ಥಾಟ್ | ಖಮಾಜ್ |
---|---|
ಸಮಯ | ರಾತ್ರಿಯ ಎರಡನೇ ಪ್ರಹರ |
ವಾದಿ | ಗ |
ಸಂವಾದಿ | ನಿ |
ಪರ್ಯಾಯ | ರಾಗೇಶ್ವನ್ |
ಸಮಾನ | ಬಾಗೇಶ್ರೀ |
ರಾಗಶ್ರೀ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ರಾಗವಾಗಿದ್ದು, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲೂ ಜನಪ್ರಿಯವಾಗಿದೆ. ಇದು ಖಮಾಜ್ ಥಾಟ್ ನಿಂದ ಬಂದಿದೆ. ಇದು ಆರೋಹಣದಲ್ಲಿ ಪೆಂಟಾಟೋನಿಕ್ , ಅವರೋಹದಲ್ಲಿ ಹೆಕ್ಸಾಟೋನಿಕ್.ಇದು ಔಡವ -ಶಾಡವ್ ಜಾತಿಗೆ ಸೇರಿದ ರಾಗ.ಇದು ತುಂಬಾ ಮಧುರವಾದ ರಾಗ.
ಇದು ಖಮಾಜ್ ಥಾಟ್ ಗೆ ಸೇರಿದ ರಾಗ.
ಸಮಯ
ಇದನ್ನು ಪ್ರಸ್ತುತ ಪಡಿಸುವ ಸಮಯ ರಾತ್ರಿಯ ಎರಡನೆಯ ಪ್ರಹರ.
ವಾದಿ ಮತ್ತು ಸಂವಾದಿ
ವಾದಿ ಸ್ವರ: ಗಂಧಾರ
ಸಂವಾದಿ ಸ್ವರ: ನಿಷಾಧ