ಮಿನುಗು | |
---|---|
ನಿರ್ದೇಶನ | ಆಂಥೋನಿ ಜಯವಂತ್ |
ನಿರ್ಮಾಪಕ | ಜಿ. ಗಜೇಂದ್ರ |
ಲೇಖಕ | ಆಂಥೋನಿ ಜಯವಂತ್ |
ಪಾತ್ರವರ್ಗ | ಪೂಜಾ ಗಾಂಧಿ , ಸುನಿಲ್ ರಾವ್ , ಅಜಿತ್ ಹಂದೆ |
ಸಂಗೀತ | ಗೋಪು , ರಾಜೇಶ್ ರಾಮನಾಥ್ (ಹಿನ್ನೆಲೆ ಸಂಗೀತ) |
ಛಾಯಾಗ್ರಹಣ | ಎಸ್. ಸತೀಶ್ ಕುಮಾರ್ |
ಸಂಕಲನ | ಎಚ್. ಎಸ್. ಶ್ರೀಕಾಂತ್ |
ಸ್ಟುಡಿಯೋ | ಅರ್ಪಿತಾ ಚಿತ್ರ |
ಬಿಡುಗಡೆಯಾಗಿದ್ದು | 2010 ರ ಜನವರಿ 1 |
ಅವಧಿ | 129 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಮಿನುಗು 2010 ರ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ಕಥಾ ಚಲನಚಿತ್ರವಾಗಿದ್ದು, ಜಾಹೀರಾತು-ಚಿತ್ರಗಳ ತಯಾರಕ ಆಂಥೋನಿ ಜಯವಂತ್ ಅವರು ಚಲನಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಈ ಚಿತ್ರದಲ್ಲಿ ಪೂಜಾ ಗಾಂಧಿ, ಸುನಿಲ್ ರಾವ್ ನಾಲ್ಕು ವರ್ಷಗಳ ನಂತರ [೧] ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ ಮತ್ತು ರಂಗಭೂಮಿ ನಟ ಅಜಿತ್ ಹಂದೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೨] ಈ ಚಿತ್ರವನ್ನು ಜಿ. ಗಜೇಂದ್ರ ಅವರು ನಿರ್ಮಿಸಿದ್ದಾರೆ, ಅವರು ನಿರ್ಮಾಪಕರಾಗಿ ತೆರೆಯ ಮೇಲೆ ಅತಿಥಿ ಪಾತ್ರವನ್ನು ಸಹ ಮಾಡಿದ್ದಾರೆ.
ಈ ಚಿತ್ರವು 2010 ರ ಮೊದಲ ದಿನದಂದು ಕರ್ನಾಟಕದ ಪರದೆಯಾದ್ಯಂತ ಬಿಡುಗಡೆಯಾಯಿತು. [೩] ಆದಾಗ್ಯೂ, ವಿಮರ್ಶಕರು ಉಲ್ಲೇಖಿಸಿದಂತೆ "ದುರ್ಬಲವಾದ ಸ್ಕ್ರಿಪ್ಟ್" ಕಾರಣ, ಚಿತ್ರವು ಗಲ್ಲಾಪೆಟ್ಟಿಗೆಯನ್ನು ಗೆಲ್ಲಲು ವಿಫಲವಾಯಿತು. [೪]
ಆದಿತ್ಯ ಮತ್ತು ಸಂಚಿತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಸ್ನೇಹಿತರಾಗುತ್ತಾರೆ. ಆದಿತ್ಯ ಸಂಚಿತಾ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ, ಅವಳು ಸಿನಿಮಾ ತಾರೆಯಾಗುವ ಕನಸುಗಳ ಮೇಲೆ ಕೇಂದ್ರೀಕರಿಸುತ್ತಾಳೆ. ಅಧ್ಯಯನದ ನಂತರ, ಅವಳು ಅಂತಿಮವಾಗಿ ಸಿನಿಮಾತಾರೆಯಾಗಿ ಧಿಡೀರ್ ಯಶಸ್ಸನ್ನು ಕಂಡುಕೊಳ್ಳುತ್ತಾಳೆ. ಆದಿತ್ಯ, ಮತ್ತೊಂದೆಡೆ, ನಿರುದ್ಯೋಗಿಯಾಗಿ ಉಳಿದು ಅವನ ಏಕೈಕ ಸಹೋದರಿಯ ಗಳಿಕೆಯ ಮೇಲೆ ಅವಲಂಬಿತನಾಗುತ್ತಾನೆ. ಸಂಚಿತಾ ತಾರಾಪಟ್ಟವನ್ನು ತಲುಪಿದ ನಂತರ ಅವನ ಪ್ರೀತಿಯು ಹೆಚ್ಚು ಬೆಳೆಯುತ್ತದೆ ಅವಳ ಯಶಸ್ಸಿನ ಬಗ್ಗೆ ಅಸೂಯೆಪಡುವ ಅವಳ ಸಹ-ನಟ ಸಿದ್ಧಾರ್ಥ್ ಅವರಗಮನದಲ್ಲಿ ಇದೆಲ್ಲವೂ ಇರುತ್ತದೆ. ಆದಿತ್ಯನನ್ನು ದಾಳವಾಗಿ ಬಳಸಿಕೊಂಡು ಅವಳನ್ನು ಕೀಳಾಗಿಸುವ ಸಂಚು ರೂಪಿಸುತ್ತಾನೆ. ಅವನು ಆದಿತ್ಯನೊಂದಿಗೆ ಸ್ನೇಹ ಬೆಳೆಸಿ ಅವಳನ್ನು ಕೆರಳಿಸುವ ಚಟುವಟಿಕೆಗಳನ್ನು ಮಾಡುವಂತೆ ಅವನನ್ನು ಕೇಳುತ್ತಾನೆ ಮತ್ತು ಅವಳು ಅವನನ್ನು ದ್ವೇಷಿಸುವಂತೆ ಮತ್ತು ಅವನನ್ನು ಜೈಲಿಗೆ ಕಳುಹಿಸುವಂತೆ ಮಾಡುತ್ತಾನೆ. ಸಂಚಿತಾ ಹೇಗೆ ಸಿದ್ಧಾರ್ಥನ ತಂತ್ರಗಳನ್ನು ಅರಿತುಕೊಳ್ಳುತ್ತಾಳೆ ಮತ್ತು ಅವಳು ಆದಿತ್ಯನೊಂದಿಗೆ ಹೇಗೆ ಮತ್ತೆ ಒಂದಾಗುತ್ತಾಳೆ ಎಂಬುದನ್ನು ಕಥೆಯ ಉಳಿದ ಭಾಗ .
ಚಿತ್ರೀಕರಣದ ಬಹುಪಾಲು ಭಾಗವು ಕರ್ನಾಟಕದ ಸಕಲೇಶಪುರದ ಸುಂದರವಾದ ಸ್ಥಳಗಳಲ್ಲಿ ನಡೆಯಿತು. [೫] ಕೆಲವು ಭಾಗಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.
ಎಲ್ಲಾ ಹಾಡುಗಳನ್ನು ಗೋಪು ಅವರು ಸಂಯೋಜಿಸಿ ಸಂಗೀತ ನೀಡಿದ್ದಾರೆ. 13 ಜುಲೈ 2009 [೬] ಹೋಟೆಲ್‌ನಲ್ಲಿ ಪ್ರಮುಖ ಪಾತ್ರಧಾರಿಗಳ ಹಾಜರಿಯಲ್ಲಿ ಆಡಿಯೊ ಬಿಡುಗಡೆ ಕಾರ್ಯಕ್ರಮವು ಸರಳವಾಗಿ ನೆರವೇರಿತು . ಆದಿತ್ಯ ಮ್ಯೂಸಿಕ್ 5 ಹಾಡುಗಳನ್ನು ಒಳಗೊಂಡ ಧ್ವನಿಮುದ್ರಿಕೆಯ ಹಕ್ಕುಗಳನ್ನು ಪಡೆದುಕೊಂಡಿದೆ. ನಿರ್ಮಾಪಕ ಗಜೇಂದ್ರ ಅವರ ತಾಯಿ ಆಡಿಯೋ ಬಿಡುಗಡೆ ಮಾಡಿದರು. ಹೊಸಬರಾದ ಶಿವ ಶಶಿ ಅಲಿಯಾಸ್ ಜಗದೀಶ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಕ್ರಮ ಸಂಖ್ಯೆ | ಹಾಡಿನ ಶೀರ್ಷಿಕೆ | ಗಾಯಕ(ರು) | ಸಾಹಿತ್ಯ |
---|---|---|---|
1 | "ಮಿನುಗು" | ಗೋಪು | ಶಿವ ಶಶಿ |
2 | "ನೀನೆ ನೀನೆ" | ವ್ಯಾಸ್ ರಾಜ್, ಅಪೂರ್ವ ಶ್ರೀಧರ್, ಪೂಜಾ ಗಾಂಧಿ | ಶಿವ ಶಶಿ |
3 | "ಹೇ ಸಂಚಿತಾ" | ಗೋಪು, ಅಪೂರ್ವ ಶ್ರೀಧರ್ | ಶಿವ ಶಶಿ |
4 | "ಒಲವ್" | ವ್ಯಾಸ ರಾಜ್ | ಶಿವ ಶಶಿ |
5 | "ಮನ್ನಿಸು" | ವ್ಯಾಸ ರಾಜ್ | ಶಿವ ಶಶಿ |
6 | "ನೀನೆ ನೀನೆ" | ಚೇತನ್ ಸೋಸ್ಕಾ, ಅಪೂರ್ವ ಶ್ರೀಧರ್ | ಶಿವ ಶಶಿ |