ಹಿಂದೂ ಧರ್ಮ ಮತ್ತು ಹಿಂದೂ ಪುರಾಣದಲ್ಲಿ, ರಾಜರ್ಷಿ ಎಂದರೆ ರಾಜ ಸಂತ.
ರಾಜರ್ಷಿ ಎಂದರೆ ರಾಜ ಸಂತನಾಗಿ ಪರಿವರ್ತನೆಯಾಗಿರುವ ಅರಸ. ಋಷಿಯಾಗಲು ರಾಜರ್ಷಿಯು ರಾಜತ್ವನವನ್ನು ಬಿಡುವ ಅಗತ್ಯವಿಲ್ಲ, ಉದಾಹರಣೆಗೆ (ಮುಂದೆ ಬ್ರಹ್ಮರ್ಷಿಯಾಗಲು ಮುನ್ನಡೆದ) ವಿಶ್ವಾಮಿತ್ರನು ರಾಜ್ಯವನ್ನು ಆಳುವಾಗಲೇ ಋಷಿಯ ಸ್ಥಿತಿಯನ್ನು ತಲುಪಿ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಿದನು. ಇವರು ಆ ಸ್ಥಿತಿಯಲ್ಲೂ ಕ್ಷತ್ರಿಯ ಕರ್ತವ್ಯವನ್ನು ನೆರವೇರಿಸುತ್ತಾರೆ, ಮತ್ತು ಆಧ್ಯಾತ್ಮಿಕ ಜ್ಞಾನದ ಮಟ್ಟದಲ್ಲಿ ಬಹುತೇಕ ಋಷಿ, ಮಹರ್ಷಿಗಳು ಹಾಗೂ ಬ್ರಹ್ಮರ್ಷಿಗಳಂತೆಯೇ ಉಳಿಯುತ್ತಾರೆ.[೧]
ಹಿಂದೂ ಧರ್ಮ ಮತ್ತು ವೇದಗಳಲ್ಲಿ ಉಲ್ಲೇಖಿಸಿದಂತೆ ನಾಲ್ಕು ಪ್ರಕಾರಗಳ ಋಷಿಗಳಿದ್ದಾರೆ.
ವೇದಗಳು ಮತ್ತು ಹಿಂದೂ ಧರ್ಮದ ಧರ್ಮಗ್ರಂಥಗಳಲ್ಲಿ, ರಾಜರ್ಷಿ ಹೆಸರು ತನ್ನದೇ ಅರ್ಥ ಹೊಂದಿದೆ ಮತ್ತು ಇದನ್ನು ಸದಾ ಮತ್ತು ಈಗಲೂ ಮಾನವಕುಲ ಹಾಗೂ ಪ್ರಚಲಿತ ಸಮಾಜಗಳ ಹೆಚ್ಚಿನ ಉದ್ದೇಶವನ್ನು ಸಾಧಿಸಲು ಉದಾಹರಣೆಗಳಾಗಿ ನಿಂತಿರುವ ಕೆಲವು ಪ್ರಾಚೀನ ಐತಿಹಾಸಿಕ ಹಿಂದೂ ವ್ಯಕ್ತಿಗಳಿಗೆ ವ್ಯಾಪಕವಾಗಿ ಅನ್ವಯಿಸಲಾಗುತ್ತದೆ. ವೈದಿಕ ಇತಿಹಾಸದಲ್ಲಿ ಇಬ್ಬರು ರಾಜರ್ಷಿಗಳ ಉಲ್ಲೇಖವಿದೆ: ರಾಜರ್ಷಿ ಮುದ್ಗಲ, ಮತ್ತು ರಾಜರ್ಷಿ ವಿಶ್ವಾಮಿತ್ರ.