ರಾಣಿ ವಿಕ್ಟೋರಿಯಾ ಆಸ್ಪತ್ರೆ | |
---|---|
ರಾಣಿ ವಿಕ್ಟೋರಿಯಾ ಆಸ್ಪತ್ರೆ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ | |
Geography | |
ಸ್ಥಳ | ಈಸ್ಟ್ ಗ್ರಿನ್‌ಸ್ಟೆಡ್, ವೆಸ್ಟ್ ಸಸೆಕ್ಸ್, ಇಂಗ್ಲೆಂಡ್. |
Organisation | |
Care system | ರಾಷ್ಟ್ರೀಯ ಆರೋಗ್ಯ ಸೇವೆ (ಇಂಗ್ಲೆಂಡ್) |
Services | |
ತುರ್ತು ವಿಭಾಗ | ಸಣ್ಣ ಗಾಯಗಳ ಘಟಕ |
ಹಾಸಿಗೆ | ೮೦ |
History | |
ಸ್ಥಾಪನೆ | ೧೮೬೩ |
Links | |
ಜಾಲತಾಣ | www |
ರಾಣಿ ವಿಕ್ಟೋರಿಯಾ ಆಸ್ಪತ್ರೆ(ಕ್ಯೂವಿಹೆಚ್)ಯು ಇಂಗ್ಲೆಂಡ್‌ನ ಪಶ್ಚಿಮ ಸಸೆಕ್ಸ್‌ನ ಈಸ್ಟ್ ಗ್ರಿನ್‌ಸ್ಟೆಡ್‌ನಲ್ಲಿರುವ ಪರಿಣತಿ ಹೊಂದಿದ ಶಸ್ತ್ರಚಿಕಿತ್ಸಾ ಕೇಂದ್ರವಾಗಿದೆ. ಇದು ಇಂಗ್ಲೆಂಡ್‌ನಾದ್ಯಂತ ಚಿಕಿತ್ಸಾಲಯಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ. ಇದು ಸುಟ್ಟಗಾಯಗಳು ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ಪ್ರಸಿದ್ಧವಾಗಿದೆ. ಈ ಆಸ್ಪತ್ರೆಗೆ ರಾಣಿ ವಿಕ್ಟೋರಿಯಾ ಅವರ ಹೆಸರನ್ನು ಇಡಲಾಗಿದೆ. ಇದನ್ನು ರಾಣಿ ವಿಕ್ಟೋರಿಯಾ ಆಸ್ಪತ್ರೆ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ ನಿರ್ವಹಿಸುತ್ತದೆ.
೨೦೨೧ ರಲ್ಲಿ, ಯುನಿವರ್ಸಿಟಿ ಆಸ್ಪತ್ರೆ ಸಸೆಕ್ಸ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ ಅನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂಬ ಪ್ರಸ್ತಾಪಗಳನ್ನು ಟ್ರಸ್ಟ್‌ನ ಗವರ್ನರ್‌ಗಳು ಆಕ್ಷೇಪಿಸಿದರು.[೧] ಸೆಪ್ಟೆಂಬರ್ ೨೦೨೧ ರಲ್ಲಿ, ೬೬% ಸಲಹೆಗಾರರು ಮುಖ್ಯ ಕಾರ್ಯನಿರ್ವಾಹಕರ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.[೨] ಹೀಗಾಗಿ ಸೆಪ್ಟೆಂಬರ್ ೨೦೨೨ ರಲ್ಲಿ, ವಿಲೀನ ಯೋಜನೆಗಳನ್ನು ಕೈಬಿಡಲಾಯಿತು.[೩]
೧೮೬೩ ರಲ್ಲಿ, ಈಸ್ಟ್ ಗ್ರಿಸ್ಟೆಡ್ ಕಾಟೇಜ್ ಆಸ್ಪತ್ರೆ ಎಂದು ಸ್ಥಾಪಿತವಾದ ಈ ಆಸ್ಪತ್ರೆ ೧೯೩೦ ರ ದಶಕದಲ್ಲಿ "ರಾಣಿ ವಿಕ್ಟೋರಿಯಾ ಆಸ್ಪತ್ರೆ" ಎಂಬ ಹೆಸರನ್ನು ಅಳವಡಿಸಿಕೊಂಡಿತು ಮತ್ತು ೧೯೩೬ ರಲ್ಲಿ, ಅದರ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಗೊಂಡಿತು.[೪]
ಎರಡನೇ ಮಹಾಯುದ್ಧದ ಸಮಯದಲ್ಲಿ, ಇದು ಸರ್ ಆರ್ಚಿಬಾಲ್ಡ್ ಮೆಕ್ಇಂಡೋ ಅವರ ನಾಯಕತ್ವದಲ್ಲಿ ವಿಶೇಷ ಸುಟ್ಟಗಾಯಗಳ ಘಟಕವಾಗಿ ಅಭಿವೃದ್ಧಿಗೊಂಡಿತು ಮತ್ತು ಕೆಟ್ಟದಾಗಿ ಸುಟ್ಟುಹೋದ ಅಥವಾ ಪುಡಿಮಾಡಿದ ಮತ್ತು ಪುನರ್ನಿರ್ಮಾಣದ ಪ್ಲ್ಯಾಸ್ಟಿಕ್ ಸರ್ಜರಿಯ ಅಗತ್ಯವಿರುವ ಆರ್‌ಎಎಫ್ ಮತ್ತು ಮಿತ್ರ ವಿಮಾನ ಸಿಬ್ಬಂದಿಯ ಚಿಕಿತ್ಸೆಗಾಗಿ ವಿಶ್ವ ಪ್ರಸಿದ್ಧವಾಯಿತು.[೫] ೧೯೪೧ ರಲ್ಲಿ, ಗಿನಿಯಿಲಿ ಕ್ಲಬ್ ಅನ್ನು ವಿಮಾನ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸಾಮಾಜಿಕ ಕ್ಲಬ್‌ನ ಮೂಲಕ ಬೆಂಬಲ ನೀಡಲಾಯಿತು. ಯುದ್ಧದ ನಂತರ ಅನೇಕ ವರ್ಷಗಳವರೆಗೆ ಕ್ಲಬ್ ಗಿನಿಯಿಲಿಗಳಿಗೆ ಸಹಾಯವನ್ನು ನೀಡುವುದನ್ನು ಮುಂದುವರೆಸಿತು ಮತ್ತು ೨೦೦೭ ರವರೆಗೆ ಈಸ್ಟ್ ಗ್ರಿಸ್ಟೆಡ್‌ನಲ್ಲಿ ನಿಯಮಿತವಾಗಿ ಸಭೆ ಸೇರಿತು. ರಾಣಿ ವಿಕ್ಟೋರಿಯಾ ಆಸ್ಪತ್ರೆ ಇಂದು ತಜ್ಞರ ಆರೈಕೆಯಿಂದ ಮುಂಚೂಣಿಯಲ್ಲಿದೆ ಮತ್ತು ಸುಟ್ಟಗಾಯಗಳ ಚಿಕಿತ್ಸಾ ಸೌಲಭ್ಯಗಳನ್ನು ನೀಡುವ ಮೂಲಕ ಇಂಗ್ಲೆಂಡ್‌ನಾದ್ಯಂತ ಪರಿಣತಿಗೆ ಹೆಸರುವಾಸಿಯಾಗಿದೆ.[೬]
ಇತ್ತೀಚಿನ ವರ್ಷಗಳಲ್ಲಿ ಹಳೆಯ ಎಸ್ಟೇಟ್ ಅನ್ನು ಬದಲಾಯಿಸಲು ಸೈಟ್ ಅಭಿವೃದ್ಧಿಯ ಪ್ರಮುಖ ಕಾರ್ಯಕ್ರಮ ನಡೆಯುತ್ತಿದೆ. ೨೦೧೨ ರಲ್ಲಿ, ನವೀಕರಿಸಿದ ಸುಟ್ಟಗಾಯಗಳು ಮತ್ತು ಮಕ್ಕಳ ಘಟಕಗಳೊಂದಿಗೆ ಹೊಸ ಹೊರರೋಗಿ ವಿಭಾಗವನ್ನು ತೆರೆಯಲಾಯಿತು. ಅಕ್ಟೋಬರ್ ೨೦೧೩ ರಲ್ಲಿ, ಪ್ರಿನ್ಸೆಸ್ ರಾಯಲ್ ಎಂಬ ಆರು ಹೊಸ ಆಪರೇಟಿಂಗ್ ಥಿಯೇಟರ್‌ಗಳನ್ನು ತೆರೆಯಲಾಯಿತು.[೭]
ರಾಣಿ ವಿಕ್ಟೋರಿಯಾ ಆಸ್ಪತ್ರೆಯು ಸುಟ್ಟಗಾಯಗಳಿಗೆ ಪರಿಣತಿ ಹೊಂದಿದ ಶಸ್ತ್ರಚಿಕಿತ್ಸಾ ಕೇಂದ್ರವಾಗಿದ್ದು, ರೋಗ, ಆಘಾತ, ಪ್ರಮುಖ ಶಸ್ತ್ರಚಿಕಿತ್ಸೆ ಅಥವಾ ಜನ್ಮಜಾತವಾಗಿ ವಿಕಾರ ಅಥವಾ ವಿನಾಶಕಾರಿ ಹಾನಿಯನ್ನು ಅನುಭವಿಸಿದ ಜನರ ಮರುಸ್ಥಾಪನೆಯಲ್ಲಿ ಅಂಗಾಂಶ ಕಸಿ ಮತ್ತು ಮೈಕ್ರೋವಾಸ್ಕುಲರ್ ಶಸ್ತ್ರಚಿಕಿತ್ಸೆಯಂತಹ ತಂತ್ರಗಳ ಬಳಕೆಯಾಗುತ್ತಿದೆ. ಈ ಸೇವೆಗಳನ್ನು ನಿರ್ವಹಿಸುವ ವಿಶೇಷ ಘಟಕಗಳು ಹೀಗಿವೆ:
ಜುಲೈ ೨೦೧೨ ರಲ್ಲಿ, ಆಸ್ಪತ್ರೆಯು ತನ್ನ ಸೇವೆಗಳ ಕುರಿತು ಕಿರುಚಿತ್ರವನ್ನು ನಿರ್ಮಿಸಿತು.[೨೩]
ಯಾವುದೇ ಆಘಾತದ ನಂತರ ಪರಿಣತಿಯ ಶಸ್ತ್ರಚಿಕಿತ್ಸೆಗಾಗಿ ಪ್ರಾದೇಶಿಕ ತಜ್ಞ ಕೇಂದ್ರವಾಗಿ, ರಾಣಿ ವಿಕ್ಟೋರಿಯಾ ಆಸ್ಪತ್ರೆ (ಕ್ಯೂವಿಎಚ್) ಸುಸ್ಥಾಪಿತ ಟೆಲಿಮೆಡಿಸಿನ್ ರೆಫರಲ್ ವ್ಯವಸ್ಥೆಯನ್ನು ಹೊಂದಿದೆ. ೨೦೦೮ ರಲ್ಲಿ, ಈ ಸೇವೆಯು ಪ್ರಾದೇಶಿಕ ಆವಿಷ್ಕಾರ ಮತ್ತು ಸಂವಹನ ತಂತ್ರಜ್ಞಾನ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಕ್ಯೂವಿಎಚ್ ಟೆಲಿಮೆಡಿಸಿನ್ ವ್ಯವಸ್ಥೆಯನ್ನು ಆರೋಗ್ಯದಲ್ಲಿ ಎಂಜಿನಿಯರಿಂಗ್‌ನ ಒಟ್ಟಾರೆ ವಿಷಯದ ಕುರಿತು ೨೦೦೮ ರ ಫ್ಯಾರಡೆ ಉಪನ್ಯಾಸದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಭಾಗವಾಗಿ ಆಯ್ಕೆಮಾಡಲಾಗಿದೆ ಮತ್ತು ಸಾಕ್ಷ್ಯಚಿತ್ರದಲ್ಲಿ ಸೇರಿಸಲಾಗಿದೆ.[೨೪]
೨೦೧೧/೧೨ ರ ರಾಷ್ಟ್ರೀಯ ಕ್ಯಾನ್ಸರ್ ರೋಗಿಗಳ ಸಮೀಕ್ಷೆಯಲ್ಲಿ, ಕ್ಯಾನ್ಸರ್ ಸೇವೆಗಳನ್ನು ಒದಗಿಸುವ ಎಲ್ಲಾ ೧೬೦ ಆಸ್ಪತ್ರೆ ಕೇಂದ್ರಗಳಲ್ಲಿ ಆರೈಕೆಯ ಗುಣಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ೯೪ ಪ್ರತಿಶತದಷ್ಟು ಕ್ಯಾನ್ಸರ್ ರೋಗಿಗಳು ಕ್ಯೂವಿಎಚ್‌ನಲ್ಲಿ ಪಡೆದ ಆರೈಕೆಯನ್ನು ಅತ್ಯುತ್ತಮ ಅಥವಾ ತುಂಬಾ ಉತ್ತಮ ಎಂದು ಸಮೀಕ್ಷೆ ಮಾಡಿದ್ದಾರೆ.[೨೫]
೨೦೧೧ ರ ರಾಷ್ಟ್ರೀಯ ಎನ್‌ಎಚ್‌ಎಸ್ ಒಳರೋಗಿಗಳ ಸಮೀಕ್ಷೆಯಲ್ಲಿ, ಆಸ್ಪತ್ರೆಯು ಕೇಳಲಾದ ೬೧ ಪ್ರಶ್ನೆಗಳಲ್ಲಿ ೨೭ ಉತ್ತರಕ್ಕೆ ದೇಶದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿತು. ಇದರಲ್ಲಿ ಒಟ್ಟಾರೆ, ನೀವು ಪಡೆದ ಆರೈಕೆಯನ್ನು ನೀವು ಹೇಗೆ ಸಮೀಕ್ಷೆ ಮಾಡುತ್ತೀರಿ? ಎಂಬ ಪ್ರಶ್ನೆಯು ಒಂದಾಗಿದೆ.[೨೬]
೨೦೧೧ ರ ರಾಷ್ಟ್ರೀಯ ಎನ್ಎಚ್ಎಸ್ ಸಿಬ್ಬಂದಿ ಸಮೀಕ್ಷೆಯಲ್ಲಿ, ೯೪% ವೈದ್ಯರು ಮತ್ತು ದಾದಿಯರು ತಮ್ಮ ಆಸ್ಪತ್ರೆಯನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.[೨೭]
೨೦೧೧ ರಲ್ಲಿ, ಇದು ಡಾ ಫಾಸ್ಟರ್ ಹಾಸ್ಪಿಟಲ್ ಗೈಡ್‌ನಿಂದ ದೇಶದಲ್ಲಿ ಹೆಚ್ಚು ಶಿಫಾರಸು ಮಾಡಲಾದ ಎನ್ಎಚ್ಎಸ್ ಆಸ್ಪತ್ರೆ ಎಂದು ಗುರುತಿಸಲಾಗಿದೆ.[೨೮]
೨೦೧೫ ರಲ್ಲಿ, ಈ ಆಸ್ಪತ್ರೆಯನ್ನು ಆರೋಗ್ಯ ಸೇವಾ ಜರ್ನಲ್ ಅಗ್ರ ನೂರು ಎನ್ಎಚ್ಎಸ್ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಹೆಸರಿಸಿತು. ಆ ಸಮಯದಲ್ಲಿ, ಇದು ೮೧೭ ಪೂರ್ಣ ಸಮಯದ ಸಮಾನ ಸಿಬ್ಬಂದಿಯನ್ನು ಹೊಂದಿತ್ತು ಮತ್ತು ಅನಾರೋಗ್ಯದ ಅನುಪಸ್ಥಿತಿಯ ಪ್ರಮಾಣವು ೩.೫೮% ಆಗಿತ್ತು. ೯೧% ಸಿಬ್ಬಂದಿಗಳು ಇದನ್ನು ಚಿಕಿತ್ಸೆಯ ಸ್ಥಳವೆಂದು ಹಾಗೂ ೭೪% ಸಿಬ್ಬಂದಿಗಳು ಕೆಲಸ ಮಾಡುವ ಸ್ಥಳವೆಂದು ಶಿಫಾರಸು ಮಾಡುತ್ತಾರೆ.[೨೯]
೨೦೧೮/೧೯ ರಲ್ಲಿ, ಅದು £ ೫.೯ ಮಿಲಿಯನ್ ಕೊರತೆಯನ್ನು ಎದುರಿಸಿತು. ಇದು ವಹಿವಾಟಿನ ಸುಮಾರು ೧೦% ನಷ್ಟು, ಅದರ ಬಿಲ್‌ಗಳನ್ನು ಪಾವತಿಸಲು ಹಣವನ್ನು ಎರವಲು ಪಡೆಯಬೇಕಾಗಿತ್ತು.[೩೦] ಇದು ೨೦೧೯ ರಿಂದ ೨೦೨೩ ರವರೆಗೆ ಪ್ರತಿ ವರ್ಷ ಸುಮಾರು £ ೭ ಮಿಲಿಯನ್ ಕೊರತೆಯನ್ನು ಊಹಿಸಿದ್ದು, ಅದರ ವಹಿವಾಟಿನ ಸುಮಾರು ೧೦% ನಷ್ಟಿದೆ.[೩೧]
ಇಲ್ಲಿನ ಸ್ಥಳೀಯ ಬಸ್ ಸೇವೆಗಳನ್ನು ಮೆಟ್ರೊಬಸ್ ಒದಗಿಸುತ್ತದೆ. ಈ ಕೆಳಗಿನ ಮಾರ್ಗಗಳು ಆಸ್ಪತ್ರೆಯ ಮೂಲಕ ಹಾದುಹೋಗುತ್ತವೆ:[೩೨]