ಸಂಕ್ಷಿಪ್ತ ಹೆಸರು | ಎಂ.ಸಿ.ಐ. |
---|---|
ಪ್ರಧಾನ ಕಚೇರಿ | ನವ ದೆಹಲಿ |
Leader | ಡಾ. ಜಯಶ್ರೀಬೆನ್ ಮೆಹ್ತಾ |
ಮುಖ್ಯ ಭಾಗ | ಕಾನ್ಸಿಲ್ |
ಅಧಿಕೃತ ಜಾಲತಾಣ | [https://www.mciindia.org |
ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು ಕಾನೂನು ಬದ್ದವಾಗಿ ಸ್ಥಾಪನೆಗೊಂಡ ಸಂಸ್ಥೆ. ದೇಶಾದ್ಯಂತ ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಹಾಗು ಏಕರೂಪದ ಹಾಗು ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಇದರ ಮೂಲ ಕಾರ್ಯ. ಹೊಸ ಕಾಲೇಜು ಆರಂಭಿಸಲು ಪರವಾನಗಿ ನೀಡುವುದು, ವೈದ್ಯರಿಗೆ ಅಭ್ಯಾಸ ಮಾಡಲು ನೊಂದಣಿ ನೀಡುವುದು ಹಾಗು ವೈದ್ಯಕೀಯ ಕ್ಷೇತ್ರದ ಮೇಲ್ವಿಚಾರಣೆ ಇದರ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಸುಪ್ರೀಂಕೋರ್ಟ್ ಒಪ್ಪಿಗೆ ಪಡೆದು ಹಾಗು ನೀತಿ ಆಯೋಗದ ಶಿಫ಼ಾರಸಿನಂತೆ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾದ ಬದಲು ನ್ಯಾಷನಲ್ ಮೆಡಿಕಲ್ ಕಮಿಶನ್ ಅನ್ನು ಸ್ಥಾಪಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಅದರಂತೆ ಲೋಕಸಭೆಯಲ್ಲಿ ಹೊಸ ಕಾಯ್ದೆಯನ್ನು ಮಂಡಿಸಲಾಗಿದೆ. ಸದ್ಯ ಸಂಸದೀಯ ಸಮಿತಿಯ ಪರಿಶಿಲನೆಯಲ್ಲಿದೆ.
೧೯೩೩ರ ಮೆಡಿಕಲ್ ಕೌನ್ಸಿಲ್ ಕಾಯ್ದೆ ಯ ಅನ್ವಯ ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾವನ್ನು ೧೯೩೪ ರಲ್ಲಿ ಸ್ಥಾಪಿಸಲಾಯಿತು. ಸ್ವಾತಂತ್ರಾನಂತರ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಕಾಯ್ದೆಯನ್ನು ೧೯೫೬ರಲ್ಲಿ ತರಲಾಯಿತು. ಈ ಕಾಯ್ದೆಯನ್ನು ೧೯೬೪, ೧೯೯೩ ಹಾಗು ೨೦೦೧ ರಲ್ಲಿ ಮಾರ್ಪಡಿಸಲಾಯಿತು. ಈಗ ಈ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ, ೨೦೧೧ರಲ್ಲಿ ಸರ್ಕಾರದ ಆದೇಶದಂತೆ ನೇಮಕಗೊಂಡಿರುವ ಸಮಿತಿ ಕಾರ್ಯಭಾರ ಮಾಡುತ್ತಿದೆ.
ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಈ ಕೆಳ ಕಂಡ ಉದ್ದೇಶಗಳನ್ನು ಹೊಂದಿದೆ
ಏಪ್ರಿಲ್ ೨೨, ೨೦೧೦ರಂದು ಮೆಡಿಕಲ್ ಕೌನ್ಸಿಲ್ ನ ಅಂದಿನ ಅದ್ಯಕ್ಷರಾದ ಕೇತನ್ ದೇಸಾಯಿಯವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂದಿಸಲಾಯಿತು. ಅವರ ಮೇಲೆ ಹೊಸ ವೈದ್ಯಕೀಯ ಕಾಲೇಜಿಗೆ ಪರವಾನಗಿ ನೀಡಲು ೨ ಕೋಟಿ ಲಂಚ ಪಡೆದ ಆರೋಪದ ಮೇಲೆ ಬಂದಿಸಲಾಯಿತು. ಇವರ ಜೊತೆ ಜೆ.ಪಿ. ಸಿಂಗ್, ಸುಖ್ವಿಂದರ್ ಸಿಂಗ್ ಹಾಗು ಕನ್ವಲ್ ಜಿತ್ ಸಿಂಗೆ ರವರನ್ನು ಸಹ ಬಂದಿಸಲಾಯಿತು. ಸಿಬಿಐ ಕೇತನ್ ದೇಸಾಯಿಯವರ ಮನೆಯಿಂದ ೧.೫ ಕಿಲೋ ಬಂಗಾರ, ೮೦ ಕಿಲೋ ಬೆಳ್ಳಿಹಾಗು ಅವರ ಲಾಕರ್ ನಿಂದ ೩೫ ಲಕ್ಷ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆಯಿತು. ಅವರನ್ನು ಕೌನ್ಸಿಲ್ ನಿಂದ ಉಚ್ಚಾಟಿಸಲಾಯಿತು ಮತ್ತು ಅವರ ವೈದ್ಯಕೀಯ ಪರವಾನಗಿಯನ್ನು ರದ್ಧು ಗೊಳಿಸಲಾಯಿತು.
ಮೇ೧೫, ೨೦೧೦ ರಂದು ಪೂರ್ಣ ಕೌನ್ಸಿಲನ್ನು ಉಚ್ಚಾಟಿಸಲಾಯಿತು. ತದ ನಂತರ ಮೆಡಿಕಲ್ ಕೌನ್ಸಿಲ್ ನ ಸುಧಾರಣೆ ಮಾಡಲು ಕೂಗು ಕೇಳಿಬಂತು. ಸುಪ್ರೀಮ್ ಕೊರ್ಟ್ ಈ ವಿಶಯದಲ್ಲಿ ಪ್ರವೇಶಿಸಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಹೊಸ್ ಕಾನೂನನ್ನು ತರಲು ಸರ್ಕಾರಕ್ಕೆ ಸೂಚಿಸಿತು. ಈಗ ತರಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಶನ್ ಇದರ ಫ಼ಲಶೃತಿ.