ರಾಜಸೂಯ (ರಾಜನ ಉದ್ಘಾಟನಾ ಯಾಗ) ವೈದಿಕ ಧರ್ಮದ ಒಂದು ಶ್ರೌತ ಕ್ರಿಯಾವಿಧಿ. ಇದು ಒಬ್ಬ ರಾಜನ ಪಟ್ಟಾಭಿಷೇಕ.[೧] ಇದನ್ನು ಆಪಸ್ತಂಭ ಶ್ರೌತ ಸೂತ್ರ ೧೮.೮-೨೫.೨೨ ಸೇರಿದಂತೆ ತೈತ್ತಿರೀಯ ಪಠ್ಯಸಂಗ್ರಹದಲ್ಲಿ ವಿವರಿಸಲಾಗಿದೆ.[೧] ಇದು ಸೋಮ ಹಿಂಡುವಿಕೆ, ರಥದ ಸವಾರಿ, ರಾಜನು ತನ್ನ ಬಿಲ್ಲಿನಿಂದ ಬಾಣಗಳನ್ನು ಹೊಡೆಯುವುದು, ಮತ್ತು ಒಂದು ಸಂಕ್ಷಿಪ್ತ ದನ ದಾಳಿಯನ್ನು ಒಳಗೊಂಡಿದೆ.[೧] ಪುತ್ರರಹಿತ ರಾಜ ಹರಿಶ್ಚಂದ್ರನ ಪರವಾಗಿ ವರುಣನಿಗೆ ಬಹುತೇಕವಾಗಿ ಬಲಿಕೊಡಲಾದ ಶುನಃಶೇಪನ ಕಥೆಯ ಹೇಳುವಿಕೆ ಇರುತ್ತದೆ.[೧] ದಾಳವನ್ನು ಉರುಳಿಸುವ ಆಟದಿಂದ ರಾಜನ ಸಿಂಹಾಸನಾರೋಹಣ ಮತ್ತು ಬ್ರಹ್ಮಾಂಡದ ಪುನರ್ಜನ್ಮವೂ ಸೇರಿರುತ್ತದೆ.[೧]
ಈ ಯಜ್ಞವನ್ನು ಇಷ್ಟಿ, ಪಶುಯಾಗ, ಸೋಮಯಜ್ಞ, ದರ್ವಿಹೋಮ ಇತ್ಯಾದಿ ಇತರ ಸಂಕೀರ್ಣ ಯಜ್ಞಗಳ ಪಟ್ಟಿಯ ಅಡಿಯಲ್ಲಿ ಸೇರಿಸಬಹುದು. ಇದು ತುಂಬಾ ಸಂಕೀರ್ಣ ಯಜ್ಞ. ಇದರಲ್ಲಿ ೧೨೯ ಇಷ್ಟಿ ಯಜ್ಞ, ೨ ಪಶು ಯಜ್ಞ, ೭ ದರ್ವಿ ಹೋಮಗಳು ಮತ್ತು ೬ ಸೋಮ ಯಜ್ಞಗಳು ಸೇರಿರುತ್ತವೆ. ಈ ಯಜ್ಞವನ್ನು ನಡೆಸಿಕೊಡುವ ಪುರೋಹಿತರಿಗೆ ಅತ್ಯಂತ ಅದ್ಭುತ ಬಗೆಯ ಉಡುಗೊರೆಗಳನ್ನು ನೀಡಲಾಗುತ್ತದೆ. ಈ ಯಜ್ಞದ ಮುಖ್ಯ ಪುರೋಹಿತರಲ್ಲಿ ಒಬ್ಬನಾದ ಅಧ್ವರ್ಯುವಿಗೆ ಎರಡು ಚಿನ್ನದಿಂದ ಲೇಪಿತವಾದ ಕನ್ನಡಿಗಳನ್ನು ಕೊಡಬೇಕು. ಈ ಯಜ್ಞದಲ್ಲಿ ಮತ್ತೊಬ್ಬ ಬಗೆಯ ಪುರೋಹಿತನಾದ ಉದ್ಗಾಥನಿಗೆ ಬಂಗಾರದ ಸರ ಕೊಡಬೇಕು. ಮತ್ತೊಬ್ಬ ಬಗೆಯ ಪುರೋಹಿತನಾದ ಹೋಥನಿಗೆ ಉಡುಗೊರೆಯಾಗಿ ರುಕ್ಮ ಎಂದು ಕರೆಯಲಾದ ಚಿನ್ನದ ಆಭರಣ ಕೊಡಬೇಕು. ಈ ಯಜ್ಞವನ್ನು ನಡೆಸಿಕೊಡುವ ಇಬ್ಬರು ಪುರೋಹಿತರಾದ ಪ್ರತಿಹರ್ತ ಮತ್ತು ಪ್ರಷ್ಠೋತರಿಗೆ ತಲಾ ಒಂದು ಬಿಳಿ ಕುದುರೆ ಕೊಡಬೇಕು. ಮುಖ್ಯ ಪುರೋಹಿತನಾದ ಬ್ರಹ್ಮನಿಗೆ ೧೨ ಆರೋಗ್ಯವಂತ ಹಸುಗಳನ್ನು ಕೊಡಬೇಕು. ಎರಡನೇ ಅತಿ ಮುಖ್ಯ ಪುರೋಹಿತನಾದ ಮೈತ್ರಾ ವರುಣನಿಗೆ ಗರ್ಭಿಣಿ ಹಸುವನ್ನು ಉಡುಗೊರೆಯಾಗಿ ಕೊಡಬೇಕು. ಬ್ರಾಹ್ಮಣಝಂಸಿ ಪುರೋಹಿತನಿಗೆ ಆರೋಗ್ಯವಂತ ಎತ್ತನ್ನು ಉಡುಗೊರೆಯಾಗಿ ಕೊಡಬೇಕು. ನೇಷ್ಟ ಮತ್ತು ಪೋತರಿಗೆ ಎರಡು ಅಮೂಲ್ಯ ರೇಷ್ಮೆಗಳ ಒಂದೆರಡನ್ನು ಕೊಡಬೇಕು. ಆಚವಕ ಪುರೋಹಿತನಿಗೆ ಒಂದು ಬಂಡಿ ತುಂಬ ಯವ ಧಾನ್ಯವನ್ನು ಉಡುಗೊರೆಯಾಗಿ ಕೊಡಬೇಕು. ಅಂತಿಮವಾಗಿ ಅಗ್ನೀಥ ಪುರೋಹಿತನಿಗೆ ಆರೋಗ್ಯವಂತ ಎತ್ತನ್ನು ಉಡುಗೊರೆಯಾಗಿ ಕೊಡಬೇಕು. ರಾಜನಿಗಾಗಿ ಈ ಯಜ್ಞವನ್ನು ನಡೆಸಿಕೊಡುವ ಪುರೋಹಿತರಿಗೆ ಕೊಡಬೇಕಾದ ವಿಶೇಷ ಶುಲ್ಕಗಳಿವೆ.[೨]
ರಾಜಸೂಯ ಯಜ್ಞವನ್ನು ಕೇವಲ ಇಡೀ ವಿಶ್ವವನ್ನು ಆಳಲು ಅರ್ಹರಿರುವ ಮತ್ತು ಭೂಮಿಯ ಎಲ್ಲ ಇತರ ರಾಜರನ್ನು ಸೋಲಿಸಿರುವ ರಾಜರು ಮಾಡಬೇಕು. ಈ ಯಜ್ಞವನ್ನು ಇಡೀ ವಿಶ್ವದ ಆಡಳಿತಗಾರನಾಗಲು ಹೊರಟಿರುವ ರಾಜನಿಗೆ ಉದ್ಘಾಟನೆಯಾಗಿ ನಡೆಸಲಾಗುತ್ತದೆ. ಈ ಯಜ್ಞದ ನೆರವೇರಿಕೆ ನಂತರ, ಆ ರಾಜನನ್ನು ರಾಜಾಧಿರಾಜ (ರಾಜರ ರಾಜ) ಎಂದು ಕರೆಯಲಾಗುತ್ತದೆ. ಅವನು ಸ್ವರ್ಗವಾಸಿಗಳಿಂದಲೂ ಗೌರವ ಮತ್ತು ಮನ್ನಣೆಯನ್ನು ಪಡೆಯುವನು ಮತ್ತು ಇಡೀ ವಿಶ್ವದ ಮೇಲೆ ತನ್ನ ಖ್ಯಾತಿಯನ್ನು ಸ್ಥಾಪಿಸುವನು. ರಾಜಸೂಯ ಯಾಗವು ಬಹಳ ದುಬಾರಿಯಾದ ಯಾಗ, ಮತ್ತು ವೇದಗಳಲ್ಲಿ ವರ್ಣಿಸಲಾದ ಇತರ ಎಲ್ಲ ಯಜ್ಞಗಳಿಗಿಂತ ಅತ್ಯಂತ ಜನಪ್ರಿಯವಾದದ್ದು.
ವಾಜಪೇಯ ಯಾಗ