ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ | |||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|
![]() | |||||||||||||||||||||
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ | |||||||||||||||||||||
ಯದುವಂಶದ ೨೭ ನೇ ರಾಜ | |||||||||||||||||||||
೨೮ನೇ ಮೇ ೨೦೧೫ರಿಂದ - ಪ್ರಸ್ತುತ | |||||||||||||||||||||
ಪೂರ್ವಾಧಿಕಾರಿ | ಶ್ರೀಕಂಠದತ್ತ ಒಡೆಯರ್ | ||||||||||||||||||||
ಗಂಡ/ಹೆಂಡತಿ | ತ್ರಿಶಿಖಾಕುಮಾರಿ ಒಡೆಯರ್ (೨೦೧೬ರಿಂದ) | ||||||||||||||||||||
ಸಂತಾನ | |||||||||||||||||||||
ಆದ್ಯವೀರ್ ನರಸಿಂಹರಾಜ ಒಡೆಯರ್ (ರಲ್ಲಿ ೨೦೧೭)
| |||||||||||||||||||||
ತಂದೆ | ಸ್ವರೂಪ್ ಗೋಪಾಲ ರಾಜೇ ಅರಸ್' ಶ್ರೀಕಂಠದತ್ತ ಒಡೆಯರ್ (ದತ್ತು ಪಡೆದ ತಂದೆ) | ||||||||||||||||||||
ತಾಯಿ | ತ್ರಿಪುರಸುಂದರೀದೇವಿ; ಪ್ರಮೋದಾದೇವಿ (ದತ್ತು ಪಡೆದ ತಾಯಿ) | ||||||||||||||||||||
ಜನನ | Error: Need valid birth date: year, month, day ಬೆಂಗಳೂರು, ಕರ್ನಾಟಕ, ಭಾರತ |
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,[೧] ಎಂದು ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದುವಂಶದ ೨೭ನೆಯ ಅಧಿಕಾರಿಯಾಗಿ, 'ಮಹಾರಾಣಿ ಪ್ರಮೋದಾದೇವಿ'ಯವರು ೨೦೧೫ ರ, ಫೆಬ್ರವರಿ ೨೩, ರಂದು ದತ್ತುಪುತ್ರನಾಗಿ ಸ್ವೀಕರಿಸಿದರು.
ಯದುವೀರರ ಮೊದಲಹೆಸರು, 'ಯದುವೀರ್ ಗೋಪಾಲರಾಜೇ ಅರಸ್,' ಎಂದು. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು. ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾ ದೇವಿ ದಂಪತಿಗಳಿಗೆ ಮಕ್ಕಳಿಲ್ಲದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು. 'ದಿ.ಶ್ರೀಕಂಠದತ್ತ ಒಡೆಯರು ನಿಧನರಾದ ೧೪ ತಿಂಗಳ ಬಳಿಕ, ೧೫೦ ವರ್ಷಗಳ ಇತಿಹಾಸದ ಯದುವಂಶಕ್ಕೆ ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನು ಹುಡುಕಲಾಯಿತು.
ಹೊರಗಿನ ಕುಡಿ,ಯದುವೀರ ತಂದೆ ಬೆಟ್ಟದ ಕೋಟೆ ಅರಸು ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. 'ದಿ.ಶ್ರೀಕಂಠದತ್ತ ಒಡೆಯ'ರ ಹಿರಿಯ ಸೋದರಿ 'ದಿ|ಗಾಯತ್ರಿ ದೇವಿ', ಮತ್ತು 'ದಿ|ರಾಮಚಂದ್ರ ಅರಸ್' ರ ಪುತ್ರಿ 'ತ್ರಿಪುರಸುಂದರೀದೇವಿ' ಮತ್ತು 'ಸ್ವರೂಪ್ ಗೋಪಾಲ ರಾಜೇ ಅರಸ್', ರವರ ಏಕೈಕ ಪುತ್ರ. ಯದುವೀರ್ ಗೆ ಒಬ್ಬ ಸೋದರಿ 'ಜಯಾತ್ಮಿಕಾ' ಇದ್ದಾಳೆ.
'ಯದುವೀರ್,' ಬೆಂಗಳೂರಿನ, 'ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆ'ಯಲ್ಲಿ 'ಎಸ್. ಎಸ್.ಎಲ್.ಸಿ'. ತರಗತಿ ಮುಗಿಸಿ, 'ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆ'ಯಲ್ಲಿ ೧೨ ನೆಯ ತರಗತಿಯವರೆಗೆ ಓದಿರುವ ಅಮೆರಿಕದಲ್ಲಿ 'ಬಾಸ್ಟನ್ ವಿಶ್ವವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ; ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ. ೨೦೧೫ ರ, 'ದಸರಾ' ಹಬ್ಬದವೇಳೆಗೆ ಅವರಿಗೆ ಪಟ್ಟಾಭಿಷೇಕಮಾಡಾಲಾಗುತ್ತದೆ. ಅರಮನೆಯ ಆವರಣದಲ್ಲಿನ ೧೪ ದೇವಾಲಯಗಳ ಅರ್ಚಕರುಗಳು, ಅಪಾರ ಬಂಧು-ಬಾಂಧವರು, ಹಿತೈಷಿಗಳು, ಮಿತ್ರರು, ದತ್ತು ಸ್ವೀಕಾರ ಸಮಯದಲ್ಲಿ ಹಾಜರಿದ್ದರು.
ಮೈಸೂರು ರಾಜಮನೆತನವು ೫೫೦ ವರ್ಷಗಳ ರಾಜ ಪರಂಪರೆಯನ್ನು ಹೊಂದಿದ. [೨]
೨೨ ವರ್ಷ ಹರೆಯದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ೨೦೧೫ ರ ಮೇ, ೨೮, ಗುರುವಾರ ವಿಧ್ಯುಕ್ತವಾಗಿ ೨೭ ನೇ ರಾಜರಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಿಕೊಂಡಿದ್ದರು. ಈ ದಸರಾಹಬ್ಬದಲ್ಲಿ ಮೈಸೂರಿನ ಅರಮನೆಯಲ್ಲಿ ಅದೇ ಸಮಾರಂಭ ರಾಜಗೌರವಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಯದುವೀರರು, ಮೇ,೨೭, ಬುಧವಾರ ಇಲ್ಲಿಯ ಅಂಬಾವಿಲಾಸ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. [೩]
ವರ್ಷ ೨೦೧೫ ರ ಮೈಸೂರು ದಸರಾ ಹಬ್ಬಕ್ಕೆ ಚಾಲನೆಯಾಯಿತು. ಮೈಸೂರು ದಸರಾ ಆಕರ್ಷಣೆಯಲ್ಲೊಂದಾದ ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ಜರುಗುತ್ತದೆ. ೨೦೧೫ ರ ಮೇ 28 ರಂದು ಮೈಸೂರು ರಾಜವಂಶದ ೨೭ ನೇ ಅರಸರಾಗಿ ಸಿಂಹಾಸನವೇರಿದ ನಂತರ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ೨೦೧೫ ರ, ನವರಾತ್ರಿ ಸಂದರ್ಭದಲ್ಲಿ ಮೊದಲ ಬಾರಿಗೆ ಒಂಬತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಿಕೊಟ್ಟರು. [೪]
ಯದುವೀರ್ ರವರು, ತಮ್ಮ ಪಟ್ಟಾಭಿಷೇಕವಾಗಿ ಸಿಂಹಾಸನಾರೋಹಣ ಮಾಡಿದ ಒಂದು ವರ್ಷದ ತರುವಾಯ ೨೭, ಜೂನ್ ೨೦೧೬ ರಲ್ಲಿ ತ್ರಿಶಿಖಾಕುಮಾರಿಯವರನ್ನು ಮದುವೆಯಾದರು.[೫] ತ್ರಿಶಿಖಾಕುಮಾರಿಯವರು ರಾಜಾಸ್ಥಾನದ ಡುಂಗರ್ಪುರ್ ರಾಜವಂಶದ ಹರ್ಷ್ ವರ್ಧನ್ ಸಿಂಗ್, ಮತ್ತು ಮಹೇಶ್ರಿ ಕುಮಾರಿಯವರ ಪುತ್ರಿ. ತ್ರಿಶಿಖಾಕುಮಾರಿ ಅವರು, ೬, ಡಿಸೆಂಬರ್, ೨೦೧೭ ರಂದು, ಗಂಡುಮಗು, ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಮಗುವಿಗೆ ಜನ್ಮಕೊಟ್ಟರು.೨೦೧೯ ರಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರಿಗೆ ವರ್ಧಂತ್ಯೋತ್ಸವದ ಸಂಭ್ರಮ.[೬]