ಮುಷ್ಟಿಯುದ್ಧ

ಮುಷ್ಟಿಯುದ್ಧವು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಬಾಕ್ಸಿಂಗ್‍ನ ಸಾಂಪ್ರದಾಯಿಕ ರೂಪ.[] . ಮೂಲತಃ ಇದನ್ನು ಯಾವುದೇ ಬಾಕ್ಸಿಂಗ್ ಕಲೆಗಾಗಿ ಸಾಮಾನ್ಯ ಪದವಾಗಿ ಬಳಸಲಾಗಿದ್ದಿರಬಹುದಾದರೂ, ಇಂದು ಸಾಮಾನ್ಯವಾಗಿ ಇದು ಏಕೈಕ ಉಳಿದಿರುವ ನಿರಾಯುಧ ಶೈಲಿಯಾದ ವಾರಾಣಸಿಯ ಮುಕಿ ಬಾಕ್ಸಿಂಗ್‍ನ್ನು ಸೂಚಿಸುತ್ತದೆ. ಪಂಜಾಬ್‍ನಲ್ಲಿ ಇಂದೂ ಲೋಹ್ ಮುಷ್ಟಿ ಎಂದು ಕರೆಯಲ್ಪಡುವ ಬಾಕ್ಸಿಂಗ್‍ನ ಶಸ್ತ್ರಸಹಿತ ರೂಪ ಅಸ್ತಿತ್ವದಲ್ಲಿದೆ. ಇದರಲ್ಲಿ ಹೋರಾಡುವವರು ಒಂದು ಕೈಯ ಮೇಲೆ ಕಬ್ಬಿಣದ ಉಂಗುರವನ್ನು ಧರಿಸುತ್ತಾರೆ. ಆದರೆ ಇದನ್ನು ಈಗ ಮುಷ್ಟಿಯುದ್ಧದಲ್ಲಿ ಬಳಸಲಾಗುವುದಿಲ್ಲ.

ಮಹತ್ವಾಕಾಂಕ್ಷಿ ಬಾಕ್ಸರ್‌ಗಳು ವರ್ಷಗಟ್ಟಲೆ ಕಲಿಕೆಗೆ ಒಳಗಾಗಿ, ತಮ್ಮ ಮುಷ್ಟಿಗಳನ್ನು ಕಲ್ಲು ಮತ್ತು ಇತರ ಗಟ್ಟಿ ಮೇಲ್ಮೈಗಳಿಗೆ ಹೊಡೆದು ಕಠಿಣಗೊಳಿಸುತ್ತಾರೆ. ಇದು ಅವರು ಬರಿ ಕೈಗಳಿಂದ ತೆಂಗಿನಕಾಯಿಗಳು ಮತ್ತು ಬಂಡೆಗಳನ್ನು ಒಡೆಯಲು ಸಾಧ್ಯವಾಗುವವರೆಗೆ ಮಾಡುತ್ತಾರೆ. ತೊಡೆಸಂದನ್ನು ಹೊರತುಪಡಿಸಿ ದೇಹದ ಯಾವುದೇ ಭಾಗಕ್ಕೆ ಗುರಿಯಿಡಬಹುದು, ಆದರೆ ತಲೆ ಮತ್ತು ಎದೆ ಇವು ಮುಖ್ಯ ಗುರಿಗಳಾಗಿರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Donn F. Draeger and Robert W. Smith (1980). Comprehensive Asian Fighting Arts. Kodansha International. ISBN 978-0-87011-436-6.