ಮಾರ್ಕಸ್ ಪೀಟರ್ ಸ್ಟೋನಿಸ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್, ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[೧][೨][೩][೪]
ಮಾರ್ಕಸ್ ರವರು ಅಗಸ್ಟ್ ೧೬, ೧೯೮೯ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ ಜನಿಸಿದರು. ಮಾರ್ಕಸ್ ರವರು ತಮ್ಮ ಬಾಲ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದ ೧೭ರ ವಯೋಮಿತಿ ಹಾಗೂ ೧೯ರ ವಯೋಮಿತಿ ತಂಡಗಳಲ್ಲಿ ಆಡಿದರು. ನಂತರ ೨೦೧೨ರ ೧೯ರ ವಯೋಮಿತಿಯ ಕ್ರಿಕೆಟ್ ವಿಶ್ವ ಕಪ್ ಸರಣಿಯಲ್ಲಿ ಆಸ್ಟ್ರೇಲಿಯಾದ ೧೯ ವಯೋಮಿತಿ ತಂಡದಲ್ಲಿ ಸ್ಥಾನ ಪಡೆದರು. ಅದರ ನಂತರ ಮುಂದಿನ ವರ್ಷ ಇವರು ಆಸ್ಟ್ರೇಲಿಯಾದ ಟೀಮ್ ನಲ್ಲಿ ಸ್ಥಾನ ಪಡೆದರು.[೫][೬][೭][೮][೯][೧೦][೧೧]
ಮಾರ್ಕಸ್ ಜನವರಿ ೩೦, ೨೦೦೯ರಲ್ಲಿ ಬ್ರಿಸ್ಬೇನ್ ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ ಲ್ಯಾನ್ದ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೧೨]
ಮಾರ್ಕಸ್ ರವರು ಅಗಸ್ಟ್ ೩೧, ೨೦೧೫ ರಂದು ಕಾರ್ಧಿಫ್ ನಲ್ಲಿ ಇಂಗ್ಲೆಂಡ್ ತಂಡದ ವಿರುಧ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೩] ಸೆಪ್ಟಂಬರ್ ೧೧, ೨೦೧೫ ರಂದು ಲೀಡ್ಸ್ ನಲ್ಲಿ ಇಂಗ್ಲೆಂಡ್ ತಂಡದ ವಿರುಧ್ಧ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೪]