ಇವರು ಒಂದು ಇಂಗ್ಲಿಷ್ ಕವಿತ್ರಿಯಾಗಿದ್ದರು. ಹಲ್ ಆಧಾರಿತರಾಗಿದರು . ಹಲ್'ಇಂಗ್ಲಂಡಿನಲ್ಲಿ ಅತ್ಯಂತ ಕಾವ್ಯಾತ್ಮಕ ನಗರ 'ಎಂದು ಪಿಟರ್ ಪೋರ್ಟರ್ ಅವರು ಕರೆದಿದ್ದಾರೆ,ಬಲವಾದ ಕಾವ್ಯಾತ್ಮಕ ಗುರುತುಗಳನ್ನು ಹೊಂದಿರುವ ಇತರ ಬ್ರಿಟಿಷ್ ನಗರಗಳಿಂತ ಭಿನ್ನವಾಗಿ, ಹಲ್ ತನ್ನ ಕವಿಗಳನ್ನು ಬೇರೆಡೆಗೆ ಆಕರ್ಷಿಸುವಂತೆ ಮಾಡಿದ್ದಾರೆ. ಮ್ಯಾಗಿ ಅವರ ಬುದ್ಧಿ ಮತ್ತು ಗುರಿಯು ತುಂಬಾ ದೊಡ್ದದಾಗಿತ್ತು. ಅವರು ಗಂಭೀರವಾದ-ಕೆಲಸಗಲಲ್ಲಿ ಸಂತೋಷ-ತೆಗೆದುಕೊಳ್ಳುತಿದ್ದರು.
[೧] ಅವರು ಒಂದೆ ಕವಿತೆ ಬರೆದರು ಆದರೆ ಆ ಒಂದು ಕವಿತೆ ತುಂಬಾ ಹೆಚ್ಚು ಪ್ರಭಾವ ಶಿಲವಾಗಿದೆ. ಅವರ ಕವಿತೆಯ ಹೆಸರು 'ಲಿಯರ್ ಜೋನ್ಸ್'.
ಅವರು ೧೯೯೦ರಲ್ಲಿ ಎರಿಕ್ ಗ್ರೆಗೊರಿ ಪ್ರಶಸ್ತಿಯನ್ನುಗೆದ್ದರು. ೧೯೯೫ರಲ್ಲಿ ಅವರು ಫ಼ಾರ್ವರ್ಡ್ ಅತ್ಯುತ್ತಮ ಪ್ರಥಮ ಸಂಗ್ರಹ ಪ್ರಶಸ್ತಿಗೆ ಆಯ್ಕೆಯಾದರು.ಅವರು ಹಂಬರ್ ಮೌತ್ ಸಾಹಿತ್ಯ ಉತ್ಸವದ ನಿರ್ದೇಶಕರಾಗಿದ್ದರು .
ಮ್ಯಾಗಿಯವರಿಗೆ ಇಂಗ್ಲಂಡ್ ನಗರದಲ್ಲಿ ನಡೆಯುತ್ತಿರುವ ಕಾವ್ಯದ ವಾಚನಗೋಷ್ಠಿಗಳ ಬಗ್ಗೆ ಇವರಿಗೆ ತಿಳಿಯಿತ್ತು.ಇವರು ಸಾಹಿತ್ಯದ ಬಗೆ ತುಂಬ ಭಾವೋದ್ರಿಕ್ತರಾಗಿದರು.ಹಲ್ ನ ಜನರನ್ನು, ಕೆಲಸಗಳನ್ನು, ವಿಶ್ವವಿದ್ಯಾಲಯದ ಸ್ಥಳ,ಎಲವನ್ನು ಹುಡುಕಲು ಮ್ಯಾಗಿಯವರು ನಾಲ್ಕು ತಿಂಗಳು ಕಷ್ಟಪಟರು. ಮ್ಯಾಗಿಯವರು ಒಂದು ವಾರ ಉಳಿಯಲು ಬಂದರು ಆದರೆ ಅಲಿನ ಸಾಹಿತ್ಯವೆಲ ನೋಡಿ ಅವರು ಅಲೇ ನೆಲೆಸಿದರು.ಇವರ ತಂದೆ ತಾಯಿಯರನ್ನು ಕೂಡ ಇವರು ಇವರ ಸ್ಥಳಕೆ ಕರೆದುಕೊಂಡು ಬಂದರು.ಹಲ್ ಮ್ಯಾಗಿಯವರಿಗೆ ಹಲ್ ತುಂಬ ಒಳ್ಳೆಯ ಸ್ಥಳ ಎಂದು ಅನಿಸಿತ್ತು . ಮ್ಯಾಗಿಯವರು ಮಹತ್ವಾಕಾಂಕ್ಷಿ ಕವಿತ್ರಿಯಾಗಿದರಿಂದ ಹಲ್ ಒಂದು ಶ್ರೀಮಂತವಾದ ನಗರ ಎಂದು ಕಂಡುಕೊಂಡರು. ಆಂಡ್ರ್ಯೂ ಮಾರ್ವೆಲ್, ಫಿಲಿಪ್ ಲಾರ್ಕಿನ್, ಡೌಗ್ಲಾಸ್ ಡನ್, ಜಾನ್ ಗಾಡ್ಬರ್, ಆಂಥೋನಿ ಮಿಂಗಲೆಲ್ಲಾ, ಪೀಟರ್ ಡಿಡ್ಸ್ಬರಿ ಮತ್ತು ಸೀನ್ ಒಬ್ರೈನ್ ಕೆಲವೊಂದು ಬರಹಗಾರರಾಗಿದ್ದರು ಮತ್ತು ಅವರು ಹಲ್ನೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು. ಸಾಹಿತ್ಯ ವೃತ್ತಿಜೀವನವನ್ನು ಆರಂಭಿಸುವ ಅತ್ಯುತ್ತಮ ಸ್ಥಳಗಳಲ್ಲಿ ಹಲ್ ಒಂದು ಎಂದು ಮ್ಯಾಗಿ ಹನ್ನಾನ್ ಅವರು ಹೇಳಿದ್ದಾರೆ. ಹಲ್ ನಲ್ಲಿ ಮ್ಯಾಗಿ ಅವರು ತಿಳಿದಿರುವ ಕಲೆಗಳ ಕಾರ್ಯನೀತಿ ಇದೆ .ಹಲ್ನಲ್ಲಿ ಬರಹಗಾರರು ಕಠಿಣ ಕೆಲಸ ಮಾಡುತ್ತಾರೆ ಮತ್ತು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಮ್ಯಾಗಿ ಹಾನ್ನಾನ್ ಅವರು ಹೇಳಿದ್ದಾರೆ . ಹಲ್ ನಲ್ಲಿ ಕಾವ್ಯದ ವಾಚನಗೋಷ್ಠಿಗಳು ೧೯೯೧ ರಲ್ಲಿ ಸಾಹಿತ್ಯ ಹಬ್ಬಾಗಿ ಪರಿವರ್ತನೆಯಾದವು, ಇದು ೨೦೦೦ ದಲ್ಲಿ ಹಂಬರ್ ಮೌತ್ ಆಗಿ ಪರಿಣಮಿಸಿತು. ಉತ್ಸವದ ಕ್ರಿಯಾತ್ಮಕ, ನಗರ ಮತ್ತು ಯೌವ್ವನದ ಪಾತ್ರವನ್ನು ಪ್ರತಿಬಿಂಬಿಸಲು 'ಹಂಬರ್ ಮೌತ್' ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಮ್ಯಾಗಿ ಹನ್ನಾನ್ ಅವರು ಹೆಳ್ಳಿದ್ದಾರೆ .೨೦೦೦ ರಿಂದ, ಹಂಬರ್ ಮೌತ್ ಪ್ರಸಿದ್ಧ ಮತ್ತು ವಿವಾದಾತ್ಮಕ ಎಂದು- ಜಿಮ್ಮಿ ಮೆಕ್ಗೋವರ್ನ್ ಮತ್ತು ಜೆರ್ಮೈನ್ ಗ್ರೀರ್, ತಾರಿಕ್ ಅಲಿ ಮತ್ತು ವಜಿನ ಮೊನೊಲಾಗ್ಸ್, ಜಾನ್ ರಾನ್ಸನ್ ಮತ್ತು ಸ್ಟೀವರ್ಟ್ ಹೋಮ್ಗಳನ್ನು ಪ್ರದರ್ಶಿಸಿದರು. ಉತ್ಸವವನ್ನು ಆಯೋಜಿಸುವುದು ಒಂದು ಮಹತ್ತರ ಕೆಲಸವಾಗಿದೆ ಎಂದು ಮ್ಯಾಗಿ ಅವರು ಹೇಳಿದರು - ನವೆಂಬರ್ ತಿಂಗಳಿನಲ್ಲಿ ಆರಂಭಿಸಿ ಆರು ತಿಂಗಳುಗಳವರೆಗೆ, ಮ್ಯಾಗಿಯವರು ನಿದ್ರೆ ಮಾಡುತ್ತೇನೆ, ಹಂಬರ್ ಮೌತ್ ಅನ್ನು ಕನಸು ಕಾನುತ್ತೆನೆ ಎಂದು ಸಂತೋಷದಿಂದ ಹೇಳುತ್ತಾರೆ. ಹಬ್ಬದ ಉತ್ಸವಕ್ಕಾಗಿ ಮ್ಯಾಗಿ ಹನ್ನಾನ್ ಅವರು ಬಹಳ ಕಾಯುತಿದ್ದರು. ಮುಂದಿನ ವರ್ಷ ಹಂಬರ್ ಮೌತ್ ಹಲ್ ಹಬ್ಬ ಇನ್ನೂ ದೊಡ್ಡದಾಗುತ್ತದೆ ಎಂದು ಮ್ಯಾಗಿಯವರು ಹೇಳಿದ್ದಾರೆ.ಮ್ಯಾಗಿ ಹನ್ನಾನ್ ಅವರು ಈ ಸ್ಥಳವು ತುಂಬಾ ಮನೋಹರವಾಗಿದೆ, ಎಲ್ಲರು ಈ ಸ್ಥಳವನ್ನು ಹೋಗಿ ಭೇಟಿ ಮಾಡಬೇಕೆಂದು ಸೂಚಿಸಿದ್ದಾರೆ.[೨][೩]