ಮಿಸ್ಟರ್ 420

ಮಿಸ್ಟರ್ 420
ಭಿತ್ತಿಚಿತ್ರ
Directed byಪ್ರದೀಪ್ ರಾಜ್
Written byಬಿ. ಎ. ಮಧು
Produced byಸಂದೇಶ್ ನಾಗರಾಜ್
Starringಗಣೇಶ್, ಪ್ರಣಿತಾ ಸುಭಾಷ್, ರಂಗಾಯಣ ರಘು
Cinematographyಆರ್. ಗಿರಿ
Edited byಕುಮಾರ್
Music byವಿ.ಹರಿಕೃಷ್ಣ
Release date
2012 ರ ಅಕ್ಟೋಬರ್ 19
Countryಭಾರತ
Languageಕನ್ನಡ

ಮಿಸ್ಟರ್ 420 - 2012 ರ ಕನ್ನಡ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಗಣೇಶ್ ಮತ್ತು ಪ್ರಣಿತಾ ಸುಭಾಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದು ಸಂದೇಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮತ್ತು ಆರ್.ಗಿರಿ ಅವರ ಛಾಯಾಗ್ರಹಣವಿದೆ. ಚಿತ್ರವು 19 ಅಕ್ಟೋಬರ್ 2012 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಿತು []

ಪಾತ್ರವರ್ಗ

[ಬದಲಾಯಿಸಿ]

ವಿಮರ್ಶೆಗಳು

[ಬದಲಾಯಿಸಿ]

ಮಿಸ್ಟರ್ 420 ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಾಧಾರಣದಿಂದ ನಕಾರಾತ್ಮಕವರೆಗಿನ ವಿಮರ್ಶೆಗಳನ್ನು ಪಡೆಯಿತು. ರೆಡಿಫ್ ಚಿತ್ರಕ್ಕೆ 2.5/5 ರೇಟಿಂಗ್ ನೀಡಿ "ಚಿತ್ರವು ಸಮಯ ಕಳೆಯುವುದಕ್ಕಾಗಿ ಮತ್ತು ಸ್ವಲ್ಪ ಮನರಂಜನೆಗಾಗಿ ನೋಡುತ್ತಿರುವವರಿಗೆ ಪರವಾಗಿಲ್ಲ" ಎಂದು ಕಾಮೆಂಟ್ ಮಾಡಿದೆ. [] 2.5/5 ರೇಟಿಂಗ್‌ನೊಂದಿಗೆ ಚಿತ್ರಕ್ಕೆ ಋಣಾತ್ಮಕ ವಿಮರ್ಶೆಯನ್ನು ನೀಡಿದ ಟೈಮ್ಸ್ ಆಫ್ ಇಂಡಿಯಾ "ಇದು ಹಳ್ಳಿ ಹುಡುಗನೊಬ್ಬ ನಗರದಲ್ಲಿ ಮಿಸ್ಟರ್ 420ಯಾಗಿ ಹೇಗೆ ಬದಲಾಗುತ್ತಾನೆ ಎಂಬುದರ ಮೇಲೂ ಮತ್ತು ಅವನ ಮುಜುಗರದ ಕ್ಷಣಗಳ ಮೇಲೂ ಕೇಂದ್ರೀಕರಿಸುವ ಸಿಲ್ಲಿ ಸೀಕ್ವೆನ್ಸ್‌ಗಳೊಂದಿಗೆ ಟೈಮ್ ಪಾಸ್ ಚಲನಚಿತ್ರವಾಗಿದೆ" ಎಂದು ಉಲ್ಲೇಖಿಸಿದೆ. [] DNA ಚಿತ್ರಕ್ಕೆ 1.5/5 ರೇಟಿಂಗ್ ನೀಡಿತು ಮತ್ತು "ಈ ಮಿಸ್ಟರ್ 420 ನಿಮ್ಮ ಜೇಬಿನಲ್ಲಿ ತೂತು ಮಾಡಲು ಬಿಡಬೇಡಿ, !" ಎಂದು ಎಚ್ಚರಿಸಿತು []

ಧ್ವನಿಮುದ್ರಿಕೆ

[ಬದಲಾಯಿಸಿ]

ಜಯಂತ್ ಕಾಯ್ಕಿಣಿಯವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ 5 ಹಾಡುಗಳನ್ನು ರಚಿಸಿದ್ದಾರೆ. []

ಸಂ.ಹಾಡುಹಾಡುಗಾರರುಸಮಯ
1."ಎಲ್ಲಾ ಲೊಳಲೊಟ್ಟೆ"ವಿಜಯ್ ಪ್ರಕಾಶ್  
2."ತಮಟೆ ಸೌಂಡು"ಕೈಲಾಶ್ ಖೇರ್, ಮಾಲತಿ ಲಕ್ಷ್ಮಣ್ 
3."ಶಾಂಪೂ ಹಾಕಲ್ವಾ"ಟಿಪ್ಪು, ಸೌಮ್ಯ ರಾವ್ 
4."ನೀ ಎಷ್ಟು ಮುದ್ದು"ಅನುರಾಧಾ ಭಟ್ , ಕಾರ್ತಿಕ್  
5."ತಲೆ ಕೆಡಿಸಬೇಡ"ರಂಜಿತ್, ನವೀನ್ ಮಾಧವ್ 

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 19 October 2012. Retrieved 2012-10-19.{{cite web}}: CS1 maint: archived copy as title (link)
  2. "Review: Mr 420 is mildly entertaining". rediff.com. 2012-10-19. Retrieved 2012-11-20.
  3. "Review: Mr. 420". timesofindia.com. 2012-10-19. Retrieved 2012-11-20.
  4. "Review: Mr. 420". dnaindia.com. 2012-10-19. Retrieved 2012-11-20.
  5. "Kannada Music - MusicIndiaOnline - Indian Music for Free!". Mio.to. Archived from the original on 30 ನವೆಂಬರ್ 2021. Retrieved 30 November 2021.

ಬಾಹ್ಯ ಕೊಂಡಿಗಳು

[ಬದಲಾಯಿಸಿ]