ರಾಣೀ ನಾರಾಹ್ | |
---|---|
![]() | |
೨೦೧೨ ರ ಅಧಿಕೃತ ಭಾವಚಿತ್ರ | |
ಸಂಸತ್ತಿನ ಸದಸ್ಯೆ, ಲೋಕಸಭೆ
| |
ಅಧಿಕಾರ ಅವಧಿ ೩ ಎಪ್ರಿಲ್ ೨೦೧೬ – ೨ ಎಪ್ರಿಲ್ ೨೦೨೨ | |
ಪೂರ್ವಾಧಿಕಾರಿ | ನಾಜ್ನಿನ್ ಫಾರುಕ್ |
ಉತ್ತರಾಧಿಕಾರಿ | ಪಬಿತ್ರಾ ಮಾರ್ಗರಿಟಾ |
ಮತಕ್ಷೇತ್ರ | ಅಸ್ಸಾಂ |
ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರು, ಭಾರತ ಸರ್ಕಾರ
| |
ಅಧಿಕಾರ ಅವಧಿ ೨೮ ನವೆಂಬರ್ ೨೦೧೨ – ೨೩ ಮೇ ೨೦೧೪ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ಮಹದೇವ್ ಸಿಂಗ್ ಖಂಡೇಲಾ |
ಉತ್ತರಾಧಿಕಾರಿ | ಮನ್ಸುಖಭಾಯಿ ವಾಸವ |
ಸಂಸತ್ತಿನ ಸದಸ್ಯೆ, ಲೋಕಸಭೆ
| |
ಅಧಿಕಾರ ಅವಧಿ ೧೬ ಮೇ ೨೦೦೯ – ೧೬ ಮೇ ೨೦೧೪ | |
ಪೂರ್ವಾಧಿಕಾರಿ | ಅರುಣ್ ಕುಮಾರ್ ಶರ್ಮಾ |
ಉತ್ತರಾಧಿಕಾರಿ | ಸರ್ಬಾನಂದ ಸೋನೋವಾಲ್ |
ಮತಕ್ಷೇತ್ರ | ಲಖಿಂಪುರ |
ಅಧಿಕಾರ ಅವಧಿ ೧೦ ಮಾರ್ಚ್ ೧೯೯೮ – ೧೩ ಮೇ ೨೦೦೪ | |
ಪೂರ್ವಾಧಿಕಾರಿ | ಅರುನ್ ಕುಮಾರ್ ಶರ್ಮಾ |
ಉತ್ತರಾಧಿಕಾರಿ | ಅರುಣ್ ಕುಮಾರ್ ಶರ್ಮಾ |
ಮತಕ್ಷೇತ್ರ | ಲಖಿಂಪುರ |
ವೈಯಕ್ತಿಕ ಮಾಹಿತಿ | |
ಜನನ | ಜಹನಾರಾ ಚೌಧರಿ ೩೧ ಅಕ್ಟೋಬರ್ ೧೯೬೫ ಗುವಾಹಟಿ, ಅಸ್ಸಾಂ, ಭಾರತ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಭರತ್ ನರಾಹ್ |
ಮಕ್ಕಳು | ೨ ಗಂಡು ಮಕ್ಕಳು |
ಅಭ್ಯಸಿಸಿದ ವಿದ್ಯಾಪೀಠ | ಗುವಾಹಟಿ ವಿಶ್ವವಿದ್ಯಾಲಯ |
ರಾಣೀ ನಾರಾಹ್ (ಜಹನಾರಾ ಚೌಧರಿ; ಜನನ : ೩೧ ಅಕ್ಟೋಬರ್ ೧೯೬೫) ಅಸ್ಸಾಂ ಮೂಲದ ಭಾರತೀಯ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಅವರು ೨೦೧೬ ರಿಂದ ೨೦೨೨ ರವರೆಗೆ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಅಸ್ಸಾಂ ಅನ್ನು ಪ್ರತಿನಿಧಿಸಿದರು. ಅವರು ೧೯೯೮ ರಿಂದ ೧೦೦೪ ರವರೆಗೆ ಮತ್ತು ೨೦೦೯ ರಿಂದ ೨೦೧೪ ರವರೆಗೆ ಲೋಕಸಭೆಯಲ್ಲಿ ಲಖಿಂಪುರವನ್ನು ಪ್ರತಿನಿಧಿಸಿದರು. ನಾರಾ ಅವರು ೨೦೧೨ ರಿಂದ ೨೦೧೪ ರವರೆಗೆ ಭಾರತ ಸರ್ಕಾರದಲ್ಲಿ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ಇವರ ಪತಿ ಭರತ್ ನಾರಾಹ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯ ಮತ್ತು ನವೋಬೋಚಾದ ಶಾಸಕರೂ ಆಗಿದ್ದಾರೆ .
ನಾರಾಹ್ ಅವರು ಗುವಾಹಾಟಿ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. [೧] ಅವರು ವೃತ್ತಿಪರ ಕ್ರಿಕೆಟ್‌ಗಾರ್ತಿ ಮತ್ತು ಅಸ್ಸಾಂ ರಾಜ್ಯ ತಂಡದ ನಾಯಕಿಯಾಗಿದ್ದರು. [೨] ಅವಳು ಭಾರತದ ಮಹಿಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಅಸ್ಸಾಂ ಮಹಿಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆ ಮತ್ತು ಅಸ್ಸಾಂ ಫುಟ್ಬಾಲ್ ಸಂಸ್ಥೆಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಮಹಿಳಾ ಸಮಿತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸದಸ್ಯರಾಗಿದ್ದರು.[೩] [೪] [೫] [೬]
[೧] ಅದೇ ವರ್ಷದಲ್ಲಿ ಅವರು ಲಖಿಂಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಇವರು ೧೯೯೯ ಮತ್ತು ೨೦೦೯ ರಲ್ಲಿ ಲಖಿಂಪುರದಿಂದ ಮರು ಆಯ್ಕೆಯಾದರು. [೧] ನಾರಾ ಅವರು ೨೦೦೩ ರಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾದರು. [೭] ಇವರು ೨೦೦೯ ರಲ್ಲಿ ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉಪ ಮುಖ್ಯ ಸಚೇತಕರಾಗಿ ನೇಮಕಗೊಂಡರು. [೮] ೨೦೧೨ ರಲ್ಲಿ, ನಾರಾ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಭಾರತದ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡರು. [೯] ೨೦೧೬ ರಲ್ಲಿ, ನಾರಾ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾದರು. [೧೦]
ಅಸ್ಸಾಂ ವಿಧಾನಸಭೆಯ ಆರು ಅವಧಿಯ ಸದಸ್ಯ ಮತ್ತು ಅಸ್ಸಾಂ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಭರತ್ ನಾರಾಹ್ ಅವರನ್ನು ಇವರು ವಿವಾಹವಾದರು. [೨] [೧೧]