Ramakant Achrekar | |
---|---|
ಜನನ | 1932 ಮಾಲ್ವಾನ್, ಬಾಂಬೆ ಅಧ್ಯಕ್ಷತೆ, ಬ್ರಿಟಿಷ್ ಭಾರತ [೧] |
ಮರಣ | 2 ಜನವರಿ ೨೦೧೯ (ವಯಸ್ಸು ೮೬–೮೭) ಮುಂಬಯಿ, ಮಹಾರಾಷ್ಟ್ರ, ಭಾರತ |
ವೃತ್ತಿ | ಕ್ರಿಕೆಟ್ ತರಬೇತುದಾರ |
Organization | ಕಾಮತ್ ಮೆಮೋರಿಯಲ್ ಕ್ರಿಕೆಟ್ ಕ್ಲಬ್ |
ಮಕ್ಕಳು | ಕಲ್ಪನಾ ಮುರ್ಕರ್ |
'ರಮಾಕಾಂತ್ ಅಚ್ರೇಕರ್ ಭಾರತೀಯ ಕ್ರಿಕೆಟ್ ಕೋಚ್' ಆಗಿದ್ದರು. ಕ್ರಿಕೆಟ್ ಕ್ಷೇತ್ರದಲ್ಲಿ ಕ್ರಿಕೆಟ್ ಬ್ಯಾಟ್ಸ್ ಮನ್ ಗಳಾದ, ತೆಂಡೂಲ್ಕರ್, ಸುನೀಲ್ ಗಾವಸ್ಕರ್ , ಸಂಜಯ್ ಮಾಂಜ್ರೇಕರ್,ವಿನೋದ್ ಕಾಂಬ್ಳಿ, ಮುಂತಾದವರನ್ನು ಸಜ್ಜುಗೊಳಿಸಿ, ಅವರಿಗೆ ಕ್ರಿಕೆಟ್ ನ ಎಲ್ಲಾ ಪಟ್ಟುಗಳನ್ನು ವಿಧಿವತ್ತಾಗಿ ವಿವರಿಸಿ ದಿಶೆನೀಡಿದ ಕ್ರಿಕೆಟ್ ದ್ರೋಣಾಚಾರ್ಯನೆಂದೇ ಪ್ರಸಿದ್ಧರು. ದಾದರ್ ವಲಯದ ಶಿವಾಜಿಪಾರ್ಕ್ ನಲ್ಲಿ ಹಲವಾರು ಕ್ರಿಕೆಟ್ ಟೀಮ್ ಗಳನ್ನು ಸಿದ್ಧಗೊಳಿಸಲಾಗಿದೆ. 'ಮುಂಬಯಿ ಕ್ರಿಕೆಟ್ ಟೀಮ್ ನ್ನು ಆರಿಸುವ ಕಮಿಟಿ'ಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.
ಭಾರತದ ಕ್ರಿಕೆಟ್ ಟೀಮಿನ ಮಕುಟದಂತಿರುವ ಸಚಿನ್ ಅಚ್ರೇಕರ್ ರವರ ಪ್ರಮುಖ ಶಿಷ್ಯರಲ್ಲೊಬ್ಬರು. ಅವರು, ಒಳ್ಳೆಯ ಬ್ಯಾಟ್ಸ್ ಮನ್, ರನ್ ಗಳಿಸುವ ಯಂತ್ರವೆಂದು ಪ್ರಸಿದ್ಧರು. 'ಒಂದುದಿನದ' ಹಾಗೂ 'ಟೆಸ್ಟ್ ಮ್ಯಾಚ್' ಗಳಲ್ಲಿ ರನ್ನಿನ ಹೊಳೆ ಹರಿಸಿ ಅನೇಕ ಹೊಸವಿಕ್ರಮಗಳನ್ನು ಸ್ಥಾಪಿಸಿ ಹೆಸರುಮಾಡಿದ್ದಾರೆ.
ಭಾರತದ ಕ್ರಿಕೆಟ್ ಟೀಮನ್ನು ಪ್ರತಿನಿಧಿಸಲು ತರಬೇತಿಪಡೆದ ಮತ್ತಿತರ ಬ್ಯಾಟ್ಸ್ ಮನ್ ಗಳು, ವಿನೋದ್ ಕಾಂಬ್ಳಿ, 'ಬಲ್ವಿಂದರ್ ಸಂಧು', 'ಚಂದ್ರಕಾಂತ್ ಪಂಡಿತ್', 'ಪ್ರವೀನ್ ಅಮ್ರೆ', 'ಅಜಿತ್ ಅಗರ್ಕರ್', 'ಸಂಜಯ್ ಬಂಗರ್', 'ರಮೇಶ್ ಪೊವರ್',ಮುಂತಾದವರು.
೧೯೯೦, ರಲ್ಲಿ ಅಚ್ರೆಕರ್ ರವರು, ಕ್ರಿಕೆಟ್ ಕೋಚ್ ಆಗಿ ಸಲ್ಲಿಸಿದ ಅನುಪಮ ಸೇವೆಗಾಗಿ,ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕ್ರಿಕೆಟ್ ಕೋಚ್ ಆದಾಗ್ಯೂ, ರಮಾಕಾಂತ್ ರವರ ಆಟದಲ್ಲಿ ಅಷ್ಟೇನೂ ಸಾಧನೆಯ ದಾಖಲೆಗಳಿಲ್ಲ. ೧೯೪೩ ರಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು.
೧೯೪೫ ರಲ್ಲಿ 'ನ್ಯೂ ಹಿಂದ್ ಸ್ಪೋರ್ಟ್ಸ್ ಕ್ಲಬ್' ಗೆ ಆಡಿದರು. ಬೊಂಬಾಯಿನ ಫೋರ್ಟ್ ವಲಯದಲ್ಲಿರುವ 'ಗುಲ್ ಮೊಹರ್ ಟೆಕ್ಸ್ ಟ್ಟೈಲ್ ಮಿಲ್ಸ್' ನ 'ಯಂಗ್ ಮಹಾರಾಷ್ಟ್ರ ೧೧' ಪರವಾಗಿ ಅಡಿದ್ದರು. ೧೯೬೩-೬೪ ರಲ್ಲಿ 'ಆಲ್ ಇಂಡಿಯ ಸ್ಟೇಟ್ ಬ್ಯಾಂಕ್' ನ ಪರವಾಗಿ, 'ಹೈದರಾಬಾದ್ ಟೀಮಿನ ಜೊತೆ', 'ಮೊಯಿನ್-ಉದ್-ದೌಲ ಟೂರ್ನಮೆಂಟ್', 'ಫಸ್ಟ್ ಕ್ಲಾಸ್ ಮ್ಯಾಚ್' ನಲ್ಲಿ ಭಾಗವಹಿಸಿದ್ದರು. 'ISBN 978-81-7167-806-8'