ಮಠವು ಹಿಂದೂ ಧರ್ಮ ಮತ್ತು ಜೈನ ಧರ್ಮದ ಸಂನ್ಯಾಸ ಸಂಬಂಧಿ ಮತ್ತು ಇದೇ ರೀತಿಯ ಧಾರ್ಮಿಕ ಸಂಸ್ಥೆಗಳಿಗಾಗಿ ಬಳಸಲಾಗುವ ಪದ. ಮಠವು ಸಾಮಾನ್ಯವಾಗಿ ಆಶ್ರಮಕ್ಕಿಂತ ಹೆಚ್ಚು ಸಾಂಪ್ರದಾಯಿಕ, ಶ್ರೇಣೀಕೃತ, ಮತ್ತು ನಿಯಮಾಧಾರಿತವಾಗಿರುತ್ತದೆ. ಅತ್ಯಂತ ಹಳೆಯ ಮಠವು ಅದ್ವೈತ ವೇದಾಂತ ಸಂಪ್ರದಾಯವನ್ನು ಅನುಸರಿಸುತ್ತದೆ ಮತ್ತು ಶಂಕರಾಚಾರ್ಯರು ಅವುಗಳ ಮುಖ್ಯಸ್ಥರಾಗಿರುತ್ತಾರೆ.