ಮಣಿಪುರಭಾರತದೇಶದ ಈಶಾನ್ಯ ಭಾಗದ ರಾಜ್ಯ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು ಇರುವ ಕಾರಣದಿಂದ ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯುವರು. ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇದೆ.
ಮತ ಚಲಾಯಿಸಿದವರು 79,19% ಆಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಗಳಿಸಿದೆ. ಹಾಲಿ ಮುಖ್ಯಮಂತ್ರಿಯಾಗಿರುವ ಓಕ್ರಮ್ ಇಬೊಬಿ ಸಿಂಗ್ ಹುದ್ದೆಗೆ ಮರು ಆಯ್ಕೆಯಾದರು.
ಮಣಿಪುರದಲ್ಲಿ 21 ಸ್ಥಾನ ಗೆದ್ದಿರುವ ಬಿಜೆಪಿ, ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ಮತ್ತು ಎಲ್‌ಜೆಪಿ (ಲೋಕ ಜನಶಕ್ತಿ ಪಾರ್ಟಿ), ಟಿಎಂಸಿ ಬೆಂಬಲ ಗಿಟ್ಟಿಸಿಕೊಂಡಿದೆ.
ಬಲ:ಬಿಜೆಪಿ 21; ಎನ್ಸಿಎಫ್ (NCF)4; ಎಲ್,ಜೆ, ಪಿ 1; ಟಿಎಂಸಿ 1;= ಒಟ್ಟು 31
ಎನ್‌ಪಿಎಫ್ ಪಕ್ಷವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಬೆಂಬಲ ನೀಡುವುದಿಲ್ಲ ಎಂಬ ಪತ್ರವನ್ನು ಪಕ್ಷ ರಾಜ್ಯಪಾಲರಿಗೆ ಬರೆದಿದೆ.
ಎನ್‌ಪಿಪಿ ಮತ್ತು ಎಲ್‌ಜೆಪಿ ಕೇಂದ್ರದಲ್ಲಿ ಎನ್‌ಡಿಎ ಅಂಗಪಕ್ಷಗಳು. ‘ನಾಲ್ಕು ಸ್ಥಾನ ಗೆದ್ದಿರುವ ಎನ್‌ಪಿಎಫ್ (ನಾಗಾ ಪೀಪಲ್ಸ್ ಫ್ರಂಟ್) ಜೊತೆಗಿನ ಒಪ್ಪಂದದ ಪ್ರಕಾರ, ಆ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ. ಒಬ್ಬ ಪಕ್ಷೇತರ ಶಾಸಕರಿಂದ ಬೆಂಬಲ ಪಡೆಯಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.[೭]
ಮಣಿಪುರ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್. ಬಿರೇನ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳ ಎಂಟು ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಬಿಜೆಪಿಗೆ ಈಗ ಬೆಂಬಲ ಸೂಚಿಸಿರುವ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ಮನಸ್ಸು ಬದಲಿಸದಂತೆ ಸಚಿವ ಸ್ಥಾನಗಳನ್ನು ಹಂಚಲಾಗಿದೆ. ಎನ್‌ಪಿಪಿಯ ವೈ. ಜಾಯ್‌ಕುಮಾರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ನಾಲ್ವರು ಸದಸ್ಯರನ್ನು ಹೊಂದಿರುವ ಎನ್‌ಪಿಪಿಯ ಎನ್. ಕಯಿಸಿ ಅವರನ್ನೂ ಸಚಿವರನ್ನಾಗಿ ಮಾಡಲಾಗಿದೆ. ನಾಲ್ವರು ಶಾಸಕರನ್ನು ಹೊಂದಿರುವ ನಾಗಾ ಪೀಪಲ್ಸ್ ಫ್ರಂಟ್‌ನ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಎಲ್‌ಜೆಪಿಯ ಏಕೈಕ ಶಾಸಕ ಕರಮ್ ಶ್ಯಾಮ್ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಟಿ. ಶ್ಯಾಮಕುಮಾರ್ ಅವರೂ ಸಚಿವರಾಗಿದ್ದಾರೆ.[೮]