ರಾಮೇಶ್ವರಿ ನೆಹರು (೧೦ ಡಿಸೆಂಬರ್ ೧೮೮೬-೮ ನವೆಂಬರ್ ೧೯೬೬) ಭಾರತದ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅವರು ಬಡ ವರ್ಗಗಳ ಮತ್ತು ಮಹಿಳೆಯರ ಉನ್ನತಿಗಾಗಿ ಕೆಲಸ ಮಾಡಿದ್ದರು. ೧೯೦೨ ರಲ್ಲಿ, ಅವರು ಮೋತಿಲಾಲ್ ನೆಹರು ಅವರ ಸೋದರಳಿಯ ಮತ್ತು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸೋದರಸಂಬಂಧಿ ಬ್ರಿಜ್ಲಾಲ್ ನೆಹರು ಅವರನ್ನು ವಿವಾಹವಾದರು. ಇವರ ಮಗ ಬ್ರಜ್ ಕುಮಾರ್ ನೆಹರು ಭಾರತೀಯ ನಾಗರಿಕ ಸೇವಕರಾಗಿದ್ದರು ಮತ್ತು ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.
ಅವರು ೧೯೦೯ ರಿಂದ ೧೯೨೪ ರವರೆಗೆ ಮಹಿಳೆಯರಿಗಾಗಿ ಹಿಂದಿ ಮಾಸಿಕವಾದ ಸ್ತ್ರೀ ದರ್ಪಣ್ ಅನ್ನು ಸಂಪಾದಿಸಿದರು. ಅವರು ಅಖಿಲ ಭಾರತ ಮಹಿಳಾ ಸಮ್ಮೇಳನದ (ಎಐಡಬ್ಲ್ಯೂಸಿ) ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ೧೯೪೨ ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು.[೧][೨] ಅವರು ಕೋಪನ್ ಹ್ಯಾಗನ್ ನಲ್ಲಿ ನಡೆದ ವಿಶ್ವ ಮಹಿಳಾ ಕಾಂಗ್ರೆಸ್ ಮತ್ತು ಕೈರೋದಲ್ಲಿ ನಡೆದ ಮೊದಲ ಆಫ್ರೋ-ಏಷ್ಯನ್ ಮಹಿಳಾ ಸಮ್ಮೇಳನದ (೧೯೬೧) ನಿಯೋಗಗಳನ್ನು ಮುನ್ನಡೆಸಿದರು .[೩]
ರಾಮೇಶ್ವರಿ ನೆಹರು ಅವರ ಸಾಮಾಜಿಕ ಕಾರ್ಯಕ್ಕಾಗಿ ಭಾರತ ಸರ್ಕಾರ ಅವರಿಗೆ ೧೯೫೫ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಇವರು ೧೯೬೧ ರಲ್ಲಿ ಲೆನಿನ್ ಶಾಂತಿ ಪ್ರಶಸ್ತಿ ಗೆದ್ದುಕೊಂಡರು.[೪]
ವಿಶ್ವ ಸಂವಿಧಾನವನ್ನು ರಚಿಸುವುದಕ್ಕಾಗಿ ಸಮಾವೇಶವನ್ನು ಕರೆಯುವ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಇವರೂ ಒಬ್ಬರಾಗಿದ್ದರು.[೫][೬] ಇದರ ಪರಿಣಾಮವಾಗಿ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವ ಸಂವಿಧಾನ ಸಭೆಯು ಒಕ್ಕೂಟದ ಸಂವಿಧಾನವನ್ನು ರಚಿಸಲು ಮತ್ತು ಅಂಗೀಕರಿಸಲು ಸಭೆ ಸೇರಿತು.[೭]