ಕೊಟ್ಟುರು ಚಿಕರಂಗಪ್ಪ ರಘುನಾಥ್ (ಜನನ: ೧೭ ಏಪ್ರಿಲ್ ೧೯೬೫), ಅವರ ಹೆಸರು ರಂಗಾಯಣ ರಘು ಎಂದು ಪ್ರಸಿದ್ಧವಾಗಿದೆ, ಇವರು ಭಾರತೀಯಚಲನಚಿತ್ರ ಮತ್ತು ರಂಗಭೂಮಿ ನಟ, ಸಿನಿಮಾದಲ್ಲಿ ಇವರು ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ ಪಾತ್ರಗಳಲ್ಲಿ ನಟಿಸಿರುವ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ, ೧೯೮೮ ರಿಂದ ೧೯೯೯ ರವರೆಗೆ ಅವರು ಬಿ. ವಿ. ಕಾರಂತ್ ಅವರ ರಂಗಭೂಮಿ ಗುಂಪಿನಲ್ಲಿ ವೇದಿಕೆಯ ನಟನಾಗಿ ಕೆಲಸ ಮಾಡಿದರು.೧೯೯೫ ರಲ್ಲಿ ಸುಗ್ಗಿ ಚಿತ್ರದಲ್ಲಿ ಅಭಿನಯಿಸಿದರು.
೨೦೦೭ ರ ದುನಿಯಾ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಅವರ ಎರಡನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಇತರ ಗಮನಾರ್ಹ ಪಾತ್ರಗಳು ಸೈನೈಡ್ (೨೦೦೬), ರಾಮ್ (೨೦೦೯), ಮತ್ತು ಜಯಮ್ಮಾನ ಮಗ (೨೦೧೩) .
ಕರ್ನಾಟಕ ರಾಜ್ಯ ದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊಟ್ಟೂರು ಎಂಬ ಹಳ್ಳಿಯಲ್ಲಿರುವ ಚಿಕ್ಕರಂಗಯ್ಯ ಮತ್ತು ವೀರಮ್ಮರಿಗೆ ಒಂಬತ್ತನೆಯ ಮಗುವಾಗಿ "ಕೊಟ್ಟೂರು ಚಿಕರಂಗಪ್ಪ ರಘುನಾಥ್ " ಎಂಬ ಹೆಸರಿನಲ್ಲಿ ೧೯೬೫ ರ ಏಪ್ರಿಲ್ ೧೭ ರಂದು ಜನಿಸಿದರು.
೧೯೮೮ ರಲ್ಲಿ ಮೈಸೂರಿನ ರಂಗಾಯಣ ರಂಗಭೂಮಿ ಗುಂಪಿನಲ್ಲಿ ಸೇರಿಕೊಂಡಾಗ ರಘು ರವರು ತಮ್ಮ ನಟನಾ ವೃತ್ತಿಯನ್ನು ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿದರು, ಅಲ್ಲಿ ಅವರು ತಿಂಗಳಿಗೆ ಸಂಬಳವಾಗಿ ೮೦೦ ಪಡೆಯುತ್ತಿದ್ದರು. ನಂತರ ೧೯೯೫ ರ ಕನ್ನಡ ಚಲನಚಿತ್ರ ಸುಗ್ಗಿಯಲ್ಲಿ ಅಭಿನಯಿಸಿದರು, ಆ ಚಲನಚಿತ್ರವನ್ನು ಹಂಸಲೇಖ ರವರು ನಿರ್ದೇಶಿಸಿದರು. ನಂತರ ಅವರು ೨೦೦೨ ರ ಧಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು, ನಂತರ ಮೇಘ ಬಂತು ಮೇಘ ಮತ್ತಿತರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.[೧][೨]