ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮ್ಯಾಕರಲ್ ಎನ್ನುವುದು ಮುಖ್ಯವಾಗಿ ಪಶ್ಚಿಮ ಕರಾವಳಿಯ ಪ್ರಧಾನ ಮೀನುಗಾರಿಕೆಗೆ ಕಾರಣವಾದ ಬಂಗುಡೆ (ರಾಸ್ಟ್ರೆಲ್ಲಿಜರ್ ಕನಗುರ್ತ) ಮೀನು.
ಮ್ಯಾಕರಲ್‌ಗಳು ಬಹಳ ವೇಗವಾಗಿ ಈಜಬಲ್ಲ ಹಾಗೂ ಅತ್ಯಂತ ಚಟುವಟಿಕೆಯ ಮೀನುಗಳು.
ಮ್ಯಾಕರಲ್ ಗುಂಪಿಗೆ ಸೇರಿದ ಆದರೆ ನಿಜವಾದ ಮ್ಯಾಕರಲ್‌ಗಳಲ್ಲದ ಬೇರೆ ಮುಖ್ಯವಾದ ಮೀನುಗಳು ಸ್ಕಾಂಬಿರೋಮೋರಸ್ (ಸುರ್ಮೈ) ಮತ್ತು ಆಕ್ಸಿಸ್ ಜಾತಿಗಳಿಗೆ ಸೇರಿದ ಮೀನುಗಳು. ಸ್ಕಾಂಬಿರೋಮೋರಸ್ ಕೆವಲ್ಲಾ ಪ್ರಭೇದ ಗುಂಪಿನ ಅತಿ ದೊಡ್ಡ ಮೀನು. ಇದು ಸುಮಾರು 50 ಕೆಜಿ ತೂಕದ್ದು. ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಪೂರ್ವ ಸಮುದ್ರಗಳ ನಿವಾಸಿ. ಆ.ಥಿನ್ನಾಯ್‌ಡೆಸ್ (ಆ.ಟಾನೋಸೋಮಾ) ಸಿಕ್ಕಿರುವುದು ವರದಿಯಾಗಿದೆ.