ಮೈಕೆಲ್ ಫೆರೇರಾರವರು ೧೯೩೮ರ ಅಕ್ಟೋಬರ್ ೧ ರಂದು ಬಾಂಬೆಯಲ್ಲಿ(ಈಗಿನ ಮುಂಬೈ) ಜನಿಸಿದರು. "ಬಾಂಬೆ ಟೈಗರ್" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಮೈಕೆಲ್ ಫೆರೇರಾರವರು ಭಾರತದ ಇಂಗ್ಲಿಷ್ ಬಿಲಿಯರ್ಡ್ಸ್‌ನ ಗಮನಾರ್ಹ ಹವ್ಯಾಸಿ ಆಟಗಾರ ಮತ್ತು ಮೂರು ಬಾರಿಯ ಹವ್ಯಾಸಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು ೧೯೬೦ ರಲ್ಲಿ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು. ಇವರು ೧೯೬೪ ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್(WABC) ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಅಲ್ಲಿ ಅವರು ಸೆಮಿ- ಫೈನಲ್‌ಗೆ ಮುನ್ನಡೆದರು.[೧][೨] ೧೯೭೭ ರಲ್ಲಿ, ಅವರು ತಮ್ಮ ಮೊದಲ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದರು ಮತ್ತು ಅದೇ ವರ್ಷದಲ್ಲಿ ವಿಶ್ವ ಓಪನ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನೂ ಗೆದ್ದರು.[೩] ಅವರು ಇನ್ನೂ ಎರಡು ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ೧೯೭೮ ರಲ್ಲಿ ಅವರು ಬಿಲಿಯರ್ಡ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ನಲ್ಲಿ ೧,೦೦೦ ಅಂಕಗಳ ತಡೆಗೋಡೆಯನ್ನು ಮುರಿದ ಮೊದಲ ಹವ್ಯಾಸಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ೧,೧೪೮ ಅಂಕಗಳನ್ನು ಗಳಿಸುವ ಮೂಲಕ ಹೊಸ ಹವ್ಯಾಸಿ ಆಟಗಾರ ಎಂಬ ವಿಶ್ವ ದಾಖಲೆಯನ್ನು ರಚಿಸಿದರು.[೨]
ಫೆರೀರಾರವರು ಡಾರ್ಜಿಲಿಂಗ್‌ನ ಸೇಂಟ್ ಜೋಸೆಫ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿದರು.[೪] ಅಲ್ಲಿ ಅವರು ಬಿಲಿಯರ್ಡ್ಸ್ ಆಡಲು ಆಸಕ್ತಿ ಹೊಂದಿದ್ದರು. ಸೇಂಟ್ ಕ್ಸೇವಿಯರ್ ಕಾಲೇಜು ಮತ್ತು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ತಮ್ಮ ಕಾಲೇಜು ದಿನಗಳಲ್ಲಿ ಅವರು ಆಟದಲ್ಲಿ ತಮ್ಮ ಆಸಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.[೧]
ಫೆರೀರಾರವರು ಕ್ಯೂನೆಟ್(QNet) ಎಂಬ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತದಲ್ಲಿ ಕ್ಯೂನೆಟ್ ಬ್ರಾಂಡ್‌ನ ಫ್ರ್ಯಾಂಚೈಸ್ ಆಗಿರುವ ವಿಹಾನ್ ಡೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಅವರು ಶೇಕಡಾ ೮೦ ರಷ್ಟು ಷೇರುಗಳನ್ನು ಹೊಂದಿದ್ದಾರೆ.[೫][೬] ಫೆರೇರಾರವರು ಕ್ಯೂನೆಟ್‌ನಲ್ಲಿನ ಹೂಡಿಕೆಗೆ ಸಂಬಂಧಿಸಿದಂತೆ ದುಷ್ಕೃತ್ಯದ ಆರೋಪಗಳನ್ನು ಎದುರಿಸಿದ್ದರು ಮತ್ತು ಇವರನ್ನು ಪೊಲೀಸರಿಗೆ ಶರಣಾಗುವಂತೆ ಆದೇಶಿಸಲಾಗಿತ್ತು.[೭] ಫೆರೇರಾರವರು ಈ ಆರೋಪಗಳನ್ನು ನಿರಾಕರಿಸಿ ಅವುಗಳನ್ನು "ಅತಿರೇಕದ, ದುರುದ್ದೇಶಪೂರಿತ ಮತ್ತು ಸುಳ್ಳು" ಎಂದು ಕರೆದರು.[೮] ಸೆಪ್ಟೆಂಬರ್ ೩೦, ೨೦೧೬ ರಂದು, ಕ್ಯೂನೆಟ್ ಹಗರಣಕ್ಕೆ ಸಂಬಂಧಿಸಿದಂತೆ ಫೆರೇರಾ ಮತ್ತು ವಿಹಾನ್ ನ ಇತರ ಮೂವರು ನಿರ್ದೇಶಕರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ)ಯು ಬಂಧಿಸಿತು.[೯] ನಂತರ ಅವರಿಗೆ ಭಾರತದ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.[೧೦]
ಪ್ರಸ್ತುತ ೮೪ ವರ್ಷದ ಫೆರೇರಾರವರು ೨೦೨೧ ರಲ್ಲಿ ತಮ್ಮ ಪತ್ನಿ ನಿಧನರಾದಾಗಿನಿಂದ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ವಿದೇಶದಲ್ಲಿ ವಾಸಿಸುವ ಅವರ ಇಬ್ಬರು ಮಕ್ಕಳು ಸುಮಾರು ಒಂದು ದಶಕದ ಹಿಂದೆ ೧,೦೦೦ ಕೋಟಿ ರೂ.ಗಳ ಕ್ಯೂನೆಟ್ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ವಂಚನೆ ಪ್ರಕರಣ ದಾಖಲಾದ ನಂತರ ಭಾರತಕ್ಕೆ ಭೇಟಿ ನೀಡಿಲ್ಲ ಎಂದು ವರದಿಯಾಗಿದೆ.[೧೧]
ಫೆರೇರಾ ಅವರು ತಮ್ಮ ಎರಡನೇ ವಿಶ್ವ ಹವ್ಯಾಸಿ ಪ್ರಶಸ್ತಿಯನ್ನು ಗೆದ್ದ ನಂತರ ೧೯೮೧ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಆದರೆ ಅವರು ಇದನ್ನು ಸ್ವೀಕರಿಸಲು ನಿರಾಕರಿಸಿದರು ಮತ್ತು ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರಿಗೆ ಹೆಚ್ಚು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದ್ದರಿಂದ, ಅವರಿಗೂ ಅದೇ ಪ್ರಶಸ್ತಿಯನ್ನು ನೀಡಬೇಕು ಎಂದು ವಾದಿಸಿದರು.[೩] ಅವರು ೧೯೮೩ ರಲ್ಲಿ ತಮ್ಮ ಮೂರನೇ ವಿಶ್ವ ಹವ್ಯಾಸಿ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ಗೆದ್ದ ನಂತರ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿದರು. ಇವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಬಿಲಿಯರ್ಡ್ಸ್ ಆಟಗಾರರಾಗಿದ್ದಾರೆ.[೧೨] ಅವರು ಮಹಾರಾಷ್ಟ್ರ ರಾಜ್ಯ ಸರ್ಕಾರದ ಶಿವ ಛತ್ರಪತಿ ಪ್ರಶಸ್ತಿ (೧೯೭೧), ಅರ್ಜುನ ಪ್ರಶಸ್ತಿ (೧೯೭೩) ಮತ್ತು ಇಂಟರ್ನ್ಯಾಷನಲ್ ಫೇರ್ ಪ್ಲೇ ಸಮಿತಿಯ ಅಭಿನಂದನಾ ಪತ್ರ(೧೯೮೩)ಗಳಿಗೆ ಭಾಜನರಾಗಿದ್ದಾರೆ.[೧] ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ ಅವರ ತರಬೇತಿ ಸಾಧನೆಗಳಿಗಾಗಿ ೨೦೦೧ ರಲ್ಲಿ ಅವರು ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದರು.[೧೩]
{{cite web}}
: CS1 maint: bot: original URL status unknown (link)