ರಾಣಿ ವಿಜಯಾ ದೇವಿ

ವಿಜಯಾ ದೇವಿ ರವರು (೨೮ ಆಗಸ್ಟ್ ೧೯೯೨ - ೮ ಡಿಸೆಂಬರ್ ೨೦೦೫) ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಹಿರಿಯ ಮಗಳು ಹಾಗೂ ಜಯ ಚಾಮರಾಜ ಒಡೆಯರ್ ಅವರ ಸಹೋದರಿ. []

ಅವರು ತನ್ನ ತಂದೆಯ ಅರಮನೆಯಾದ ಚಾಮುಂಡಿ ವಿಹಾರದಲ್ಲಿ ಬೆಳೆದಳು. ಅವರು ಮೊದಲು ಗುಡ್ ಶೆಫರ್ಡ್ ಕಾನ್ವೆಂಟ್‌ನ ಸನ್ಯಾಸಿನಿಯರಿಂದ ಪಿಯಾನೋ ಕಲಿತರು. ನಂತರ ಮೈಸೂರಿಗೆ ಭೇಟಿ ನೀಡುತ್ತಿದ್ದ ಲಂಡನ್‌ನ ಟ್ರಿನಿಟಿ ಕಾಲೇಜಿನ ಆಲ್ಫ್ರೆಡ್ ಮಿಸ್ಟೋವ್ಸ್ಕಿ ಅವರಿಂದ ಕಲಿದತರು. [] ವೀಣಾ ವೆಂಕಟಗಿರಿಯಪ್ಪನವರು ವಿಜಯಾ ದೇವಿ ಅವರಿಗೆ ವೀಣಾವಾದನವನ್ನು ಕಲಿಸಿದರು. ೧೯೩೯ ರಲ್ಲಿ, ತಮ್ಮ ತಂದೆಯೊಂದಿಗೆ ಯುರೋಪ್ ಪ್ರವಾಸದಲ್ಲಿ, ಅವರು ಸೆರ್ಗೆಯ್ ರಾಚ್ಮನಿನೋಫ್ ಅವರನ್ನು ಭೇಟಿಯಾದರು.

ಅವರು ೧೯೪೧ ರಲ್ಲಿ ಕೊಟ್ಡಾ-ಸಂಗನಿಯ ರಾಜಕುಮಾರನನ್ನು ವಿವಾಹವಾದರು. ಅವರು ೧೯೪೭ ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ತಮ್ಮ ಪತಿಯೊಂದಿಗೆ ನ್ಯೂಯಾರ್ಕ್‌ಗೆ ತೆರಳಿದರು. ಅವರು ಜೂಲಿಯಾರ್ಡ್ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಎಡ್ವರ್ಡ್ ಸ್ಟೀರ್‌ಮನ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು.

ಅವರು ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ಮ್ಯೂಸಿಕ್ ಮತ್ತು ಆರ್ಟ್ಸ್ ಸೊಸೈಟಿಯನ್ನು ಸ್ಥಾಪಿಸಿದರು. []ಸಮಾಜದ ಹಿಂದಿನ ಪೋಷಕರಲ್ಲಿ ಕರ್ನಾಟಕದ ರಾಜ್ಯಪಾಲರು, ರುಕ್ಮಿಣಿ ದೇವಿ ಅರುಂಡೇಲ್, ಎಸ್.ಎಂ.ಕೃಷ್ಣ ಮತ್ತು ಶ್ರೀ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೆರಿದ್ದರು.

ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದರು: ಗೀತಾ ದೇವಿ ನಾಥ್, ಉಷಾ ದೇವಿ ಮಾಲವಿ, ಊರ್ಮಿಳಾ ದೇವಿ ಮತ್ತು ಶಕುಂತಲಾ ದೇವಿ. ಹಾಗು ಐದು ಮೊಮ್ಮಕ್ಕಳು: ಅಕ್ಷಯ್ ಮಾಲವಿ, ಪ್ರಿಯಮ್ ಮಾಲವಿ, ಉದಯ ನಾಥ್, ಹನುಮಂತ್ ನಾಥ್ ಮತ್ತು ಅನಿಶಾ ತಾರಾಪೋರ್ವಾಲಾ.

ಅವರು ೮ ಡಿಸೆಂಬರ್ ೨೦೦೫ ರಂದು ಬೆಂಗಳೂರಿನಲ್ಲಿ ನಿಧನರಾದರು. []

ಉಲ್ಲೇಖಗಳು

[ಬದಲಾಯಿಸಿ]
  1. Bhaktavatsala, M (10 January 2006). "End of a gentle glow". Archived from the original on 20 May 2006. {{cite news}}: |archive-date= / |archive-url= timestamp mismatch; 2 ಮೇ 2006 suggested (help)
  2. ೨.೦ ೨.೧ Sardana, Nikhil (1 December 2016). "Urmila Devi Kotda Sangani - Organising Secretary, International Music & Arts Society". Serenade. Retrieved 5 December 2021.
  3. Bhaktavatsala, M (10 January 2006). "End of a gentle glow". Archived from the original on 20 May 2006. {{cite news}}: |archive-date= / |archive-url= timestamp mismatch; 2 ಮೇ 2006 suggested (help)