ಮಹಾಲಕ್ಷ್ಮಿ ದೇವಸ್ಥಾನವು ಭಾರತದ ಮುಂಬೈ ನಗರದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ದೇವಿ ಮಹಾತ್ಮ್ಯಂನ ಪ್ರಧಾನ ದೇವತೆ ಮಹಾಲಕ್ಷ್ಮಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವನ್ನು ೧೮೩೧ ರಲ್ಲಿ ಹಿಂದೂ ವ್ಯಾಪಾರಿ ಧಕ್ಜಿ ದಾದಾಜಿ (೧೭೬೦-೧೮೪೬) ನಿರ್ಮಿಸಿದರು. [೧]
೧೭೮೫ ರ ಸುಮಾರಿನಲ್ಲಿ ನಿರ್ಮಿಸಲಾದ ಈ ದೇವಾಲಯದ ಇತಿಹಾಸವು ಹಾರ್ನ್‌ಬಿ ವೆಲ್ಲಾರ್ಡ್‌ನ ಕಟ್ಟಡದೊಂದಿಗೆ ಸಂಪರ್ಕ ಹೊಂದಿದೆ. ವೆಲ್ಲಾರ್ಡ್‌ನ ಸಮುದ್ರದ ಗೋಡೆಯ ಭಾಗಗಳು ಎರಡು ಬಾರಿ ಕುಸಿದ ನಂತರ, ಮುಖ್ಯ ಎಂಜಿನಿಯರುಗಳಾದ ಪಥರೆ ಪ್ರಭು, ರಾಮ್‌ಜಿ ಶಿವಾಜಿ ಪ್ರಭು, ವರ್ಲಿ ಬಳಿಯ ಸಮುದ್ರದಲ್ಲಿ ದೇವಿ ಪ್ರತಿಮೆಯ ಕನಸು ಕಂಡರು. ಆ ಕನಸಿನ ಹುಡುಕಾಟಡದಲ್ಲಿ, ಆ ಕನಸನ್ನು ಮರಳಿ ಪಡೆಯುತ್ತ ಅದಕ್ಕಾಗಿ ಒಂದು ದೇವಸ್ಥಾನವನ್ನು ನಿರ್ಮಿಸಿದನು.
ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತ್ರಿದೇವಿ ದೇವತೆಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಚಿತ್ರಗಳಿವೆ. ಮೂರೂ ಚಿತ್ರಗಳನ್ನು ಮೂಗಿನ ಉಂಗುರಗಳು, ಚಿನ್ನದ ಬಳೆಗಳು ಮತ್ತು ಮುತ್ತಿನ ಹಾರಗಳಿಂದ ಅಲಂಕರಿಸಲಾಗಿದೆ. ಮಹಾಲಕ್ಷ್ಮಿಯ ಚಿತ್ರವು ಮಧ್ಯದಲ್ಲಿ ಕಮಲದ ಹೂವುಗಳನ್ನು ಹಿಡಿದಿರುವಂತೆ ತೋರಿಸಲಾಗಿದೆ. ಈ ದೇವಾಲಯದ ಕಾಂಪೌಂಡ್ ಹಲವಾರು ಅಂಗಡಿಗಳನ್ನು ಹೊಂದಿದ್ದು, ಹೂವಿನ ಹಾರಗಳು ಮತ್ತು ಇತರ ಸಾಮಗ್ರಿಗಳನ್ನು ಭಕ್ತರು ಪೂಜೆಗೆ ಮತ್ತು ನೈವೇದ್ಯಕ್ಕೆ ಬಳಸುತ್ತಾರೆ.
ನವರಾತ್ರಿ ಆಚರಣೆಯ ಸಮಯದಲ್ಲಿ ಭಕ್ತಾದಿಗಳು ದೂರದ ಪ್ರದೇಶಗಳಿಂದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ದೇವಿಯನ್ನುವಿಶೇಶವಾಗಿ ಅಲಂಕರಿಸಲಾಗಿರುತದೆ. ಭಕ್ತಾದಿಗಳು ದೇವಿಗೆ ಪೂಜೆ ಅರ್ಪಿಸುವ ತೆಂಗಿನಕಾಯಿ, ಹೂವುಗಳು ಮತ್ತು ಸಿಹಿತಿಂಡಿಗಳನ್ನು ಹಿಡಿದುಕೊಂಡು ದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕು.
ದೇವಾಲಯವು, ಮಹಾಲಕ್ಷ್ಮಿ ರೈಲು ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ.
ತ್ರಯಂಬಕೇಶ್ವರ ದೇವಸ್ಥಾನ ಮತ್ತು ಮಹಾದೇವ ಕಾಲೇಶ್ವರ ದೇವಸ್ಥಾನವು ದೇವಾಲಯದ ಸಮೀಪದಲ್ಲಿದೆ.