ಮಾರುಕಟ್ಟೆ ಮೌಲ್ಯನಿರ್ಣಯ

ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಮಾರುಕಟ್ಟೆ ಮೌಲ್ಯನಿರ್ಣಯ ಅಥವಾ ನ್ಯಾಯೋಚಿತ ಮೌಲ್ಯದ ಲೆಕ್ಕಗಾರಿಕೆ ಎಂಬುದು ಸ್ವತ್ತು ಅಥವಾ ಹೊಣೆಗಾರಿಕೆಯ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆಧರಿಸಿದ ಒಂದು ಸ್ವತ್ತು ಅಥವಾ ಹೊಣೆಗಾರಿಕೆಯ ಮೌಲ್ಯಕ್ಕೆ ಸಂಬಂಧಿಸಿರುವ, ಅಥವಾ ಅದೇ ರೀತಿಯ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿರುವ, ಅಥವಾ ವಸ್ತುನಿಷ್ಠವಾಗಿ ಮೌಲ್ಯ ನಿರ್ಣಯಿಸಲ್ಪಟ್ಟ ಮತ್ತೊಂದು "ನ್ಯಾಯೋಚಿತ" ಮೌಲ್ಯವನ್ನು ಆಧರಿಸಿರುವ ಲೆಕ್ಕಗಾರಿಕೆಗೆ ಉಲ್ಲೇಖಿಸಲ್ಪಡುತ್ತದೆ. ನ್ಯಾಯೋಚಿತ ಮೌಲ್ಯದ ಲೆಕ್ಕಗಾರಿಕೆಯು 1990ರ ದಶಕದ ಆರಂಭದಿಂದಲೂ USನ ಸಾರ್ವತ್ರಿಕವಾಗಿ ಸಮ್ಮತಿಸಲಾದ ಲೆಕ್ಕಗಾರಿಕೆಯ ತತ್ತ್ವಗಳ (ಜೆನರಲಿ ಅಕ್ಸೆಪ್ಟೆಡ್‌ ಅಕೌಂಟಿಂಗ್‌ ಪ್ರಿನ್ಸಿಪಲ್ಸ್‌-GAAP) ಒಂದು ಭಾಗವಾಗಿದೆ, ಮತ್ತು ಅಲ್ಲಿಂದೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಅದು ಬಳಕೆಗೊಳಗಾಗುತ್ತಾ ಬಂದಿದೆ. ಮಾರುಕಟ್ಟೆಯ ಸ್ಥಿತಿಗತಿಗಳು ಬದಲಾದಂತೆ, ಮಾರುಕಟ್ಟೆ ಮೌಲ್ಯನಿರ್ಣಯದ ಲೆಕ್ಕಗಾರಿಕೆಯು ಆಯವ್ಯಯ ಪಟ್ಟಿಯ ಮೇಲಿನ ಮೌಲ್ಯಗಳು ಆಗಿಂದಾಗ್ಗೆ ಬದಲಾವಣೆಯಾಗುವಂತೆ ಮಾಡಬಲ್ಲದು. ಇದಕ್ಕೆ ಪ್ರತಿಯಾಗಿ, ಒಂದು ಸ್ವತ್ತು ಅಥವಾ ಹೊಣೆಗಾರಿಕೆಯ ಮೂಲ ವೆಚ್ಚ/ಬೆಲೆಯ ಮೇಲೆ ಆಧರಿಸಲ್ಪಟ್ಟಿರುವ ಕಡತದ ಮೌಲ್ಯವು ಅತ್ಯಂತ ಸ್ಥಿರವಾಗಿರುತ್ತದೆಯಾದರೂ, ಅದು ಹಳತಾದದ್ದಾಗಬಹುದು ಮತ್ತು ಕರಾರುವಾಕ್ಕಾಗಿಲ್ಲದ್ದಾಗಬಹುದು. ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ "ಮೂಲಭೂತ" ಮೌಲ್ಯಗಳಿಂದ ಮಾರುಕಟ್ಟೆ ಬೆಲೆಗಳು ಒಂದುವೇಳೆ ಮಾರ್ಗವನ್ನು ಬದಲಾಯಿಸಿದಲ್ಲಿ, ಮಾರುಕಟ್ಟೆ ಮೌಲ್ಯನಿರ್ಣಯದ ಲೆಕ್ಕಗಾರಿಕೆಯೂ ಸಹ ಕರಾರುವಾಕ್ಕಾಗಿಲ್ಲದ ಸ್ಥಿತಿಯನ್ನು ತಲುಪಬಹುದು. ಏಕೆಂದರೆ, ಪ್ರಾಯಶಃ ತಪ್ಪಾದ ಮಾಹಿತಿಯ ಕಾರಣದಿಂದಾಗಿ ಅಥವಾ ಅತಿಯಾದ-ಆಶಾವಾದ ಮತ್ತು ಅತಿಯಾದ-ನಿರಾಶಾವಾದದ ನಿರೀಕ್ಷೆಗಳ ಕಾರಣದಿಂದಾಗಿ, ಸ್ವತ್ತುಗಳಿಂದ ಬರುವ ಆದಾಯ ಹಾಗೂ ಹೊಣೆಗಾರಿಕೆಗಳಿಂದ ಬರುವ ವೆಚ್ಚಗಳ ಭವಿಷ್ಯದ ಮೌಲ್ಯವನ್ನು ಸಮಷ್ಟಿಯಲ್ಲಿ ಮತ್ತು ಕರಾರುವಾಕ್ಕಾಗಿ ಮೌಲ್ಯಮಾಪನ ಮಾಡಲು ಖರೀದಿದಾರರು ಹಾಗೂ ಮಾರಾಟಗಾರರು ಅಸಮರ್ಥರಾಗಬಹುದು.

ಇತಿಹಾಸ ಮತ್ತು ಅಭಿವೃದ್ಧಿ

[ಬದಲಾಯಿಸಿ]

ಮಾರುಕಟ್ಟೆ ಮೌಲ್ಯನಿರ್ಣಯ ದ ಪರಿಪಾಠವು ಲೆಕ್ಕಗಾರಿಕೆಯ ಒಂದು ಸಾಧನವಾಗಿ 20ನೇ ಶತಮಾನದಲ್ಲಿನ ಮುಮ್ಮಾರಿಕೆಯ ಸರಕುಗಳ ವಿನಿಮಯ ಕೇಂದ್ರಗಳಲ್ಲಿನ ವ್ಯಾಪಾರಿಗಳ ಸಮುದಾಯದಲ್ಲಿ ಮೊದಲಿಗೆ ಅಭಿವೃದ್ಧಿಪಡಿಸಲ್ಪಟ್ಟಿತು. ಸಾಂಪ್ರದಾಯಿಕ ವಿನಿಮಯ ವ್ಯಾಪಾರಗಾರಿಕೆಯ ವಿಭಾಗಗಳಿಂದ ದೂರವುಳಿದಿದ್ದ ದೊಡ್ಡ ಬ್ಯಾಂಕುಗಳು ಮತ್ತು ಸಂಸ್ಥೆಗಳಿಗೆ 1980ರ ದಶಕದವರೆಗೆ ಈ ಪರಿಪಾಠವು ಹಬ್ಬಿರಲಿಲ್ಲ, ಮತ್ತು 1990ರ ದಶಕದಲ್ಲಿ ಪ್ರಾರಂಭಗೊಂಡ ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯು ಹಗರಣಗಳನ್ನು ಉಂಟುಮಾಡಲು ಶುರುಮಾಡಿತು.

ಮೂಲ ಪರಿಪಾಠವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಓರ್ವ ಮುಮ್ಮಾರಿಕೆಯ ಸರಕುಗಳ ವ್ಯಾಪಾರಿಯು ಒಂದು ಸ್ಥಾನವನ್ನು ಪಡೆಯುವಾಗ ವಿನಿಮಯ ಕೇಂದ್ರದಲ್ಲಿ ಒಂದು "ಠೇವಣಿ ಹಣ" ಎಂದು ಕರೆಯಲ್ಪಡುವ ಹಣವನ್ನು ಠೇವಣಿಯಾಗಿ ಹೂಡುತ್ತಾನೆ ಎಂಬುದನ್ನು ಪರಿಗಣಿಸಿ. ನಷ್ಟಕ್ಕೆ ಪ್ರತಿಯಾಗಿ ವಿನಿಮಯ ಕೇಂದ್ರವನ್ನು ರಕ್ಷಿಸಿಕೊಳ್ಳುವ ಆಶಯ ಇದರ ಹಿಂದಿರುತ್ತದೆ. ಪ್ರತಿ ವ್ಯಾಪಾರಗಾರಿಕೆಯ ದಿನದ ಅಂತ್ಯದ ವೇಳೆಗೆ, ಕರಾರು ತನ್ನ ಪ್ರಸಕ್ತ ಮಾರುಕಟ್ಟೆ ಮೌಲ್ಯದಲ್ಲಿ ಮೌಲ್ಯನಿರ್ಣಯಕ್ಕೆ ಒಳಗಾಗಿರುತ್ತದೆ. ಒಂದು ವೇಳೆ ವ್ಯಾಪಾರಿಯು ವ್ಯವಹಾರವೊಂದರ ಗೆಲ್ಲುವ ಪಕ್ಷದಲ್ಲಿದ್ದರೆ, ಆ ದಿನದಂದು ಅವನ ಕರಾರು ಮೌಲ್ಯದಲ್ಲಿ ಹೆಚ್ಚಳ ಕಂಡಿದೆ ಎಂದರ್ಥ, ಮತ್ತು ವಿನಿಮಯ ಕೇಂದ್ರವು ಈ ಲಾಭವನ್ನು ಅವನ ಖಾತೆಗೆ ಪಾವತಿಸುತ್ತದೆ. ಮತ್ತೊಂದೆಡೆ, ಒಂದು ವೇಳೆ ಅವನ ಕರಾರಿನ ಮಾರುಕಟ್ಟೆ ಬೆಲೆಯು ಕುಸಿದಲ್ಲಿ, ಠೇವಣಿ ಇಡಲ್ಪಟ್ಟ ಠೇವಣಿ ಹಣವನ್ನು ಹೊಂದಿರುವ ಅವನ ಖಾತೆಗೆ ವಿನಿಮಯ ಕೇಂದ್ರವು ಖರ್ಚು ವಿಧಿಸುತ್ತದೆ. ಒಂದು ವೇಳೆ ಈ ಖಾತೆಗಳ ಶಿಲ್ಕುಮೊತ್ತವು ಸ್ಥಾನವನ್ನು ಕಾಯ್ದುಕೊಂಡು ಹೋಗುವಲ್ಲಿ ಅಗತ್ಯವಾಗಿರುವ ಠೇವಣಿಗಿಂತ ಕಡಿಮೆಯಾಗಿರುವುದು ಕಂಡುಬಂದಲ್ಲಿ, ಸದರಿ ವ್ಯಾಪಾರಿಯು ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ಖಾತೆಗೆ ತತ್‌ಕ್ಷಣದಲ್ಲಿ ಹೆಚ್ಚುವರಿ ಠೇವಣಿ ಹಣವನ್ನು ಪಾವತಿಸುವುದು ಅತ್ಯಗತ್ಯವಾಗಿರುತ್ತದೆ (ಒಂದು "ಠೇವಣಿ ಹಣದ ಕರೆ" ಎಂದು ಇದಕ್ಕೆ ಹೆಸರು). ಒಂದು ಉದಾಹರಣೆಯಾಗಿ ಹೇಳುವುದಾದರೆ, ಚಿಕಾಗೊ ವಾಣಿಜ್ಯ ವಿನಿಮಯ ಕೇಂದ್ರವು ಸದರಿ ಪ್ರಕ್ರಿಯೆಯನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡುಹೋಗಿ, ದಿನವೊಂದಕ್ಕೆ ಎರಡು ಬಾರಿ , ಅಂದರೆ ಬೆಳಗ್ಗೆ 10:00 ಗಂಟೆ ಮತ್ತು ಮಧ್ಯಾಹ್ನ 2:00 ಗಂಟೆಗೆ ಸ್ಥಾನಗಳ ಕುರಿತಾದ ಮೌಲ್ಯನಿರ್ಣಯಗಳನ್ನು ಮಾರುಕಟ್ಟೆಗೆ ತಿಳಿಸುತ್ತದೆ.[]

ಮತ್ತೊಂದೆಡೆ, ಪ್ರತ್ಯಕ್ಷವಾದ (OTC) ಉತ್ಪನ್ನಗಳು ಖರೀದಿದಾರರು ಹಾಗೂ ಮಾರಾಟಗಾರರ ನಡುವಿನ ಸೂತ್ರಾಧಾರಿತ ಹಣಕಾಸಿನ ಕರಾರುಗಳಾಗಿದ್ದು ವಿನಿಮಯ ಕೇಂದ್ರಗಳಲ್ಲಿ ಮಾರಾಟವಾಗುವುದಿಲ್ಲವಾದ್ದರಿಂದ, ಯಾವುದೇ ಸಕ್ರಿಯ, ನಿಯಂತ್ರಿತ ಮಾರುಕಟ್ಟೆ ವ್ಯಾಪಾರಗಾರಿಕೆಯಿಂದ ಅವುಗಳ ಮಾರುಕಟ್ಟೆ ಬೆಲೆಗಳು ಪ್ರಮಾಣೀಕರಿಸಲ್ಪಡುವುದಿಲ್ಲ. ಆದ್ದರಿಂದ, ಮಾರುಕಟ್ಟೆ ಮೌಲ್ಯಗಳು ವಸ್ತುನಿಷ್ಠವಾಗಿ ನಿರ್ಣಯಿಸಲ್ಪಡುವುದಿಲ್ಲ ಅಥವಾ ಸರಾಗವಾಗಿ ಲಭ್ಯವಾಗುವುದಿಲ್ಲ (ಉತ್ಪನ್ನ ಕರಾರುಗಳ ಖರೀದಿದಾರರಿಗೆ ವಾಡಿಕೆಯಂತೆ ಕಂಪ್ಯೂಟರ್‌‌ ಕಾರ್ಯಸೂಚಿಗಳನ್ನು ಒದಗಿಸಲಾಗುತ್ತದೆ. ಈ ಕಾರ್ಯಸೂಚಿಗಳು, ಸಕ್ರಿಯವಾದ ಮಾರುಕಟ್ಟೆಗಳು ಹಾಗೂ ಒದಗಿಸಲ್ಪಟ್ಟ ಸೂತ್ರಗಳಿಂದ ಪ್ರದಾನ ಮಾಡಲಾದ ದತ್ತಾಂಶದ ಆಧಾರದ ಮೇಲೆ ಮಾರುಕಟ್ಟೆ ಮೌಲ್ಯಗಳನ್ನು ಲೆಕ್ಕಾಚಾರ ಮಾಡುತ್ತವೆ). ತಮ್ಮ ಆರಂಭಿಕ ಬೆಳವಣಿಗೆಯ ಅವಧಿಯಲ್ಲಿ, ಬಡ್ಡಿದರದ ವಿನಿಮಯ ವಸ್ತುಗಳಂಥ OTC ಉತ್ಪನ್ನಗಳು ಆಗಿಂದಾಗ್ಗೆ ಮಾರುಕಟ್ಟೆಯ ಮೌಲ್ಯನಿರ್ಣಯಕ್ಕೆ ಒಳಗಾಗುತ್ತಿರಲಿಲ್ಲ. ಗಳಿಕೆಗಳು ಅಥವಾ ನಷ್ಟಗಳು ಅಂಗೀಕರಿಸಲ್ಪಡುವ ಅಥವಾ ಪಾವತಿಗಳು ವಿನಿಮಯಗೊಳ್ಳಲ್ಪಡುವ ಅವಧಿಯಾದ ತ್ರೈಮಾಸಿಕ ಅಥವಾ ವಾರ್ಷಿಕ ಅವಧಿಯ ಆಧಾರದ ಮೇಲೆ ವ್ಯವಹಾರಗಳು ನಿಯಂತ್ರಿಸಲ್ಪಡುತ್ತಿದ್ದವು.

ಮಾರುಕಟ್ಟೆ ಮೌಲ್ಯನಿರ್ಣಯಿಸುವ ಪರಿಪಾಠವು ಸಂಸ್ಥೆಗಳು ಮತ್ತು ಬ್ಯಾಂಕುಗಳಲ್ಲಿ ಸಿಕ್ಕಿಬಿದ್ದಂತೆ, ಇದು ಲೆಕ್ಕಗಾರಿಕೆಯ ಮೋಸವನ್ನು ಎಸಗಲೆಂದು ಇರುವ ಒಂದು ಪ್ರಲೋಭನಗೊಳಿಸುವ ಮಾರ್ಗವಾಗಿತ್ತು ಎಂಬುದನ್ನು ಅವುಗಳ ಪೈಕಿ ಕೆಲವೊಂದು ಪತ್ತೆಹಚ್ಚಿದಂತೆ ಕಂಡುಬಂತು. ಅದರಲ್ಲೂ ವಿಶೇಷವಾಗಿ, ಮಾರುಕಟ್ಟೆ ಬೆಲೆಯು ವಸ್ತುನಿಷ್ಠವಾಗಿ ನಿರ್ಣಯಿಸಲ್ಪಡದಿದ್ದಾಗ ಈ ಅಭಿಪ್ರಾಯಕ್ಕೆ ಪುಷ್ಟಿ ದೊರಕಿದಂತಾಗಿತ್ತು (ಏಕೆಂದರೆ ಅಲ್ಲಿ ಯಾವುದೇ ವಾಸ್ತವಿಕ ದೈನಂದಿನ ಮಾರುಕಟ್ಟೆ ಲಭ್ಯವಿರಲಿಲ್ಲ ಅಥವಾ ಕಚ್ಚಾ ತೈಲದ ಮುಮ್ಮಾರಿಕೆಯ ಸರಕುಗಳಂಥ ವ್ಯಾಪಾರದ ಸರಕುಗಳಿಂದ ಸ್ವತ್ತು ಮೌಲ್ಯವನ್ನು ಪಡೆಯಲಾಗುತ್ತಿತ್ತು), ಆದ್ದರಿಂದ ಹಣಕಾಸಿನ ಮಾದರಿ ರೂಪಿಸುವಿಕೆಯಿಂದ ಪಡೆಯಲಾದ ಅಂದಾಜಿಸಲ್ಪಟ್ಟ ಮೌಲ್ಯನಿರ್ಣಯಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕವಾದ ಅಥವಾ ಕೃತಕವಾದ ವಿಧಾನದಲ್ಲಿ ಸ್ವತ್ತುಗಳು 'ಮಾದರಿಯಾಗಿ ಮೌಲ್ಯನಿರ್ಣಯಿಸಲ್ಪಡುತ್ತಿದ್ದವು', ಮತ್ತು ಖೋಟಾ ಮೌಲ್ಯನಿರ್ಣಯಗಳನ್ನು ಸಾಧಿಸುವ ಸಲುವಾಗಿ ಕೆಲವೊಮ್ಮೆ ಕುಶಲತೆಯಿಂದ ಬಳಸುವ ಮಾರ್ಗವೊಂದರಲ್ಲಿ ಮೌಲ್ಯನಿರ್ಣಯಕ್ಕೆ ಒಳಗಾಗುತ್ತಿದ್ದವು. ನೋಡಿ: ಎನ್ರಾನ್‌ ಮತ್ತು ಎನ್ರಾನ್‌ ಹಗರಣ.

ಆಂತರಿಕ ಆದಾಯ ಸಂಹಿತೆಯ 475ನೇ ಕಲಮು ತೆರಿಗೆ ವಿಧಿಸುವಿಕೆಗೆ ಸಂಬಂಧಿಸಿದ ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯ ವಿಧಾನದ ನಿಯಮವನ್ನು ಹೊಂದಿದೆ. 475ನೇ ಕಲಮು ನಿಬಂಧಿಸುವ ಪ್ರಕಾರ, ಮಾರುಕಟ್ಟೆ ಮೌಲ್ಯನಿರ್ಣಯವನ್ನು ಆರಿಸುವ ಅರ್ಹತೆ ಪಡೆದ ಭದ್ರತೆಗಳು ವ್ಯವಹಾರಸ್ಥರು, ವರ್ಷದ ಕೊನೆಯ ವ್ಯವಹಾರದ ದಿನದಂದು ಸ್ವತ್ತು ಅದರ ನ್ಯಾಯೋಚಿತ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿ ಮಾರಾಟವಾಗಿದೆಯೇನೋ ಎಂಬಂತೆ ಗಳಿಕೆ ಅಥವಾ ನಷ್ಟವನ್ನು ಗುರುತಿಸುತ್ತಾರೆ, ಮತ್ತು ಯಾವುದೇ ಗಳಿಕೆ ಅಥವಾ ನಷ್ಟವನ್ನು ಆ ವರ್ಷದಲ್ಲಿ ಖಾತೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸದರಿ ಕಲಮು ತನ್ನ ನಿಬಂಧನೆಯನ್ನು ಮತ್ತೂ ಮುಂದುವರಿಸುತ್ತಾ, ವ್ಯಾಪಾರದ ಸರಕುಗಳಲ್ಲಿನ ವ್ಯವಹಾರಸ್ಥರು ಸಕ್ರಿಯವಾಗಿ ಮಾರಾಟಗೊಳ್ಳುವ ಯಾವುದೇ ವ್ಯಾಪಾರದ ಸರಕಿಗೆ (ಅಥವಾ ಅವುಗಳ ಉತ್ಪನ್ನಗಳಿಗೆ) ಸಂಬಂಧಿಸಿದಂತೆ ಮಾರುಕಟ್ಟೆ ಮೌಲ್ಯನಿರ್ಣಯದ ಉಪಚಾರ ಅಥವಾ ಪರಿಗಣನೆಯನ್ನು ಆಯ್ದುಕೊಳ್ಳಬಹುದಾಗಿದೆ ಎಂದು ತಿಳಿಸುತ್ತದೆ (ಅಂದರೆ, ಸದರಿ ಸಕ್ರಿಯವಾಗಿ ಮಾರಾಟಗೊಳ್ಳುವ ಸರಕಿಗೆ ಸಂಬಂಧಿಸಿದಂತೆ ಒಂದು ನೆಲೆಗೊಂಡ ಹಣಕಾಸಿನ ಮಾರುಕಟ್ಟೆಯಿದ್ದು, ಅದು ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ನಿರ್ಣಯಿಸಲು ಒಂದು ಸಮಂಜಸವಾದ ಆಧಾರವನ್ನು ಒದಗಿಸುತ್ತದೆ; ದಲ್ಲಾಳಿ/ವ್ಯವಹಾರಸ್ಥರಿಂದ ನಮೂದಿಸಲ್ಪಟ್ಟ ಪ್ರಸಾರ ಮಾಡುವ ಬೆಲೆ ಅಥವಾ ಇತ್ತೀಚಿನ ವ್ಯವಹಾರ ನಿರ್ವಹಣೆಗಳಿಂದ ಬಂದ ವಾಸ್ತವಿಕ ಬೆಲೆಗಳ ಮೂಲಕ ಇದು ಕಾರ್ಯಸಾಧ್ಯವಾಗುತ್ತದೆ).

ಸಾಲ ಮತ್ತು ಇಕ್ವಿಟಿ ಭದ್ರತೆಗಳಲ್ಲಿನ ನಿರ್ದಿಷ್ಟ ಹೂಡಿಕೆಗಳಿಗೆ ಸಂಬಂಧಿಸಿದ ಲೆಕ್ಕಗಾರಿಕೆ (1993ರ ಮೇ ತಿಂಗಳಲ್ಲಿ ಜಾರಿಯಾದದ್ದು)

ಸುಲಭವಾಗಿ ನಿರ್ಣಯಿಸಬಹುದಾದ ನ್ಯಾಯೋಚಿತ ಮೌಲ್ಯಗಳನ್ನು ಹೊಂದಿರುವ ಇಕ್ವಿಟಿ ಭದ್ರತೆಗಳಲ್ಲಿನ ಹೂಡಿಕೆಗಳಿಗೆ ಸಂಬಂಧಿಸಿದ ಮತ್ತು ಸಾಲ ಭದ್ರತೆಗಳಲ್ಲಿನ ಎಲ್ಲಾ ಹೂಡಿಕೆಗಳಿಗೆ ಸಂಬಂಧಿಸಿದ ಲೆಕ್ಕಗಾರಿಕೆ ಮತ್ತು ವರದಿಗಾರಿಕೆಯ ಕುರಿತು ಈ ಲೆಕ್ಕಪಟ್ಟಿಯು ಗಮನ ಹರಿಸುತ್ತದೆ. ಆ ಹೂಡಿಕೆಗಳು ಮೂರು ವರ್ಗಗಳಲ್ಲಿ ವರ್ಗೀಕರಿಸಲ್ಪಡಬೇಕಿದ್ದು, ಈ ಕೆಳಗಿನಂತೆ ಅವು ವಿವರಿಸಲ್ಪಟ್ಟಿವೆ:

  • ತೀರುವಳಿ ಸಮಯದವರೆಗೆ ಹಿಡಿದಿಟ್ಟುಕೊಳ್ಳುವ ಧನಾತ್ಮಕ ಆಶಯ ಹಾಗೂ ಸಾಮರ್ಥ್ಯವನ್ನು ಉದ್ಯಮವು ಹೊಂದುವಲ್ಲಿ ಕಾರಣವಾಗಿರುವ ಸಾಲ ಭದ್ರತೆಗಳು, ತೀರುವಳಿ ಸಮಯಕ್ಕಾಗಿ ಇಟ್ಟುಕೊಂಡ ಭದ್ರತೆಗಳು ಎಂಬುದಾಗಿ ವರ್ಗೀಕರಿಸಲ್ಪಟ್ಟಿವೆ ಮತ್ತು ಅವು ಮೂಲಬೆಲೆ ಕಳೆಯಲಾದ, ವೆಚ್ಚರಹಿತ ದುರ್ಬಲಗೊಳಿಸುವಿಕೆಯಲ್ಲಿ ಅವು ವರದಿಮಾಡಲ್ಪಟ್ಟಿವೆ.
  • ಸನಿಹದ ಅವಧಿಯಲ್ಲಿ ಅವನ್ನು ಮಾರಾಟ ಮಾಡಬೇಕೆಂಬ ಉದ್ದೇಶಕ್ಕಾಗಿ ಖರೀದಿಸಲಾದ ಮತ್ತು ಪ್ರಧಾನವಾಗಿ ಇಟ್ಟುಕೊಳ್ಳಲಾದ ಸಾಲ ಹಾಗೂ ಇಕ್ವಿಟಿ ಭದ್ರತೆಗಳು ವ್ಯಾಪಾರಗಾರಿಕೆ ಭದ್ರತೆಗಳಾಗಿ ವರ್ಗೀಕರಿಸಲ್ಪಟ್ಟಿವೆ ಮತ್ತು ಗಳಿಕೆಗಳಲ್ಲಿ ಸೇರಿಸಲ್ಪಟ್ಟಿರುವ, ಕೈಗೂಡದ ಅಥವಾ ಅಜ್ಞಾತವಾದ ಗಳಿಕೆಗಳು ಮತ್ತು ನಷ್ಟಗಳೊಂದಿಗಿನ ನ್ಯಾಯೋಚಿತ ಮೌಲ್ಯದಲ್ಲಿ ಅವು ವರದಿಮಾಡಲ್ಪಟ್ಟಿವೆ.
  • ತೀರುವಳಿ ಸಮಯಕ್ಕಾಗಿ ಇಟ್ಟುಕೊಂಡ ಭದ್ರತೆಗಳಂತಾಗಲೀ ಅಥವಾ ವ್ಯಾಪಾರಗಾರಿಕೆಯ ಭದ್ರತೆಗಳಂತಾಗಲೀ ವರ್ಗೀಕರಿಸಲ್ಪಡದ ಸಾಲ ಮತ್ತು ಇಕ್ವಿಟಿ ಭದ್ರತೆಗಳು ಮಾರಾಟಕ್ಕಾಗಿ-ಲಭ್ಯವಿರುವ ಭದ್ರತೆಗಳಾಗಿ ವರ್ಗೀಕರಿಸಲ್ಪಟ್ಟಿವೆ ಮತ್ತು ಗಳಿಕೆಗಳಿಂದ ಹೊರಗಿಡಲ್ಪಟ್ಟ ಕೈಗೂಡದ ಅಥವಾ ಅಜ್ಞಾತ ಗಳಿಕೆಗಳು ಹಾಗೂ ನಷ್ಟಗಳೊಂದಿಗಿನ ನ್ಯಾಯೋಚಿತ ಮೌಲ್ಯದಲ್ಲಿ ಅವು ವರದಿಮಾಡಲ್ಪಟ್ಟಿವೆ ಮತ್ತು ಷೇರುದಾರರ ಇಕ್ವಿಟಿಯ ಒಂದು ಪ್ರತ್ಯೇಕದ ಘಟಕದಲ್ಲಿ (ಇತರ ಸಮಗ್ರ ಆದಾಯ) ಅವು ವರದಿಮಾಡಲ್ಪಟ್ಟಿವೆ.

ಹಣಕಾಸಿನ ಲೆಕ್ಕಗಾರಿಕೆ ಮಾನದಂಡಗಳ ಲೆಕ್ಕಪಟ್ಟಿಗಳು ಸಂ. 157, ನ್ಯಾಯೋಚಿತ ಮೌಲ್ಯದ ಮಾಪನಗಳು (ಫೇರ್‌ ವ್ಯಾಲ್ಯೂ ಮೆಷರ್‌ಮೆಂಟ್ಸ್‌), ಸಾಮಾನ್ಯವಾಗಿ FAS 157 ಎಂದೇ ಚಿರಪರಿಚಿತವಾಗಿವೆ. ಇದು ಹಣಕಾಸಿನ ಲೆಕ್ಕಗಾರಿಕೆ ಮಾನದಂಡಗಳ ಮಂಡಳಿಯಿಂದ (ಫೈನಾನ್ಷಿಯಲ್‌ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌ ಬೋರ್ಡ್‌-FASB) 2006ರ ಸೆಪ್ಟೆಂಬರ್‌ನಲ್ಲಿ ಜಾರಿಮಾಡಲ್ಪಟ್ಟ ಒಂದು ಲೆಕ್ಕಗಾರಿಕೆ ಮಾನದಂಡವಾಗಿದ್ದು, 2007ರ ನವೆಂಬರ್‌ 15ರ ನಂತರ ಶುರುವಾದ ಹಣಕಾಸು ವರ್ಷಗಳೊಂದಿಗಿನ ವ್ಯವಹಾರದ ಅಸ್ತಿತ್ವಗಳಿಗೆ ಸಂಬಂಧಿಸಿದಂತೆ ಅದು ಜಾರಿಗೆ ಬಂದಿದೆ.[][]

ಈ ಕೆಳಕಂಡ ಅಂಶಗಳನ್ನು FAS ಲೆಕ್ಕಪಟ್ಟಿ 157 ಒಳಗೊಳ್ಳುತ್ತದೆ:

  • ನ್ಯಾಯೋಚಿತ ಮೌಲ್ಯದ ವ್ಯಾಖ್ಯಾನದ ಮೇಲಿನ ಸ್ಪಷ್ಟತೆ;
  • ನ್ಯಾಯೋಚಿತ ಮೌಲ್ಯದ ಮಾಪನಗಳಲ್ಲಿ ಬಳಸಲಾದ ಮಾಹಿತಿಯ ಮೂಲವನ್ನು ವರ್ಗೀಕರಿಸಲು ಬಳಸಲಾದ ಒಂದು ನ್ಯಾಯೋಚಿತ ಮೌಲ್ಯ ಶ್ರೇಣಿವ್ಯವಸ್ಥೆ (ಅಂದರೆ, ಮಾರುಕಟ್ಟೆ ಆಧರಿತವಾದದ್ದು ಅಥವಾ ಮಾರುಕಟ್ಟೆಯನ್ನು ಆಧರಿಸದೇ ಇರುವಂಥದ್ದು);
  • ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲ್ಪಟ್ಟ ಸ್ವತ್ತುಗಳು ಹಾಗೂ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ವಿಸ್ತರಿಸಲ್ಪಟ್ಟ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು; ಮತ್ತು
  • ಒಂದು ಸ್ವತ್ತು ಅಥವಾ ಹೊಣೆಗಾರಿಕೆಯ ಒಂದು ಮಾಪನ ದಿನಾಂಕ-ನಿಶ್ಚಿತ ವ್ಯವಹಾರ ನಿರ್ವಹಣೆ ಬೆಲೆ ಯು ಅದರ ಅದೇ ಮಾಪನ ದಿನಾಂಕ-ನಿಶ್ಚಿತ ನ್ಯಾಯೋಚಿತ ಮೌಲ್ಯ ಕ್ಕೆ ಸಮನಾಗಿರುತ್ತದೆ ಎಂಬ, ದೀರ್ಘಕಾಲದಿಂದ ಇರುವ ಲೆಕ್ಕಗಾರಿಕೆಯ ಪೂರ್ವಕಲ್ಪನೆಯ ಒಂದು ಮಾರ್ಪಾಡು.
  • ಸಾಲದ ಅಪಾಯದಲ್ಲಿನ (ಎದುರುಪಕ್ಷ ಮತ್ತು ಕಂಪನಿ ಎರಡರದ್ದೂ ಸ್ವಂತದ ಸಾಲಿಗ ಮಾಪನದ) ಬದಲಾವಣೆಗಳನ್ನು ಮೌಲ್ಯನಿರ್ಣಯದಲ್ಲಿ ಸೇರಿಸಬೇಕೆಂಬ ಸ್ಪಷ್ಟೀಕರಣ.

"ನ್ಯಾಯೋಚಿತ ಮೌಲ್ಯ"ವನ್ನು FAS 157 ಈ ರೀತಿ ವ್ಯಾಖ್ಯಾನಿಸುತ್ತದೆ: “ಮಾಪನ ದಿನಾಂಕದಲ್ಲಿ ಮಾರುಕಟ್ಟೆ ಸಹಭಾಗಿಗಳ ನಡುವಿನ ಒಂದು ಕ್ರಮಬದ್ಧವಾದ ವ್ಯವಹಾರ ನಿರ್ವಹಣೆಯಲ್ಲಿ, ಒಂದು ಸ್ವತ್ತನ್ನು ಮಾರುವುದಕ್ಕಾಗಿ ಸ್ವೀಕರಿಸಿದ ಅಥವಾ ಒಂದು ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸಲಾದ ಬೆಲೆ.”

ವಸ್ತುವೊಂದಕ್ಕೆ ಸಂಬಂಧಿಸಿದಂತೆ ಒಂದು ನ್ಯಾಯೋಚಿತ ಮೌಲ್ಯದ ಅಳತೆಗೋಲನ್ನು ಮತ್ತೊಂದು ಲೆಕ್ಕಗಾರಿಕೆ ನಿಯಮವು ಬಯಸಿದಾಗ ಅಥವಾ ಅದಕ್ಕೆ ಅವಕಾಶವಿತ್ತಾಗ ಮಾತ್ರವೇ FAS 157 ಅನ್ವಯವಾಗುತ್ತದೆ. ನ್ಯಾಯೋಚಿತ ಮೌಲ್ಯದ ಬಳಕೆಯನ್ನು ಕಡ್ಡಾಯಗೊಳಿಸುವ ಯಾವುದೇ ಹೊಸ ಅವಶ್ಯಕತೆಗಳನ್ನು FAS 157 ಪರಿಚಯಿಸದಿರುವ ಸಂದರ್ಭದಲ್ಲೇ, ಸ್ಥೂಲವಿವರಣೆ ನೀಡುವಂತಿರುವ ವ್ಯಾಖ್ಯಾನವು ನಿರ್ದಿಷ್ಟವಾದ ಪ್ರಮುಖ ವ್ಯತ್ಯಾಸಗಳನ್ನು ಪರಿಚಯಿಸುವುದಿಲ್ಲ.

ಮೊದಲಿಗೆ, ವ್ಯವಹಾರದ ಅಸ್ತಿತ್ವವು ಹೂಡಿಕೆಗೆ ಸಂಬಂಧಿಸಿದಂತೆ ಸ್ವತ್ತನ್ನು ಇಟ್ಟುಕೊಳ್ಳಲು ಯೋಜಿಸಿದೆಯೋ ಅಥವಾ ನಂತರದಲ್ಲಿ ಅದನ್ನು ಮರುಮಾರಾಟ ಮಾಡುತ್ತದೆಯೋ ಎಂಬುದನ್ನು ಲೆಕ್ಕಿಸದೆ, ಒಂದು ಪ್ರವೇಶ ಬೆಲೆಗಿಂತ ಹೆಚ್ಚಾಗಿ [ಒಂದು ಸ್ವತ್ತಿಗೆ ಸಂಬಂಧಿಸಿದಂತೆ, ಈ ಬೆಲೆಯು ಅದು ಖರೀದಿಗೊಳಗಾಗಲಿರುವ ಬೆಲೆಯಾಗಿದೆ (ಕೇಳುವ ಬೆಲೆ)] ಇದು ನಿರ್ಗಮನದ ಬೆಲೆಯ [ಒಂದು ಸ್ವತ್ತಿಗೆ ಸಂಬಂಧಿಸಿದಂತೆ, ಈ ಬೆಲೆಯು ಅದು ಮಾರಾಟಕ್ಕೊಳಗಾಗಲಿರುವ ಬೆಲೆಯಾಗಿದೆ (ಸವಾಲು ಬೆಲೆ)] ಮೇಲೆ ಆಧರಿಸಿದೆ.

ಎರಡನೆಯದಾಗಿ, FAS 157 ಒತ್ತುನೀಡುವ ಪ್ರಕಾರ, ನ್ಯಾಯೋಚಿತ ಮೌಲ್ಯವು ವ್ಯವಹಾರದ ಅಸ್ತಿತ್ವ-ನಿಶ್ಚಿತ ಮೌಲ್ಯವಾಗುವುದಕ್ಕಿಂತ ಹೆಚ್ಚಾಗಿ ಮಾರುಕಟ್ಟೆ-ಆಧರಿತ ಮೌಲ್ಯವಾಗಿದೆ. ಈ ರೀತಿಯಾಗಿ, ಓರ್ವ ಸ್ವತ್ತು ಸ್ವಾಧೀನಗಾರನನ್ನು ಅನೇಕವೇಳೆ ನಿರೂಪಿಸುವ ಆಶಾವಾದವು, ಒಂದು ನಿಷ್ಪಕ್ಷಪಾತವಾದ, ಅಪಾಯ-ಒಲ್ಲದ ಖರೀದಿದಾರನನ್ನು ವಿಶಿಷ್ಟವಾಗಿ ನಿರೂಪಿಸುವ ಸಂದೇಹವಾದದಿಂದ ಬದಲಾಯಿಸಲ್ಪಡಬೇಕು.

FAS 157ರ ನ್ಯಾಯೋಚಿತ ಮೌಲ್ಯ ಶ್ರೇಣಿವ್ಯವಸ್ಥೆಯು ಮಾನದಂಡದ ಪರಿಕಲ್ಪನೆಗಳನ್ನು ಬಲಪಡಿಸುತ್ತದೆ. ನ್ಯಾಯೋಚಿತ ಮೌಲ್ಯಗಳನ್ನು ನಿರ್ಣಯಿಸಲು ಬಳಸಲಾಗುವ ಮಾಹಿತಿಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಶ್ರೇಣಿವ್ಯವಸ್ಥೆಯು ಶ್ರೇಯಾಂಕವನ್ನು ನೀಡುತ್ತದೆ. ಅಂದರೆ ಮಟ್ಟ 1ರ ಪ್ರದಾನಗಳು ಅತ್ಯಂತ ವಿಶ್ವಾಸಾರ್ಹವಾದವು ಎಂದೂ, ಮತ್ತು ಮಟ್ಟ 3ರ ಪ್ರದಾನಗಳು ಅತ್ಯಂತ ಕಡಿಮೆ ವಿಶ್ವಾಸಾರ್ಹವಾದವು ಎಂದೂ ಈ ಶ್ರೇಯಾಂಕವು ಅರ್ಥೈಸುತ್ತದೆ. ಅದೇ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಒಳಗೊಂಡಿರುವ ವ್ಯವಹಾರ ನಿರ್ವಹಣೆಗಳ, ಊಹೆಗಳಲ್ಲದ ನೇರ ವೀಕ್ಷಣೆಗಳ (ಉದಾಹರಣೆಗೆ, ನಮೂದಿತ ಬೆಲೆಗಳು) ಮೇಲೆ ಆಧರಿತವಾದ ಮಾಹಿತಿಯು ಅತ್ಯುತ್ಕೃಷ್ಟ ವಿಶ್ವಾಸಾರ್ಹತೆಯನ್ನು ನೀಡುತ್ತದೆ; ಇದಕ್ಕೆ ಪ್ರತಿಯಾಗಿ, ಮಾರುಕಟ್ಟೆಯ ಸಹಭಾಗಿಗಳು ಬಳಸುವ ಊಹೆಗಳನ್ನು ಕುರಿತಾದ, ದೃಷ್ಟಿಗೋಚರವಲ್ಲದ ದತ್ತಾಂಶ ಅಥವಾ ವರದಿಮಾಡುವ ಒಂದು ವ್ಯವಹಾರದ ಅಸ್ತಿತ್ವದ ಸ್ವಂತ ಊಹೆಗಳನ್ನು ಆಧರಿಸಿದ ಪ್ರದಾನಗಳು ಕಡಿಮೆ ವಿಶ್ವಾಸಾರ್ಹತೆಯನ್ನು ನೀಡುತ್ತವೆ. ಒಂದು ಖಾಸಗಿ ಹಿಡಿತದ ಕಂಪನಿಯ ಷೇರುಗಳ ಮೌಲ್ಯವು ಮುನ್ನಂದಾಜಿಸಲಾದ ನಗದು ಹರಿವುಗಳನ್ನು ಆಧರಿಸಿರುವುದು, ಎರಡನೆಯ ನಿದರ್ಶನದ ಒಂದು ವಿಶಿಷ್ಟ ಉದಾಹರಣೆಯಾಗಿದೆ.

ಆಧಾರವಾಗಿರುವ ಸ್ವತ್ತಿನ ನಿಜವಾದ ಮೌಲ್ಯವನ್ನು ಮಾರುಕಟ್ಟೆ ಆಧರಿತ ಮಾಪನವು ಕರಾರುವಾಕ್ಕಾಗಿ ಪ್ರತಿಬಿಂಬಿಸದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳಲು ಸಾಧ್ಯವಿದೆ. ಒಂದು ಹಣಕಾಸಿನ ಬಿಕ್ಕಟ್ಟಿನಂಥ ಅನನುಕೂಲಕರವಾದ ಅಥವಾ ಅಸ್ಥಿರ ಸಮಯಗಳ ಅವಧಿಯಲ್ಲಿ, ಈ ಸ್ವತ್ತುಗಳು ಅಥವಾ ಹೊಣೆಗಾರಿಕೆಗಳ ಮಾರಾಟದ ಬೆಲೆಯನ್ನು ಲೆಕ್ಕಾಚಾರ ಹಾಕಲು ಕಂಪನಿಯೊಂದು ಒತ್ತಾಯಕ್ಕೀಡಾದಾಗ ಇದು ಸಂಭವಿಸಲು ಸಾಧ್ಯವಿದೆ. ಉದಾಹರಣೆಗೆ, ಒಂದು ವೇಳೆ ದ್ರವ ಆಸ್ತಿಯು ಕಡಿಮೆಯಿದ್ದರೆ ಅಥವಾ ಹೂಡಿಕೆದಾರರು ಗಾಬರಿಗೊಂಡವರಾಗಿದ್ದರೆ, ಬ್ಯಾಂಕೊಂದರ ಸ್ವತ್ತುಗಳ ಪ್ರಸಕ್ತ ಮಾರಾಟದ ಬೆಲೆಯು, ಎಂದಿನ ಮಾಮೂಲಿ ದ್ರವ ಆಸ್ತಿಯ ಸನ್ನಿವೇಶಗಳ ಅಡಿಯಲ್ಲಿನ ಮೌಲ್ಯಕ್ಕಿಂತ ಸಾಕಷ್ಟು ಕಡಿಮೆಯಿರಲು ಸಾಧ್ಯವಿದೆ. ಇದರ ಪರಿಣಾಮವಾಗಿ ಒಂದು ತಗ್ಗಿಸಲ್ಪಟ್ಟ ಷೇರುದಾರರ ಇಕ್ವಿಟಿಯು ಹೊರಹೊಮ್ಮುತ್ತದೆ. 2008/09ರ ಹಣಕಾಸಿನ ಬಿಕ್ಕಟ್ಟಿನ ಅವಧಿಯಲ್ಲಿ ಈ ಸಮಸ್ಯೆಯು ಕಂಡುಬಂದಿತ್ತು. ಸದರಿ ಸನ್ನಿವೇಶದಲ್ಲಿ, ಬ್ಯಾಂಕುಗಳ ಆಯವ್ಯಯ ಪಟ್ಟಿಗಳ ಮೇಲೆ ಹೊಂದಲಾಗಿದ್ದ ಅನೇಕ ಭದ್ರತೆಗಳು ಪರಿಣಾಮಕಾರಿಯಾಗಿ ಮೌಲ್ಯ ನಿರ್ಣಯಕ್ಕೆ ಒಳಗಾಗಿರಲಿಲ್ಲ; ಏಕೆಂದರೆ ಸದರಿ ಭದ್ರತೆಗಳಿಂದ ಮಾರುಕಟ್ಟೆಗಳು ಕಾಣದಂತೆ ಹೊರಟುಹೋಗಿದ್ದವು. ಆದಾಗ್ಯೂ 2009ರ ಏಪ್ರಿಲ್‌ನಲ್ಲಿ, ಹಣಕಾಸಿನ ಲೆಕ್ಕಗಾರಿಕೆ ಮಾನದಂಡಗಳ ಮಂಡಳಿಯು (ಫೈನಾನ್ಷಿಯಲ್‌ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌ ಬೋರ್ಡ್‌-FASB) ಹೊಸ ಮಾರ್ಗದರ್ಶಿ ಸೂತ್ರಗಳ ಪರವಾಗಿ ಮತ ಚಲಾಯಿಸಿ, ಅವನ್ನು ಅನುಮೋದಿಸಿತು. ಒಂದು ಬಲವಂತದ ಫೈಸಲಾತಿಗೆ ಬದಲಾಗಿ, ಒಂದು ಕ್ರಮಬದ್ಧವಾದ ಮಾರುಕಟ್ಟೆಯಲ್ಲಿ ಸ್ವೀಕರಿಸಲ್ಪಡುವ ಬೆಲೆಯೊಂದರ ಮೇಲೆ ಮೌಲ್ಯನಿರ್ಣಯವು ಆಧರಿಸಿರಬೇಕು ಎಂಬುದಕ್ಕೆ ಅವಕಾಶ ನೀಡುವಂತೆ ರೂಪುಗೊಂಡಿದ್ದ ಈ ಹೊಸ ಮಾರ್ಗದರ್ಶಿ ಸೂತ್ರಗಳ ಅನ್ವಯಿಕೆಯು 2009ರ ಮೊದಲನೇ ತ್ರೈಮಾಸಿಕದಿಂದ ಶುರುವಾಯಿತು.

ಸ್ವತ್ತುಗಳ ಯಾವುದೇ ಹೊಸ ವರ್ಗಗಳ ಮೇಲೆ ನ್ಯಾಯೋಚಿತ ಮೌಲ್ಯವು ಬಳಸಲ್ಪಡುವುದನ್ನು FAS 157 ಬಯಸುವುದಿಲ್ಲವಾದರೂ, ಅನ್ವಯವಾಗುವ ಇತರ ನಿಯಮಗಳಿಗೆ ಅನುಸಾರವಾಗಿರುವ, ನ್ಯಾಯೋಚಿತ ಮೌಲ್ಯದಲ್ಲಿ ಒಯ್ಯಲ್ಪಡುವ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಇದು ಅನ್ವಯಿಸುತ್ತದೆ. ನ್ಯಾಯೋಚಿತ ಮೌಲ್ಯದಲ್ಲಿ ಹಿಡಿದಿಡಲ್ಪಟ್ಟಿರುವ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಲೆಕ್ಕಗಾರಿಕೆಯ ನಿಯಮಗಳು ಸಂಕೀರ್ಣವಾಗಿವೆ. ಭದ್ರತೆಗಳ ಕಟ್ಟುಪಾಡುಗಳು ಹಾಗೂ ಲೆಕ್ಕಗಾರಿಕೆಯ ಇತರ ಮಾರ್ಗದರ್ಶನಕ್ಕೆ ಅನುಸಾರವಾಗಿರುವ ರೀತಿಯಲ್ಲಿ, ಮ್ಯೂಚುಯಲ್‌ ನಿಧಿಗಳು ಮತ್ತು ಭದ್ರತೆಗಳ ಸಂಸ್ಥೆಗಳು ನ್ಯಾಯೋಚಿತ ಮೌಲ್ಯದಲ್ಲಿ ತಮ್ಮ ಸ್ವತ್ತುಗಳು ಹಾಗೂ ಕೆಲವೊಂದು ಹೊಣೆಗಾರಿಕೆಗಳನ್ನು ದಶಕಗಳಿಂದಲೂ ಸಾಗಿಸಿಕೊಂಡು ಬಂದಿವೆ. ವಾಣಿಜ್ಯ ಬ್ಯಾಂಕುಗಳು ಹಾಗೂ ಇತರ ಬಗೆಗಳ ಹಣಕಾಸಿನ ಸೇವೆಗಳ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಕೆಲವೊಂದು ಸ್ವತ್ತು ವರ್ಗಗಳು ನ್ಯಾಯೋಚಿತ ಮೌಲ್ಯದಲ್ಲಿ ನಿರ್ವಹಿಸಲ್ಪಡಬೇಕಿರುವುದು ಅಗತ್ಯವಾಗಿದೆ. ಉತ್ಪನ್ನಗಳು ಹಾಗೂ ಮಾರುಕಟ್ಟೆ ಮಾಡಬಹುದಾದ ಇಕ್ವಿಟಿ ಭದ್ರತೆಗಳು ಈ ವರ್ಗಕ್ಕೆ ಸೇರುತ್ತವೆ. ಇನ್ನೂ ಬರಬೇಕಿರುವ ಕರಾರು ಸಾಲಗಳು ಮತ್ತು ಸಾಲ ಭದ್ರತೆಗಳಂಥ ಇತರ ಬಗೆಗಳ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸ್ವತ್ತುಗಳು ವ್ಯಾಪಾರಗಾರಿಕೆಗಾಗಿ (ಸಕ್ರಿಯ ಖರೀದಿ ಮತ್ತು ಮಾರಾಟಗಾರಿಕೆ) ಹಿಡಿದಿಡಲ್ಪಟ್ಟಿವೆಯೋ ಅಥವಾ ಹೂಡಿಕೆಗಾಗಿ ಹಿಡಿದಿಡಲ್ಪಟ್ಟಿವೆಯೋ ಎಂಬುದರ ಮೇಲೆ ಇದು ಅವಲಂಬಿಸುತ್ತದೆ. ಎಲ್ಲಾ ವ್ಯಾಪಾರಗಾರಿಕೆ ಸ್ವತ್ತುಗಳು ನ್ಯಾಯೋಚಿತ ಮೌಲ್ಯದಲ್ಲಿ ನಿರ್ವಹಿಸಲ್ಪಡುತ್ತವೆ. ಹೂಡಿಕೆಗಾಗಿ ಅಥವಾ ತೀರುವಳಿ ಸಮಯದವರೆಗಾಗಿ ಹಿಡಿದಿಡಲ್ಪಟ್ಟಿರುವ ಸಾಲಗಳು ಮತ್ತು ಸಾಲ ಭದ್ರತೆಗಳು, ಅವು ದುರ್ಬಲಗೊಳಿಸಲ್ಪಟ್ಟಿವೆ ಎಂದು ಪರಿಗಣಿಸಲ್ಪಡದ ಹೊರತು (ಇಂಥ ಸನ್ನಿವೇಶದಲ್ಲಿ, ಒಂದು ನಷ್ಟವು ಗುರುತಿಸಲ್ಪಡುತ್ತದೆ) ಮೂಲಬೆಲೆ ಕಳೆಯಲಾದ ವೆಚ್ಚದಲ್ಲಿ ನಿರ್ವಹಿಸಲ್ಪಡುತ್ತವೆ. ಆದಾಗ್ಯೂ, ಒಂದು ವೇಳೆ ಅವು ಮಾರಾಟಕ್ಕಾಗಿ ಲಭ್ಯವಿದ್ದರೆ ಅಥವಾ ಮಾರಾಟಕ್ಕಾಗಿ ಹಿಡಿದಿಡಲ್ಪಟ್ಟರೆ, ಅವು ಕ್ರಮವಾಗಿ ನ್ಯಾಯೋಚಿತ ಮೌಲ್ಯದಲ್ಲಿ ಅಥವಾ ನ್ಯಾಯೋಚಿತ ಮೌಲ್ಯದ ಕಡಿಮೆಯಾಗಿರುವ ವೆಚ್ಚದಲ್ಲಿ ನಿರ್ವಹಿಸಲ್ಪಡುವುದು ಅಗತ್ಯವಾಗಿರುತ್ತದೆ. (FAS 65 ಮತ್ತು FAS 114 ಮಾನದಂಡಗಳು ಸಾಲಗಳಿಗಾಗಿರುವ ಲೆಕ್ಕಗಾರಿಕೆಯನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡರೆ, ಭದ್ರತೆಗಳಿಗಾಗಿರುವ ಲೆಕ್ಕಗಾರಿಕೆಯನ್ನು FAS 115 ಮಾನದಂಡವು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುತ್ತದೆ.) ಮೇಲಿನದನ್ನು ಒಪ್ಪದಿದ್ದರೂ ಸಹ, ಐತಿಹಾಸಿಕವಾದ ವೆಚ್ಚದ ಲೆಕ್ಕಗಾರಿಕೆಗೆ ಬದಲಾಗಿ ತಾವು ಮಾಡಲು ಆರಿಸಬಹುದಾದ ನ್ಯಾಯೋಚಿತ ಮೌಲ್ಯದಲ್ಲಿನ ಹೆಚ್ಚೂಕಮ್ಮಿ ಯಾವುದೇ ಹಣಕಾಸಿನ ಸಾಧನಕ್ಕೆ ಸಂಬಂಧಿಸಿದಂತೆ ಪರಿಗಣಿಸಲು ಕಂಪನಿಗಳಿಗೆ ಅನುಮತಿಯನ್ನು ನೀಡಲಾಗಿದೆ (ನೋಡಿ: FAS 159, "ನ್ಯಾಯೋಚಿತ ಮೌಲ್ಯದ ಆಯ್ಕೆ").

ಈ ರೀತಿಯಾಗಿ, ನ್ಯಾಯೋಚಿತ ಮೌಲ್ಯದಲ್ಲಿ ಒಂದು ಸ್ವತ್ತು ಅಥವಾ ಹೊಣೆಗಾರಿಕೆಯನ್ನು ನಿರ್ವಹಿಸುವುದು ಕಂಪನಿಗೆ ಅಗತ್ಯವಾಗಿರುವ ಅಥವಾ ಅದನ್ನು ನಿರ್ವಹಿಸಲು ಕಂಪನಿಯು ಆರಿಸುವಂಥ ಮೇಲಿನ ನಿದರ್ಶನಗಳಲ್ಲಿ FAS 157 ಅನ್ವಯವಾಗುತ್ತದೆ.

"ನಂಬುವಂತೆ ಮಾಡುವ ಮೌಲ್ಯನಿರ್ಣಯ" ಎಂದು ಅನೇಕವೇಳೆ ಟೀಕಿಸಲ್ಪಟ್ಟಿರುವ ಒಂದು ವ್ಯವಸ್ಥೆಯಾದ, ಒಂದು ಕಂಪ್ಯೂಟರ್‌ನಿಂದ ಲೆಕ್ಕಾಚಾರ ಹಾಕಲ್ಪಟ್ಟ ಕೆಲವೊಂದು ತಾತ್ತ್ವಿಕ ಬೆಲೆಯನ್ನು ಅನ್ವಯಿಸುವುದಕ್ಕೆ ಬದಲಿಗೆ "ಮಾರುಕಟ್ಟೆ"ಗೆ ಮೌಲ್ಯನಿರ್ಣಯಿಸುವುದನ್ನು ನಿಯಮವು ಬಯಸುತ್ತದೆ. (ಪ್ರಾಸಂಗಿಕವಾಗಿ, ಕೆಲವೊಂದು ಸ್ವತ್ತುಗಳ ಬಗೆಗಳಿಗೆ ಸಂಬಂಧಿಸಿದಂತೆ ಒಂದು ಮಾದರಿಯನ್ನು ಬಳಸಲು ನಿಯಮವು ಅವಕಾಶ ನೀಡುತ್ತದೆ)

ಕೆಲವೊಮ್ಮೆ, ಸ್ವತ್ತುಗಳಿಗೆ ಸಂಬಂಧಿಸಿದಂತೆ ಒಂದು ದಟ್ಟವಾಗಿಲ್ಲದ ಮಾರುಕಟ್ಟೆಯು ಅಸ್ತಿತ್ವದಲ್ಲಿದ್ದು, ಅದು ಹೆಚ್ಚೂಕಮ್ಮಿ ಅಪರೂಪವಾಗಿ- ಹಲವುವೇಳೆ ಒಂದು ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ- ಮಾರಾಟವನ್ನು ನಡೆಸುತ್ತದೆ. ಈ ಅವಧಿಗಳಲ್ಲಿ, ಅಲ್ಲಿ ಇಂಥ ಉತ್ಪನ್ನಗಳಿಗಾಗಿ ಒಂದು ವೇಳೆ ಇದ್ದಲ್ಲಿ ಕೇವಲ ಕೆಲವೇ ಖರೀದಿದಾರರಿರುತ್ತಾರೆ. ಇದು ಮೌಲ್ಯನಿರ್ಣಯದ ಪ್ರಕ್ರಿಯೆಯನ್ನು ಜಟಿಲಗೊಳಿಸುತ್ತದೆ. ಮಾರುಕಟ್ಟೆ ಮಾಹಿತಿಯ ಗೈರುಹಾಜರಿಯಲ್ಲಿ ವ್ಯವಹಾರದ ಅಸ್ತಿತ್ವವೊಂದು ತನ್ನದೇ ಆದ ಊಹೆಗಳನ್ನು ಬಳಸಿಕೊಳ್ಳಲು ಅವಕಾಶವನ್ನು ಪಡೆಯುತ್ತದೆಯಾದರೂ, ಉದ್ದೇಶವು ಅದೇ ಆಗಿರುತ್ತದೆ; ಅಂದರೆ, ಓರ್ವ ಸಿದ್ಧನಿರುವ ಖರೀದಿದಾರನಿಗೆ ಮಾರಾಟವೊಂದರಲ್ಲಿ ಯಾವುದು ಪ್ರಸಕ್ತ ಮೌಲ್ಯವಾಗುತ್ತದೆ ಎಂಬುದನ್ನು ನಿರ್ಣಯಿಸುವುದೇ ಇಲ್ಲಿನ ಉದ್ದೇಶವಾಗಿರುತ್ತದೆ. ತನ್ನದೇ ಆದ ಊಹೆಗಳನ್ನು ಬೆಳೆಸಿಕೊಳ್ಳುವ ಸಂದರ್ಭದಲ್ಲಿ ವ್ಯವಹಾರದ ಅಸ್ತಿತ್ವವೊಂದು ಬಡ್ಡಿದರಗಳು, ಬೇಪಾವತಿ ದರಗಳು, ಪೂರ್ವಪಾವತಿ ವೇಗಗಳು, ಇತ್ಯಾದಿಯಂಥ ಲಭ್ಯವಿರುವ ಯಾವುದೇ ಮಾರುಕಟ್ಟೆ ದತ್ತಾಂಶವನ್ನು ಉಪೇಕ್ಷಿಸುವಂತಿರುವುದಿಲ್ಲ.

ನಗದನ್ನು-ಉತ್ಪಾದಿಸದ ಸ್ವತ್ತುಗಳು ಹಾಗೂ ನಗದನ್ನು-ಉತ್ಪಾದಿಸುವ ಸ್ವತ್ತುಗಳ ನಡುವೆ FAS 157 ಯಾವುದೇ ಭೇದವನ್ನು ಕಲ್ಪಿಸುವುದಿಲ್ಲ. ಮುರಿದುಹೋದ ಉಪಕರಣದಂಥ ನಗದನ್ನು-ಉತ್ಪಾದಿಸದ ಸ್ವತ್ತುಗಳನ್ನು ಮಾರುಕಟ್ಟೆಯಲ್ಲಿ ಯಾರೂ ಖರೀದಿಸದಿದ್ದಲ್ಲಿ, ಅವು ತಾತ್ತ್ವಿಕವಾಗಿ ಕೇವಲ ಶೂನ್ಯಮೌಲ್ಯವನ್ನಷ್ಟೇ ಹೊಂದಿರಲು ಸಾಧ್ಯ. ಭದ್ರತೆಗಳಂಥ ನಗದು-ಉತ್ಪಾದಿಸುವ ಸ್ವತ್ತುಗಳು ತಮ್ಮ ಆಧಾರವಾಗಿರುವ ಸ್ವತ್ತುಗಳಿಂದ ಒಂದಷ್ಟು ಆಧಾಯವನ್ನು ಗಳಿಸುವಲ್ಲಿ ಎಲ್ಲಿಯವರೆಗೆ ಸಮರ್ಥವಾಗಿರುತ್ತವೆಯೋ ಅಲ್ಲಿಯವರೆಗೆ ಒಂದಷ್ಟು ಮೌಲ್ಯವನ್ನು ಹೊಂದಿರುತ್ತವೆ. ಭದ್ರತೆಗಳನ್ನು, ಅಂದರೆ ನಗದು-ಉತ್ಪಾದಿಸುವ ಸ್ವತ್ತುಗಳನ್ನು ಅನಿಶ್ಚಿತವಾಗಿ ಕಡಿಮೆ ಮೌಲ್ಯದಲ್ಲಿ ನಿರ್ಣಯಿಸಲಾಗುವುದಿಲ್ಲ, ಅಥವಾ ಒಂದು ಹಂತದಲ್ಲಿ, ಈ ಸ್ವರೂಪದ ಸ್ವತ್ತುಗಳು ಕಂಪನಿಯಲ್ಲಿನ ಆಂತರ್ಯದವರಿಗಾಗಿ ಉತ್ತೇಜಕ ಸವಲತ್ತನ್ನು ಸೃಷ್ಟಿಸಿ, ಒಂದು ತೀರಾ ಕಡಿಮೆ-ಮೌಲ್ಯವನ್ನು ಕಟ್ಟಲಾದ ಬೆಲೆಯಲ್ಲಿ ಕಂಪನಿಯಿಂದ ಅವನ್ನು ಖರೀದಿಸಲು ಅವಕಾಶಮಾಡಿಕೊಡಬಲ್ಲವು. ಇಂಥ ಮುಂದಕ್ಕೆ ಹೋಗುತ್ತಿರುವ ಭದ್ರತೆಗಳ ಸಾಲಯೋಗ್ಯತೆಯನ್ನು ನಿರ್ಣಯಿಸುವಲ್ಲಿ, ಕಂಪನಿಯ ಆಂತರ್ಯದವರು ಅತ್ಯುತ್ತಮ ಸ್ಥಾನದಲ್ಲಿರುತ್ತಾರೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಸ್ವತ್ತಿನ "ನ್ಯಾಯೋಚಿತ ಮೌಲ್ಯ"ವನ್ನು ಕರಾರುವಾಕ್ಕಾಗಿ ಪ್ರತಿಬಿಂಬಿಸುವಲ್ಲಿ ಈ ಬೆಲೆಯ ಒತ್ತಡವು ಮಾರುಕಟ್ಟೆ ಬೆಲೆಗಳನ್ನು ಸರಿದೂಗಿಸಬೇಕಾಗುತ್ತದೆ. ತೊಂದರೆಗೀಡಾಗಿರುವ ಸ್ವತ್ತುಗಳ ಖರೀದಿದಾರರು, ಕಡಿಮೆಬೆಲೆಯನ್ನು ಕಟ್ಟಲಾದ ಭದ್ರತೆಗಳನ್ನು ಖರೀದಿಸುವಲ್ಲಿ ಮಧ್ಯಪ್ರವೇಶಿಸಬೇಕು. ಇದರಿಂದಾಗಿ ಬೆಲೆಗಳು ಮೇಲೇರಲು ಅನುವು ಮಾಡಿಕೊಟ್ಟಂತಾಗುವುದಲ್ಲದೆ, ಇದರ ಪರಿಣಾಮವಾಗಿ ಇತರ ಕಂಪನಿಗಳು ಇದೇ ಥರದ ತಮ್ಮ ಹಿಡುವಳಿಗಳ ಮೌಲ್ಯವನ್ನು ಹೆಚ್ಚಿಸಿ ನಿರ್ಣಯಿಸುವುದಕ್ಕೆ ಅವಕಾಶ ಸಿಕ್ಕಂತಾಗುತ್ತದೆ.

ನಿರ್ವಹಣಾ ವೈಫಲ್ಯದ ಅಪಾಯದ ಪರಿಕಲ್ಪನೆಯು FAS 157ರಲ್ಲಿನ ಹೊಸ ಅಂಶವಾಗಿದೆ. ಹೊಣೆಗಾರಿಕೆಯೊಂದರ ಮೌಲ್ಯನಿರ್ಣಯಿಸುವಲ್ಲಿ, ವ್ಯವಹಾರದ ಅಸ್ತಿತ್ವವೊಂದು ನಿರ್ವಹಣಾ ವೈಫಲ್ಯದ ಅಪಾಯವನ್ನು ಪರಿಗಣಿಸಬೇಕು ಎಂಬುದನ್ನು FAS 157 ಬಯಸುತ್ತದೆ. ಒಂದುವೇಳೆ ನ್ಯಾಯೋಚಿತ ಮೌಲ್ಯವು ಒಂದು ನಿರ್ಗಮನದ ಬೆಲೆಯಾಗಿ ದಾಖಲಿಸಲ್ಪಡಬೇಕು ಎಂದು FAS 157 ಸರಳವಾಗಿ ಬಯಸಿದಲ್ಲಿ, ಆಗ ನಿರ್ವಹಣಾ ವೈಫಲ್ಯದ ಅಪಾಯವು ನಿರ್ಗಮನದ ನಂತರ ಕೊನೆಗಾಣಿಸಲ್ಪಡುತ್ತದೆ. ಆದಾಗ್ಯೂ, ಒಂದು ಹೊಣೆಗಾರಿಕೆಯನ್ನು ನೀವು ಯಾವ ಬೆಲೆಯಲ್ಲಿ ವರ್ಗಾಯಿಸುತ್ತೀರೋ ಆ ವರ್ಗಾವಣೆಯ ಬೆಲೆಯಾಗಿ ನ್ಯಾಯೋಚಿತ ಮೌಲ್ಯವನ್ನು FAS 157 ವ್ಯಾಖ್ಯಾನಿಸುತ್ತದೆ. ಇದನ್ನು ಬೇರೆಯದೇ ರೀತಿಯಲ್ಲಿ ಹೇಳುವುದಾದರೆ, ಮೌಲ್ಯ ನಿರ್ಣಯಿಸಲ್ಪಡಬೇಕಾದ ನಿರ್ವಹಣಾ ವೈಫಲ್ಯವು, ಒಂದು ಚಾಲ್ತಿಯಲ್ಲಿರುವ ಕರಾರಿಗೆ ಸಂಬಂಧಿಸಿದಂತೆ ಸರಿಯಾದ ರಿಯಾಯಿತಿ ದರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಿಷ್ಕರ್ಷಿಸಲ್ಪಟ್ಟ ಬಡ್ಡಿದರಕ್ಕಿಂತ ಮೇಲಿರುವ ಸಾಲದ ಅಪಾಯಕ್ಕೆ ಸಂಬಂಧಿಸಿದಂತೆ, ಖಾತೆಗೆ ಬರುವ ಭವಿಷ್ಯದ ನಗದು ಹರಿವುಗಳಿಗೆ ಹೆಚ್ಚಿನ ರಿಯಾಯಿತಿ ದರವನ್ನು ಅನ್ವಯಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ನಿರ್ವಹಣಾ ವೈಫಲ್ಯದ ಅಪಾಯಕ್ಕೆ ಸಂಬಂಧಿಸಿದಂತೆ, ಮೂಲ ಲೆಕ್ಕಪಟ್ಟಿಯಿಂದ ಯಾವುದು ಆಶಿಸಲ್ಪಟ್ಟಿದೆಯೋ ಅದರ ಒಂದು ವ್ಯಾಪಕವಾದ ವಿವರಣೆಯನ್ನು ತೀರ್ಮಾನಗಳಿಗೆ ಸಂಬಂಧಿಸಿದ ಆಧಾರದ ಕಲಮು ಹೊಂದಿದೆ (ಪ್ಯಾರಾಗಳು C40-C49).

2007–2008ರ ಹಣಕಾಸಿನ ಬಿಕ್ಕಟ್ಟಿನ ಕ್ಷಿಪ್ರ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ, ಸಕ್ರಿಯವಾಗಿರದ ಮಾರುಕಟ್ಟೆಯೊಂದರಲ್ಲಿನ ಹಣಕಾಸಿನ ಸ್ವತ್ತೊಂದರ ನ್ಯಾಯೋಚಿತ ಮೌಲ್ಯವನ್ನು ನಿರ್ಣಯಿಸುವ ಪ್ರಸ್ತಾವಿತ FAS 157-dಯ ಹೊರಗೆಡಹುವಿಕೆಯನ್ನು FASBಯು ಕ್ಷಿಪ್ರವಾಗಿ ಕೈಗೊಂಡಿದೆ.[]

ಸರಳ ಉದಾಹರಣೆ

[ಬದಲಾಯಿಸಿ]

ಉದಾಹರಣೆ: ಒಂದು ವೇಳೆ ಓರ್ವ ಹೂಡಿಕೆದಾರನು ಪ್ರತಿ ಷೇರಿಗೆ 4$ನಂತೆ ಖರೀದಿಸಲ್ಪಟ್ಟ ಸ್ಟಾಕು ಒಂದರ 10 ಷೇರುಗಳನ್ನು ಹೊಂದಿದ್ದರೆ, ಷೇರುಗಳ "ಮಾರುಕಟ್ಟೆ ಮೌಲ್ಯನಿರ್ಣಯ"ದ ಮೌಲ್ಯವು (10 ಷೇರುಗಳು × 6$), ಅಥವಾ 60$ಗೆ ಸಮನಾಗಿರುತ್ತದೆ. ಅದೇ ವೇಳೆಗೆ ಕಡತದ ಮೌಲ್ಯವು (ಬಳಕೆ ಮಾಡಲಾದ ಲೆಕ್ಕಗಾರಿಕೆಯ ತತ್ತ್ವಗಳನ್ನು ಅವಲಂಬಿಸಿ) ಕೇವಲ 40$ಗೆ ಸಮನಾಗಿರುತ್ತದೆ.

ಅದೇ ರೀತಿಯಲ್ಲಿ, ಒಂದು ವೇಳೆ ಸದರಿ ಸ್ಟಾಕು 3$ಗೆ ಕುಸಿದಲ್ಲಿ, ಮಾರುಕಟ್ಟೆ ಮೌಲ್ಯನಿರ್ಣಯದ ಮೌಲ್ಯವು 30$ ಆಗಿರುತ್ತದೆ ಮತ್ತು ಹೂಡಿಕೆದಾರನು ಮೂಲ ಹೂಡಿಕೆಯ 10$ನ್ನು ಕಳೆದುಕೊಂಡಿರುತ್ತಾನೆ. ಒಂದು ವೇಳೆ, ಠೇವಣಿ ಹಣದ ಮೇಲೆ ಸ್ಟಾಕು ಖರೀದಿಸಲ್ಪಟ್ಟಿದ್ದರೆ, ಒಂದು ಠೇವಣಿ ಹಣದ ಕರೆಗೆ ಇದು ಪ್ರಚೋದಿಸಬಹುದು ಮತ್ತು ತನ್ನ ಖಾತೆಗೆ ಸಂಬಂಧಿಸಿದ ಠೇವಣಿ ಹಣದ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟಿರುವ ಒಂದು ಮೊತ್ತದೊಂದಿಗೆ ಹೂಡಿಕೆದಾರನು ಮುಂದುವರಿಯಬೇಕಾಗುತ್ತದೆ.

ಉತ್ಪನ್ನಗಳ ಸ್ಥಾನವೊಂದರ ಮಾರುಕಟ್ಟೆ ಮೌಲ್ಯನಿರ್ಣಯಿಸುವಿಕೆ

[ಬದಲಾಯಿಸಿ]

ಪೂರ್ವ-ನಿರ್ಧಾರಿತ ಆವರ್ತಕ ಮಧ್ಯಂತರಗಳಲ್ಲಿನ ಉತ್ಪನ್ನಗಳ ಸ್ಥಾನವೊಂದರ ಮಾರುಕಟ್ಟೆ ಮೌಲ್ಯನಿರ್ಣಯಿಸುವಿಕೆಯಲ್ಲಿ, ಪ್ರತಿ ಎದುರುಪಕ್ಷಸ್ಥನೂ ನಗದಿನಲ್ಲಿರುವ ತನ್ನ ಸ್ಥಾನದ ಮಾರುಕಟ್ಟೆ ಮೌಲ್ಯದಲ್ಲಿ ಬದಲಾವಣೆಯನ್ನು ವಿನಿಮಯ ಮಾಡಿಕೊಳ್ಳುತ್ತಾನೆ. OTC ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಓರ್ವ ಎದುರುಪಕ್ಷಸ್ಥನು ಕರ್ತವ್ಯಲೋಪ ಮಾಡಿದಾಗ, ಇದನ್ನು ಅನುಸರಿಸಿಕೊಂಡು ಬರುವ ಘಟನೆಗಳ ಸರಣಿಯು ಒಂದು ISDA ಕರಾರಿನಿಂದ ನಿರ್ವಹಿಸಲ್ಪಡುತ್ತದೆ. ಚಾಲ್ತಿಯಲ್ಲಿರುವ ಪ್ರಕಟಪಡಿಸುವಿಕೆಯನ್ನು ಲೆಕ್ಕಾಚಾರ ಹಾಕಲು ಮಾದರಿಗಳನ್ನು ಬಳಸುತ್ತಿರುವಾಗ, ಎದುರುಪಕ್ಷಸ್ಥನ ಕರ್ತವ್ಯಲೋಪದ ಅಪಾಯವನ್ನು ("ನಿರ್ವಹಣಾ ವೈಫಲ್ಯದ ಅಪಾಯ") ವ್ಯವಹಾರದ ಅಸ್ತಿತ್ವವು ಪರಿಗಣಿಸಬೇಕು ಮತ್ತು ಅದರ ಲೆಕ್ಕಾಚಾರಗಳಿಗೆ ಒಂದು ಅಗತ್ಯವಾದ ಹೊಂದಾಣಿಕೆಯನ್ನು ಮಾಡಬೇಕು ಎಂದು FAS 157 ಬಯಸುತ್ತದೆ.

ವಿನಿಮಯ ಕೇಂದ್ರದಿಂದ ಮಾರಾಟಗೊಂಡ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಂದುವೇಳೆ ಎದುರುಪಕ್ಷಸ್ಥರಲ್ಲಿ ಒಬ್ಬರು ಈ ಆವರ್ತಕ ವಿನಿಮಯ ಕೇಂದ್ರದಲ್ಲಿ ಕರ್ತವ್ಯಲೋಪವನ್ನು ಎಸಗಿದರೆ, ಸದರಿ ಎದುರುಪಕ್ಷಸ್ಥನ ಸ್ಥಾನವು ವಿನಿಮಯ ಕೇಂದ್ರದಿಂದ ಕೂಡಲೇ ಮುಚ್ಚಲ್ಪಡುತ್ತದೆ ಹಾಗೂ ಆ ಎದುರುಪಕ್ಷಸ್ಥನ ಸ್ಥಾನದಲ್ಲಿ ತೀರುವೆ ಮನೆಯನ್ನು ಬದಲಿಯಾಗಿ ವ್ಯವಸ್ಥೆ ಮಾಡಲಾಗುತ್ತದೆ. ಮಾರುಕಟ್ಟೆಯ ಮೌಲ್ಯನಿರ್ಣಯಿಸುವಿಕೆಯು ಸಾಲದ ಅಪಾಯವನ್ನು ವಸ್ತುತಃ ನಿರ್ಮೂಲಗೊಳಿಸುತ್ತದೆಯಾದರೂ, ಸಾಮಾನ್ಯವಾಗಿ ಕೇವಲ ಬೃಹತ್‌ ಸಂಸ್ಥೆಗಳು ಮಾತ್ರವೇ ನಿರ್ವಹಿಸಬಲ್ಲ ನಿರ್ವಹಣಾ ವ್ಯವಸ್ಥೆಗಳ ಬಳಕೆಯನ್ನು ಇದು ಬಯಸುತ್ತದೆ.[]

ದಲ್ಲಾಳಿಗಳಿಂದ ಆಗುವ ಬಳಕೆ

[ಬದಲಾಯಿಸಿ]

ಠೇವಣಿ ಹಣ ಖಾತೆಗಳ ಮೂಲಕ ಸಾಲಕ್ಕೆ ಪ್ರವೇಶಾವಕಾಶವನ್ನು ಪಡೆಯಲು ಸ್ಟಾಕ್‌ ದಲ್ಲಾಳಿಗಳು ತಮ್ಮ ಗಿರಾಕಿಗಳಿಗೆ ಅವಕಾಶ ಮಾಡಿಕೊಡುತ್ತಾರೆ. ಭದ್ರತೆಗಳನ್ನು ಖರೀದಿಸುವುದಕ್ಕಾಗಿ ನಿಧಿಗಳನ್ನು ಎರವಲು ಪಡೆಯಲು ಈ ಖಾತೆಗಳು ಗಿರಾಕಿಗಳಿಗೆ ಅನುವುಮಾಡಿಕೊಡುತ್ತವೆ. ಆದ್ದರಿಂದ, ಲಭ್ಯವಿರುವ ನಿಧಿಗಳ ಮೊತ್ತವು ನಗದಿನ (ಅಥವಾ ಸಮಾನ ಬೆಲೆಯುಳ್ಳವುಗಳ) ಮೌಲ್ಯಕ್ಕಿಂತ ಹೆಚ್ಚಿನದಾಗಿರುತ್ತದೆ. ಬ್ಯಾಂಕುಗಳು ಸಾಲಗಳನ್ನು ನೀಡುವ ಒಂದು ರೀತಿಯಲ್ಲಿಯೇ, ಬಡ್ಡಿದರವೊಂದನ್ನು ವಿಧಿಸುವ ಮೂಲಕ ಸಾಲವು ಒದಗಿಸಲ್ಪಡುತ್ತದೆ. ಮಾರುಕಟ್ಟೆಯಲ್ಲಿ ಭದ್ರತೆಗಳ (ಸ್ಟಾಕ್‌ಗಳು ಅಥವಾ ಆಯ್ಕೆಗಳಂಥ ಇತರ ಹಣಕಾಸಿನ ಸಾಧನಗಳು) ಮೌಲ್ಯಗಳು ಅನಿಶ್ಚಿತವಾದರೂ ಸಹ, ಖಾತೆಗಳ ಮೌಲ್ಯವನ್ನು ನಿಜಾವಧಿಯಲ್ಲಿ ಲೆಕ್ಕಾಚಾರ ಹಾಕಲಾಗುವುದಿಲ್ಲ. ಮಾರುಕಟ್ಟೆಯ ಮೌಲ್ಯನಿರ್ಣಯಿಸುವಿಕೆಯು ವ್ಯಾಪಾರಗಾರಿಕೆಯ ದಿನದ ಅಂತ್ಯದಲ್ಲಿ ವಿಶಿಷ್ಟವಾಗಿ ನಿರ್ವಹಿಸಲ್ಪಡುತ್ತದೆ, ಮತ್ತು ಒಂದು ವೇಳೆ ಒಂದು ನಿರ್ದಿಷ್ಟ ಮಟ್ಟದಿಂದ ಖಾತೆಯ ಮೌಲ್ಯವು ಕೆಳಗೆ ಬಿದ್ದರೆ (ಇದು ವಿಶಿಷ್ಟವಾಗಿ ದಲ್ಲಾಳಿಯಿಂದ ಪೂರ್ವಭಾವಿಯಾಗಿ ಅಥೈಸಲ್ಪಟ್ಟ ಒಂದು ಅನುಪಾತವಾಗಿರುತ್ತದೆ), ದಲ್ಲಾಳಿಯು ಠೇವಣಿ ಹಣದ ಕರೆಯೊಂದನ್ನು ನೀಡುತ್ತಾನೆ. ಇದರ ಅನುಸಾರ ಗಿರಾಕಿಯು ಹೆಚ್ಚು ನಿಧಿಗಳನ್ನು ಠೇವಣಿ ಇರಿಸುವುದು ಅಥವಾ ತನ್ನ ಖಾತೆಯನ್ನು ಸಮಾಪ್ತಿಗೊಳಿಸುವುದು ಅಗತ್ಯವಾಗುತ್ತದೆ.

ಉಪಪ್ರಧಾನ ಬಿಕ್ಕಟ್ಟಿನ ಮೇಲಿನ ಪರಿಣಾಮ ಮತ್ತು 2008ರ ತುರ್ತು ಆರ್ಥಿಕ ಸ್ಥಿರೀಕರಣ ಕಾಯಿದೆ

[ಬದಲಾಯಿಸಿ]

FDICಯ ಹಿಂದಿನ ಸಭಾಪತಿಯಾದ ವಿಲಿಯಂ ಐಸಾಕ್‌ ಎಂಬಾತ, ಉಪಪ್ರಧಾನ ಅಡಮಾನ ಬಿಕ್ಕಟ್ಟಿಗೆ ಭದ್ರತೆಗಳು ಮತ್ತು ವಿನಿಮಯ ಕೇಂದ್ರದ ಆಯೋಗ ಮತ್ತು ಅದರ ನ್ಯಾಯೋಚಿತ-ಮೌಲ್ಯದ ಲೆಕ್ಕಗಾರಿಕೆ ನಿಯಮಗಳೇ ಕಾರಣ ಎಂದು ಹೇಳುವ ಮೂಲಕ ಅವನ್ನು ಹೆಚ್ಚಿನ ರೀತಿಯಲ್ಲಿ ಹೊಣೆಯಾಗಿಸಿದ. ಅದರಲ್ಲೂ ವಿಶೇಷವಾಗಿ ಬ್ಯಾಂಕುಗಳು ತಮ್ಮ ಸ್ವತ್ತುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಅಡಮಾನ-ಬೆಂಬಲಿತ ಭದ್ರತೆಗಳನ್ನು ಮಾರುಕಟ್ಟೆಗೆ ಮೌಲ್ಯನಿರ್ಣಯಿಸುವುದಕ್ಕಾಗಿ ಹೊಂದಿದ್ದ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಈ ಆರೋಪವು ಕೇಳಿಬಂತು.[] ಇದು ನಿಜವೋ ಅಥವಾ ಅಲ್ಲವೋ ಎಂಬುದರ ನಡುವೆಯೇ, ಇದು ಚಾಲ್ತಿಯಲ್ಲಿರುವ ಚರ್ಚೆಯ ವಸ್ತುವಾಗುತ್ತಾ ಬಂದಿದೆ.[][]

ಈ ಚರ್ಚೆಯು ಹುಟ್ಟಿಕೊಳ್ಳಲು ಕಾರಣವೇನೆಂದರೆ, ಈ ಲೆಕ್ಕಗಾರಿಕೆಯ ನಿಯಮದ ಅನುಸಾರ, ಮಾರುಕಟ್ಟೆ ಮಾಡಬಹುದಾದ ಭದ್ರತೆಗಳ [ಬಿಕ್ಕಟ್ಟಿನ ಕೇಂದ್ರಭಾಗದಲ್ಲಿರುವ ಅಡಮಾನ-ಬೆಂಬಲಿತ ಭದ್ರತೆಗಳಂಥವು (ಮಾರ್ಟ್‌ಗೇಜ್‌-ಬ್ಯಾಕ್ಡ್‌ ಸೆಕ್ಯುರಿಟೀಸ್‌-MBS)] ಮೌಲ್ಯವನ್ನು ಕಂಪನಿಗಳು ಅವುಗಳ ಮಾರುಕಟ್ಟೆ ಮೌಲ್ಯಕ್ಕೆ ಸರಿಹೊಂದಿಸುವುದು ಅಗತ್ಯವಾಗಿದೆ. ಹೂಡಿಕೆದಾರರು ಕೇವಲ ಈ ಸ್ವತ್ತುಗಳ ಐತಿಹಾಸಿಕ ಖರೀದಿ ಬೆಲೆಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಸೂಕ್ತ ಸಮಯದಲ್ಲಿನ ಒಂದು ಘಟ್ಟದಲ್ಲಿ ಈ ಸ್ವತ್ತುಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವುದು ಈ ಮಾನದಂಡದ ಆಶಯವಾಗಿದೆ. ಈ ಸ್ವತ್ತುಗಳಿಗೆ ಸಂಬಂಧಿಸಿದ ಮಾರುಕಟ್ಟೆಯು ಕಷ್ಟದಲ್ಲಿ ಸಿಲುಕಿರುವುದರಿಂದ, ಮಾರುಕಟ್ಟೆಯ ಒತ್ತಡಗಳ ಪ್ರತಿವರ್ತನೀಯವಾಗಿ ಇರಬಹುದಾದ (ಅಥವಾ ಇರದಿರಬಹುದಾದ), MBSಗೆ ಸಂಬಂಧಪಟ್ಟ ಅಡಮಾನ ನಗದು ಹರಿವು ಅರ್ಹತೆಯನ್ನು ಪಡೆಯುವ ಮೌಲ್ಯಕ್ಕಿಂತ ಕೆಳಗಿರುವ ಬೆಲೆಗಳನ್ನು ಹೊರತುಪಡಿಸಿದ ಬೆಲೆಗಳಲ್ಲಿ ಅನೇಕ MBSನ್ನು ಮಾರುವುದು ಕಷ್ಟವಾಗಿರುತ್ತದೆ. ಕಂಪನಿಗಳು ಮತ್ತು ಅವುಗಳ ಲೆಕ್ಕಪರಿಶೋಧಕರಿಂದ ಆರಂಭದಲ್ಲಿ ವ್ಯಾಖ್ಯಾನಿಸಲ್ಪಟ್ಟಂತೆ, ವಿಶಿಷ್ಟವಾಗಿ ಕಡಿಮೆಯಾಗಿರುವ ಮಾರಾಟ ಮೌಲ್ಯವು ನಗದು ಹರಿವಿನ ಮೌಲ್ಯಕ್ಕಿಂತ ಹೆಚ್ಚಾಗಿ ಮಾರುಕಟ್ಟೆ ಮೌಲ್ಯವಾಗಿ ಬಳಸಲ್ಪಟ್ಟಿತು. ಅನೇಕ ಬೃಹತ್‌ ಹಣಕಾಸು ಸಂಸ್ಥೆಗಳು, 2007 ಮತ್ತು 2008ರ ಅವಧಿಯಲ್ಲಿ ಆದ ಗಣನೀಯ ಪ್ರಮಾಣದ ನಷ್ಟಗಳನ್ನು ಅಂಗೀಕರಿಸಿದವು. MBS ಸ್ವತ್ತು ಬೆಲೆಗಳನ್ನು ಮಾರುಕಟ್ಟೆ ಮೌಲ್ಯಕ್ಕೆ ತಗ್ಗಿಸಿದ ಪ್ರಮಾಣದಲ್ಲಿ ಮೌಲ್ಯನಿರ್ಣಯಿಸಿದ್ದು ಇದಕ್ಕೆ ಕಾರಣವಾಗಿತ್ತು.

ಕೆಲವೊಂದು ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಇದು ಒಂದು ಠೇವಣಿ ಹಣದ ಕರೆಯನ್ನೂ ಪ್ರಚೋದಿಸಿತು. ಇಲ್ಲಿ MBSನ್ನು ಒಂದು ಮೇಲಾಧಾರವಾಗಿ ಬಳಸಿಕೊಂಡು ನಿಧಿಗಳನ್ನು ಒದಗಿಸಿದ್ದ ಸಾಲದಾತರು, ತಮ್ಮ ಹಣವನ್ನು ಮರಳಿ ಪಡೆಯಲು ಒಪ್ಪಂದದ ಸ್ವರೂಪದ ಹಕ್ಕುಗಳನ್ನು ಹೊಂದಿದ್ದರು.[] ಇದು ಮತ್ತಷ್ಟು ಒತ್ತಾಯಿಸಲ್ಪಟ್ಟ MBS ಮಾರಾಟಗಳಿಗೆ ಹಾಗೂ ಠೇವಣಿ ಹಣದ ಕರೆಯ ಅನುಸಾರ ಪಾವತಿಸಲು ಅಗತ್ಯವಾಗಿದ್ದ ನಗದನ್ನು (ದ್ರವ ಆಸ್ತಿ) ಗಳಿಸುವಲ್ಲಿನ ಪ್ರಯತ್ನಗಳಿಗೆ ಕಾರಣವಾಯಿತು. ಬ್ಯಾಂಕಿನ ನಿಯಂತ್ರಕ ಬಂಡವಾಳದ ಮೌಲ್ಯವನ್ನೂ ಸಹ ಬೆಲೆಯಿಳಿಕೆಯು ತಗ್ಗಿಸಬಲ್ಲದು. ಹೆಚ್ಚುವರಿ ಬಂಡವಾಳದ ಸಂಗ್ರಹಣೆಯ ಅವಶ್ಯಕತೆಯನ್ನು ಮತ್ತು ಬ್ಯಾಂಕಿನ ಸ್ಥಿತಿಗತಿಗಳಿಗೆ ಸಂಬಂಧಿಸಿದ ಅನಿಶ್ಚಿತತೆಯನ್ನು ಸೃಷ್ಟಿಸುವುದು ಇದರ ಪರಿಣಾಮಗಳಾಗಿರುತ್ತವೆ.[೧೦]

ಇದು ಹಣಕಾಸಿನ ಹತೋಟಿಯ ವ್ಯಾಪಕ ಬಳಕೆ (ಅಂದರೆ, ಹೂಡಿಕೆಗಾಗಿ ಎರವಲು ತರುವುದು, ಒಂದು ವೇಳೆ ಅವನತಿಯು ಸಂಭವಿಸಿದರೆ ಸೀಮಿತ ಅವಕಾಶವನ್ನು ಉಳಿಸುವುದು), ಠೇವಣಿ ಹಣದ ಕರೆಗಳು ಮತ್ತು ಬಿಕ್ಕಟ್ಟನ್ನು ಉಲ್ಬಣಗೊಳಿಸಿರಬಹುದಾದ ವರದಿಯಾಗಿರುವ ಬೃಹತ್‌ ನಷ್ಟಗಳು ಇವುಗಳ ಸಂಯೋಜನೆಯಾಗಿದೆ.[೧೧] ಒಂದು ವೇಳೆ ನಗದು ಹರಿವಿನಿಂದ ಹುಟ್ಟಿಕೊಂಡ ಮೌಲ್ಯವು ಬಳಕೆಯಾದರೆ (ಮಾರಾಟ ಮೌಲ್ಯಕ್ಕೆ ಬದಲಾಗಿ), ಲೆಕ್ಕಗಾರಿಕೆಯ ಮಾನದಂಡದ ಅಡಿಯಲ್ಲಿನ ಮಾರುಕಟ್ಟೆ-ಮೌಲ್ಯದ ಹೊಂದಾಣಿಕೆಗಳ ಗಾತ್ರವು ವಿಶಿಷ್ಟವಾಗಿ ತಗ್ಗಿಸಲ್ಪಡುತ್ತದೆ. ಒಂದು ವೇಳೆ ಮಾರುಕಟ್ಟೆಯು ಸಾಕಷ್ಟು ಪ್ರಮಾಣದಲ್ಲಿ ಕಷ್ಟದಲ್ಲಿ ಸಿಲುಕಿಕೊಂಡಿದ್ದರೆ, 'ವಾಸ್ತವಿಕ' ಮೌಲ್ಯವನ್ನು ಹೆಚ್ಚು ಕರಾರುವಾಕ್ಕಾಗಿ ಪ್ರತಿಬಿಂಬಿಸಬಲ್ಲದರ ಜೊತೆಗೆ ಕರ್ತವ್ಯಲೋಪದ ಅಪಾಯವಾಗಿಯೂ ಮಾರುಕಟ್ಟೆಯ ತೀರ್ಮಾನವನ್ನು ನಗದು ಹರಿವಿನಿಂದ ಹುಟ್ಟಿಕೊಂಡ ಮೌಲ್ಯವು ಹೊರಗಿಡುತ್ತದೆ. ತಮ್ಮ ನಿಯಂತ್ರಕ ಬಂಡವಾಳದ ಆಧಾರದ ಭಾಗವಾಗಿ, MBS ಅಥವಾ ಮುಂದೂಡಲ್ಪಟ್ಟ ತೆರಿಗೆಯ ಸ್ವತ್ತುಗಳಂಥ ಹೆಚ್ಚು-ಅಪಾಯದ, ಮೌಲ್ಯ ನಿರ್ಣಯಿಸುವುದು ಕಷ್ಟಕರವಾಗಿರುವ ಸ್ವತ್ತುಗಳನ್ನು ಬಳಸಲು, ಬ್ಯಾಂಕುಗಳು ಅಥವಾ GSEಗಳಿಗೆ (ಫ್ಯಾನ್ನೀ ಮೇ ಮತ್ತು ಫ್ರೆಡ್ಡೀ ಮ್ಯಾಕ್‌‌) ಏಕೆ ಅವಕಾಶ ದೊರೆಯುತ್ತದೆ ಎಂದು ಯಾರಾದರೊಬ್ಬರು ಪ್ರಶ್ನಿಸಬಹುದು. ಒಂದು ಠೇವಣಿ ಹಣದ ಕರೆಯು ಭಾಗಿಯಾಗಿದ್ದಲ್ಲಿ, ಅದು ಸ್ವತಃ ಲೆಕ್ಕಗಾರಿಕೆ ಮಾನದಂಡದ ಭಾಗವಾಗಿರುವುದಿಲ್ಲ; ಅದು ಸಾಲದಾತ ಮತ್ತು ಎರವಲುಗಾರನ ನಡುವೆ ತೀರ್ಮಾನಿಸಲ್ಪಟ್ಟ ಕರಾರುಗಳ ಭಾಗವಾಗಿರುತ್ತದೆ.

ಟೀಕಾಕಾರರು ಈ ಕುರಿತು ಆಪಾದಿಸುತ್ತಾ, "ಸಂಕ್ಷಿಪ್ತವಾಗಿ ಹೇಳುವುದಾದರೆ, ವರ್ಧಿಸಲ್ಪಟ್ಟ ಹಣಕಾಸಿನ ಸಾಧನಗಳನ್ನು ಸೃಷ್ಟಿಸುವಲ್ಲಿ, ಅಥವಾ ಮತ್ತೆಂದೂ ಮರುಪಾವತಿ ಮಾಡಲಾಗದ ಸಾಲಗಳನ್ನು ಮಾಡುವಲ್ಲಿ ಬ್ಯಾಂಕುಗಳು ಬೇಜವಾಬ್ದಾರಿತನದಿಂದ ವರ್ತಿಸಿದವು ಎಂಬುದು ಇಲ್ಲಿನ ಸಮಸ್ಯೆಯಲ್ಲ. ತಪ್ಪನ್ನು ಒಪ್ಪಿಕೊಳ್ಳಲು ಯಾರೋ ಒಬ್ಬರು ಅವುಗಳನ್ನು ಬಲವಂತ ಮಾಡುತ್ತಿರುವುದು ಸಮಸ್ಯೆಯಾಗಿದೆ. ಒಂದು ವೇಳೆ, ಸ್ವತ್ತುಗಳು ಮೌಲ್ಯಯುತವಾಗಿದ್ದವು ಎಂದು ಬ್ಯಾಂಕುಗಳು ಮಾತ್ರ ನಟಿಸಲು ಸಾಧ್ಯವಾಗುವುದಾದರೆ, ಆಗ ವ್ಯವಸ್ಥೆಯು ಸುರಕ್ಷಿತವಾಗಿರುತ್ತದೆ" ಎಂದು ಸಮರ್ಥಿಸಿದ್ದಾರೆ.[೧೨]

ಒಂದು ಮಾರುಕಟ್ಟೆಯು ಅವ್ಯವಸ್ಥೆಗೊಂಡಿರುವ ಅಥವಾ ಜಡವಾಗಿರುವ ನಿದರ್ಶನಗಳಲ್ಲಿ ನ್ಯಾಯೋಚಿತ ಮೌಲ್ಯದ ಲೆಕ್ಕಗಾರಿಕೆಯನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ, 2008ರ ಸೆಪ್ಟೆಂಬರ್‌‌ 30ರಂದು, SEC ಹಾಗೂ FASB ಒಂದು ಜಂಟಿ ಸ್ಪಷ್ಟೀಕರಣವನ್ನು ನೀಡಿದವು. ಇದೊಂದು "ವ್ಯವಸ್ಥಿತವಾದ" ವ್ಯವಹಾರ ನಿರ್ವಹಣೆಯಲ್ಲವಾದ್ದರಿಂದ, ಒತ್ತಾಯಪೂರ್ವಕವಾದ ಫೈಸಲಾತಿಗಳು ನ್ಯಾಯೋಚಿತ ಮೌಲ್ಯದ ಸೂಚಕವಲ್ಲ ಎಂದು ಈ ಮಾರ್ಗದರ್ಶನವು ಸ್ಪಷ್ಟೀಕರಿಸುತ್ತದೆ. ಮತ್ತೂ ಮುಂದುವರಿದು ಇದು ಸ್ಪಷ್ಟೀಕರಿಸುವ ಪ್ರಕಾರ, ನ್ಯಾಯೋಚಿತ ಮೌಲ್ಯದ ಅಂದಾಜುಗಳನ್ನು ಇಂಥ ಸಾಧನಗಳಿಂದ ಬರುವ ನಿರೀಕ್ಷಿತ ನಗದು ಹರಿವುಗಳನ್ನು ಬಳಸಿಕೊಂಡು ಮಾಡಬಹುದು; ಕರ್ತವ್ಯಲೋಪ ಮತ್ತು ದ್ರವ ಆಸ್ತಿಯ ಅಪಾಯಗಳಿಗೆ ಸಂಬಂಧಿಸಿದ ಹೊಂದಾಣಿಕೆಗಳಂಥ, ಓರ್ವ ಸಿದ್ಧನಿರುವ ಖರೀದಿದಾರನು ಮಾಡಬಹುದಾದ ಹೊಂದಾಣಿಕೆಗಳನ್ನು ಸದರಿ ಅಂದಾಜುಗಳು ಪ್ರತಿಬಿಂಬಿಸಿದರೆ ಇದು ಸಾಧ್ಯವಾಗುತ್ತದೆ.[೧೩]

2008ರ ತುರ್ತು ಆರ್ಥಿಕ ಸ್ಥಿರೀಕರಣ ಕಾಯಿದೆಯ "ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯನ್ನು ರದ್ದುಪಡಿಸಲು ಇರುವ ಅಧಿಕಾರ" ಎಂಬ ಶೀರ್ಷಿಕೆಯನ್ನುಳ್ಳ 132ನೇ ಕಲಮು, ಭದ್ರತೆಗಳು ಮತ್ತು ವಿನಿಮಯ ಆಯೋಗದ ಅಧಿಕಾರವನ್ನು ಪುನರುಚ್ಚರಿಸುತ್ತಾ, ಒಂದು ವೇಳೆ ಅದು ಸಾರ್ವಜನಿಕರ ಹಿತಾಸಕ್ತಿಯನ್ನಿಟ್ಟುಕೊಂಡಿದೆ ಮತ್ತು ಹೂಡಿಕೆದಾರರನ್ನು ರಕ್ಷಿಸುತ್ತದೆ ಎಂದು SEC ನಿರ್ಣಯಿಸಿದಲ್ಲಿ FAS 157ರ ಅರ್ಜಿಯನ್ನು ರದ್ದುಮಾಡುವ ಅಧಿಕಾರವನ್ನು ಅದು ಹೊಂದಿದೆ ಎಂದು ತಿಳಿಸುತ್ತದೆ.

"ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯ ಮೇಲಿನ ಅಧ್ಯಯನ" ಎಂಬ ಶೀರ್ಷಿಕೆಯನ್ನು ಹೊಂದಿರುವ, ಕಾಯಿದೆಯ 133ನೇ ಕಲಮು ಬಯಸುವ ಪ್ರಕಾರ, ಫೆಡರಲ್‌ ರಿಸರ್ವ್‌ ಮಂಡಳಿ ಮತ್ತು ಸರ್ಕಾರದ ಖಜಾನೆಯ ಇಲಾಖೆಯೊಂದಿಗೆ SECಯು ಸಮಾಲೋಚಿಸಿ, FAS 157ರಲ್ಲಿ ಅವಕಾಶ ಕಲ್ಪಿಸಲಾಗಿರುವಂತೆ ಮಾರುಕಟ್ಟೆ ಮೌಲ್ಯನಿರ್ಣಯ ಲೆಕ್ಕಗಾರಿಕೆಯ ಮಾನದಂಡಗಳ ಮೇಲೆ ಅಧ್ಯಯನವೊಂದನ್ನು ನಡೆಸುವುದು ಅಗತ್ಯವಾಗಿದೆ. ಅಷ್ಟೇ ಅಲ್ಲ, ಆಯವ್ಯಯ ಪಟ್ಟಿಗಳ ಮೇಲಿನ ಅದರ ಪರಿಣಾಮಗಳು, ಹಣಕಾಸಿನ ಮಾಹಿತಿಯ ಗುಣಮಟ್ಟದ ಮೇಲಿನ ಪ್ರಭಾವ, ಮತ್ತು ಇತರ ಸಂಗತಿಗಳು ಅಧ್ಯಯನದಲ್ಲಿ ಸೇರಿರಬೇಕಿದ್ದು, ಅದು ಕಂಡುಕೊಂಡ ಅಂಶಗಳನ್ನು ಕುರಿತಂತೆ 90 ದಿನಗಳೊಳಗಾಗಿ ಔಪಚಾರಿಕ ಸಭೆಗೆ ವರದಿ ನೀಡುವುದು ಅಗತ್ಯವಾಗಿರುತ್ತದೆ.[೧೪]

2008ರ ಅಕ್ಟೋಬರ್‌ 3ರಂದು 2008ರ ತುರ್ತು ಆರ್ಥಿಕ ಸ್ಥಿರೀಕರಣ ಕಾಯಿದೆ ಯು ಅನುಮೋದಿಸಲ್ಪಟ್ಟಿತು ಮತ್ತು ಕಾನೂನಾಗಿ ಅಂಗೀಕರಿಸಲ್ಪಟ್ಟಿತು. 2008ರ ತುರ್ತು ಆರ್ಥಿಕ ಸ್ಥಿರೀಕರಣ ಕಾಯಿದೆಯ 133ನೇ ಖಂಡದಿಂದ ಪ್ರಮಾಣೀಕರಿಸಲ್ಪಟ್ಟಂತೆ, "ಮಾರುಕಟ್ಟೆ ಮೌಲ್ಯನಿರ್ಣಯ" ಲೆಕ್ಕಗಾರಿಕೆಯ ಮೇಲಿನ ಒಂದು ಅಧ್ಯಯನವನ್ನು ನಡೆಸಲು 2008ರ ಅಕ್ಟೋಬರ್‌ 7ರಂದು SECಯು ಪ್ರಾರಂಭಿಸಿತು.[೧೫]

ಆ ಸ್ವತ್ತಿಗೆ ಸಂಬಂಧಿಸಿದ ಮಾರುಕಟ್ಟೆಯು ವರದಿಮಾಡಲ್ಪಟ್ಟ ಒಂದು ದಿನಾಂಕದಲ್ಲಿ ಸಕ್ರಿಯವಾಗಿರದ ನಿದರ್ಶನಗಳಲ್ಲಿ, ನ್ಯಾಯೋಚಿತ ಮೌಲ್ಯವನ್ನು ಹೇಗೆ ಅಂದಾಜಿಸುವುದು ಎಂಬುದರ ಕುರಿತಾದ ಒಂದು ಉದಾಹರಣೆಯನ್ನು ಒದಗಿಸಲು, FASBಯು 2008ರ ಅಕ್ಟೋಬರ್‌ 10ರಂದು ಮುಂದಿನ ಮಾರ್ಗದರ್ಶನವನ್ನು ನೀಡಿತು.[೧೬]

2008ರ ಡಿಸೆಂಬರ್‌‌ 30ರಂದು, 133ನೇ ಖಂಡದ ಅಡಿಯಲ್ಲಿ SECಯು ತನ್ನ ವರದಿಯನ್ನು ನೀಡಿತು ಮತ್ತು ಮಾರುಕಟ್ಟೆ ಮೌಲ್ಯನಿರ್ಣಯದ ಲೆಕ್ಕಗಾರಿಕೆಯನ್ನು ರದ್ದುಪಡಿಸದಿರಲು ನಿರ್ಧರಿಸಿತು.[೧೭]

2009ರ ಮಾರ್ಚ್‌ 10ರಂದು, ವಾಷಿಂಗ್ಟನ್‌ನಲ್ಲಿ ನಡೆದ ವಿದೇಶೀ ಸಂಬಂಧಗಳ ಕುರಿತಾದ ಪರಿಷತ್ತಿನಲ್ಲಿ ಮಾಡಲಾದ ಟೀಕೆಗಳಲ್ಲಿ, ಫೆಡರಲ್‌ ರಿಸರ್ವ್‌ ಸಭಾಪತಿಯಾದ ಬೆನ್‌ ಬೆರ್ನಾಂಕೆ ಹೀಗೆ ಹೇಳಿದ: "ನಿಯಂತ್ರಕ ಕಾರ್ಯನೀತಿಗಳು ಮತ್ತು ಲೆಕ್ಕಗಾರಿಕೆ ನಿಯಮಗಳು ಹಣಕಾಸಿನ ವ್ಯವಸ್ಥೆ ಮತ್ತು ಆರ್ಥಿಕತೆಯಲ್ಲಿ ಅಳತೆಮೀರಿದ ಆಂದೋಲನವನ್ನು ಪ್ರಚೋದಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವನ್ನು ನಾವು ಅವಲೋಕಿಸಬೇಕಾಗುತ್ತದೆ." ಮಾರುಕಟ್ಟೆ ಮೌಲ್ಯನಿರ್ಣಯದ ತತ್ತ್ವಗಳ ಮೂಲಭೂತ ಪ್ರತಿಪಾದನೆಯ ಸಂಪೂರ್ಣ ರದ್ದತಿಯನ್ನು ಅವನು ಬೆಂಬಲಿಸುವುದಿಲ್ಲವಾದರೂ, ಅದನ್ನು ಸುಧಾರಿಸುವುದರ ಕುರಿತು ಹಾಗೂ ಅವುಗಳ ಕಾಲಚಕ್ರದ-ಪರವಾದ ಪರಿಣಾಮಗಳನ್ನು ತಗ್ಗಿಸಲು ಸ್ವತ್ತುಗಳ ಮೌಲ್ಯನಿರ್ಣಯಿಸಲು ಇರುವ ಸಮಂಜಸವಾದ ಹಾದಿಗಳ ಕುರಿತಾಗಿ "ಮಾರ್ಗದರ್ಶನವನ್ನು" ಒದಗಿಸಲು ಆತ ಮುಕ್ತವಾದ ಮನಸ್ಸನ್ನು ಹೊಂದಿದ್ದಾನೆ.[೧೮]

"ಮಾರುಕಟ್ಟೆ ಮೌಲ್ಯನಿರ್ಣಯ"ದ ಲೆಕ್ಕಗಾರಿಕೆಯ ಅಡಿಯಲ್ಲಿ ತಮ್ಮ ಸ್ವತ್ತುಗಳನ್ನು ಮೌಲ್ಯಮಾಪನ ಮಾಡುವಲ್ಲಿನ ಹೆಚ್ಚು ಕಾರ್ಯಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಕಂಪನಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾವವನ್ನು 2009ರ ಮಾರ್ಚ್‌ 16ರಂದು, FASB ಮಂಡಿಸಿತು. ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ತಾವು ಅನುಭವಿಸುತ್ತಿದ್ದ ಆಯವ್ಯಯ ಪಟ್ಟಿಯ ಒತ್ತಡಗಳನ್ನು ಈ ಕ್ರಮವು ಸರಾಗಗೊಳಿಸಬಲ್ಲದು ಎಂದು ಅನೇಕ ಕಂಪನಿಗಳು ಹೇಳಿವೆ. 15-ದಿನಗಳ ಅವಧಿಯ ಒಂದು ಸಾರ್ವಜನಿಕ ಅಭಿಪ್ರಾಯದ ಅವಧಿಯ ನಂತರ, 2009ರ ಏಪ್ರಿಲ್‌ 2ರಂದು FASBಯು ಮಾರುಕಟ್ಟೆ ಮೌಲ್ಯನಿರ್ಣಯದ ನಿಯಮಗಳನ್ನು ಸರಾಗಗೊಳಿಸಿತು. ನಿಯಮಗಳ ಅನುಸಾರ ಹಣಕಾಸು ಸಂಸ್ಥೆಗಳು ಈಗಲೂ ಮಾರುಕಟ್ಟೆ ಬೆಲೆಗಳಿಗೆ ವ್ಯವಹಾರ ನಿರ್ವಹಣೆಗಳನ್ನು ನಿರ್ಣಯಿಸುವುದು ಅಗತ್ಯವಾಗಿದೆಯಾದರೂ, ಒಂದು ಸ್ಥಿರವಾದ ಮಾರುಕಟ್ಟೆಯಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿದ್ದರೆ, ಮಾರುಕಟ್ಟೆಯು ನಿಷ್ಕ್ರಿಯವಾಗಿದ್ದಾಗ ಕಡಿಮೆಯಾಗಿರುತ್ತದೆ. ನಿಯಮಗಳ ಪ್ರತಿಪಾದಕರ ಪ್ರಕಾರ, ಒಂದು ಆಳವಾಗಿ ದುರ್ಬಲಗೊಂಡ ಆರ್ಥಿಕತೆಯನ್ನು ಉಂಟುಮಾಡಬಲ್ಲ ಅನವಶ್ಯಕ "ಧನಾತ್ಮಕ ಪ್ರತಿಕ್ರಿಯೆಯ ಸುರುಳಿಯನ್ನು" ಇದು ತೆಗೆದುಹಾಕುತ್ತದೆ.[೧೯]

ಮಾರುಕಟ್ಟೆಯು ಅಸ್ಥಿರ ಅಥವಾ ನಿಷ್ಕ್ರಿಯವಾಗಿದ್ದಾಗ ಮಾರುಕಟ್ಟೆ ಮೌಲ್ಯನಿರ್ಣಯ ನಿಯಮಗಳನ್ನು ಸರಾಗಗೊಳಿಸುವ FAS 157ಗೆ[೨೦] ಅಧಿಕೃತವಾದ ಪರಿಷ್ಕರಣೆಯನ್ನು 2009ರ ಏಪ್ರಿಲ್‌ 9ರಂದು FASB ಜಾರಿಮಾಡಿತು. ಮುಂಚಿತವಾಗಿ ಅಳವಡಿಸಿಕೊಳ್ಳುವವರಿಗೆ ಅಧಿಕಾರ ಪ್ರಯೋಗಕ್ಕಾಗಿ ಅರ್ಜಿ ಸಲ್ಲಿಸಲು 2009ರ ಮಾರ್ಚ್‌ 15ರ ದಿನಾಂಕವನ್ನು ನಿಗದಿಗೊಳಿಸಿದರೆ, ಉಳಿದವರಿಗೆ 2009ರ ಜೂನ್‌ 15ರ ದಿನಾಂಕವನ್ನು ನಿಗದಿಗೊಳಿಸಲಾಯಿತು. ಈ ಬದಲಾವಣೆಗಳು ಬ್ಯಾಂಕುಗಳ ಗಳಿಕೆಗಳ ಲೆಕ್ಕಪಟ್ಟಿಗಳನ್ನು ಗಣನೀಯವಾಗಿ ವರ್ಧಿಸುತ್ತವೆ ಮತ್ತು ವರದಿಯಾಗುತ್ತಿರುವ ನಷ್ಟಗಳನ್ನು ಮುಂದೂಡಲು ಅವುಗಳಿಗೆ ಅವಕಾಶ ಮಾಡಿಕೊಡುತ್ತವೆ ಎಂದು ನಿರೀಕ್ಷಿಸಲಾಗಿತ್ತು.[೨೧] ಆದಾಗ್ಯೂ, ಅಡಮಾನ-ಬೆಂಬಲಿತ ಭದ್ರತೆಗಳನ್ನು ಹಿಡುವಳಿಯಾಗಿ ಹೊಂದಿರುವ ಬ್ಯಾಂಕುಗಳಿಗೆ ಮಾತ್ರವೇ ಅಲ್ಲದೇ, ಉತ್ಪನ್ನಗಳ ಒಂದು ವ್ಯಾಪಕ ಶ್ರೇಣಿಗೂ ಅನ್ವಯವಾಗುವ ಲೆಕ್ಕಗಾರಿಕೆಯ ಮಾನದಂಡಗಳ ಮೇಲೆ ಈ ಬದಲಾವಣೆಗಳು ಪರಿಣಾಮ ಬೀರಿದವು.

ವಿರೋಧಿಗಳು ವಾದಿಸುವ ಪ್ರಕಾರ, ಹೂಡಿಕೆದಾರರಿಗೆ ಸಂಬಂಧಿಸಿದ ಸೂಚ್ಯಾರ್ಥಗಳೆಂದರೆ, ಇಂಥ ಭದ್ರತೆಗಳಿಗೆ ಆಧಾರವಾಗಿರುವ ಸ್ವತ್ತುಗಳ ಮೌಲ್ಯನಿರ್ಣಯವು ವಿಶ್ಲೇಷಿಸಲು ಹೆಚ್ಚುಕಷ್ಟವಾಗುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಒಂದು ಕಂಪನಿಯ ವಾಸ್ತವಿಕ ಸ್ವತ್ತುಗಳು, ಇಕ್ವಿಟಿ ಹಾಗೂ ಗಳಿಕೆಗಳನ್ನು ನಿರ್ಣಯಿಸುವುದು ಇದಕ್ಕೊಂದು ಉದಾಹರಣೆಯಾಗಬಲ್ಲದು. ಒಂದು ವೇಳೆ ಸೂಕ್ತವಾಗಿ ಬೆಲೆಯಿಳಿಕೆಗೆ ಈಡಾಗಲು ಸ್ವತ್ತುಗಳಿಗೆ ಅವಕಾಶವಾಗದಿದ್ದಲ್ಲಿ, ಸದರಿ ನಿರ್ಣಯವು ಉತ್ಪ್ರೇಕ್ಷೆಯಾಗುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ][೨೨][೨೩]

UKಯ ಫೈನಾನ್ಷಿಯಲ್‌ ಸರ್ವೀಸಸ್‌ ಅಥಾರಿಟಿಯ ಸಭಾಪತಿಯಾದ ಅಡೇರ್‌ ಟರ್ನರ್‌ ಎಂಬಾತ 2010ರ ಜನವರಿಯಲ್ಲಿ ಮಾತನಾಡುತ್ತಾ, ಮಾರುಕಟ್ಟೆಯ ಮೌಲ್ಯನಿರ್ಣಯಿಸುವಿಕೆಯು ಹಣದುಬ್ಬರ ಉಂಟುಮಾಡಿದ ಬ್ಯಾಂಕರುಗಳ ಬೋನಸ್‌ಗಳ ಒಂದು ಕಾರಣವಾಗಿತ್ತು ಎಂದು ತಿಳಿಸಿದ. ಇದು ಹೀಗೇಕೆಂದರೆ, ಬ್ಯಾಂಕುಗಳ ಲಾಭದ ಅಂದಾಜುಗಳೊಳಗೆ ಪೂರೈಕೆ ಮಾಡುವ ಒಂದು ಏರುಹಂತದಲ್ಲಿರುವ ಮಾರುಕಟ್ಟೆಯ ಅವಧಿಯಲ್ಲಿ ಅದು ಒಂದು ಸ್ವಯಂ-ಬಲವರ್ಧಿಸುವ ಆವರ್ತನವನ್ನು ಉಂಟುಮಾಡುತ್ತದೆ.[೨೪]

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "SEC ಇನ್ಫೋ - ಚಿಕಾಗೊ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ ಇಂಕ್‌ - S-4/A - ಆನ್‌ 3/10/00". Archived from the original on 2016-03-03. Retrieved 2010-06-03.
  2. ಫೈನಾನ್ಷಿಯಲ್‌ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌ ಬೋರ್ಡ್‌"ಸಮ್ಮರಿ ಆಫ್‌ ಸ್ಟೇಟ್‌ಮೆಂಟ್‌ ನಂ. 157 Archived 2010-05-23 ವೇಬ್ಯಾಕ್ ಮೆಷಿನ್ ನಲ್ಲಿ." 2009ರ ಜೂನ್‌ 13ರಂದು ಮರುಸಂಪಾದಿಸಲಾಯಿತು.
  3. ‌ಟೌಬ್ S. (2007). FAS 157 ಕುಡ್‌ ಕಾಸ್‌ ಹ್ಯೂಜ್‌ ರೈಟ್‌-ಆಫ್ಸ್‌ Archived 2008-09-19 ವೇಬ್ಯಾಕ್ ಮೆಷಿನ್ ನಲ್ಲಿ.. CFO.com.
  4. "FASB ನ್ಯೂಸ್‌ ಸೆಂಟರ್‌". Archived from the original on 2010-06-29. Retrieved 2010-06-03.
  5. *Crouhy, Michel (2001). Risk Management. McGraw-Hill. pp. 752 pages. ISBN 0-07-135731-9. {{cite book}}: Unknown parameter |coauthors= ignored (|author= suggested) (help) ಪುಟ 445.
  6. "ಫಾರ್ಮರ್‌ FDIC ಚೃ್‌ ಬ್ಲೇಮ್ಸ್‌ SEC ಫಾರ್‌ ಕ್ರೆಡಿಟ್‌ ಕ್ರಂಚ್‌", CNBC, ಅಕ್ಟೋಬರ್‌ 9, 2008. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  7. fair.value: ದಿ ಪ್ರಾಗ್ಮಾಟಿಕ್‌ ಸಲ್ಯೂಷನ್‌, ಫಾರ್ಚೂನ್‌ , ನವೆಂಬರ್‌ 21, 2008. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  8. ‌ಫೋರ್ಬ್ಸ್, ಸ್ಟೀವ್‌. "ಒಬಾಮಾ ರಿಪೀಟ್ಸ್‌ ಬುಷ್‌'ಸ್‌ ವರ್ಸ್ಟ್‌ ಮಾರ್ಕೆಟ್‌ ಮಿಸ್ಟೇಕ್ಸ್‌" ದಿ ವಾಲ್‌‌ ಸ್ಟ್ರೀಟ್‌ ಜರ್ನಲ್‌. ಮಾರ್ಚ್ 6, 2009. 2009ರ ಜೂನ್‌ 13ರಂದು ಮರುಸಂಪಾದಿಸಲಾಯಿತು.
  9. ಎಕ್ಸಾಂಪಲ್‌ ಆಫ್‌ ಎ ಮಾರ್ಜಿನ್‌ ಕಾಲ್‌
  10. ಕಟ್ಜ್‌‌, ಇಯಾನ್‌. "ಬಿಹೈಂಡ್‌ ಷ್ವಾರ್ಜ್‌ಮನ್‌ ಸ್ಪ್ಯಾಟ್‌ ವಿತ್‌ ವಾಸರ್‌ಸ್ಟೀನ್‌ ಲೈಸ್‌ ರೂಲ್‌ 115" ಬ್ಲೂಮ್‌ಬರ್ಗ್‌ ನ್ಯೂಸ್‌. ಡಿಸೆಂಬರ್‌ 8, 2008 2009ರ ಜೂನ್‌ 13ರಂದು ಮರುಸಂಪಾದಿಸಲಾಯಿತು.
  11. ‌ವೆಸ್ಟ್‌ಬ್ರೂಕ್, ಜೆಸ್ಸೆ."SEC, FASB ರೆಸಿಸ್ಟ್‌ ಕಾಲ್ಸ್‌ ಟು ಸಸ್ಪೆಂಡ್‌ ಫೇರ್‌-ವ್ಯಾಲ್ಯೂ ರೂಲ್ಸ್‌" ಬ್ಲೂಮ್‌ಬರ್ಗ್‌ ನ್ಯೂಸ್‌. ಸೆಪ್ಟೆಂಬರ್‌ 30, 2008. 2009ರ ಜೂನ್‌ 13ರಂದು ಮರುಸಂಪಾದಿಸಲಾಯಿತು.
  12. ಬ್ಯಾಂಕರ್ಸ್‌ ಸೇ ರೂಲ್ಸ್‌ ಆರ್‌ ದಿ ಪ್ರಾಬ್ಲಂ, ನ್ಯೂಯಾರ್ಕ್‌ ಟೈಮ್ಸ್‌, ಮಾರ್ಚ್‌ 12, 2009. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  13. ಕ್ಲಾರಿಫಿಕೇಷನ್‌ ಆನ್‌ ಫೇರ್‌ ವ್ಯಾಲ್ಯೂ ಅಕೌಂಟಿಂಗ್‌, SEC, ಸೆಪ್ಟೆಂಬರ್‌ 30, 2008. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  14. ""2008ರ ತುರ್ತು ಆರ್ಥಿಕ ಸ್ಥಿರೀಕರಣ ಕಾಯಿದೆ"" (PDF). Archived from the original (PDF) on 2009-01-16. Retrieved 2010-06-03.
  15. SEC ಕಮೆನ್ಸಸ್‌ ವರ್ಕ್‌ ಆನ್‌ ಕಾಂಗ್ರೆಷನಲಿ ಮ್ಯಾಂಡೇಟೆಡ್‌ ಸ್ಟಡಿ ಆನ್‌ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌, SEC, ಅಕ್ಟೋಬರ್‌ 7, 2008. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  16. "FASB ಸ್ಪಷ್ಟೀಕರಣಗಳು" (PDF). Archived from the original (PDF) on 2010-12-14. Retrieved 2010-06-03.
  17. ಕಾಂಗ್ರೆಷನಲಿ-ಮ್ಯಾಂಡೇಟೆಡ್‌ ಸ್ಟಡಿ ಸೇಸ್‌ ಇಂಪ್ರೂವ್‌, ಡು ನಾಟ್‌ ಸಸ್ಪೆಂಡ್‌, ಫೇರ್‌ ವ್ಯಾಲ್ಯೂ ಅಕೌಂಟಿಂಗ್‌ ಸ್ಟಾಂಡರ್ಡ್ಸ್‌, SEC, ಡಿಸೆಂಬರ್‌ 30, 2008. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  18. ಬರ್ನಾಂಕೆ ಅರ್ಜಸ್‌ ರೂಲ್ಸ್‌ ಓವರ್‌ಹೌಲ್‌ ಟು ಸ್ಟೆಮ್‌ ರಿಸ್ಕ್‌ ಬಿಲ್ಡ್‌-ಅಪ್ಸ್‌, ಬ್ಲೂಮ್‌ಬರ್ಗ್‌, ಮಾರ್ಚ್‌ 10, 2009. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  19. FASB ಈಸಸ್‌ ಮಾರ್ಕೆಟ್‌-ಟು-ಮಾರ್ಕೆಟ್‌ ರೂಲ್ಸ್‌, WSJ, ಏಪ್ರಿಲ್‌ 3, 2009. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  20. "FAS 157-4 ಸ್ಟೇಟಸ್‌". Archived from the original on 2017-06-25. Retrieved 2022-10-16.
  21. ಮಾರ್ಕೆಟ್‌-ಟು-ಮಾರ್ಕೆಟ್‌ ಲಾಬಿ ಬಯೋಸ್‌ ಬ್ಯಾಂಕ್‌ ಪ್ರಾಫಿಟ್ಸ್‌ 20% ಆಸ್‌ FASB ಮೇ ಸೇ ಯೆಸ್‌, ಬ್ಲೂಮ್‌ಬರ್ಗ್‌, ಮಾರ್ಚ್‌ 29, 2009. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು
  22. ಹೌ $1 ಟ್ರಿಲಿಯನ್‌ ಟೈಂ ಬಾಂಬ್‌ ಪೋಸ್ಟ್ಸ್‌ ಎ ಫೋನಿ ಪ್ರಾಫಿಟ್‌: ಜೋನಾಥನ್‌ ವೆಯ್ಲ್‌, ಬ್ಲೂಮ್‌ಬರ್ಗ್‌, 7 ಏಪ್ರಿಲ್‌ 2010
  23. ಸ್ಯೂಯಿಂಗ್‌ ವಾಲ್‌ ಸ್ಟ್ರೀಟ್‌ ಬ್ಯಾಂಕ್ಸ್‌ ನೆವರ್‌ ಲುಕ್ಡ್‌ ಸೋ ಷೇಡಿ: ಜೋನಾಥನ್‌ ವೆಯ್ಲ್‌, ಬ್ಲೂಮ್‌ಬರ್ಗ್‌, 24 ಫೆಬ್ರವರಿ 2010
  24. ಫೇರ್‌ ವ್ಯಾಲ್ಯೂ ಫ್ಯಾಟೆನ್ಡ್‌ ಬ್ಯಾಂಕರ್ಸ್‌ ಬೋನಸಸ್‌: ಲಾರ್ಡ್‌ ಟರ್ನರ್‌, ಅಕೌಂಟೆನ್ಸಿ ಏಜ್‌, 21 ಜನವರಿ 2010. 2010ರ ಜನವರಿ 25ರಂದು ಮರುಸಂಪಾದಿಸಲಾಯಿತು