ಯೋಗ ದರ್ಶನವು ಹಿಂದೂ ಧರ್ಮದ ಆರು ಪ್ರಮುಖ ಸಾಂಪ್ರದಾಯಿಕ ಪರಂಪರೆಗಳಲ್ಲಿ ಒಂದು.[೧][೨] ಪ್ರಾಚೀನ, ಮಧ್ಯಕಾಲೀನ ಹಾಗೂ ಬಹುತೇಕ ಆಧುನಿಕ ಸಾಹಿತ್ಯವು ಹಲವುವೇಳೆ ಹಿಂದೂ ಧರ್ಮದ ಯೋಗ ಪಂಥವನ್ನು ಸರಳವಾಗಿ ಯೋಗವೆಂದು ಕರೆಯುತ್ತದೆ. ಇದು ಹಿಂದೂ ಧರ್ಮದ ಸಾಂಖ್ಯ ಪಂಥಕ್ಕೆ ನಿಕಟವಾಗಿ ಸಂಬಂಧಿಸಿದೆ. ತಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಉತ್ತಮಗೊಳಿಸಲು ಯೋಗ ಪಂಥದ ವ್ಯವಸ್ಥಿತ ಅಧ್ಯಯನಗಳು ಭಾರತೀಯ ದರ್ಶನದ ಎಲ್ಲ ಇತರ ಪಂಥಗಳ ಮೇಲೆ ಪ್ರಭಾವ ಬೀರಿವೆ. ಪತಂಜಲಿಯ ಯೋಗಸೂತ್ರಗಳು ಹಿಂದೂ ಧರ್ಮದ ಯೋಗ ಪಂಥದ ಪ್ರಮುಖ ಪಠ್ಯವಾಗಿದೆ.
ಸಾಂಖ್ಯ ಪಂಥದಂತೆ, ಹಿಂದೂ ಧರ್ಮದ ಯೋಗ ಪಂಥದ ಜ್ಞಾನಮೀಮಾಂಸೆಯು ವಿಶ್ವಾಸಾರ್ಹ ಜ್ಞಾನವನ್ನು ಪಡೆಯುವ ರೀತಿಯಾಗಿ ಆರು ಪ್ರಮಾಣಗಳಲ್ಲಿ ಮೂರರ ಮೇಲೆ ಅವಲಂಬಿಸುತ್ತದೆ. ಇವುಗಳಲ್ಲಿ ಪ್ರತ್ಯಕ್ಷ, ಅನುಮಾನ, ಹಾಗೂಶಬ್ದ (ಆಪ್ತವಚನ) ಸೇರಿವೆ. ಯೋಗದ ತತ್ತ್ವಮೀಮಾಂಸೆಯು ಸಾಂಖ್ಯ ಪಂಥದಂತೆ ಅದೇ ದ್ವೈತ ಆಧಾರದ ಮೇಲೆ ಬೆಳೆಸಲ್ಪಟ್ಟಿದೆ.