ಯುಜ್ವೇಂದ್ರ ಚಹಾಲ್, (ಜನನ: ೨೩, ೧೯೯೦ ಜುಲೈ, ಜಿಂದ್, ಹರಿಯಾಣ) ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನರ್ (ಲೆಗ್ ಬ್ರೆಕ್, ಗೂಗ್ಲಿ). ರಣಜಿ ಟ್ರೋಫಿಯಲ್ಲಿ ಹರಿಯಾಣದ ತಂಡಕ್ಕೆ ಆಡುತ್ತಾರೆ.[೧]೧೬ರ ವಯ್ಯೊಮಿತಿಯ ಭಾರತೀಯ ಚೆಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಜೂನ್ ೧೧, ೨೦೧೬ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ೧ನೇ ಏಕದಿನ ಪಂದ್ಯದ ಮೂಲಕ ಅಂತರರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು.[೨] ತಮ್ಮ ಚೊಚ್ಚಲ ಪಂದ್ಯದ ೧೦ ಓವರ್ ಗಳಲ್ಲಿ ಕೇವಲ ೨೭ ರನ್ ನೀಡಿ ಒಂದು ವಿಕೆಟ್ ಪಡೆದರು. ಜೂನ್ ೧೮, ೨೦೧೬ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಟಿ-೨೦ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು.[೩] ೦೧ ಫೆಬ್ರವರಿ, ೨೦೧೭ ರಲ್ಲಿ ಟಿ-೨೦ ಕ್ರಿಕೆಟ್ ನಲ್ಲಿ ೫ ವಿಕೆಟ್ ಗೊಂಚಲು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಲಿಕೆಗೆ ಪಾತ್ರರಾದರು. ಆ ಪಂದ್ಯದಲ್ಲಿ ೨೫ ರನ್ ನೀಡಿ ೬ ವಿಕೆಟ್ ಗಳನ್ನ ಪಡೆದರು.[೪]