ಮೂದಲಿಸುವಿಕೆ

ಮೂದಲಿಸುವಿಕೆ (ಹಂಗಿಸುವಿಕೆ) ಎಂದರೆ ಗ್ರಾಹಿಯ ಸ್ಥೈರ್ಯಗೆಡಿಸುವ ಅಥವಾ ಅವರಿಗೆ ಸಿಟ್ಟುಬರಿಸಿ ಯೋಚಿಸದೇ ಪ್ರತಿಕ್ರಿಯಾತ್ಮಕ ವರ್ತನೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿರುವ ಯುದ್ಧಘೋಷ, ಹೀಯಾಳಿಕೆಯ ಹೇಳಿಕೆ, ಸನ್ನೆ ಅಥವಾ ಅವಮಾನ.[] ಮೂದಲಿಸುವಿಕೆಯು ಗುರಿಯಾದ ವ್ಯಕ್ತಿಯ ಸಾಮಾಜಿಕ ಬಂಡವಾಳದ (ಅಂದರೆ ಸ್ಥಾನಮಾನ) ಮೇಲೆ ಹಿಡಿತ ಸಾಧಿಸಲು ಸಾಮಾಜಿಕ ಸ್ಪರ್ಧೆಯ ರೂಪವಾಗಿ ಅಸ್ತಿತ್ವದಲ್ಲಿರಬಹುದು. ಸಮಾಜಶಾಸ್ತ್ರೀಯ ಸಿದ್ಧಾಂತದಲ್ಲಿ, ಸಾಮಾಜಿಕ ಶ್ರೇಣಿವ್ಯವಸ್ಥೆಯಲ್ಲಿ ಇತರರ ಸಂಬಂಧವಾಗಿ ತಮ್ಮ ಸ್ವಂತದ ಸ್ಥಾನವನ್ನು ಒತ್ತಾಯದಿಂದ ಕಾರ್ಯಗತಮಾಡುವ ಸಲುವಾಗಿ ಅನುಕೂಲತೆಯನ್ನು ಸೃಷ್ಟಿಸಲು ಮೂರು ಸಾಮಾಜಿಕ ಬಂಡವಾಳಗಳ ನಿಯಂತ್ರಣವನ್ನು ಬಳಸಲಾಗುತ್ತದೆ. ನೇರವಾಗಿ ಮೂದಲಿಸಲಾಗುತ್ತದೆ ಅಥವಾ ಪರೋಕ್ಷವಾಗಿ ಗುರಿಯಾದ ವ್ಯಕ್ತಿಯನ್ನು ಮೂದಲಿಸುವಂತೆ ಇತರರನ್ನು ಪ್ರೋತ್ಸಾಹಿಸಲಾಗುತ್ತದೆ. ಗುರಿಯಾದ ವ್ಯಕ್ತಿಯು ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಅದೇ ರೀತಿಯ ಪ್ರತಿಕ್ರಿಯೆಯನ್ನು ನೀಡಬಹುದು, ಉದಾಹರಣೆಗೆ ಜಗಳಮಾತು ಮತ್ತು ಕಚಡ ಮಾತು.

ಉಲ್ಲೇಖಗಳು

[ಬದಲಾಯಿಸಿ]
  1. Keltner, Dacher; Capps, Lisa; Kring, Ann M.; Young, Randall C.; Heerey, Erin A. (March 2001). "Just teasing: A conceptual analysis and empirical review". Psychological Bulletin. 127 (2): 229–248. doi:10.1037/0033-2909.127.2.229.