ಮುಘಲಾಯಿ ಪರಾಠಾ ಒಂದು ಜನಪ್ರಿಯ ಬಂಗಾಳಿ ಬೀದಿ ಆಹಾರವಾಗಿದೆ, ವಿಶೇಷವಾಗಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ.[೧] ಇದು ಕೀಮಾ (ಕೊಚ್ಚಿದ ಮಾಂಸ), ಮೊಟ್ಟೆ, ಈರುಳ್ಳಿ ಹಾಗೂ ಮೆಣಸಿನ ಹೂರಣದಿಂದ ವರ್ಧಿತವಾದ ಒಂದು ಮೃದು, ಕರಿದ ಬ್ರೆಡ್ ಆಗಿರಬಹುದು;[೨] ಅಥವಾ ಇದೇ ಅಥವಾ ಹೋಲುವ ಪದಾರ್ಥಗಳಿಂದ ತುಂಬಿದ ಪರಾಠಾ ಆಗಿರಬಹುದು.[೩]
ಮುಘಲಾಯಿ ಪರಾಠಾ ಮುಘಲ್ ಸಾಮ್ರಾಜ್ಯದ ಅವಧಿಯಲ್ಲಿ ಅವಿಭಾಜಿತ ಬಂಗಾಳವನ್ನು ಪ್ರವೇಶಿಸಿದ ಮುಘಲಾಯಿ ಖಾದ್ಯಗಳಲ್ಲಿ ಒಂದಾಗಿತ್ತು. ಮುಘಲ್ ಆಳ್ವಿಕೆಯು ಗ್ರಾಮೀಣ ಬಾಂಗ್ಲಾದೇಶಕ್ಕಿಂತ ಬಹುತೇಕವಾಗಿ ಢಾಕಾದ ಪಾಕಪದ್ಧತಿ ಮೇಲೆ ಪ್ರಭಾವ ಬೀರಿತು.[೧] ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಇದು ಕಲ್ಕತ್ತಾದಲ್ಲಿ ಒಂದು ಜನಪ್ರಿಯ ತಿಂಡಿ ಆಹಾರವಾಯಿತು.
ಮುಘಲಾಯಿ ಪರಾಠಾದ ತಯಾರಿಕೆಯಲ್ಲಿ ಬಳಸಲಾದ ಪದಾರ್ಥಗಳು ಗೋಧಿ ಹಿಟ್ಟು, ತುಪ್ಪ, ಮೊಟ್ಟೆಗಳು, ಸಣ್ಣಗೆ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಕತ್ತರಿಸಿದ ಕೊತ್ತಂಬರಿಯನ್ನು ಒಳಗೊಳ್ಳಬಹುದು.[೪] ಕೆಲವು ರೂಪಗಳಲ್ಲಿ ಕೆಲವೊಮ್ಮೆ ಕೋಳಿಮಾಂಸ ಅಥವಾ ಆಡುಮಾಂಸದ ಕೀಮಾವನ್ನು ಕೂಡ ಬಳಸಲಾಗುತ್ತದೆ.