ಮದುರೈ ಸೋಮಸುಂದರಂ (1919–1989) ಕರ್ನಾಟಕ ಸಂಗೀತದ ಗಾಯಕರು ಮತ್ತು ವಿದ್ವಾಂಸರು.೧೯೩೪ರಲ್ಲಿ ತಿರುಚೆಂದೂರು ಎಂಬಲ್ಲಿ ತಮ್ಮ ಮೊದಲ ಕಛೇರಿ ನೀಡಿದ ಇವರು ಶೇಷ ಭಾಗವತರು, ಅಭಿರಾಮ ಶಾಸ್ತ್ರಿ ಮುಂತಾದವರಿಂದ ಸಂಗೀತ ಶಿಕ್ಷಣವನ್ನು ಪಡೆದರು.
ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ, ೧೯೭೮ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿಗಳು ದೊರೆತಿವೆ.