ಮಾಸ್ಟರ್ ಮಂಜುನಾಥ್ | |
---|---|
![]() (ಎಡ) ಮಾಲ್ಗುಡಿ ಡೇಸ್ ನ ಸ್ವಾಮಿ, (ಬಲ) ಇತ್ತೀಚಿನ ಚಿತ್ರ | |
ಜನನ | ಮಂಜುನಾಥ್ ನಾಯಕರ್ 23 December 1976 |
ರಾಷ್ಟ್ರೀಯತೆ | ಭಾರತೀಯ |
ಶಿಕ್ಷಣ | ಚಿತ್ರ ನಟ |
Known for | ಸ್ವಾಮಿ-ಮಾಲ್ಗುಡಿ ಡೇಸ್ (೧೯೮೭) ರವಿಚಂದ್ರನ್ರಣಧೀರ (೧೯೮೭) ನಟನೆ |
Spouse | ಸ್ವರ್ಣರೇಖಾ ನಾಯಕರ್ |
ಮಂಜುನಾಥ್ ನಾಯಕರ್ (ಇಂಗ್ಲೀಷ್:Master Manjunath) ರವರು ಭಾರತೀಯ ನಟ ಮತ್ತು ಪಬ್ಲಿಕ್ ರಿಲೇಷನ್ಶಿಪ್ ವೃತ್ತಿಪರರು. ಪರದೆಯ ಹೆಸರು ಮಾಸ್ಟರ್ ಮಂಜುನಾಥ್ ಎಂಬ ಹೆಸರಿನಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಇವರು ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ (೧೯೮೭) ಎಂಬ ಜನಪ್ರಿಯ ದೂರದರ್ಶನದ ಸರಣಿಯಲ್ಲಿನ "ಸ್ವಾಮಿ ಆಂಡ್ ಫ್ರೆಂಡ್ಸ್" ಸಂಚಿಕೆಗಳಲ್ಲಿ ಕಾಣಲು ಸಿಗುವ "ಸ್ವಾಮಿ" ಎಂಬ ಪ್ರಮುಖ ಪಾತ್ರದಿಂದ ಪ್ರಖ್ಯಾತರಾಗಿದ್ದಾರೆ.[೧][೨]
ಮಾಸ್ಟರ್ ಮಂಜುನಾಥ್ ಅವರು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಇಂಗ್ಲೀಷ್ ನಲ್ಲಿ ಹಾಗೂ ಎಂ.ಎ ಪದವಿಯನ್ನು ಸಮಾಜಶಾಸ್ತ್ರದಲ್ಲಿ ಪಡಿದಿದ್ದಾರೆ. ಇವರು ಛಾಯಾಗ್ರಹಣ ಮತ್ತು CA ಫೌಂಡೇಷನ್ ಕೋರ್ಸ್ನಲ್ಲಿ ಡಿಪ್ಲೊಮವನ್ನು ಕೂಡ ಹೊಂದಿದ್ದಾರೆ.[೩]
ತನ್ನ ಮೂರು ವರ್ಷದ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿದ ಮಾಸ್ಟರ್ ಮಂಜುನಾಥ್ ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ೬೮ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಸ್ವಾಮಿ ಮತ್ತು ಫ್ರೆಂಡ್ಸ್ ನ ಅವರ ಪಾತ್ರದಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಈ ಪಾತ್ರಕ್ಕಾಗಿ ಆರು ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಪ್ರಶಸ್ತಿಗಳನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಸರಣಿಯು ೧೯೮೫-೮೬ ರಲ್ಲಿ ತನ್ನ ಶಾಲೆಯ ರಜೆಯ ಸಮಯದಲ್ಲಿ ಚಿತ್ರೀಕರಿಸಲಾಯಿತು ತದನಂತರ ೧೯೮೭ ರಲ್ಲಿ ಪ್ರಸಾರವಾಯಿತು.
ಅವರು ಸೂಪರ್-ಹಿಟ್ ಸಿನೆಮಾ ನಟ-ನಿರ್ದೇಶಕ ಶಂಕರ್ ನಾಗ್ ರವರ 'ನೋಡಿ ಸ್ವಾಮಿ ನಾವಿರೋದೆ ಹೀಗೆ', 'ಎಸ್.ಪಿ.ಸಾಂಗ್ಲಿಯಾನಾ-೧', 'ಎಸ್.ಪಿ. ಸಾಂಗ್ಲಿಯಾನಾ-೨' ರಲ್ಲಿ ಅಭಿನಯಿಸಿದ್ದಾರೆ. ಅಮಿತಾಭ್ ಬಚ್ಚನ್ ಅಭಿನಯಿಸಿದ ಬಾಲಿವುಡ್ ನ ಅಗ್ನಿಪಥ್ (೧೯೯೦) ಚಿತ್ರದಲ್ಲಿನ ಯುವ ವಿಜಯ್ ದೀನನಾಥ್ ಚೌಹಾಣ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ತನ್ನ ಅಧ್ಯಯನದ ಮೇಲೆ ಗಮನವಹಿಸಲು ತನ್ನ ೧೯ನೇ ವಯಸ್ಸಿನಲ್ಲಿ ಅವರು ನಟನೆಯನ್ನು ತೊರೆದರು.
ಅವರು ಪಿ.ಆರ್ ವೃತ್ತಿಪರರಾಗಿದ್ದರು ಮತ್ತು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ (ಬಿ.ಎಂ.ಐ.ಸಿ.ಪಿ) ಗೆ ಕೆಲಸ ಮಾಡಿದ್ದಾರೆ.[೩] ಅವರು ಈಗ ತಮ್ಮ ಸ್ವಂತ ಪಿ.ಆರ್ ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ.
ಮಂಜುನಾಥ್ ರವರು ಕ್ರೀಡಾಪಟು (ಒಟ ಹಾಗು ಜಿಗಿತ ಪಟು) ಸ್ವರ್ಣರೇಖಾರನ್ನು ವಿವಾಹವಾದರು.[೨]
ವರ್ಷ | ಚಲನಚಿತ್ರ | ಪಾತ್ರ | ಭಾಷೆ |
---|---|---|---|
೧೯೮೨ | ಅಜಿತ್ | ಗೊವಿಂದ | ಕನ್ನಡ |
೧೯೮೨ | ಮುತ್ತಿನಂಥ ಅತ್ತಿಗೆ | ಕನ್ನಡ | |
೧೯೮೨ | ಟೋನಿ | ದಾಮೋಧರ | ಕನ್ನಡ |
೧೯೮೩ | ಜಗ್ಗು | ಕನ್ನಡ | |
೧೯೮೩ | ಹೊಸ ತೀರ್ಪು | ಸೀನು | ಕನ್ನಡ |
೧೯೮೩ | ಬ್ಯಾಂಕರ್ ಮಾರ್ಗಯ್ಯ | ಬಾಲ್ಯದ ಬಾಲು | ಕನ್ನಡ |
೧೯೮೩ | ನೋಡಿ ಸ್ವಾಮಿ ನಾವಿರೋದು ಹೀಗೆ | ಚೋಟು | ಕನ್ನಡ |
೧೯೮೪ | ಉತ್ಸವ್ | ಹಿಂದಿ | |
೧೯೮೪ | ರಕ್ತ ತಿಲಕ | ಹನುಮಂತು | ಕನ್ನಡ |
೧೯೮೪ | ನಗಬೇಕಮ್ಮ ನಗಬೇಕು | ಕನ್ನಡ | |
೧೯೮೪ | ಅವಳ ಅಂತರಂಗ | ಕನ್ನಡ | |
೧೯೮೪ | ಎದಿರು ಅಲೆಗಳು | ಕನ್ನಡ | |
೧೯೮೪ | ಮಕ್ಕಳಿರಲವ್ವ ಮನೆತುಂಬ | ಕೃಷ್ಣ | ಕನ್ನಡ |
೧೯೮೪ | ಕಲಿಯುಗ | ಮಂಜ | ಕನ್ನಡ |
೧೯೮೪ | ನೇತ್ರ ಪಲ್ಲವಿ | ಕನ್ನಡ | |
೧೯೮೪ | ಮೂರು ಜನ್ಮ | ಕನ್ನಡ | |
೧೯೮೪ | ತಾಳಿಯ ಬಾಗ್ಯ | ಕನ್ನಡ | |
೧೯೮೪ | ಬೆಂಕಿ ಬಿರುಗಾಳಿ | ರಾಜು | ಕನ್ನಡ |
೧೯೮೫ | ಗೂಂಡಾಗುರು | ಲಕ್ಕೊ | ಕನ್ನಡ |
೧೯೮೫ | ಮಾನವ ದಾನವ | ಅಮರ್ | ಕನ್ನಡ |
೧೯೮೫ | ಕುರಿ ದೊಡ್ಡಿ ಕುರುಕ್ಷೇತ್ರ | ಕನ್ನಡ | |
೧೯೮೫ | ಪರಮೇಶಿ ಪ್ರೇಮ ಪ್ರಸಂಗ | ಕನ್ನಡ | |
೧೯೮೬ | ದೇವತೆ | ಕನ್ನಡ | |
೧೯೮೬ | ನನ್ನವರು | ಕನ್ನಡ | |
೧೯೮೭ | ರಣಧೀರ | ಕನ್ನಡ | |
೧೯೮೭ | ಮಾಲ್ಗುಡಿ ಡೇಸ್ | ಸ್ವಾಮಿ | ಹಿಂದಿ ಹಾಗೂ ಇಂಗ್ಲೀಷ್ (ಚಿತ್ರ ಸರಣಿಗಳು) |
೧೯೮೭ | ಹುಲಿ ಹೆಬ್ಬುಲಿ | ವಿಜಯೇಂದ್ರ | ಕನ್ನಡ |
೧೯೮೭ | ಪೂರ್ಣ ಚಂದ್ರ | ಕನ್ನಡ | |
೧೯೮೭ | ಈ ಬಂಧ ಅನುಬಂಧ | ಮಂಜು | ಕನ್ನಡ |
೧೯೮೮ | ನವ ಬಾರತ | ರವಿ | ಕನ್ನಡ |
೧೯೮೮ | ಸಾಂಗ್ಲಿಯಾನ | ಅವಿನಾಶ್ | ಕನ್ನಡ |
೧೯೮೮ | ವರ್ಣ ಚಕ್ರ | ಕನ್ನಡ | |
೧೯೮೮ | ಅಂಜದ ಗಂಡು | ಕೇಶವ | ಕನ್ನಡ |
೧೯೮೮ | ರಣರಂಗ | ಆನಂದ್ | ಕನ್ನಡ |
೧೯೮೮ | ಸಾಹಸ ವೀರ | ಮಂಜು | ಕನ್ನಡ |
೧೯೮೮ | ತೇಜ | ಕನ್ನಡ | |
೧೯೮೯ | ಯುದ್ಧ ಕಾಂಡ | ಕನ್ನಡ | |
೧೯೮೯ | ಗುರು | ಕನ್ನಡ | |
೧೯೮೯ | ಶಾರವೇಗದ ಸರದಾರ | ಕನ್ನಡ | |
೧೯೮೯ | ಕಿಂದರಿ ಜೋಗಿ | ಬೊಂಮ್ಮಿ | ಕನ್ನಡ |
೧೯೮೯ | ಲವ್ ಮಾಡಿ ನೋಡು | ಗೋಪಿ | ಕನ್ನಡ |
೧೯೮೯ | ಬಂಗಾರದಾ ಬದುಕು | ಗೀತು | ಕನ್ನಡ |
೧೯೮೯ | ನರಸಿಂಹ | ಕನ್ನಡ | |
೧೯೯೦ | ಅಗ್ನೀಪಥ್ | ಬಾಲ್ಯದ ದೀನಾನಾಥ್ ಚೌಹಾಣ್ [೪] | ಹಿಂದಿ |
೧೯೯೦ | ಎಸ್.ಪಿ.ಸಾಂಗ್ಲಿಯಾನಾ-೨' | ಅವಿನಾಶ್ | ಕನ್ನಡ |
೧೯೯೦ | ಶಿವಶಂಕರ್' | ಮಂಜು | ಕನ್ನಡ |
೧೯೯೦ | ಮತ್ಸರ | ಕನ್ನಡ | |
೧೯೯೦ | ಶಬರಿಮಲೆ ಸ್ವಾಮಿ ಅಯ್ಯಪ್ಪ | ಕನ್ನಡ | |
೧೯೯೧ | ಭೇನಾಮ್ ಬಾದ್ಶಾ | ಹಿಂದಿ | |
೧೯೯೧ | ರಾಮಾಚಾರಿ | ರಾಮಾಚಾರಿ | ಕನ್ನಡ |
೧೯೯೨ | ವಿಶ್ವಾತ್ಮ | ಹಿಂದಿ | |
೧೯೯೨ | ಸ್ವಾತಿ ಕಿರಣಂ | ಗಂಗಾಧರಂ | ತೆಲುಗು |