾಟ್ಸಮ್ಯಾನ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೬೨) | ೧೮ ಜೂನ್ ೨೦೧೬ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೨೨ ಜೂನ್ ೨೦೧೬ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೨೩ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೦-ಇಂದಿನವರೆಗೆ | ಪಂಜಾಬ್ | |||||||||||||||||||||||||||||||||||||||||||||||||||||||||||||||||
೨೦೧೦ | ಕೋಲ್ಕತಾ ನೈಟ್ ರೈಡರ್ಸ್ | |||||||||||||||||||||||||||||||||||||||||||||||||||||||||||||||||
೨೦೧೧-೧೪,೧೯ | ಕಿಂಗ್ಸ್ ಇಲೆವೆನ್ ಪಂಜಾಬ್ (squad no. ೨೩) | |||||||||||||||||||||||||||||||||||||||||||||||||||||||||||||||||
೨೦೧೫-೧೮ | ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. 9 (formerly 23)) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, ೪ ಮೇ ೨೦೧೯ |
ಮಂದೀಪ್ ಸಿಂಗ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಮದ್ಯಮ ವೇಗದ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಆಡುತ್ತಾರೆ.
ಮಂದೀಪ್ ರವರು ದಶಂಬರ ೦೧೮, ೧೯೯೧ರಂದು ಜಲಂಧರ್, ಪಂಜಾಬ್‌ನಲ್ಲಿ ಜನಿಸಿದರು. ಇವರು ೨೦೧೦ರಲ್ಲಿ ಭಾರತೀಯ ೧೯ರ ವಯೋಮಿತಿ ತಂಡದ ಪರವಾಗಿ ಅತೀ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರು. ನಂತರ ೨೦೧೦-೧೧ ರಣಜಿ ಟ್ರೋಫೀಯಲ್ಲಿ ಪಂಜಾಬ್ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು.[೨]
ಮಾರ್ಚ್ ೨೨, ೨೦೧೦ರಂದು ಮುಂಬೈನಲ್ಲಿ ನಡೆದ ೧೭ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರಿಗೆ ಬ್ಯಾಟಿಂಗ್‍ಗೆ ಅವಕಾಶ ಲಭಿಸಲಿಲ್ಲ. ನಂತರ ಇವರು ಕಿಂಗ್ಸ್ ೧೧ ಪಂಜಾಬ್ ತಂಡಕ್ಕೆ ಸೇರಿಕೊಂಡರು. ೨೦೧೨ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ಹೊರಹೊಮ್ಮಿದರು. ಅದೇ ವರ್ಷ ಇವರಿಗೆ ಟೂರ್ನಮೆಂಟ್‍ನ ರೈಸಿಂಗ್ ಸ್ಟಾರ್ ಎಂಬ ಪ್ರಶಸ್ತಿಯನ್ನು ಪಡೆದರು. ನಂತರ ಕೆಲ ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇವೆ ಸಲ್ಲಿಸಿದರು. ಈಗ ೨೦೧೯ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ [ಕಿಂಗ್ಸ್ ೧೧ ಪಂಜಾಬ್]] ತಂಡಕ್ಕೆ ಆಡುತ್ತಾರೆ.[೩][೪][೫][೬][೭]
ಜೂನ್ ೧೮, ೨೦೧೬ರಲ್ಲಿ ಹರಾರೆ, ಜಿಂಬಾಬ್ವೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ ಇವರು, ೨೭ ಎಸೆತಗಳ ಮೂಲಕ ಇವರು ೦೫ ಬೌಂಡರಿ ಸಹಿತ ೩೧ ರನ್ ಕಲೆ ಹಾಕಿದರು.[೮][೯]