ಎಮ್.ಎಮ್. ನರವಾಣೆ | |
---|---|
![]() | |
ರಕ್ಷಣಾ ಪಡೆಗಳ ಮುಖ್ಯಸ್ಥ (ಪ್ರಭಾರಿ)
| |
ಹಾಲಿ | |
ಅಧಿಕಾರ ಸ್ವೀಕಾರ ೧೬ ಡಿಸೆಂಬರ್ ೨೦೨೧ | |
ರಾಷ್ಟ್ರಪತಿ | ರಾಮನಾಥ ಕೋವಿಂದ್ |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಬಿಪಿನ್ ರಾವತ್ (೨೦೧೯) |
ಭಾರತೀಯ ಭೂ ಸೇನೆಯ ೨೭ನೇ ಮುಖ್ಯಸ್ಥರು
| |
ಹಾಲಿ | |
ಅಧಿಕಾರ ಸ್ವೀಕಾರ 31 December 2019 | |
ರಾಷ್ಟ್ರಪತಿ | ರಾಮನಾಥ ಕೋವಿಂದ್ |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಬಿಪಿನ್ ರಾವತ್ |
ವೈಯಕ್ತಿಕ ಮಾಹಿತಿ | |
ಜನನ | [೧] ಪುಣೆ ಮಹಾರಾಷ್ಟ್ರ ಭಾರತ | ೨೨ ಏಪ್ರಿಲ್ ೧೯೬೦
ಸಂಗಾತಿ(ಗಳು) | ವೀಣಾ ನರವಾಣೆ |
ಮಿಲಿಟರಿ ಸೇವೆ | |
Allegiance | ಭಾರತ |
ಸೇವೆ/ಶಾಖೆ | ಭಾರತೀಯ ಭೂ ಸೇನೆ |
ವರ್ಷಗಳ ಸೇವೆ | ಜೂನ್ ೧೯೮೦ರಿಂದ ಪ್ರಸ್ತುತ |
Rank | ![]() |
Unit | ಸಿಖ್ ಲೈಟ್ ಪದಾತಿ ದಳ |
ಜನರಲ್ ಮನೋಜ್ ಮುಕುಂದ್ ನರವಾಣೆ (ಜನನ - ೨೨ ಏಪ್ರಿಲ್ ೧೯೬೦) ಭಾರತೀಯ ಭೂಸೇನೆಯ ೨೭ನೇ ಮುಖ್ಯಸ್ಥರಾಗಿದ್ದು, ಜೊತೆಗೆ ಡಿಸೆಂಬರ್ ೧೫, ೨೦೨೧ರಿಂದ ರಕ್ಷಣಾ ಪಡೆಗಳ ಪ್ರಭಾರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೨] ಡಿಸೆಂಬರ್ ೩೧, ೨೦೨೦ರಂದು ಜನರಲ್ ಬಿಪಿನ್ ರಾವತ್ ಅವರಿಂದ ಭೂ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.[೩] ಈ ಹುದ್ದೆಗೆ ನೇಮಕಗೊಳ್ಳುವ ಮೊದಲು, ಇವರು ಭಾರತೀಯ ಸೇನೆಯ ೪೦ನೇ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ (VCOAS), ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಮತ್ತು ಸೇನಾ ತರಬೇತಿ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್ ಆಗಿ ಸೇವೆ ಸಲ್ಲಿಸಿದ್ದರು.
ಮನೋಜ್ ನರವಾಣೆಯವರು ಮೂಲತಃ ಮಹಾರಾಷ್ಟ್ರದ ಪುಣೆಯವರಾಗಿದ್ದು, ಇವರ ತಂದೆ ಮುಕುಂದ ನರವಾಣೆ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿದ್ದರು. ನಿವೃತ್ತರಾಗುವ ಸಂದರ್ಭದಲ್ಲಿ ಇವರು ವಾಯುಸೇನೆಯ ವಿಂಗ್ ಕಮಾಂಡರ್ ಆಗಿದ್ದರು. ತಾಯಿ ಸುಧಾ ಆಕಾಶವಾಣಿಯಲ್ಲಿ ಉಧ್ಘೋಶಕಿಯಾಗಿದ್ದರು. ಜನರಲ್ ನರವಾಣೆಯವರು ತಮ್ಮ ಪ್ರಾಂರಂಭಿಕ ಶಿಕ್ಷಣವನ್ನು ಪುಣೆಯ ಜ್ಞಾನ ಪ್ರಬೋಧಿನಿ ಪ್ರಶಾಲಾದಲ್ಲಿ ಪೂರೈಸಿದರು. ಬಳಿಕ ಪುಣೆಯ ಸೈನಿಕ ಶಾಲೆಯಲ್ಲಿ ಹಾಗು ಡೆಹ್ರಾಡೂನ್ ನ ಬಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಚೆನ್ನೈಯ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಕ್ಷಣಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಇಂದೋರ್ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದಿಂದ ರಕ್ಷಣಾ ಶಾಸ್ತ್ರ ಹಾಗೂ ವ್ಯವಹಾರ ಶಾಸ್ತ್ರದಲ್ಲಿ ಎಮ್.ಫಿಲ್. ಪದವಿಯನ್ನು ಗಳಿಸಿದರು. ರಕ್ಷಣಾ ತಂತ್ರದಲ್ಲಿ, ಪಟಿಯಾಲಾದ ಪಂಜಾಬ್ ಯುನಿವರ್ಸಿಟಿಯಿಂದ ಪಿ.ಎಚ್ಡಿ. ಹೊಂದಿರುವ ಇವರು, ವೆಲ್ಲಿಂಗ್ಟನ್ ನ ರಕ್ಷಣಾ ಸಿಬ್ಬಂದಿಗಳ ವಿದ್ಯಾಲಯ ಹಾಗೂ ಮಧ್ಯ ಪ್ರದೇಶದ ಮೋಹ್ವ್ ನ ಆರ್ಮಿ ವಾರ್ ಕಾಲೇಜಿನ ಪೂರ್ವ ವಿಧ್ಯಾರ್ಥಿಯೂ ಆಗಿದ್ದಾರೆ.[೪]
೧೯೮೦, ಜೂನ್ ನಲ್ಲಿ ಸಿಖ್ ಲೈಟ್ ಪದಾತಿ ದಳದ ಏಳನೇ ಬೆಟಾಲಿಯನ್ ಗೆ ನಿಯುಕ್ತಿಗೊಳ್ಳುವ ಮೂಲಕ ತಮ್ಮ ಸೈನಿಕ ಜೀವನವನ್ನು ಪ್ರಾಂಭಿಸಿದರು. ನಂತರ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ನ ಎರದನೇ ಬೆಟಾಲಿಯನ್ ಹಾಗೂ ೧೦೬, ಪದಾತಿ ದಳದ ಕಮಾಂಡಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಇವರು ನಾಗಾಲ್ಯಾಂಡ್ ನ ಕೋಹೀಮಾದಲ್ಲಿ ಅಸ್ಸಾಂ ರೈಫಲ್ಸ್ ನ ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ನಡೆದ ಆಂತರಿಕ ಬಂಡಾಯವನ್ನು ಹತ್ತಿಕ್ಕುವ ಕಾರ್ಯಾಚರಣೆಗಳಲ್ಲಿ, ಜೊತೆಗೆ ಶಾಂತಿ ಪಾಲನಾ ಪಡೆಯು ಶ್ರೀಲಂಕಾದಲ್ಲಿ ನಡೆಸಿದ "ಆಪೇಷನ್ ಪವನ್" ಕಾರ್ಯಾಚರಣೆಯಲ್ಲಿ ಕೂಡ ಭಾಗವಹಿಸಿದ್ದಾರೆ.[೫] ಭಾರತೀಯ ಭೂಸೇನೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ ಬಳಿಕ ಡಿಸಂಬರ್ ೩೧, ೨೦೧೯ರಲ್ಲಿ ತಮ್ಮ ಪೂರ್ವಾಧಿಕಾರಿ ಜನರಲ್ ಬಿಪಿನ್ ರಾವತ್ ರವರಿಂದ ಭೂಸೇನಾ ಮುಖ್ಯಸ್ಥ ಹುದ್ದೆಯನ್ನು ಸ್ವೀಕರಿಸಿದರು. ೨೦೨೧, ಡಿಸೆಂಬರ್ ೧೫ ರಿಂದ ಸೇನಾ ಸಿಬ್ಬಂದಿಗಳ ಮುಖ್ಯಸ್ಥರಾಗಿ ಪ್ರಬಾರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ನರವಾಣೆಯವರು ಮಹಾರಾಷ್ಟ್ರದ ಪುಣೆಯವರಾಗಿದ್ದು, ಇವರ ಪತ್ನಿ ವೀಣಾ ನರವಾಣೆ ಶಾಲಾ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರು ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ.[೬] ಪತ್ನಿ ವೀಣಾ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆಯಾಗಿದ್ದಾರೆ. ಜನರಲ್ ನರವಾಣೆಯವರು ಚಿತ್ರಕಲೆ, ಯೋಗ ಹಾಗೂ ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
ಜನರಲ್ ನರವಾಣೆಯವರು ಸಲ್ಲಿಸಿದ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ, ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ.
![]() |
![]() |
||
![]() ![]() ![]() | |||
![]() |
![]() |
![]() |
![]() |
![]() |
![]() |
![]() |
![]() |
ಪರಮ ವಿಶಿಷ್ಟ ಸೇವಾ ಪದಕ | ಅತಿ ವಿಶಿಷ್ಟ ಸೇವಾ ಪದಕ | ||
ಸೇನಾ ಪದಕ | ವಿಶಿಷ್ಟ ಸೇವಾ ಪದಕ | ಸಾಮಾನ್ಯ ಸೇವಾ ಪದಕ | |
ವಿಶೇಷ ಸೇವಾ ಪದಕ | ಆಪರೇಶನ್ ಪರಾಕ್ರಮ್ ಪದಕ | ಸೈನ್ಯ ಸೇವಾ ಪದಕ | ವಿದೇಶ ಸೇವಾ ಪದಕ |
ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪದಕ | ಮೂರು ದಶಕಗಳ ಸೇವೆಗಾಗಿ ಪದಕ | ಎರಡು ದಶಕಗಳ ಸೇವೆಗಾಗಿ ಪದಕ | ಒಂಬತ್ತು ವರ್ಷಗಳ ಸೇವೆಗಾಗಿ ಪದಕ |