ಮೀತಾ ಲಾಲ್ ಮೆಹ್ತಾ | |
---|---|
ಜನನ | ೨೫ ಡಿಸೆಂಬರ್ ೧೯೩೮ |
ಮರಣ | ೭ ಡಿಸೆಂಬರ್ ೨೦೧೪ |
ವೃತ್ತಿ(ಗಳು) | ಸಮಾಜ ಸೇವಕ, ನಾಗರಿಕ ಸೇವಕ |
ಗಮನಾರ್ಹ ಕೆಲಸಗಳು | ಸಮಾಜ ಸೇವೆ |
ಪ್ರಶಸ್ತಿಗಳು | ಪದ್ಮಶ್ರೀ ಇಂದಿರಾ ಗಾಂಧಿ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಆಚಾರ್ಯ ಜೈ ಮಲ್ ಜ್ಞಾನ್ ಪ್ರಶಸ್ತಿ ಮೇವಾರ್ ಗೌರವ್ ಪ್ರಶಸ್ತಿ ಚಾಣಕ್ಯ ಪ್ರಶಸ್ತಿ |
ಮೀತಾ ಲಾಲ್ ಮೆಹ್ತಾ (೨೫ ಡಿಸೆಂಬರ್ ೧೯೩೮ - ೭ ಡಿಸೆಂಬರ್ ೨೦೧೪) ಒಬ್ಬ ಭಾರತೀಯ ನಾಗರಿಕ ಸೇವಕ, [೧] ರಾಜಸ್ಥಾನ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ [೨] [೩] ಮತ್ತು [೪] [೫] ರಾಜ್ಯದ ಬಡ ವರ್ಗಗಳ ಜನರ ಜೀವನೋಪಾಯವನ್ನು ಮೇಲ್ದರ್ಜೆಗೇರಿಸಲು ರಾಜಸ್ಥಾನ ಸರ್ಕಾರ ಮತ್ತು ಯುಎನ್ಡಿಪಿಯ ಜಂಟಿ ನೇತ್ರತ್ವದ ರಾಜಸ್ಥಾನ ಮಿಷನ್ ಆನ್ ಲೈವ್ಲಿಹುಡ್ಸ್ನ ( ಆರ್ಎಮ್ಒಎಲ್) ಮುಖ್ಯ ಸಂಸ್ಥಾಪಕರಾಗಿದ್ದರು . [೬] [೭] [೮] ಭಾರತ ಸರ್ಕಾರವು ೨೦೧೫ ರಲ್ಲಿ ಇವರಿಗೆ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. [೯]
೧೯೩೯ ರಲ್ಲಿ ಜನಿಸಿದ ಮೀತಾ ಲಾಲ್ ಮೆಹ್ತಾ ಅವರು ತಮ್ಮ ಆರಂಭಿಕ ಕಾಲೇಜು ಅಧ್ಯಯನವನ್ನು ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಮಾಡಿ, ಅಲ್ಲಿಂದ ಅವರು ಭೌತಶಾಸ್ತ್ರದಲ್ಲಿ ಪದವಿ ಪಡೆದು, ನಂತರ ರಾಜಸ್ಥಾನ ವಿಶ್ವವಿದ್ಯಾಲಯದಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. [೧] ನಗರೀಕರಣದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯಲು ಲಂಡನ್ [೧] ವಿಶ್ವವಿದ್ಯಾನಿಲಯದಲ್ಲಿ ಅವರು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಿದರು.[ಸಾಕ್ಷ್ಯಾಧಾರ ಬೇಕಾಗಿದೆ] ನಂತರ, ಅವರು ಭಾರತೀಯ ಆಡಳಿತ ಸೇವೆಯನ್ನು ಪ್ರವೇಶಿಸಿ ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದರು. [೧][ಸಾಕ್ಷ್ಯಾಧಾರ ಬೇಕಾಗಿದೆ] ಅವರು ೨ ಫೆಬ್ರವರಿ ೧೯೯೪ ರಿಂದ ೩೧ ಡಿಸೆಂಬರ್ ೧೯೯೭ ರವರೆಗೆ ಭೈರೋನ್ ಸಿಂಗ್ ಶೇಖಾವತ್ [೧೦] [೩] [೨] ಅವರ ಆಡಳಿತದ ಅವಧಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ನಾಗರಿಕ ಸೇವೆಯಿಂದ ನಿವೃತ್ತರಾದ ಮೇಲೆ, ಮೆಹ್ತಾ ಅವರು ರಾಜಸ್ಥಾನ ಮಿಷನ್ ಆನ್ ಲೈವ್ಲಿಹುಡ್ಸ್ ( ಆರ್ಎಮ್ಒಎಲ್) ನ ಅಧ್ಯಕ್ಷರಾದರು. [೪] ಈ ಕಾರ್ಯಕ್ರಮದ ಅಡಿಯಲ್ಲಿ, ಮೆಹ್ತಾ ಅವರು ಅಪ್ನಾ ರಿಕ್ಷಾ ಅಪ್ನೆ ನಾಮ್ ಯೋಜನಾ ನಂತಹ ಅನೇಕ ಯೋಜನೆಗಳನ್ನು ಪರಿಚಯಿಸಿದರು. ಅಲ್ಲಿ ರಾಜ್ಯದ ರಿಕ್ಷಾ ಚಾಲಕರು ತಮ್ಮ ಸ್ವಂತ ವಾಹನವನ್ನು ಹೊಂದಲು ಸಹಾಯ ಮಾಡಿದರು. [೧೧] [೧೨] ಈ ಯೋಜನೆಯು ಉತ್ತಮ ಕಾರ್ಯಕ್ಷಮತೆಗಾಗಿ ಅವರ ವಾಹನವನ್ನು ಮರುವಿನ್ಯಾಸಗೊಳಿಸುವುದಕ್ಕೆ ವ್ಯವಸ್ಥೆ ಮಾಡಿತು. [೧೧] [೧೨] ಅವರು ರಾಜಸ್ಥಾನದ ಗೃಹ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನಿರ್ದೇಶಕರಾಗಿ [ಸಾಕ್ಷ್ಯಾಧಾರ ಬೇಕಾಗಿದೆ] ಮತ್ತು ಪರಿಹಾರ ಸಮಿತಿ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಲೆಕ್ಕಪರಿಶೋಧನಾ ಸಮಿತಿಯಂತಹ ಮೂರು ರಾಜ್ಯ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. [೧] ಅವರು ರಾಜಸ್ಥಾನ ರಾಜ್ಯ ಗಣಿ ಮತ್ತು ಖನಿಜಗಳು (ಆರ್ ಎಸ್ ಎಸ್ ಎಮ್), ರಾಜಸ್ಥಾನ ರಾಜ್ಯ ಸಹಕಾರ ಬ್ಯಾಂಕ್ (ಆರ್ ಎಸ್ ಸಿ ಬಿ), ರಾಜಸ್ಥಾನ ರಾಜ್ಯ ಉಗ್ರಾಣ ನಿಗಮ (ಆರ್ ಎಸ್ ಡಬ್ಲ್ಯೂ ಸಿ), ಸ್ಪಿನ್ ಫೆಡ್ ಮತ್ತು ರಾಜಸ್ಥಾನ್ ನಾಲೆಡ್ಜ್ ಕೋರ್ಪೊರೇಷನ್ ಲಿಮಿಟೆಡ್ (ಆರ್ ಕೆ ಸಿ ಎಲ್) ನಂತಹ ಅನೇಕ ರಾಜ್ಯ ಸಾರ್ವಜನಿಕ ಉದ್ಯಮಗಳ ಮುಖ್ಯಸ್ಥರಾಗಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ] ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಮತ್ತು ಪ್ರಸಾರ ಭಾರತಿ ಮಂಡಳಿಯ ಸದಸ್ಯರೂ ಆಗಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ]
ಮೆಹ್ತಾ ಅವರು ಇಂದಿರಾ ಗಾಂಧಿ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ (೧೯೮೬), ಆಚಾರ್ಯ ಜೈ ಮಲ್ ಜ್ಞಾನ್ ಪ್ರಶಸ್ತಿ (೧೯೮೮), ಮೇವಾರ್ ಗೌರವ್ ಪ್ರಶಸ್ತಿ (೧೯೯೪) ಮತ್ತು ಚಾಣಕ್ಯ ಪ್ರಶಸ್ತಿ (೨೦೧೦) ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. [೧] ಅವರು ತಮ್ಮ ೭೫ ನೇ ವಯಸ್ಸಿನಲ್ಲಿ (೭ ಡಿಸೆಂಬರ್ ೨೦೧೪) [೧] ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. [೪] [೮] ಭಾರತ ಸರ್ಕಾರವು ಅವರನ್ನು ೨೦೧೫ ರ ಗಣರಾಜ್ಯೋತ್ಸವದ ಗೌರವಗಳ ಪಟ್ಟಿಯಲ್ಲಿ ಮರಣೋತ್ತರವಾಗಿ, ಪದ್ಮಶ್ರೀ ನಾಗರಿಕ ಪ್ರಶಸ್ತಿಗಾಗಿ ಸೇರಿಸಿತು. [೯]
[[ವರ್ಗ:೧೯೩೯ ಜನನ]]