ರಿಚಾ ಘೋಷ್ (ಜನನ ೨೮ ಸೆಪ್ಟೆಂಬರ್ ೨೦೦೩) ಒಬ್ಬ ಭಾರತೀಯ ಕ್ರಿಕೆಟ್‍ಗಾರ್ತಿ . [೧][೨] ಜನವರಿ ೨೦೨೦ ರಲ್ಲಿ, ತಮ್ಮ ೧೬ ನೇ ವಯಸ್ಸಿನಲ್ಲಿ, ಅವರು ೨೦೨೦ ರ ಐಸಿಸಿ ಮಹಿಳಾ ಟಿ೨೦ ವಿಶ್ವಕಪ್‌ಗಾಗಿ ಭಾರತದ ತಂಡದಿಂದ ಆಯ್ಕೆಯಾದರು. [೩][೪][೫][೬] ಅದೇ ತಿಂಗಳ ನಂತರ, ಅವರು ೨೦೨೦ ರ ಆಸ್ಟ್ರೇಲಿಯಾ ಮಹಿಳಾ ಟ್ರೈ-ನೇಷನ್ ಸರಣಿಗಾಗಿ ಭಾರತದ ತಂಡದಿಂದ ಆಯ್ಕೆಯಾದರು. [೭] ೧೨ ಫೆಬ್ರವರಿ ೨೦೨೦ ರಂದು, ಅವರು ಟ್ರೈ-ನೇಷನ್ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ಡಬ್ಲೂಟಿ೨೦ಐನಲ್ಲಿ ಚೊಚ್ಚಲ ಪ್ರವೇಶ ಮಾಡಿದರು. [೮] ಮೇ ೨೦೨೧ ರಲ್ಲಿ, ಅವರಿಗೆ ಮೊದಲ ಬಾರಿಗೆ ಕೇಂದ್ರ ಒಪ್ಪಂದವನ್ನು ನೀಡಲಾಯಿತು. [೯]
ಆಗಸ್ಟ್ ೨೦೨೧ ರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಅವರ ಸರಣಿಗಾಗಿ ಘೋಷ್ ಅವರನ್ನು ರಾಷ್ಟ್ರೀಯ ತಂಡಕ್ಕೆ [೧೦] ಕರೆಯಲಾಯಿತು. [೧೧] ಮಹಿಳಾ ಟೆಸ್ಟ್ ಪಂದ್ಯ ಮತ್ತು ಮಹಿಳಾ ಏಕದಿನ ಅಂತಾರಾಷ್ಟ್ರೀಯ (ಡಬ್ಲೂಒಡಿಐ) ಪಂದ್ಯಗಳಿಗಾಗಿ ಭಾರತದ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. [೧೨] ಅವರು ೨೧ ಸೆಪ್ಟೆಂಬರ್ ೨೦೨೧ ರಂದು ಭಾರತಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಡಬ್ಲೂಒಡಿಐಗೆ ಪಾದಾರ್ಪಣೆ ಮಾಡಿದರು. [೧೩]
ಅವರು ೨೦೨೧-೨೨ ಮಹಿಳಾ ಬಿಗ್ ಬ್ಯಾಷ್ ಲೀಗ್ ಋತುವಿನಲ್ಲಿ ಹೋಬರ್ಟ್ ಹರಿಕೇನ್ಸ್‌ಗಾಗಿ ಆಡಿದರು. [೧೪] ಜನವರಿ ೨೦೨೨ ರಲ್ಲಿ, ಅವರು ನ್ಯೂಜಿಲೆಂಡ್‌ನಲ್ಲಿ ೨೦೨೨ ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತದ ತಂಡದಲ್ಲಿ ಹೆಸರಿಸಲ್ಪಟ್ಟರು. [೧೫]
ಪವರ್ ಹಿಟ್ಟಿಂಗ್‌ಗಾಗಿ ಜನಪ್ರಿಯವಾಗಿರುವ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ೨೦೨೩ ರಲ್ಲಿ ₹೧.೯೦ ಕೋಟಿಗೆ ಆಯ್ಕೆಮಾಡಿತು. [೧೬]