ಮಹಾನಂದಿನ್ | |
---|---|
ಶಿಶುನಾಗ ಅರಸ | |
ಆಳ್ವಿಕೆ | c. 367 – c. 345 BCE |
ಪೂರ್ವಾಧಿಕಾರಿ | ನಂದಿವರ್ಧನ |
ಉತ್ತರಾಧಿಕಾರಿ | ಮಹಾಪದ್ಮ ನಂದ |
ಸಂತಾನ | |
ಮಹಾಪದ್ಮ ನಂದ | |
ತಂದೆ | ನಂದಿವರ್ಧನ |
ಮಹಾನಂದಿನ್ ಭಾರತೀಯ ಉಪಖಂಡದ ಶಿಶುನಾಗ ರಾಜವಂಶದ ಒಬ್ಬ ರಾಜನಾಗಿದ್ದನು. ಈ ರಾಜವಂಶವು ಪ್ರಾಚೀನ ಭಾರತದ ಪಾಟಲಿಪುತ್ರ ನಗರದ ಸುತ್ತಲಿನ ಭಾಗಗಳನ್ನು ಆಳುತ್ತಿತ್ತು (ಆಧುನಿಕ ಪಟ್ನಾ, ಬಿಹಾರ್).
ಪುರಾಣಗಳು ನಂದಿವರ್ಧನನನ್ನು ಒಂಭತ್ತನೇ ಶಿಶುನಾಗ ಅರಸನೆಂದು ಮತ್ತು ಅವನ ಮಗ ಮಹಾನಂದಿನ್‍ನನ್ನು ಹತ್ತನೇ ಮತ್ತು ಕೊನೆಯ ಅರಸನೆಂದು ಪಟ್ಟಿ ಮಾಡುತ್ತವೆ.[೧] ಮಹಾನಂದಿನ್‍ನನ್ನು ಒಬ್ಬ ಶೂದ್ರ ಹೆಂಡತಿಗೆ ಹುಟ್ಟಿದ ಅವನ ಹಾದರದ ಮಗ ಮಹಾಪದ್ಮ ನಂದನು ಕೊಂದನು.[೨]