ಮೈ ಆಟೋಗ್ರಾಫ್ (ಚಲನಚಿತ್ರ)

ಮೈ ಆಟೋಗ್ರಾಫ್
ಚಿತ್ರ:My Autograph Movie.jpg
ನಿರ್ದೇಶನಸುದೀಪ್
ನಿರ್ಮಾಪಕಸುದೀಪ್
ಕಥೆಚೇರನ್
ಆಧಾರಆಟೋಗ್ರಾಫ್ (ತಮಿಳು)
ಪಾತ್ರವರ್ಗಸುದೀಪ್
ಮೀನಾ
ಶ್ರೀದೇವಿಕಾ
ದೀಪಾ ಭಾಸ್ಕರ್
ರಶ್ಮಿ ಕುಲಕರ್ಣಿ
ಸಂಗೀತಭಾರದ್ವಾಜ್
ರಾಜೇಶ್ ರಾಮನಾಥ್ (ಹಿನ್ನೆಲೆ ಸಂಗೀತ)
ಛಾಯಾಗ್ರಹಣಶ್ರೀ ವೆಂಕಟ್
ಸಂಕಲನಜೋ ನಿ ಹರ್ಷ
ಸ್ಟುಡಿಯೋಕಿಚ್ಚ ಕ್ರಿಯೇಷನ್ಸ್
ಬಿಡುಗಡೆಯಾಗಿದ್ದು
  • 17 ಫೆಬ್ರವರಿ 2006 (2006-02-17)
ದೇಶಭಾರತ
ಭಾಷೆಕನ್ನಡ
ಬಂಡವಾಳ ೩ ಕೋಟಿ[]

ಮೈ ಆಟೋಗ್ರಾಫ್ ೨೦೦೬ ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಡ್ರಾಮಾ ಚಲನಚಿತ್ರವಾಗಿದ್ದು, ಸುದೀಪ್ ಅವರು ಮೊದಲ ಬಾರಿಗೆ ನಿರ್ದೇಶಿಸಿ, ನಿರ್ಮಿಸಿ, ಅಭಿನಯಿಸಿದ್ದಾರೆ. [] ಅವರ ಜೊತೆಗೆ ಈ ಚಿತ್ರದಲ್ಲಿ ಮೀನಾ, ಶ್ರೀದೇವಿಕಾ, ದೀಪು ಮತ್ತು ರಶ್ಮಿ ಕುಲಕರ್ಣಿ ನಟಿಸಿದ್ದಾರೆ. [] ಈ ಚಿತ್ರವು ಚೇರನ್ ನಿರ್ದೇಶಿಸಿದ ತಮಿಳು ಚಲನಚಿತ್ರ ಆಟೋಗ್ರಾಫ್ [] ನ ರಿಮೇಕ್ ಆಗಿದೆ . [] []

ಕಥಾವಸ್ತು

[ಬದಲಾಯಿಸಿ]

ಜಾಹೀರಾತು ಏಜೆನ್ಸಿಯನ್ನು ನಡೆಸುತ್ತಿರುವ ಶಂಕರ್ (ಸುದೀಪ್) ತನ್ನ ಮದುವೆಗೆ ತನ್ನ ಎಲ್ಲ ಸ್ನೇಹಿತರನ್ನು ಆಹ್ವಾನಿಸಲು ತನ್ನ ಹುಟ್ಟೂರಿಗೆ ಭೇಟಿ ನೀಡಲು ರೈಲಿನಲ್ಲಿ ಹತ್ತುವುದರೊಂದಿಗೆ ಚಲನಚಿತ್ರವು ಪ್ರಾರಂಭವಾಗುತ್ತದೆ. ಅವನ ಬಾಲ್ಯದ ದಿನಗಳ ಪಯಣ ಅಲ್ಲಿಂದ ಶುರುವಾಗುತ್ತದೆ. ಶಾಲೆಯಲ್ಲಿ ನಡೆಯುವ ಘಟನೆಗಳು, ಅವನ ಸ್ನೇಹಿತರೊಂದಿಗಿನ ಜಗಳ, ಮತ್ತು ಅವನ ಸಹಪಾಠಿ ಕಮಲಾ (ದೀಪು) ಮೇಲೆ ಮೊದಲ ಬಾರಿ ಪ್ರೀತಿ ಆಗುತ್ತದೆ. ಶಂಕರ್ ಹಳ್ಳಿಯನ್ನು ತಲುಪುತ್ತಾನೆ ಮತ್ತು ಕಮಲಾ ಸೇರಿದಂತೆ ಎಲ್ಲರನ್ನೂ ಮದುವೆಗೆ ಬರುವುದಾಗಿ ಆಮಂತ್ರಿಸುತ್ತಾನೆ.

ನಂತರ, ಅವನು ತನ್ನ ಕಾಲೇಜು ಶಿಕ್ಷಣವನ್ನು ಪಡೆದ ಕೇರಳಕ್ಕೆ ಹೋಗುತ್ತಾನೆ. ಆ ಸಮಯದಲ್ಲಿ ಅವನ ಕ್ರಶ್, ಮಲಯಾಳಿ ಹುಡುಗಿ ಲತಿಕಾ (ಶ್ರೀದೇವಿಕಾ) ಆಗಿದ್ದಳು. ಆದರೆ ನಂತರ ಅವಳ ಪೋಷಕರು ಅವಳನ್ನು ತನ್ನ ಸೋದರಸಂಬಂಧಿ ಮಾಧವನ್‌ಗೆ ಮದುವೆ ಮಾಡುತ್ತಾರೆ. ಅವಳನ್ನು ಆಹ್ವಾನಿಸಲು ಕೇರಳ ತಲುಪಿದಾಗ, ಶಂಕರ್ ತನ್ನ ಪ್ರೇಮಿ ವಿಧವೆಯಾಗಿರುವುದನ್ನು ನೋಡಿ ದುಃಖ ಪಡುತ್ತಾನೆ.

ಇದೇ ವೇಳೆ ತನ್ನ ಪ್ರೇಮ ವೈಫಲ್ಯದಿಂದ ಕಂಗಾಲಾಗಿದ್ದ ಆತನಿಗೆ ಆತ್ಮವಿಶ್ವಾಸವನ್ನು ತುಂಬುವ, ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಹಿಂದೆ ಮುಂದೆ ನೋಡದೆ ಜೀವನದಲ್ಲಿ ಮುಂದೆ ಸಾಗಬೇಕಾದ ಪಾಠವನ್ನು ಕಲಿಸುವ ನಂಬಿಕಸ್ಥ ಸ್ನೇಹಿತೆ ದಿವ್ಯಾ ( ಮೀನಾ ) ಕಣ್ಣಿಗೆ ಬೀಳುತ್ತಾಳೆ. ಆದಾಗ್ಯೂ, ತಾನು ಹಿಂದೆ ಸಂಭವಿಸಿದ ದುರಂತವನ್ನು ಅವಳು ಬಹಿರಂಗಪಡಿಸುವುದಿಲ್ಲ. ಸಮಯ ಕಳೆದಂತೆ, ತನ್ನ ತಾಯಿ ಪಾರ್ಶ್ವವಾಯು ರೋಗಿಯಾಗಿದ್ದಾಳೆ ಮತ್ತು ಅವಳು ಈಗ ಬದುಕಲು ಕೆಲಸ ಮಾಡಬೇಕಾಗಿದೆ ಎಂದು ತಿಳಿಸುತ್ತಾಳೆ. ಅವಳು ಮತ್ತು ಶಂಕರ್ ಬಸ್‌ನಲ್ಲಿ ಪ್ರಯಾಣಿಸುವಾಗ, ಅವಳು ಈ ಹಿಂದೆ ಒಬ್ಬನನ್ನು ಪ್ರೀತಿಸುತ್ತಿದ್ದಳು ಮತ್ತು ಅವನು ಒಳ್ಳೆಯವನು ಎಂದು ನಂಬಿದ್ದಳು, ಆದರೆ ಮೋಸ ಹೋದಳೆಂದು ಹೇಳುತ್ತಾಳೆ.

ಕೊನೆಯಲ್ಲಿ, ಶಂಕರ್ ತನ್ನ ಹೆತ್ತವರ ಆಯ್ಕೆಯ ಹುಡುಗಿಯಾದ ರಶ್ಮಿಯನ್ನು (ರಶ್ಮಿ ಕುಲಕರ್ಣಿ) ಮದುವೆಯಾಗುತ್ತಾನೆ. ಅವನ ಜೀವನದಲ್ಲಿ ಪಾತ್ರವಹಿಸಿದ ಎಲ್ಲಾ ಮೂರು ಹುಡುಗಿಯರು ಮತ್ತು ಅನೇಕ ಕಾಲೇಜು ಸ್ನೇಹಿತರು ಮದುವೆಗೆ ಹಾಜರಾಗುತ್ತಾರೆ. ಅಲ್ಲದೆ, ಶಂಕರ್ ಮುಖ್ಯ ಕಥೆಗೆ ಬಹಳ ಸುಂದರವಾದ ಅಂತ್ಯವನ್ನು ನೀಡುತ್ತಾನೆ.

ತಾರಾಗಣ

[ಬದಲಾಯಿಸಿ]
  • ಸುದೀಪ್
  • ಮೀನಾ
  • ಶ್ರೀದೇವಿಕಾ
  • ದೀಪಾ ಭಾಸ್ಕರ್
  • ರಶ್ಮಿ ಕುಲಕರ್ಣಿ
  • ಶ್ರೀನಿವಾಸ ಮೂರ್ತಿ
  • ಮಾಲತಿ ಶ್ರೀ
  • ಯತಿರಾಜ್
  • ಹರೀಶ್
  • ಲಕ್ಷ್ಮೀ ನಾರಾಯಣ್
  • ವಿಶ್ವನಾಥ್

ಧ್ವನಿಮುದ್ರಿಕೆ

[ಬದಲಾಯಿಸಿ]

ಮೂಲ ಆವೃತ್ತಿಯಲ್ಲಿ ಸಂಗೀತ ಸಂಯೋಜಿಸಿದ್ದ ಭಾರದ್ವಾಜ್ ಅವರೇ ಇಲ್ಲಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ, [] ಮತ್ತು ರಾಜೇಶ್ ರಾಮನಾಥ್ ಅವರು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಮೂಲ ಚಿತ್ರದಿಂದ ಎಲ್ಲಾ ಹಾಡುಗಳ ರಾಗಗಳನ್ನು ಉಳಿಸಿಕೊಳ್ಳಲಾಗಿದೆ. ತಮಿಳು ಆವೃತ್ತಿಯಲ್ಲಿ ರಾಷ್ಟ್ರೀಯ-ಪ್ರಶಸ್ತಿ-ವಿಜೇತ "ಒವ್ವುರು ಪೂಕಲುಮೆ" ಹಾಡನ್ನು ಈ ಚಿತ್ರದಲ್ಲಿ "ಅರಳುವ ಹೂವುಗಳೇ" ಎಂದು ಮರುಬಳಕೆ ಮಾಡಲಾಗಿದೆ ಮತ್ತು ಅದನ್ನು ಹಾಡಿದ ಕೆ.ಎಸ್. ಚಿತ್ರಾ ಅವರು ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕ್ರಮ ನಂ. ಹಾಡಿನ ಶೀರ್ಷಿಕೆ ಗಾಯಕರು ಸಾಹಿತ್ಯ
1 "ನನ್ನವಳು" ರಾಜೇಶ್ ಕೃಷ್ಣನ್ ಕೆ. ಕಲ್ಯಾಣ್
2 "ಅರಳುವ ಹೂವುಗಳೇ" ಕೆ ಎಸ್ ಚಿತ್ರಾ ಕೆ. ಕಲ್ಯಾಣ್
3 "ಮಲ್ಲೆ ಹುಡುಗಿ" ರಾಜೇಶ್ ಕೃಷ್ಣನ್, ರಶ್ಮಿ ಕೆ. ಕಲ್ಯಾಣ್
4 "ಜಗದೋದ್ಧಾರನ" ರಶ್ಮಿ, ಶ್ರೀವಿದ್ಯಾ ಪುರಂದರ ದಾಸ
5 "ಕಿಲ ಕಿಲ" ಚೇತನ್ ಸೋಸ್ಕಾ ಕೆ. ಕಲ್ಯಾಣ್
6 "ಸವಿ ಸವಿ ನೆನಪು" ಹರಿಹರನ್ ಕೆ. ಕಲ್ಯಾಣ್

ಪ್ರತಿಕ್ರಿಯೆ

[ಬದಲಾಯಿಸಿ]

ಸಿಫಿಯ ವಿಮರ್ಶಕರೊಬ್ಬರು "ಸುದೀಪ್ ನಿರ್ದೇಶನದ ಜೊತೆಗೆ ಉತ್ತಮವಾಗಿ ನಟಿಸಿದ್ದಾರೆ. ವೃತ್ತಿಜೀವನದ ಆರಂಭದಿಂದಲೂ ಅವರ ನಟನಾ ಸಾಮರ್ಥ್ಯವು ಅವರ ಹೃದಯಕ್ಕೆ ಹತ್ತಿರವಾದ ಈ ಚಿತ್ರವನ್ನು ಒಪ್ಪಿಕೊಳ್ಳುವ ವಿಶ್ವಾಸವನ್ನು ನೀಡಿದೆ" ಎಂದು ಹೇಳಿದರು. [] ರೆಡಿಫ್ ನ ವಿಮರ್ಶಕರೊಬ್ಬರು "ಮೈ ಆಟೋಗ್ರಾಫ್ ಇತ್ತೀಚೆಗೆ ಬಿಡುಗಡೆಯಾದ ಒಂದು ಅಪರೂಪದ ಆಹ್ಲಾದಕರ ಚಿತ್ರವಾಗಿದೆ" ಎಂದು ಬರೆದಿದ್ದಾರೆ. []

ಬಾಕ್ಸ್ ಆಫೀಸ್

[ಬದಲಾಯಿಸಿ]

ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರ ೧೭೫ ದಿನಗಳನ್ನು ಪೂರೈಸಿತು. []

ಪ್ರಶಸ್ತಿಗಳು

[ಬದಲಾಯಿಸಿ]
  • ೫೩ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್
    • ಅತ್ಯುತ್ತಮ ನಟ – ಕನ್ನಡ → ಸುದೀಪ್ –– ನಾಮನಿರ್ದೇಶಿತ
    • ಅತ್ಯುತ್ತಮ ನಟಿ – ಕನ್ನಡ → ಮೀನಾ –– ನಾಮನಿರ್ದೇಶಿತ [೧೦]
  • ೫೪ ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್
    • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಕನ್ನಡ → ಕೆ ಎಸ್ ಚಿತ್ರಾ – “ಅರಳುವ ಹೂವುಗಳೇ” ಹಾಡಿಗೆ –– ಗೆದ್ದಿದ್ದಾರೆ [೧೧]

ಉಲ್ಲೇಖಗಳು

[ಬದಲಾಯಿಸಿ]
  1. "Sudeep is unhappy!". ಸಿಫಿ. 10 April 2006. Archived from the original on 20 November 2015.
  2. "Throwback Time: When Sudeep went down the 'My Autograph' memory lane". ಟೈಮ್ಸ್ ಆಫ್ ಇಂಡಿಯ. 30 December 2020.
  3. "Kannada Cinema News | Kannada Movie Reviews | Kannada Movie Trailers - IndiaGlitz Kannada". Archived from the original on 6 May 2006.
  4. "Bypassing copycats, Sandalwood style". Bangalore Mirror. 29 January 2012.
  5. Vijayasarathy, R. G. (9 March 2006). "Sudeep: back with My Autograph". Rediff.com.
  6. "ಆ ಪ್ರಿಯತಮೆ ಮನೆಗೆ 15 ವರ್ಷಗಳ ಬಳಿಕ ಭೇಟಿ ನೀಡಿದ ಕಿಚ್ಚ ಸುದೀಪ್‌! ವಿಡಿಯೋ ವೈರಲ್‌". Vijaya Karnataka.
  7. ೭.೦ ೭.೧ "My Autograph". Sify. 22 February 2006. Archived from the original on 4 May 2022. ಉಲ್ಲೇಖ ದೋಷ: Invalid <ref> tag; name "s" defined multiple times with different content
  8. Vijayasarathy, R. G. (17 February 2006). "My Autograph: Sudeep manages to score". Rediff.com.
  9. "Sudeep's My Autograph - first film to complete 25 week in 2006".
  10. 53rd Filmfare Awards South Kannada Nominations & Winners:
  11. 54th Filmfare Awards South Kannada Winners:

ಬಾಹ್ಯ ಕೊಂಡಿಗಳು

[ಬದಲಾಯಿಸಿ]