![]() | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮಯಾಂಕ್ ಅನುರಾಗ್ ಅಗರ್‌ವಾಲ್ | |||||||||||||||||||||||||||||||||||||||||||||||||||||||||||||||||
ಹುಟ್ಟು | Error: Need valid birth date: year, month, day ಬೆಂಗಳೂರು, ಕರ್ನಾಟಕ, ಭಾರತ | |||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | ಮಾಂಕ್[೧] | |||||||||||||||||||||||||||||||||||||||||||||||||||||||||||||||||
ಎತ್ತರ | 5 ft 9 in (1.75 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಆಫ್ ಬ್ರೇಕ್ | |||||||||||||||||||||||||||||||||||||||||||||||||||||||||||||||||
ಪಾತ್ರ | Batter | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೯೫) | ೨೬ ಡಿಸೆಂಬರ್ ೨೦೧೮ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೧೨ ಮಾರ್ಚ್ ೨೦೨೨ v ಶ್ರೀಲಂಕಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೩೦) | ೫ ಫೆಬ್ರುವರಿ ೨೦೨೦ v ನ್ಯೂಜಿಲ್ಯಾಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೯ ನವಂಬರ್ ೨೦೨೦ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೧೬ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೦ರಿಂದ | ಕರ್ನಾಟಕ ಕ್ರಿಕೆಟ್ ತಂಡ | |||||||||||||||||||||||||||||||||||||||||||||||||||||||||||||||||
೨೦೧೧-೨೦೧೩ | ರಾಯಲ್ ಚಾಲೆಂಜರ್ಸ್ | |||||||||||||||||||||||||||||||||||||||||||||||||||||||||||||||||
೨೦೧೪-೨೦೧೬ | ಡೆಲ್ಲಿ ಡೇರ್‌ಡೆವಿಲ್ಸ್ (squad no. ೧೪) | |||||||||||||||||||||||||||||||||||||||||||||||||||||||||||||||||
೨೦೧೭ | ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ | |||||||||||||||||||||||||||||||||||||||||||||||||||||||||||||||||
೨೦೧೮-೨೦೨೨ | ಪಂಜಾಬ್ ಕಿಂಗ್ಸ್ (squad no. ೧೬) | |||||||||||||||||||||||||||||||||||||||||||||||||||||||||||||||||
೨೦೨೩ | ಸನ್ರೈಸರ್ಸ್ ಹೈದರಾಬಾದ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, ೧೨ ಮಾರ್ಚ್ ೨೦೨೨ |
ಮಯಾಂಕ್ ಅನುರಾಗ್ ಅಗರ್ವಾಲ್ ಅವರು ೧೬ ಫೆಬ್ರವರಿ ೧೯೯೧ರಲ್ಲಿ ಜನಿಸಿದರು [೨]. ಇವರು ಕರ್ನಾಟಕದವರಾಗಿದ್ದು ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ. ಅವರು ೨೬ ಡಿಸೆಂಬರ್ ೨೦೧೮ ರಂದು ಆಸ್ಟ್ರೇಲಿಯಾ ವಿರುದ್ಧ ಭಾರತದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದರು.[೩]
ಅವರು ಬಿಷಪ್ ಕಾಟನ್ ಬಾಲಕರ ಶಾಲೆ ಮತ್ತು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.[೪]
೨೦೦೮-೦೯ ರಲ್ಲಿ ನಡೆದ ಅಂಡರ್ -19 ಕೂಚ್ ಬೆಹರ್ ಟ್ರೋಫಿಯಲ್ಲಿ ಅವರು ತೋರಿದ ಸಾಧನೆಗಳಿಂದ ಬೆಳಕಿಗ ಬಂದ ಇವರು, ಇದಕ್ಕೆ ಮಾನ್ಯತೆವೆಂಬಂತೆ ೨೦೧೦ ರ ಐಸಿಸಿ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನಲ್ಲೂ ಅವರು ಸ್ಥಾನ ಪಡೆದರು. ಈ ಪಂದ್ಯಾಕೂಟದಲ್ಲಿ ಅವರು ಭಾರತದ ಪ್ರಮುಖ ರನ್ ಗಳಿಸುವವರಾಗಿದ್ದರು.[೫] ೨೦೧೦ ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅವರನ್ನು ಮ್ಯಾನ್ ಆಫ್ ದಿ ಸೀರೀಸ್ ಎಂದು ಆಯ್ಕೆ ಮಾಡಲಾಯಿತು. ಆ ಪಂದ್ಯಾವಳಿಯಲ್ಲಿ ಅವರು ಒಂದು ಶತಕವನ್ನೂ ಗಳಿಸಿದ್ದರು.[೬]
ನವೆಂಬರ್ ೨೦೧೭ ರಲ್ಲಿ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಚೊಚ್ಚಲ ತ್ರಿಶತಕವನ್ನು ಗಳಿಸಿದರು. ಅವರು ೨೦೧೭-೧೮ ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕದ ಪರವಾಗಿ ೩೦೪* ಹೊಡೆದಿದ್ದರು.[೭] ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ೫೦ ನೇ ತ್ರಿಶತಕವಾಗಿದೆ.[೮] ಅದೇ ತಿಂಗಳಲ್ಲಿ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೧,೦೦೦ ರನ್ ಪೂರ್ಣಗೊಳಿಸಿದರು.[೯][೧೦] ಅವರು ೨೦೧೭-೧೮ರ ರಣಜಿ ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರಾಗಿದ್ದು, ಪಂದ್ಯಾವಳಿಯನ್ನು ೧,೧೬೦ ರನ್‌ಗಳೊಂದಿಗೆ ಮುಗಿಸಿ ಸ್ಮರಣೀಯಗೊಳಿಸಿದರು.[೧೧]
೨೦೧೮ ರ ಜನವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಖರೀದಿಸಿತು.[೧೨] ಫೆಬ್ರವರಿ ೨೦೧೮ ರಲ್ಲಿ ಅವರು, ೨೦೧೭-೧೮ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ ೭೨೩ ರನ್ ಗಳಿಸಿ ಹೆಚ್ಚು ರನ್ ಗಳಿಸಿದವರಾಗಿ ಗುರುತಿಸಲ್ಪಟ್ಟರು.[೧೩] ೨೦೧೭-೧೮ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅವರು ಎಲ್ಲಾ ಸ್ವರೂಪಗಳಲ್ಲಿ ಒಟ್ಟು ೨,೧೪೧ ರನ್ ಗಳಿಸಿದ್ದರು. ಇದು ಭಾರತೀಯ ದೇಶೀಯ ಋತುವಿನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಮೊತ್ತವಾಗಿದೆ.[೧೪] ಜೂನ್ ೨೦೧೮ ರಲ್ಲಿ, ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡುವ ಮಾಧವರಾವ್ ಸಿಂಧಿಯಾ ಪ್ರಶಸ್ತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿತು.[೧೫]
ಅವರು ೨೦೧೮-೧೯ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಏಳು ಪಂದ್ಯಗಳಲ್ಲಿ ೨೫೧ ರನ್ ಗಳಿಸಿದ್ದಾರೆ.[೧೬]
ಸೆಪ್ಟೆಂಬರ್ ೨೦೧೮ ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು, ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.[೧೭] ಗಾಯದಿಂದಾಗಿ ಪೃಥ್ವಿ ಶಾ ಭಾರತ ತಂಡದಿಂದ ಹೊರಗುಳಿದ ನಂತರ, ಡಿಸೆಂಬರ್ ೨೦೧೮ ರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡಕ್ಕೆ ಅವರನ್ನು ಸೇರಿಸಲಾಯಿತು.[೧೮] ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ, ೨೬ ಡಿಸೆಂಬರ್ ೨೦೧೮ ರಂದು ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ಅವರು, ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ಎಪ್ಪತ್ತಾರು ರನ್ ಗಳಿಸಿರು.[೧೯] ೧೯೪೭ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ದತ್ತು ಫಡ್ಕರ್ ಅವರು ನಿರ್ಮಿಸಿದ ೫೧ ರನ್‌ಗಳ ದಾಖಲೆಯನ್ನು ಮೀರಿ ಆಸ್ಟ್ರೇಲಿಯಾದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯವೊಂದರಲ್ಲಿ ಇದು ಭಾರತೀಯ ಕ್ರಿಕೆಟಿಗರ ಅತ್ಯಧಿಕ ಸ್ಕೋರ್ ಆಗಿದೆ.[೨೦][೨೧]
ಜುಲೈ ೨೦೧೯ ರಲ್ಲಿ, ಅವರನ್ನು ೨೦೧೯ ರ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ ತಂಡಕ್ಕೆ ಸೇರಿಸಲಾಯಿತು. ಗಾಯದಿಂದಾಗಿ ಟೂರ್ನಿಯ ಉಳಿದ ಭಾಗಗಳಿಂದ ಹೊರಗುಳಿದಿದ್ದ ವಿಜಯ್ ಶಂಕರ್ ಅವರ ಬದಲಿಗೆ ಇವರನ್ನು ಸೇರಿಸಲಾಗಿತ್ತು.[೨೨]
ಅಕ್ಟೋಬರ್ ೨೦೧೯ ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಅಗರ್ವಾಲ್ ರವರು ಅಂತರ್ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದರು.[೨೩] ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ೩೭೧ ಎಸೆತಗಳಿಂದ, ೨೩ ಬೌಂಡರಿ ಮತ್ತು ೬ ಸಿಕ್ಸರ್ ಗಳೊಂದಿಗೆ ೨೧೫ ರನ್ ಗಳಿಸಿ ಔಟಾದರು. ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ್ದರು.[೨೪]
ಅಗರ್ವಾಲ್ ರವರು ವಿಪಶ್ಯಾನನ ಧ್ಯಾನ ತಂತ್ರವನ್ನು ಅಭ್ಯಾಸ ಮಾಡುತ್ತಾರೆ. ಅವರಿಗೆ ಇದನ್ನು ಅವರ ತಂದೆ ಅನುರಾಗ್ ಅಗರ್ವಾಲ್ ರವರು ಪರಿಚಯಿಸಿರುತ್ತಾರೆ. ಜೋಸೆಫ್ ಮರ್ಫಿ ರವರ ಪುಸ್ತಕ ದಿ ಪವರ್ ಆಫ್ ದಿ ಸಬ್‌ಕಾನ್ಷಿಯಸ್ ಮೈಂಡ್‌ನಿಂದ ಅವರು ಸ್ಫೂರ್ತಿ ಪಡೆದಿದ್ದಾರೆ ಎನ್ನಲಾಗಿದೆ.[೨೫][೨೬]
೨೦೧೮ ರ ಜನವರಿಯಲ್ಲಿ ಅಗರ್ವಾಲ್ ರವರು ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರ ಪುತ್ರಿ ಆಶಿತಾ ಸೂದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಅದೇ ವರ್ಷ ಜೂನ್ ತಿಂಗಳಲ್ಲಿ ಅವರನ್ನು ಮದುವೆಯಾದರು.[೨೭]