ಒಲಂಪಿಕ್ ಪದಕ ಪಟ್ಟಿ | ||
ಪುರುಷರ ಕ್ಷೇತ್ರ ಹಾಕಿ | ||
---|---|---|
ಒಲಂಪಿಕ್ ಆಟಗಳು | ||
೧೯೮೦ ಮಾಸ್ಕೋ | ತಂಡ |
ಮಹಾರಾಜ್ ಕ್ರಿಶನ್ ಕೌಶಿಕ್ (೨ ಮೇ ೧೯೫೫ - ೮ ಮೇ ೨೦೨೧) ಅವರು ಭಾರತ ಪುರುಷರ ರಾಷ್ಟ್ರೀಯ ಹಾಕಿ ತಂಡದ ಸದಸ್ಯರಾಗಿದ್ದರು ಮತ್ತು ಭಾರತ ಮಹಿಳಾ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರಾಗಿದ್ದರು.
೧೯೮೦ ರ ಬೇಸಿಗೆಯಲ್ಲಿ, ಮಾಸ್ಕೋದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅವರು ತಂಡದ ಸದಸ್ಯರಾಗಿದ್ದರು. ೧೯೯೮ ರಲ್ಲಿ ಅವರು ಅರ್ಜುನ ಪ್ರಶಸ್ತಿ ಪಡೆದರು. ಅವರು ದಿ ಗೋಲ್ಡನ್ ಬೂಟ್ ಎಂಬ ಪುಸ್ತಕವನ್ನು ಬರೆದಿದ್ದಾರೆ.[೧] ತರಬೇತುದಾರರಾಗಿ ಭಾರತೀಯ ಹಾಕಿಗೆ ಅವರು ನೀಡಿದ ಕೊಡುಗೆಗಾಗಿ ೨೦೦೨ ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದರು. ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ, ಅವರು ಭಾರತದ ನವದೆಹಲಿಯಲ್ಲಿ ಕೋವಿಡ್-೧೯ ಗೆ ತುತ್ತಾಗಿ ೮ ಮೇ ೨೦೨೧ ರಂದು ನಿಧನರಾದರು.[೨][೩]
ಕೌಶಿಕ್ ೨೦೦೭ ರ ಬಾಲಿವುಡ್ ಚಲನಚಿತ್ರ ಚಕ್ ದೇ ಇಂಡಿಯಾದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಚಕ್ ದೇ ಇಂಡಿಯಾ ಚಿತ್ರಕಥೆಯನ್ನು ಬಾಲಿವುಡ್ ಚಿತ್ರಕಥೆಗಾರ ಜೈದೀಪ್ ಸಹಾನಿ ಬರೆದರು. ೨೦೦೨ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ರಾಷ್ಟ್ರೀಯ ಕ್ಷೇತ್ರ ಹಾಕಿ ತಂಡವು ಚಿನ್ನದ ಪದಕ ಗೆದ್ದ ಬಗ್ಗೆ ಸಣ್ಣ ಲೇಖನವನ್ನು ಸಹಾನಿಯವರು ಓದಿದ್ದರು ಮತ್ತು ಈ ಪ್ರಮೇಯವು ಆಸಕ್ತಿದಾಯಕ ಚಿತ್ರವಾಗುತ್ತದೆ ಎಂದು ಭಾವಿಸಿದ್ದರು. ಹಾಕಿ ಆಟಗಾರ ಮಿರ್ ರಂಜನ್ ನೇಗಿ(೧೯೮೨ ರ ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಎಸೆಯುವ ಆರೋಪ ಹೊರಿಸಲಾಗಿತ್ತು)ಯವರನ್ನು ಮಾಧ್ಯಮಗಳಲ್ಲಿ ಕಬೀರ್ ಖಾನ್ ಜೊತೆ ಹೋಲಿಸಲಾಗುತ್ತದೆ.[೪][೫][೬][೭][೮]
"ಚಕ್ ದೇ" ಕಥೆಯು ಮಾಜಿ ಮುಖ್ಯ ರಾಷ್ಟ್ರೀಯ ತರಬೇತುದಾರ ಮಹಾರಾಜ್ ಕ್ರಿಶನ್ ಕೌಶಿಕ್ ಮತ್ತು ಅವರ ಭಾರತೀಯ ಮಹಿಳಾ ಹಾಕಿ ತಂಡವು ಕಾಮನ್‌ವೆಲ್ತ್ ಮತ್ತು ಇತರ ಹಲವು ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ನೈಜ ಜೀವನದ ಕಥೆಯಿಂದ ಆಳವಾಗಿ ಸ್ಫೂರ್ತಿ ಪಡೆದಿದೆ ಎಂದು ಸಾಹ್ನಿ ತಿಳಿಸಿದ್ದಾರೆ.[೯]
ಕೌಶಿಕ್ ಮತ್ತು ನೇಗಿ ಇಬ್ಬರೂ ಸಾಹ್ನಿ ಅವರನ್ನು ಸಂಪರ್ಕಿಸಿದ ನಂತರ ಚಿತ್ರದ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದರು. ಸಾಹ್ನಿ ಮೊದಲು ಕೌಶಿಕ್ ಅವರನ್ನು ಭೇಟಿಯಾದರು ಮತ್ತು "ಎಂ.ಕೆ. ಕೌಶಿಕ್ ಮತ್ತು ಅವರ ಹುಡುಗಿಯರು ನಮಗೆ ಹಾಕಿಯ ಬಗ್ಗೆ ತಿಳಿದಿರುವ ಎಲ್ಲವನ್ನೂ ಕಲಿಸಿದರು. ನಂತರ ಅವರು ನೇಗಿಯನ್ನು ನಮಗೆ ಶಿಫಾರಸು ಮಾಡಿದರು, ಏಕೆಂದರೆ ನಾವು ಬರೆದು ಮುಗಿಸಿದಾಗ ಮತ್ತು ಕಾಸ್ಟಿಂಗ್ ಮುಗಿಸಿದಾಗ, ಹುಡುಗಿಯರಿಗೆ ತರಬೇತಿ ನೀಡಲು ನಮಗೆ ಯಾರಾದರೂ ಬೇಕಾಗಿದ್ದರು. ಆಗ ಹುಡುಗಿಯರಿಗೆ ತರಬೇತಿ ನೀಡಲು ನೇಗಿ ಹಾಕಿ ಆಟಗಾರರ ತಂಡವನ್ನು ಒಟ್ಟುಗೂಡಿಸಿದರು" ಎಂದು ಹೇಳಿದರು.[೧೦]
ಅದೇ ಸಂದರ್ಶನದಲ್ಲಿ ಕೌಶಿಕ್‍ರವರು "ಶಿಬಿರವನ್ನು ಹೇಗೆ ನಡೆಸಲಾಗುತ್ತದೆ, ಹುಡುಗಿಯರು ಯಾವ ವಿವಿಧ ಹಿನ್ನೆಲೆ ಮತ್ತು ಸಂಸ್ಕೃತಿಗಳಿಂದ ಬಂದವರು ಮತ್ತು ಅವರು ಒಳಗೊಂಡಿರುವ ಮಾನಸಿಕ ಅಂಶಗಳಿಂದ ಪ್ರಾರಂಭಿಸಿ ಆಟದ ಬಗ್ಗೆ ಎಲ್ಲವನ್ನೂ ನಾನು ಅವರಿಗೆ ಕಲಿಸಿದೆ" ಎಂದರು. ಹಾಗೆಯೇ ತರಬೇತುದಾರನು ವಿವಿಧ ರಾಜ್ಯಗಳು ಮತ್ತು ತಂಡಗಳ ಹುಡುಗಿಯರನ್ನು ಆಯ್ಕೆ ಮಾಡಲು ಹೇಗೆ ಒತ್ತಡವನ್ನು ಎದುರಿಸುತ್ತಾರೆ ಎನ್ನುವುದನ್ನು ತಿಳಿಸಿದರು. [೧೦]
ಸಾಹ್ನಿ ನೇಗಿ ಅವರನ್ನು ಸಂಪರ್ಕಿಸಿ, ಹಾಕಿ ತಂಡದ ಚಿತ್ರದಲ್ಲಿ ನಟಿಸುವ ನಟರಿಗೆ ತರಬೇತಿ ನೀಡುವಂತೆ ಕೇಳಿಕೊಂಡರು. ನೇಗಿ ಇದಕ್ಕೆ ಒಪ್ಪಿಕೊಂಡರು ಮತ್ತು ನಾಲ್ಕು ತಿಂಗಳ ಕಾಲ ಹುಡುಗಿಯರು ಮತ್ತು ಶಾರುಖ್ ಖಾನ್ ಇಬ್ಬರಿಗೂ ತರಬೇತಿ ನೀಡಿದರು. [೧೧]
{{cite web}}
: CS1 maint: unfit URL (link)
{{cite web}}
: CS1 maint: unfit URL (link)