ರುಕ್ಮಿಣಿ ವಿಜಯಕುಮಾರ್ | |
---|---|
ಜನನ | |
ವೃತ್ತಿ(ಗಳು) | ನಟಿ, ಮಾಡೆಲ್, ನೃತ್ಯಕಲಾವಿದೆ |
ಸಕ್ರಿಯ ವರ್ಷಗಳು | 2008–ಇಂದಿನವರೆಗೂ |
ಸಂಗಾತಿ | ರೋಹನ್ ಮೆನನ್ |
ರುಕ್ಮಿಣಿ ವಿಜಯಕುಮಾರ್ ಅವರು ಭಾರತೀಯ ಚಲನಚಿತ್ರ ನಟಿ ಮತ್ತು ತೆಲಂಗಾಣ ರಾಜ್ಯದ ಹೈದರಾಬಾದ್ ಪ್ರದೇಶದ ಭರತನಾಟ್ಯ ನೃತ್ಯಗಾರ್ತಿ.[೧][೨][೩] ವೇದಿಕೆಯಲ್ಲಿ ನೃತ್ಯಪ್ರದರ್ಶನದ ಜೊತೆಗೆ, ಅವರು ನಾಲ್ಕು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಗುರು ನರ್ಮದಾ, ಗುರು ಪದ್ಮಿನಿ ರಾವ್ ಮತ್ತು ಗುರು ಸುಂದರಿ ಸಂತಾನಂ ಮೊದಲಾದವರ ಅಡಿಯಲ್ಲಿ ಭರತನಾಟ್ಯವನ್ನು ಅಧ್ಯಯನ ಮಾಡಿ, ಗುರು ಸುಂದರಿ ಸಂತಾನಮ್ ಅಡಿಯಲ್ಲಿ ಹಲವಾರು ವರ್ಷಗಳಿಂದ ಕರಣಗಳನ್ನು ರುಕ್ಮಿಣಿ ವಿಜಯಕುಮಾರ್ ಅಭ್ಯಾಸ ಮಾಡಿದ್ದಾರೆ. ಅವರು ತಮ್ಮ ಎಂಟನೇ ವರ್ಷ ವಯಸ್ಸಿನಲ್ಲೇ ನೃತ್ಯದ ತರಬೇತಿ ಪ್ರಾರಂಭಿಸಿದರು. ಬೋಸ್ಟನ್ ಕನ್ಸರ್ ವೇಟರಿಯಿಂದ ಬ್ಯಾಲೆ ಮತ್ತು ಆಧುನಿಕ ನೃತ್ಯ ವಿಷಯಗಳಲ್ಲಿ ಬಿಎಫ್ ಎ ಪದವಿಯನ್ನು ಪಡೆದಿದ್ದಾರೆ. ಬಾಸ್ಟನ್ ಕನ್ಸರ್ವೇಟರಿಯಲ್ಲಿ ಜಾಝ್, ಟ್ಯಾಪ್, ಆಫ್ರಿಕನ್, ನೃತ್ಯ ಸಂಯೋಜನೆ, ಲ್ಯಾಬನ್ ಚಲನೆ ವಿಶ್ಲೇಷಣೆ, ಸ್ಟೇಜ್ಕ್ರಾಫ್ಟ್ ಮತ್ತು ಹ್ಯೂಮನ್ ಅನ್ಯಾಟಮಿಗಳಲ್ಲಿಯೂ ಅವರು ತರಬೇತಿ ಪಡೆದಿದ್ದಾರೆ.
ಇದಲ್ಲದೆ, ಅವರು ಲಾಸ್ ಎಂಜಲೀಸ್ನ ನ್ಯೂಯಾರ್ಕ್ ಫಿಲ್ಮ್ ಅಕ್ಯಾಡೆಮಿಯಲ್ಲಿ ಅಭಿನಯವನ್ನು ಕಲಿತಿದ್ದಾರೆ. ಅವರು ಭಾರತದಲ್ಲಿ ಇರುವಾಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ನೇತೃತ್ವದಲ್ಲಿ ಕಲಿಯುತ್ತಿದ್ದಾರೆ. ಆಕೆಯ ನೃತ್ಯ ಕಂಪೆನಿ ರಾಧಾ ಕಲ್ಪದಲ್ಲಿ ಅವರು ಕಲಾತ್ಮಕ ನಿರ್ದೇಶಕರಾಗಿದ್ದಾರೆ. ಅಲ್ಲಿ ಅವರು ನೃತ್ಯ ಕಲಾಕೃತಿಗಳನ್ನು ಕಲಿಸುತ್ತಾರೆ ಮತ್ತು ಹೊಸ ಭರತನಾಟ್ಯ, ಆಧುನಿಕ ಮತ್ತು ಪ್ರಾಯೋಗಿಕ ಅಭಿನಯ ಕಾರ್ಯಗಳನ್ನು ಸೃಷ್ಟಿಸುತ್ತಾರೆ. ಅವರು ಪ್ರಸ್ತುತ UCLA ನಲ್ಲಿ ಫಿಟ್ನೆಸ್ ಟ್ರೈನಿಂಗ್ ಸರ್ಟಿಫಿಕೇಟ್ ಪಡೆಯಲು ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ಪದ್ಮ ಸುಬ್ರಹ್ಮಣ್ಯಂರವರ ಶಿಷ್ಯತ್ವದಲ್ಲಿ ಚೆನ್ನೈನ ಶಾಸ್ತ್ರ ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯಂನಲ್ಲಿ ವೃತ್ತಿಪರ ನರ್ತಕಿಯ MFA ಪ್ರೋಗ್ರಾಂ ಅನ್ನು ಪಡೆಯಲು ಅಭ್ಯಾಸ ಮಾಡುತ್ತಿದ್ದಾರೆ.
ಭಾರತಿರಾಜರ ಸಸ್ಪೆನ್ಸ್ ಥ್ರಿಲ್ಲರ್ ಬೊಮ್ಮಲಟ್ಟಂನಲ್ಲಿ ಅರ್ಜುನ್, ನಾನಾ ಪಾಟೇಕರ್ ಮತ್ತು ಕಾಜಲ್ ಅಗರ್ವಾಲ್ರ ಜೊತೆಗೂಡಿ ಅವರು ಚಿತ್ರರಂಗವನ್ನು ಮೊದಲ ಬಾರಿಗೆ ಅಭಿನಯಿಸಿದರು. ಈ ಪಾತ್ರವು ನಿಗೂಢವಾದ ಹೊಸ ನಟಿಯಾಗಿ ಮಾಧ್ಯಮದಿಂದ ಮರೆಮಾಡಲ್ಪಟ್ಟಿದೆ. ಈ ಚಿತ್ರವು ಅಂತಿಮವಾಗಿ ಅವಳ ಪಾತ್ರವು ನಿಜವಾಗಿಯೂ ಪುರುಷಪಾತ್ರವಾಗಿದ್ದು ನಿರ್ದೇಶಕರಿಂದ ವೇಷ ಧರಿಸುವಂತೆ ಮಾಡಿತ್ತು ಎಂದು ಬಹಿರಂಗಪಡಿಸಿತು. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು, ವಿಮರ್ಶಕರು ಇವರ ಪ್ರದರ್ಶನವನ್ನು "ಖಂಡಿತವಾಗಿ ಆಶ್ಚರ್ಯಕರ ಪ್ಯಾಕೇಜ್" ಎಂದು ಕರೆಯುತ್ತಾರೆ.[೪][೫] ಇವರು ನಂತರ ಗಾಂಧೀ ಕೃಷ್ಣ ಅವರ 2009 ರ ರೊಮಾಂಟಿಕ್ ಚಿತ್ರ ಆನಂದ ಆನಂದ್ ತಾಂಡವಂನಲ್ಲಿ ಸಿದ್ದಾರ್ಥ್ ವೇಣುಗೋಪಾಲ್ ಮತ್ತು ತಮಾನ್ನಾರೊಂದಿಗೆ ರತ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ಚಿತ್ರವು ವಾಣಿಜ್ಯ ಮತ್ತು ವಿಮರ್ಶಾತ್ಮಕವಾಗಿ ವಿಫಲವಾಯಿತು. ರುಕ್ಮಿಣಿ ನಂತರ ಸಿದ್ಧಾರ್ಥ್ ವೇಣುಗೋಪಾಲ್ನೊಂದಿಗೆ ನಾನ್ ನಲ್ಲಿ ಕಾಣಿಸಿಕೊಳ್ಳಲು ಸಹಿ ಹಾಕಿದಳು. ಆದರೆ ಚಿತ್ರವು ನಿರ್ಮಾಣದ ತೊಂದರೆಗೆ ಒಳಗಾಯಿತು ಮತ್ತು 2010 ರಲ್ಲಿ ಮತ್ತೊಮ್ಮೆ ಪ್ರಾರಂಭವಾದಾಗ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದರು. ಇದಲ್ಲದೆ, ಒರಾ ನಾಲ್ ಪೊದುಮಾ ಪ್ರತಾಪ ಪೋತನ್ ನಿರ್ದೇಶಿಸಿದ ಮತ್ತೊಂದು ಯೋಜನೆ ಮಾಧವನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಚಿತ್ರವನ್ನು ಕೂಡ ಪ್ರಕಟಣೆಯ ನಂತರ ರದ್ದುಗೊಳಿಸಲಾಯಿತು.
2012 ರಲ್ಲಿ, ರುಚಿನಿ ಅವರು ಕೊಚದೈಯಾನ್ನಲ್ಲಿ ರಜನಿಕಾಂತ್ ಅವರ ಸಹೋದರಿ ಪಾತ್ರಕ್ಕೆ ಆಯ್ಕೆಯಾದರು.[೬] ದಿನಾಂಕದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸ್ನೇಹರಿಂದ ಈ ಪಾತ್ರವನ್ನು ಮುಂಚೆಯೇ ಮಾಡಿಸಲಾಯಿತು.[೭]
೨೦೧೭ರ ನವೆಂಬರ್ ನಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ಖ್ಯಾತ ನೃತ್ಯಕಲಾವಿದೆ ರುಕ್ಮಿಣಿ ವಿಜಯಕುಮಾರ್ ತಮ್ಮ ರಾಧಾಕಲ್ಪ ತಂಡದೊಂದಿಗೆ ಪ್ರೇಕ್ಷಕರ ಮನಸೂರೆಗೊಳ್ಳುವಂತಹ ನೃತ್ಯಪ್ರದರ್ಶನ ನೀಡಿದರು. [೮]
ರುಕ್ಮಿಣಿ ರೋಹನ್ ಮೆನನ್ ರವರನ್ನು ವಿವಾಹವಾದರು. [೯]
ವರ್ಷ | ಚಲನಚಿತ್ರ | ಪಾತ್ರ | ಭಾಷೆ | ಟಿಪ್ಪಣಿ |
2008 | Bommalattam | Trishna | Tamil | |
2009 | Ananda Tandavam | Ratna | Tamil | |
2013 | ಭಜರಂಗಿ | ಕೃಷ್ಣೆ | ಕನ್ನಡ | ಕನ್ನಡದ ಉತ್ತಮ ಪೋಷಕನಟಿ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನೇಮಕ |
2014 | Kochadaiyaan | Yamuna Devi | Tamil | |
2015 | Shamitabh | Hindi | ||
2017 | Kaatru Veliyidai | Dr. Nidhi | Tamil |