Madyamaheshwar Temple | |
---|---|
ಹೆಸರು: | Madyamaheshwar Temple |
ನಿರ್ಮಾತೃ: | Pandavas, according to legend |
ಕಟ್ಟಿದ ದಿನ/ವರ್ಷ: | unknown |
ಪ್ರಮುಖ ದೇವತೆ: | ಶಿವ |
ಸ್ಥಳ: | Mansoona village, Garhwal |
ಮಧ್ಯಮಾಹೇಶ್ವರ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ಪವಿತ್ರ ಶಿವಕ್ಷೇತ್ರ. ಮಧ್ಯಮಾಹೇಶ್ವರ ಪಂಚ ಕೇದಾರಗಳ ಪೈಕಿ ಒಂದು. ಮಹಾಭಾರತ ಯುದ್ಧದ ನಂತರ ಪಾಂಡವರಿಗೆ ದರ್ಶನವೀಯಲೊಲ್ಲದ ಶಿವನು ಎತ್ತಿನ ರೂಪದಿಂದ ಭೂಗತನಾದ ತರುವಾಯ ಇಲ್ಲಿ ಆ ಎತ್ತಿನ ನಾಭಿಯ ಭಾಗವು ಭೂಮಿಯಿಂದ ಮೇಲೆ ಪ್ರತ್ಯಕ್ಷವಾಗಿ ಶಿವನ ಪವಿತ್ರ ಕ್ಷೇತ್ರವಾಯಿತು. ರುದ್ರಪ್ರಯಾಗದಿಂದ ಕೇದಾರನಾಥಕ್ಕೆ ಸಾಗುವ ಹೆದ್ದಾರಿಯಲ್ಲಿ ಗುಪ್ತಕಾಶಿ ಪಟ್ಟಣದಿಂದ ೩೦ ಕಿ.ಮೀ. ದೂರದಲ್ಲಿರುವ ಮಧ್ಯಮಾಹೇಶ್ವರವನ್ನು ತಲುಪಲು ಕೊನೆಯ ೨೪ ಕಿ.ಮೀ.ಗಳಷ್ಟು ದಾರಿಯನ್ನು ಕಾಲ್ನಡಿಗೆಯಲ್ಲಿ ಸವೆಸಬೇಕಾಗುವುದು. ಚೌಖಂಬಾ, ನೀಲಕಂಠ ಮತ್ತು ಕೇದಾರನಾಥ ಶಿಖರಗಳ ಭವ್ಯ ಹಿನ್ನೆಲೆ ಹೊಂದಿರುವ ಮಧ್ಯಮಾಹೇಶ್ವರ ಅತಿ ಪವಿತ್ರ ಮತ್ತು ಅದ್ಭುತ ರಮ್ಯ ತಾಣವಾಗಿದೆ.
*Madhyamaheshwar Archived 2015-04-11 ವೇಬ್ಯಾಕ್ ಮೆಷಿನ್ ನಲ್ಲಿ.