.ಮಾಯಸಂದ್ರ ಎಂಬ ಹೆಸರು ಮಾಯಮ್ಮ ಎಂಬ ಗ್ರಾಮ ದೇವತೆಯ ಹೆಸರಿನಿಂದ ಉತ್ಪನ್ನವಾಗಿದೆ.ಹಿಂದಿನ ಕಾಲದಲ್ಲಿ ಈ ಊರನ್ನು ಮಾಯಮ್ಮನಸಂದ್ರ ಎಂದು ಕರೆಯುತ್ತಿದ್ದರಂತೆ.ಇಲ್ಲಿ ಸಂದ್ರ ಎಂಬ ಶಬ್ದವು ವಾಸಸ್ಥಾನ ಎಂಬ ಅರ್ಥವನ್ನು ಸೂಚಿಸುತ್ತದೆ.ಮಾಯಮ್ಮ ಎಂಬ ಗ್ರಾಮ ದೇವತೆಯು ನೆಲೆಸಿದ ಸ್ಥಳ ಎಂಬ ಅರ್ಥವನ್ನು ಮಾಯಸಂದ್ರ ಎಂಬ ಊರಿನ ಹೆಸರು ನೀಡುತ್ತದೆ.