ಮಸ್ತ್ ಮಜಾ ಮಾಡಿ | |
---|---|
ಚಿತ್ರ:Mast Maja Maadi.png | |
ನಿರ್ದೇಶನ | ಆರ್. ಅನಂತ್ ರಾಜು |
ನಿರ್ಮಾಪಕ | ಸೌಂದರ್ಯ ಜಗದೀಶ್ |
ಪಾತ್ರವರ್ಗ | |
ಸಂಗೀತ | ಪಿ. ಬಿ. ಬಾಲಾಜಿ |
ಛಾಯಾಗ್ರಹಣ | ಎಂ. ಆರ್. ಸೀನು |
ಸಂಕಲನ | ತಿರುಪತಿ ರೆಡ್ಡಿ |
ಬಿಡುಗಡೆಯಾಗಿದ್ದು |
|
ಅವಧಿ | ೧೬೦ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಮಸ್ತ್ ಮಜಾ ಮಾಡಿ ೨೦೦೮ ರ ಕನ್ನಡ ಹಾಸ್ಯ ಚಲನಚಿತ್ರವಾಗಿದ್ದು, ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್, ನಾಗ ಕಿರಣ್, ಕೋಮಲ್ ಮತ್ತು ಜೆನ್ನಿಫರ್ ಕೊತ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್. ಅನಂತ್ ರಾಜು ನಿರ್ದೇಶಿಸಿದ್ದಾರೆ. ಚಿತ್ರವು ಹಿನ್ನೆಲೆ ಸಂಗೀತವನ್ನು ಪಿಬಿ ಬಾಲಾಜಿ ಸಂಯೋಜಿಸಿದ್ದಾರೆ ಮತ್ತು ಕೆ. ರಾಮ್ ನಾರಾಯಣ್ ಅವರ ಸಾಹಿತ್ಯವನ್ನು ಒಳಗೊಂಡಿದೆ.ಇದು ೨೦೦೭ ರ ಹಿಂದಿ ಹಾಸ್ಯ ಚಲನಚಿತ್ರ ಧಮಾಲ್ ನ ರಿಮೇಕ್ ಆಗಿದ್ದು, ಆರಂಭಿಕ ದೃಶ್ಯಗಳನ್ನು ೨೦೦೬ ರ ಹಾಸ್ಯ ಚಲನಚಿತ್ರ ಗೋಲ್ಮಾಲ್: ಫನ್ ಅನ್ಲಿಮಿಟೆಡ್ ನಿಂದ ತೆಗೆದುಕೊಳ್ಳಲಾಗಿದೆ.[೨][೩]
ಮಸ್ತ್ ಮಜಾ ಮಾಡಿ ಊಟಿಯ ಸಸ್ಯೋದ್ಯಾನದ ಜಾಗದಲ್ಲಿ ನಿಧಿಯನ್ನು ಹುಡುಕುವ ನಾಲ್ವರು ನಿರುದ್ಯೋಗಿ ಯುವಕರ ಕಥೆಯಾಗಿದೆ. ಇವರಲ್ಲದೆ ಒಬ್ಬ ಪೊಲೀಸ್ ಅಧಿಕಾರಿಯೂ ನಿಧಿಯ ಮೇಲೆ ಕಣ್ಣಿಟ್ಟಿದ್ದಾನೆ. ನಿಧಿಯನ್ನು ತಮ್ಮದಾಗಿಸಿಕೊಳ್ಳಲು ಯುವಕರ ಪ್ರಯತ್ನಗಳು ಮತ್ತು ಅವರ ಕಾರ್ಯಾಚರಣೆಯಲ್ಲಿ ಅವರು ಎದುರಿಸುವ ಅಡಚಣೆಗಳು ಕಥೆಯ ತಿರುಳನ್ನು ರೂಪಿಸುತ್ತವೆ [೪]
"ಶಕಲಕ ಭೂಮ್" ಹಾಡಿನಲ್ಲಿ ಕೆಳಗಿನ ನಟ-ನಟಿಯರು ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಪಿಬಿ ಬಾಲಾಜಿ ಸಂಗೀತ ಸಂಯೋಜಿಸಿದ್ದು, "ಅಕ್ಷಯ ಆಡಿಯೋ" ಬಿಡುಗಡೆ ಮಾಡಿದೆ.
ಸಂ. | ಶೀರ್ಷಿಕೆ | ಸಾಹಿತ್ಯ | ಗಾಯಕ(ರು) | ಅವಧಿ |
---|---|---|---|---|
1. | "ಚೋರಿ ಚೋರಿ" | ರಾಮ್ ನಾರಾಯಣ್ | ಕಾರ್ತಿಕ್, ಚಿನ್ಮಯಿ | 5:10 |
2. | "ಝಣ ಝಣ ಕಾಂಚನ" | ರಾಮ್ ನಾರಾಯಣ್ | ಬೆನ್ನಿ ದಯಾಳ್, ಕ್ರಿಶ್, ಪಿಬಿ ಬಾಲಾಜಿ, ಸುವಿ | 6:10 |
3. | "ಓಟ ಓಟ" | ರಾಮ್ ನಾರಾಯಣ್ | ಟಿಪ್ಪು, ಗೋಪಾಲ್ ಶರ್ಮಾ, ಪಿಬಿ ಬಾಲಾಜಿ, ಜಾನಕಿ ಅಯ್ಯರ್ | 4:53 |
4. | "ಓಟ ಓಟ (ಹೆಣ್ಣು)" | ರಾಮ್ ನಾರಾಯಣ್ | ಸುವಿ | 5:08 |
5. | "ಶಕಲಕ ಭೂಮ್" | ರಾಮ್ ನಾರಾಯಣ್ | ಬೆನ್ನಿ ದಯಾಳ್, ಜಾನಕಿ ಅಯ್ಯರ್ | 6:05 |
ಒಟ್ಟು ಅವಧಿ: | 27:26 |
ಮಸ್ತ್ ಮಜಾ ಮಾಡಿ ೧೨ ಡಿಸೆಂಬರ್ ೨೦೦೮ ರಂದು ಭಾರತದಲ್ಲಿ ಬಿಡುಗಡೆಯಾಯಿತು.
"ನಿಮ್ಮ ಥಿಂಕಿಂಗ್ ಕ್ಯಾಪ್ ಪಕ್ಕಕ್ಕಿಟ್ಟು ಸುಮ್ಮನೆ ಎಂಜಾಯ್ ಮಾಡಿ" ಎಂದು ಬೆಂಗಳೂರು ಮಿರರ್ ಅಭಿಪ್ರಾಯಪಟ್ಟಿದೆ.[೫] ರೆಡಿಫ್ ಡಾಟ್ ಕಾಮ್ ನ ಆರ್.ಜಿ.ವಿಜಯಸಾರಥಿಯವರು "ಮಸ್ತ್ ಮಜಾ ಮಾಡಿ,ನಿಮಗೆ ಕಾಮಿಡಿ ಇಷ್ಟವಿದ್ದರೆ ಟೈಂಪಾಸ್ ಚಿತ್ರ" ಎಂದು ಬರೆದಿದ್ದಾರೆ.[೬]